ಮೂರು ಮಕ್ಕಳ ತಂದೆಯೊಂದಿಗೆ ಮದುವೆ... ಮೂರು ಬಾರಿ ಗರ್ಭಪಾತ.. ಈ ಟಾಪ್ ಹೀರೋಯಿನ್ ವೈಯಕ್ತಿಕ ಜೀವನದಲ್ಲಿ ನಡೆದಿತ್ತು ದುರಂತ!

Actress Meena Kumari: ಕೆಲವು ಸೆಲೆಬ್ರಿಟಿಗಳ ಜೀವನ ನಾವು ಅಂದುಕೊಂಡಷ್ಟು ಸುಲಭವಲ್ಲ. ನಾವು ಕಾಣುವ ವರ್ಣರಂಜಿತ ಪ್ರಪಂಚದ ಹಿಂದೆ ಅನೇಕ ನೊಂದ ಕಥೆಗಳಿರುತ್ತವೆ..   

Written by - Savita M B | Last Updated : Aug 1, 2024, 03:22 PM IST
  • ಬಾಲಿವುಡ್ ನ ಟ್ರ್ಯಾಜಿಡಿ ಕ್ವೀನ್ ಮೀನಾ ಕುಮಾರಿ ಅವರು ಬದುಕಿರುವವರೆಗೂ ಚಿತ್ರರಂಗವನ್ನು ಆಳಿದರು.
  • ಅವರ ಅಭಿನಯ ಮತ್ತು ಅವರು ನಿರ್ವಹಿಸಿದ ಪ್ರತಿಯೊಂದು ಪಾತ್ರವೂ ಅಮರವಾಗಿದೆ.
ಮೂರು ಮಕ್ಕಳ ತಂದೆಯೊಂದಿಗೆ ಮದುವೆ... ಮೂರು ಬಾರಿ ಗರ್ಭಪಾತ.. ಈ ಟಾಪ್ ಹೀರೋಯಿನ್ ವೈಯಕ್ತಿಕ ಜೀವನದಲ್ಲಿ ನಡೆದಿತ್ತು ದುರಂತ! title=

Meena Kumari life Story: ಬಾಲಿವುಡ್ ನ ಟ್ರ್ಯಾಜಿಡಿ ಕ್ವೀನ್ ಮೀನಾ ಕುಮಾರಿ ಅವರು ಬದುಕಿರುವವರೆಗೂ ಚಿತ್ರರಂಗವನ್ನು ಆಳಿದರು. ಅವರ ಅಭಿನಯ ಮತ್ತು ಅವರು ನಿರ್ವಹಿಸಿದ ಪ್ರತಿಯೊಂದು ಪಾತ್ರವೂ ಅಮರವಾಗಿದೆ. 

ಮೀನಾ ಕುಮಾರಿ ಆಗಸ್ಟ್ 1, 1933 ರಂದು ಜನಿಸಿದರು. ಮೀನಾ ಕುಮಾರಿ ಬಹಳ ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗ ಪ್ರವೇಶಿಸಿದರು. ಸಿನಿಮಾಗಳಲ್ಲಿ ಭಾವನಾತ್ಮಕ ದೃಶ್ಯಗಳಿಗೆ ಜೀವ ತುಂಬುತ್ತಿದ್ದರು...‘ಬೈಜು ಬಾವ್ರಾ’, ‘ಪಾಕೀಜಾ’, ‘ಪರಿಣೀತಾ’, ‘ಕಾಜಲ್’, ‘ಸಾಹೇಬ್ ಬೀವಿ ಔರ್ ಗುಲಾಮ್’ ಚಿತ್ರಗಳೇ ಇದಕ್ಕೆ ಸಾಕ್ಷಿ. ತೆರೆಮೇಲೆ ಅಳುವುದು ಮೀನಾ ಕುಮಾರಿ ಅವರ ವೈಯಕ್ತಿಕ ನಿರ್ಧಾರವಾಗಿದ್ದರೂ ನಿಜ ಜೀವನದಲ್ಲಿ ತನಗೆ ಆದ ನೋವು, ಗಾಯಗಳನ್ನು ನೋಡಿದರೇ ದೇವರು ಯಾರಿಗೂ ಅಂತಹ ಬದುಕನ್ನು ನೀಡಬಾರದು ಎಂದರೂ ತಪ್ಪಾಗದು.  

