ಫ್ಯಾನ್ಸ್‌ಗೆ ಉಪ್ಪಿ 18 ಛಾಲೆಂಜ್‌ : ಗೆದ್ರೆ ಬಹುಮಾನ ನೀಡ್ತಾರಂತೆ ರೀಯಲ್‌ ಸ್ಟಾರ್‌

ಸದಾ ಒಂದಲ್ಲ ಒಂದು ವಿಶಿಷ್ಟತೆಯ ಮೂಲಕ ಅಭಿಮಾನಿಗಳ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ನಟ, ನಿರ್ದೇಶಕ ಉಪೇಂದ್ರ ಅವರು ಸಧ್ಯ ತಮ್ಮ ಫ್ಯಾನ್ಸ್‌ಗೆ ಛಾಲೆಂಜ್‌ ಒಂದನ್ನು ನೀಡಿದ್ದು, ಗೆದ್ರೆ ಬಹುಮಾನ ನೀಡುವುದಾಗಿ ತಿಳಿಸಿದ್ದಾರೆ.

Written by - Krishna N K | Last Updated : Sep 3, 2022, 12:34 PM IST
  • ಫ್ಯಾನ್ಸ್‌ಗೆ ಛಾಲೆಂಜ್‌ ನೀಡಿದ ನಟ ಉಪೇಂದ್ರ
  • 18 ಪದಗಳನ್ನು ಮೀರದಂತೆ ಏನಾದರೂ ಒಂದು ಉತ್ತಮ ವಿಚಾರವನ್ನು ಬರೆದು ತರುತ್ತೀರಾ..?
  • ಅತ್ಯುತ್ತಮವಾದ 18 ಬರವಣಿಗೆಗೆ ಸೂಕ್ತ ಬಹುಮಾನ
ಫ್ಯಾನ್ಸ್‌ಗೆ ಉಪ್ಪಿ 18 ಛಾಲೆಂಜ್‌ : ಗೆದ್ರೆ ಬಹುಮಾನ ನೀಡ್ತಾರಂತೆ ರೀಯಲ್‌ ಸ್ಟಾರ್‌ title=

ಬೆಂಗಳೂರು: ಸದಾ ಒಂದಲ್ಲ ಒಂದು ವಿಶಿಷ್ಟತೆಯ ಮೂಲಕ ಅಭಿಮಾನಿಗಳ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ನಟ, ನಿರ್ದೇಶಕ ಉಪೇಂದ್ರ ಅವರು ಸಧ್ಯ ತಮ್ಮ ಫ್ಯಾನ್ಸ್‌ಗೆ ಛಾಲೆಂಜ್‌ ಒಂದನ್ನು ನೀಡಿದ್ದು, ಗೆದ್ರೆ ಬಹುಮಾನ ನೀಡುವುದಾಗಿ ತಿಳಿಸಿದ್ದಾರೆ.

ಹೌದು, ರಿಯಲ್‌ ಸ್ಟಾರ್‌ ಉಪೇಂದ್ರ ಅವರು ಸದಾ ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟೀವ್‌ ಆಗಿರ್ತಾರೆ. ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರ ನೀಡುವುದರ ಜೊತೆಗೆ ಸಾಮಾಜಿಕ ವಿಚಾರಗಳ ಚಿಂತನೆ, ಯುವ ಜನತೆಯಲ್ಲಿ ಪ್ರಭುದ್ಧತೆ ಮೂಡಿಸುವ ಕೆಲಸ ಮಾಡ್ತಾ ಇರ್ತಾರೆ. ಸದ್ಯ ತಮ್ಮ ಟ್ವಿಟರ್ ಖಾತೆಯಲ್ಲಿ ತಮ್ಮ ಫ್ಯಾನ್ಸ್‌ಗಳಿಗೆ ವಿಚಾರವಂತರಾಗೋಣಾ ಎಂದು ಸವಾಲ್‌ ಒಂದನ್ನು ಹಾಕಿದ್ದಾರೆ.

ಇದನ್ನೂ ಓದಿ: ಈದ್ಗಾ ಮೈದಾನ ವಿವಾದ: ಜಮೀರ್ ಖಾನ್ ಪುತ್ರನ ‘ಬನಾರಸ್’ ಚಿತ್ರಕ್ಕೆ ಹಿಂದೂಪರ ಸಂಘಟನೆಗಳ ಬಹಿಷ್ಕಾರ

ʼಇದೇ ಸೆಪ್ಟೆಂಬರ್ 18 ಅಭಿಮಾನಿಗಳ ದಿನದಂದು ನಿಮ್ಮನ್ನ ನಮ್ಮ ಮನೆಯಲ್ಲಿ ಬೇಟಿಯಾಗುತ್ತೇನೆ. ಆ ದಿನ ಕೇಕ್, ಹೂಗುಚ್ಚ ಗಿಫ್ಟ್ ಎಲ್ಲಾ ಬಿಟ್ಟು ….. ಒಂದು ಹಾಳೆಯಲ್ಲಿ 18 ಪದಗಳನ್ನು ಮೀರದಂತೆ ಏನಾದರೂ ಒಂದು ಉತ್ತಮ ವಿಚಾರವನ್ನು ಬರೆದು ತರುತ್ತೀರಾ..? ಅತ್ಯುತ್ತಮವಾದ 18 ಬರವಣಿಗೆಗೆ ಸೂಕ್ತ ಬಹುಮಾನವಿರುತ್ತದೆʼ ಎಂದು ಹೇಳಿದ್ದಾರೆ.

ಸದ್ಯ ಪ್ಯಾನ್‌ ಇಂಡಿಯಾ ʼಯುಐʼ ಸಿನಿಮಾದ ನಿರ್ಮಾಣದಲ್ಲಿ ಉಪೇಂದ್ರ ಅವರು ಬ್ಯುಸಿಯಾಗಿದ್ದಾರೆ. ಹಲವು ವರ್ಷಗಳ ಗ್ಯಾಪ್​ನ ಬಳಿಕ ‘ಯುಐ’ ಸಿನಿಮಾ ಮೂಲಕ ನಿರ್ದೇಶನಕ್ಕೆ ಮರಳಿದ್ದು, ಇದರ ನಡುವೆ ಅಭಿಮಾನಿಗಳ ಬುದ್ಧಿ ಪರೀಕ್ಷೆಗೆ ʼಬುದ್ಧಿವಂತʼ ಮುಂದಾಗಿದ್ದಾರೆ. ಇನ್ನು ಅಭಿಮಾನಿಗಳು ಸಹ ಉಪ್ಪಿ ಮಾತಿಗೆ ಎಸ್‌ ಬಾಸ್‌ ಎಂದು 18 ಪದಗಳ ರಚನೆಯಲ್ಲಿ ಮಗ್ನರಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News