ಅವಳಿ ಮಕ್ಕಳ ಹೆಸರು ರಿವೀಲ್‌ ಮಾಡಿದ ನಟಿ ನಯನತಾರಾ..!

Nayanatara : ನಯನತಾರಾ ಮತ್ತು ವಿಘ್ನೇಶ್ ಶಿವನ್ ಕಾಲಿವುಡ್‌ನ ಅತ್ಯಂತ ಫೇಮಸ್‌ ಜೋಡಿಗಳಲ್ಲಿ ಒಬ್ಬರು. ಇವರು ಕಳೆದ ವರ್ಷ ಎರಡು ಅವಳಿ ಮಕ್ಕಳನ್ನು ದತ್ತು ಪಡೆಯುವ ಮೂಲಕ ತಾಯ್ತನದ ಖುಷಿಯಲ್ಲಿದ್ದರು. ಮದುವೆಯಾದ ಕೆಲವೇ ತಿಂಗಳಲ್ಲಿ ನಯನತಾರಾ ಮಕ್ಕಳನ್ನು ದತ್ತು ಪಡೆದು ಜವಾಬ್ದಾರಿಯ ಹೊಣೆ ಹೊತ್ತಿದ್ದಾರೆ.   

Written by - Zee Kannada News Desk | Last Updated : Apr 3, 2023, 01:18 PM IST
  • ನಟಿ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಜೋಡಿ ಮದುವೆ ಆದಾಗಿನಿಂದಲೂ ಭಾರೀ ಸುದ್ದಿಯಲ್ಲಿದ್ದಾರೆ.
  • ಚೆನ್ನೈನಲ್ಲಿ ಇತ್ತೀಚೆಗೆ ಆಯೋಜಿಸಲಾದ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ, ನಟಿ ನಯನತಾರಾ ವೇದಿಕೆಯಲ್ಲಿ ತನ್ನ ಇಬ್ಬರು ಪುತ್ರರ ಪೂರ್ಣ ಹೆಸರನ್ನು ಹಂಚಿಕೊಂಡಿದ್ದಾರೆ.
  • ವಿಘ್ನೇಶ್ ಶಿವನ್ ಶೀಘ್ರದಲ್ಲೇ ವಿಕ್ಕಿ 4 ಚಿತ್ರವನ್ನು ನಿರ್ಮಿಸಲಿದದ್ದು, ಅದರ ಅಧಿಕೃತ ಘೋಷಣೆ ಮಾತ್ರ ಬಾಕಿಯಿದೆ.
ಅವಳಿ ಮಕ್ಕಳ ಹೆಸರು ರಿವೀಲ್‌ ಮಾಡಿದ ನಟಿ ನಯನತಾರಾ..!  title=

Vignesh Shivan-Nayanatara : ನಟಿ  ನಯನತಾರಾ ಹಾಗೂ ವಿಘ್ನೇಶ್ ಶಿವನ್ ಜೋಡಿ ಮದುವೆ ಆದಾಗಿನಿಂದಲೂ ಭಾರೀ ಸುದ್ದಿಯಲ್ಲಿದ್ದಾರೆ. ಮುದ್ದು ಮಕ್ಕಳ ಲಾಲನೆ ಪಾಲನೆ ಜೊತೆಗೆ ಸಿನಿಮಾಗಳ ಶೂಟಿಂಗ್​ನಲ್ಲಿಯೂ ನಯನತಾರಾ ಬ್ಯುಸಿ ಆಗಿದ್ದಾರೆ. ಚೆನ್ನೈನಲ್ಲಿ ಇತ್ತೀಚೆಗೆ ಆಯೋಜಿಸಲಾದ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ, ನಟಿ ನಯನತಾರಾ ವೇದಿಕೆಯಲ್ಲಿ ತನ್ನ ಇಬ್ಬರು ಪುತ್ರರ ಪೂರ್ಣ ಹೆಸರನ್ನು ಹಂಚಿಕೊಂಡಿದ್ದಾರೆ. ಮೊದಲ ಮಗುವಿನ ಹೆಸರು "ಉಯಿರ್ ರುದ್ರೋನಿಲ್ ಎನ್ ಶಿವನ್"  ಮತ್ತು ಎರಡನೇ ಮಗುವಿನ ಹೆಸರು "ಉಲಗ್ ಧೈವೇಗ್ ಎನ್ ಶಿವನ್" ಎಂದು ಬಹಿರಂಗಪಡಿಸಿದ್ದಾರೆ. 

 

ಜೂನ್ 9, 2022 ರಂದು ಮಹಾಬಲಿಪುರಂನ ರೆಸಾರ್ಟ್‌ನಲ್ಲಿ ಸಾಂಪ್ರದಾಯಿಕ ಹಿಂದೂ ಶೈಲಿಯಲ್ಲಿ  ವಿವಾಹವಾದ ದಂಪತಿಗಳು ಅಕ್ಟೋಬರ್ 9 ರಂದು ಅವಳಿ ಗಂಡು ಮಕ್ಕಳನ್ನು ದತ್ತು ಪಡೆದಿದ್ದರು. ಇದರ ಕುರಿತು ಅನೇಕ ವಿರೋಧ ಪ್ರತಿಕ್ರಿಯೆಗಳು ಬಂದಿದ್ದು, ಅದರಿಂದಾಗಿ ನಟಿ ನಯನತಾರಾ ದಂಪತಿಗಳು ನ್ಯಾಯಾಲಯದ ಠೀಕೆಗೆ ಒಳಗಾಗಿದ್ದರು, ನಂತರ ಸರಿಯಾದ ದಾಖಲೆಗಳಿಂದ ಎಲ್ಲವನ್ನು ಬಗೆಹರಿಸಿಕಂಡರು. 

ಇದನ್ನೂ ಓದಿ-Rashmika Mandanna: ಮಹಿಳಾ ಪ್ರಧಾನ ಸಿನಿಮಾದಲ್ಲಿ ಕಿರಿಕ್‌ ಬೆಡಗಿ ರಶ್ಮಿಕಾ ಮಂದಣ್ಣ

 

 

ವಿಘ್ನೇಶ್ ಶಿವನ್ ಶೀಘ್ರದಲ್ಲೇ ವಿಕ್ಕಿ 4 ಚಿತ್ರವನ್ನು ನಿರ್ಮಿಸಲಿದದ್ದು, ಅದರ ಅಧಿಕೃತ ಘೋಷಣೆ ಮಾತ್ರ ಬಾಕಿಯಿದೆ. ಹಾರರ್-ಥ್ರಿಲ್ಲರ್‌ ಚಿತ್ರ ಕನೆಕ್ಟ್‌ನಲ್ಲಿ ಕೊನೆಯದಾಗಿ ನಯನತಾರಾ ಕಾಣಿಸಿಕೊಂಡಿದ್ದರು. ಇದೀಗ ನಯನತಾರಾ ಅಟ್ಲೀ ಕುಮಾರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ನಟನೆಯ ಚೊಚ್ಚಲ ತಮಿಳು ಸಿನಿಮಾ 'ಜವಾನ್' ದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.  

ಇದನ್ನೂ ಓದಿ-ಏಪ್ರಿಲ್ 3ರಿಂದ ಕಿರುತೆರೆ ಪ್ರೇಕ್ಷಕರ ಮನೆಗೆ ಬರುತ್ತಿದ್ದಾಳೆ ರಾಣಿ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News