ಇದನ್ನೂ ಓದಿ-ಮೊದಲ ನೋಟದಲ್ಲೇ ಪ್ರೀತಿ ಆಗಿಲ್ಲ, ಈಗಲೂ... ಆಲಿಯಾ ಬಗ್ಗೆ ರಣಬೀರ್ ಸೆನ್ಸೇಷನಲ್ ಕಾಮೆಂಟ್! ವಿಚ್ಛೇದನ ಫಿಕ್ಸ್?!‌

ಮೀನಾ ಕುಮಾರಿ ಅವರ ತಂದೆ ಅಲಿ ಭಕ್ಷ್ ಅವರು ಮುಸ್ಲಿಂ ಮತ್ತು ಅವರ ತಾಯಿ ಬೆಂಗಾಲಿ ಕ್ರಿಶ್ಚಿಯನ್ ಎಂದು ಅನೇಕರಿಗೆ ತಿಳಿದಿಲ್ಲ. ಮೀನಾ ಅವರ ಕುಟುಂಬ ತೀರಾ ಬಡ ಕುಟುಂಬ. ಮಾಧ್ಯಮ ವರದಿಗಳ ಪ್ರಕಾರ, ಮೀನಾ ಕುಮಾರಿ ಜನಿಸಿದಾಗ ಆಕೆಯ ತಂದೆಗೆ ಒಬ್ಬ ಮಗನು ಬೇಕಾಗಿತ್ತು. ಮೀನಾ ಕುಮಾರಿ ಹುಟ್ಟಿದಾಗ ಅವರು ಸಂತೋಷವಾಗಿರಲಿಲ್ಲ. 

ಇದು ಅವರ ಜನ್ಮ ವೃತ್ತಾಂತ. ಆದರೆ, ಮೀನಾ ಕುಮಾರಿ ತನ್ನ ಮನದಾಳದಿಂದ ಪ್ರೀತಿಸಿದ ವ್ಯಕ್ತಿಯೇ ಆಕೆಯ ಬದುಕನ್ನು ನರಕವನ್ನಾಗಿಸಿದ ಎಂಬುದು ಕೆಲವೇ ಕೆಲವರಿಗೆ ತಿಳಿದಿದೆ. ಆ ವ್ಯಕ್ತಿ ಬೇರೆ ಯಾರೂ ಅಲ್ಲ ಆಕೆಯ ಪತಿ ಕಮಲ್ ಅಮ್ರೋಹಿ. ಕಮಲ್ ಅಮ್ರೋಹಿ ಸಿನಿಮಾ ನಿರ್ದೇಶಕ ಮತ್ತು ನಿರ್ಮಾಪಕ 

ಮೀನಾ ಕುಮಾರಿಯನ್ನು ಮದುವೆಯಾಗುವ ಮೊದಲು ಕಮಲ್ ಎರಡು ಮದುವೆಯಾಗಿದ್ದರು. ಅಲ್ಲದೇ 4 ಮಕ್ಕಳ ತಂದೆಯೂ ಆಗಿದ್ದರು. ಮಾಧ್ಯಮ ವರದಿಗಳ ಪ್ರಕಾರ, ಮೀನಾ ಕುಮಾರಿ ತಂದೆಗೆ ಮೀನಾ ಈಗಾಗಲೇ ಮದುವೆಯಾಗಿ ನಾಲ್ಕು ಮಕ್ಕಳ ತಂದೆಯಾಗಿರುವ ವ್ಯಕ್ತಿಯನ್ನು ಮದುವೆಯಾಗಲು ಇಷ್ಟವಿರಲಿಲ್ಲ. ಮೊದಲಿಗೆ ಅವರು ತಮ್ಮ ಮಗಳನ್ನು ಅರ್ಥಮಾಡಿಸಲು ಸಾಕಷ್ಟು ಪ್ರಯತ್ನಿಸಿದರು. ಆದರೆ ಮಗಳು ಒಪ್ಪದಿದ್ದಾಗ ಮೀನಾ ಅವರನ್ನು ಮನೆಯಿಂದ ಹೊರ ಹಾಕಿದ್ದರು.. 

