'ಕಂಗುವ' ಶೂಟಿಂಗ್ ವೇಳೆ ಭಾರೀ ಅವಘಡ : ನಟ ಸೂರ್ಯಗೆ ಗಾಯ, ಆಸ್ಪತ್ರೆಗೆ ದಾಖಲು

Actor Suriya Accident : ಕಾಲಿವುಡ್ ಸ್ಟಾರ್ ಹೀರೋ ಸೂರ್ಯ ಸೆಟ್‌ನಲ್ಲಿ ಗಾಯಗೊಂಡಿದ್ದಾರೆ. ಶಿವಾ ನಿರ್ದೇಶನದ ಬಹುನಿರೀಕ್ಷಿತ ಕಂಗುವಾ ಸಿನಿಮಾ ಶೂಟಿಂಗ್‌ ವೇಳೆ ಈ ಘಟನೆ ನಡೆದಿದೆ. ಈ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ...

Written by - Krishna N K | Last Updated : Nov 23, 2023, 04:26 PM IST
  • ಕಾಲಿವುಡ್ ಸ್ಟಾರ್ ಹೀರೋ ಸೂರ್ಯ ಸೆಟ್‌ನಲ್ಲಿ ಗಾಯಗೊಂಡಿದ್ದಾರೆ.
  • ಕಂಗುವಾ ಸಿನಿಮಾ ಶೂಟಿಂಗ್‌ ವೇಳೆ ಈ ಘಟನೆ ನಡೆದಿದೆ.
  • ಸಾಹಸ ದೃಶ್ಯದ ಶೂಟಿಂಗ್ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.
'ಕಂಗುವ' ಶೂಟಿಂಗ್ ವೇಳೆ ಭಾರೀ ಅವಘಡ : ನಟ ಸೂರ್ಯಗೆ ಗಾಯ, ಆಸ್ಪತ್ರೆಗೆ ದಾಖಲು title=

Suriya Accident : ಬಹುನಿರೀಕ್ಷಿತ ‘ಕಂಗುವ’ ಚಿತ್ರದ ಚಿತ್ರೀಕರಣದ ವೇಳೆ ಸಂಭವಿಸಿದ ಅವಘಡದಲ್ಲಿ ಕಾಲಿವುಡ್‌ ಸ್ಟಾರ್‌ ನಟ ಸೂರ್ಯ ಪ್ರಾಣಾಪಾಯದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಶಿವಾ ನಿರ್ದೇಶನದ ‘ಕಂಗುವ’ ಸಿನಿಮಾದ ಶೂಟಿಂಗ್ ಶರವೇಗದಲ್ಲಿ ಸಾಗುತ್ತಿದ್ದು, ಸಾಹಸ ದೃಶ್ಯದ ಶೂಟಿಂಗ್ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.

ಅವಘಡದಲ್ಲಿ ಸೂರ್ಯನ ಹೆಗಲಿನ ಮೇಲೆ ಕ್ಯಾಮೆರಾ ಬಿದ್ದಿದ್ದಾಗಿ ತಿಳಿದು ಬಂದಿದೆ. ಭುಜ ಹಾಗೂ ಕೈಗೆ ಗಾಯಗಳಾಗಿವೆ. ತಕ್ಷಣ ಚಿತ್ರತಂಡ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದೆ. ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ. ಸಧ್ಯ ಚಿತ್ರೀಕರಣ ಸ್ಥಗಿತವಾಗಿದ್ದು, ಸೂರ್ಯ ಚೇತರಿಕೆ ಬಳಿಕ ಪ್ರಾರಂಭವಾಗಲಿದೆ. 

ಇದನ್ನೂ ಓದಿ: ಭಾರತದ ಅತ್ಯಂತ ಶ್ರೀಮಂತ ಹಾಸ್ಯ ನಟ ಯಾರು..? ಇವರು ಗಿನ್ನಿಸ್ ದಾಖಲೆ ಬರೆದಿದ್ದಾರೆ 

'ಕಂಗುವ' ಪಿರಿಯಾಡಿಕಲ್ ಸಿನಿಮಾ. ಈ ಚಿತ್ರದಲ್ಲಿ ಸೂರ್ಯ ಹಿಂದೆಂದೂ ಕಾಣದಂತೆ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದ ಮೇಲೆ ಹೆಚ್ಚಿನ ನಿರೀಕ್ಷೆ ಇರುವ ಕಾರಣ ರಿಸ್ಕ್ ಸೀನ್‌ಗಳಲ್ಲಿ ಡ್ಯೂಪ್ ಇಲ್ಲದೆ ನಟಿಸುತ್ತಿದ್ದಾರೆ. ಸಧ್ಯ ನಡೆದ ಅವಘಡ ಆಕ್ಷನ್ ದೃಶ್ಯವನ್ನು ಚಿತ್ರೀಕರಿಸುವಾಗ ಸಂಭವಿಸಿದ್ದಾಗಿ ತಿಳಿದು ಬಂದಿದೆ. ಅಪಘಾತದ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಆದ್ರೆ ಸುದ್ದಿ ತಿಳಿದು ಸೂರ್ಯ ಅವರ ಅಭಿಮಾನಿಗಳು ಆತಂಕಗೊಂಡಿದ್ದಾರೆ. 

ಸೂರ್ಯ ತಮಿಳು ಮಾತ್ರವಲ್ಲದೆ ತೆಲುಗಿನಲ್ಲೂ ಉತ್ತಮ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕನ್ನಡ ಪ್ರೇಕ್ಷಕರಿಗೂ ಇವರ ಪರಿಚಯವಿದೆ. ಸದ್ಯ ಸೂರ್ಯ ಯುವಿ ಕ್ರಿಯೇಷನ್ಸ್ ಮತ್ತು ಸ್ಟುಡಿಯೋ ಗ್ರೀನ್ ಜಂಟಿಯಾಗಿ ನಿರ್ಮಿಸುತ್ತಿರುವ 'ಕಂಗುವ' ಚಿತ್ರದಲ್ಲಿ ನಟಿಸುತ್ತಿದ್ದಾರೆ.  ಈ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆಯಾಗಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News