Aditya Roy Kapur : ಡೇಟಿಂಗ್ ವದಂತಿಗೆ ತುಪ್ಪ ಸುರಿದ ಬಾಲಿವುಡ್‌ ಲವ್‌ ಬರ್ಡ್ಸ್‌..!

 Aditya Roy Kapur Ananya Panday Viral Photo : ಕಳೆದ ಕೆಲವು ದಿನಗಳಿಂದ ಡೇಟಿಂಗ್‌ ವದಂತಿಗೆ ಸಿಲುಕಿದ ಆದಿತ್ಯ ರಾಯ್‌ ಹಾಗೂ ಅನನ್ಯ ಪಾಂಡೆ ಅವರ ಖಾಸಗಿ ಪೋಟೋವೊಂದು ವೈರಲ್‌ ಆಗಿತ್ತು. ಇದೀಗ ಮತ್ತೊಂದು ಪೋಸ್ಟ್‌ ವೈರಲ್‌ ಆಗಿದ್ದು, ಇದನ್ನು ನೋಡಿ ಅಭಿಮಾನಿಗಳು ಹುಬ್ಬೇರಿಸಿದ್ದಾರೆ.

Written by - Savita M B | Last Updated : Jul 18, 2023, 01:49 PM IST
  • ಆದಿತ್ಯ ರಾಯ್​ ಕಪೂರ್​ ಅವರು ಬಾಲಿವುಡ್​ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.
  • ನಟ ಡೇಟಿಂಗ್‌ ವದಂತಿಯಿಂದ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದಾರೆ
  • ನಟಿ ಅನನ್ಯಾ ಪಾಂಡೆ ಅವರ ಜೊತೆ ನಟ ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.
 Aditya Roy Kapur : ಡೇಟಿಂಗ್ ವದಂತಿಗೆ ತುಪ್ಪ ಸುರಿದ ಬಾಲಿವುಡ್‌ ಲವ್‌ ಬರ್ಡ್ಸ್‌..! title=

Ananya Pandey : ‘ಆಶಿಕಿ 2’ ಸಿನಿಮಾದಿಂದ ಜನಪ್ರಿಯತೆ ಪಡೆದ ಆದಿತ್ಯ ರಾಯ್​ ಕಪೂರ್​ ಅವರು ಬಾಲಿವುಡ್​ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಇದೀಗ ನಟ ಡೇಟಿಂಗ್‌ ವದಂತಿಯಿಂದ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದಾರೆ. ಹೌದು ಆದಿತ್ಯ ರಾಯ್​ ಕಪೂರ್​ ಹಾಗೂ ನಟಿ ಅನನ್ಯಾ ಪಾಂಡೆ ಅವರ ಪ್ರೇಮ್​ ಕಹಾನಿ ಬಹಿರಂಗ ಆಗಿದೆ, ನಟಿ ಅನನ್ಯಾ ಪಾಂಡೆ ಅವರ ಜೊತೆ ನಟ ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. 

ಇನ್ನು ಈ ವಿಚಾರವಾಗಿ ಅವರು ತಾವಾಗಿಯೇ ಹೇಳಿಕೊಂಡಿಲ್ಲ. ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿರುವ ಫೋಟೋಗಳು ಅವರಿಬ್ಬರ ಪ್ರೀತಿಗೆ ಸಾಕ್ಷಿ ಒದಗಿಸುತ್ತಿವೆ. ಆದಿತ್ಯ ರಾಯ್​ ಕಪೂರ್​ ಮತ್ತು ಅನನ್ಯಾ ಪಾಂಡೆ ಅವರು ವಿದೇಶಕ್ಕೆ ತೆರಳಿದ್ದಾರೆ. ಆದರೆ ಇಬ್ಬರೂ ಹೋಗಿರೋದು ಒಂದೇ ಪ್ಲೇಸ್‌ಗೆ. 