ಇದನ್ನೂ ಓದಿ-ಒಂದು ರೂಪಾಯಿಗೂ ಪರದಾಡಿದ್ದ ʼಈʼ ಬ್ಯೂಟಿ ಇಂದು ಐದು ನಿಮಿಷಕ್ಕೆ 2 ಕೋಟಿ ಸಂಭಾವನೆ ಪಡೆಯುವ ನಟಿ! ಯಾರಿರಬಹುದು ಗೆಸ್‌ ಮಾಡಿ!

ಮೀನಾ ಕುಮಾರಿಯನ್ನು ಮದುವೆಯಾಗಲು ಕಮಲ್ ನಟಿಯ ಮುಂದೆ ಸಾಕಷ್ಟು ಷರತ್ತುಗಳನ್ನು ಹಾಕಿದ್ದರಂತೆ... ಹುಚ್ಚು ಪ್ರೀತಿಯಲ್ಲಿ ಬಿದ್ದಿದ್ದ ಮೀನಾ ಅವರು ಹಾಕಿದ ಷರತ್ತುಗಳಿಗೆಲ್ಲ ಒಪ್ಪಿಕೊಂಡಿದ್ದರಂತೆ.. ಆ ಷರತ್ತುಗಳೆಂದರೇ ‘ಬೇರೆ ನಿರ್ದೇಶಕರ ಜತೆ ಸಿನಿಮಾಗೆ ಸಹಿ ಹಾಕಬಾರದು, ದೇಹವನ್ನು ಬಿಚ್ಚಿಡುವ ಬಟ್ಟೆ ಹಾಕಬಾರದು, ಸಂಜೆ 6 ಗಂಟೆಯೊಳಗೆ ಮನೆ ತಲುಪಬೇಕು, ಮೇಕಪ್ ರೂಮಿಗೆ ಗಂಡಸನ್ನೂ ಬಿಡಬಾರದು’ ಎಂಬ ಷರತ್ತುಗಳನ್ನು ಕಮಲ್ ವಿಧಿಸಿದ್ದರು. ಮೀನಾ ಕುಮಾರಿ ಈ ಷರತ್ತುಗಳನ್ನು ಸಂತೋಷದಿಂದ ಒಪ್ಪಿಕೊಂಡರು. ಆದರೆ ಹೀರೋಯಿನ್ ಆಗಿ ಈ ರೀತಿ ಬದುಕುವುದು ಅಸಾಧ್ಯವೆನ್ನುವುದು ನಟಿಗೆ ಅರಿವಾಗಿರಲಿಲ್ಲ.. 

ಕಮಲ್ ಮೀನಾ ಕುಮಾರಿಯನ್ನು ಗಾಢವಾಗಿ ಪ್ರೀತಿಸುತ್ತಿದ್ದರೂ ಆಕೆಯನ್ನು ಸದಾ ಹಿಂಸಿಸುತ್ತಿದ್ದನಂತೆ... ಮದುವೆಯ ನಂತರ ಮೀನಾ ಕುಮಾರಿ ಜೀವನ ಸಂಪೂರ್ಣ ಬದಲಾಯಿತು. ಕಮಲ್ ನಟಿ ಮೀನಾ ತಾಯಿಯಾಗುವ ಕನಸನ್ನು ಒಂದಲ್ಲ ಮೂರು ಬಾರಿ ಹಾಳು ಮಾಡಿದ್ದರಂತೆ... ಎಂದರೇ ಮೂರು ಬಾರಿ ಗರ್ಭಪಾತ ಮಾಡಿಸಿ ಅವಳು ಎಂದಿಗೂ ತಾಯಿಯಾಗಲು ಸಾಧ್ಯವಿಲ್ಲದಂತೆ ಮಾಡಿದ್ದರಂತೆ..   

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News