ಸ್ಪೇನ್‌ನಲ್ಲಿ ನಡೆಯುತ್ತಿದ್ದ ಸಂತೀತ ಕಾರ್ಯಕ್ರಮದಲ್ಲಿ ಆದಿತ್ಯ ರಾಯ್​ ಕಪೂರ್​ ಮತ್ತು ಅನನ್ಯಾ ಪಾಂಡೆ ಒಟ್ಟಿಗೆ ಹೋಗಿದ್ದಾರೆ. ಈ ಕುರಿತು ಸೋಶಿಯಲ್​ ಮೀಡಿಯಾದಲ್ಲಿ ಸ್ಟೋರಿ ಶೇರ್‌ ಮಾಡಿಕೊಂಡಿದ್ದಾರೆ. ಇಬ್ಬರೂ ಮೆನ್ಷನ್‌ ಮಾಡಿಕೊಂಡಿರುವುದರಿಂದ ಅಭಿಮಾನಿಗಳೆಗೆ ಕ್ಲಾರಿಟಿ ಸಿಕ್ಕಿದೆ.

ಇದನ್ನೂ ಓದಿ-Ileana D'Cruz: ಕೊನೆಗೂ ಬಾಯ್‌ಫ್ರೆಂಡ್ ಮುಖ ತೋರಿಸಿದ ಗೋವಾ ಬ್ಯೂಟಿ..!

ಕೆಲವು ದಿನಗಳ ಹಿಂದೆ ಅನನ್ಯಾ ಪಾಂಡೆಯನ್ನು ಆದಿತ್ಯ ರಾಯ್​ ಕಪೂರ್​ ಅವರು ಹಿಂಬದಿಯಿಂದ ತಬ್ಬಿಕೊಂಡು ನಿಂತಿರುವ ಫೋಟೋ ಹರಿದಾಡುತ್ತಿತ್ತು. ಇದೀಗ ಅವರಿಬ್ಬರ ನಡುವಿನ ಪ್ರೀತಿಗೆ ಸಾಕ್ಷಿ ಒದಗಿಸುವಂತಹ ಇನ್ನೊಂದು ಫೋಟೋ ಕೂಡ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. 

ಈ ಫೋಟೋದಲ್ಲಿ, ಆದಿತ್ಯ ಏನನ್ನೋ ಹೇಳುತ್ತಿದ್ದಾನೆ ಮತ್ತು ಅನನ್ಯಾ ಅವನನ್ನು ನೋಡುತ್ತಾ ಅವಳ ಕಣ್ಣುಗಳಲ್ಲಿ ಮುಳುಗಿದಂತೆ ಕಾಣಿಸುತ್ತದೆ. ಚಿತ್ರದಲ್ಲಿ ಅನನ್ಯಾಳ ಮುಖದ ನಗುವೇ ಆಕೆ ಆದಿತ್ಯನನ್ನು ಎಷ್ಟು ಪ್ರೀತಿಸುತ್ತಿದ್ದಾಳೆ ಎನ್ನುವುದನ್ನು ಹೇಳುತ್ತಿದೆ. ಈ ದಿನದಂದು, ಆದಿತ್ಯ ನೀಲಿ ಶರ್ಟ್ ಧರಿಸಿ ಕಾಣಿಸಿಕೊಂಡಿದ್ದಾರೆ ಮತ್ತು ಅನನ್ಯಾ ಬಿಳಿ ಬಣ್ಣದ ಟಾಪ್ ಜೊತೆಗೆ ಗುಲಾಬಿ ಬಣ್ಣದ ಜಾಕೆಟ್ ಧರಿಸಿದ್ದಾರೆ. ಇನ್ನು ಯಾರೋ ಗುಟ್ಟಾಗಿ ಇಬ್ಬರ ಫೋಟೋಗಳನ್ನು ತೆಗೆದು ವೈರಲ್ ಮಾಡಿದ್ದಾರೆ.

ಇದನ್ನೂ ಓದಿ-Kajol Video: ಜನಾಂಗೀಯ ನಿಂದನೆ ಪದ ಬಳಸಿದ ಕಾಜೋಲ್.. ನೆಟ್ಟಿಗರಿಂದ ಕ್ಲಾಸ್‌!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News