ʼಜವಾನ್ʼ ಯಶಸ್ಸಿಗಾಗಿ ಮಾತಾ ವೈಷ್ಣೋದೇವಿಗೆ ಮೊರೆ ಹೋದ ಶಾರುಖ್ ಖಾನ್..!

SRK visit Vaishno devi temple : ʼಜವಾನ್ʼ ಬಿಡುಗಡೆಗೆ ದಿನಗಳು ಹತ್ತಿರವಾಗುತ್ತಿವೆ. ಇದರ ಬೆನ್ನಲ್ಲೆ ಚಿತ್ರದ ಯಶಸ್ಸಿಗಾಗಿ ಪ್ರಾರ್ಥಿಸಲು ಬಾಲಿವುಡ್‌ ನಟ ಶಾರುಖ್ ಖಾನ್ ಅವರು ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ತ್ರಿಕೂಟ ಬೆಟ್ಟಗಳ ಮೇಲಿರುವ ಮಾತಾ ವೈಷ್ಣೋದೇವಿ ದೇಗುಲಕ್ಕೆ ಭೇಟಿ ನೀಡಿದರು. ಈ ಕುರಿತು ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ.

Written by - Krishna N K | Last Updated : Aug 30, 2023, 04:09 PM IST
  • ಮಾತಾ ವೈಷ್ಣೋದೇವಿ ದೇಗುಲಕ್ಕೆ ಭೇಟಿ ನೀಡಿದ ಬಾಲಿವುಡ್‌ ನಟ ಶಾರುಖ್ ಖಾನ್.
  • ಜವಾನ್‌ ಸಿನಿಮಾ ಬಿಡುಗಡೆ ಹಿನ್ನಲೆ ಮಾತಾ ವೈಷ್ಣೋದೇವಿ ದೇಗುಲಕ್ಕೆ ನಟ ಭೇಟಿ.
  • ತಡರಾತ್ರಿ ವೈಷ್ಣೋದೇವಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಎಸ್‌ಆರ್‌ಕೆ.
ʼಜವಾನ್ʼ ಯಶಸ್ಸಿಗಾಗಿ ಮಾತಾ ವೈಷ್ಣೋದೇವಿಗೆ ಮೊರೆ ಹೋದ ಶಾರುಖ್ ಖಾನ್..! title=

Jawan movie updates : ಶಾರುಖ್ ಖಾನ್ ಅವರ ಬಹು ನಿರೀಕ್ಷಿತ ಚಿತ್ರ 'ಜವಾನ್' ಬಿಡುಗಡೆಗೆ ಸಿದ್ಧವಾಗಿದೆ. ಬುಧವಾರ ಚೆನ್ನೈನಲ್ಲಿ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ನಡೆಯಲಿದೆ. ಈ ಅದ್ಧೂರಿ ಕಾರ್ಯಕ್ರಮದಲ್ಲಿ ಬಿಟೌನ್‌ ಕಿಂಗ್‌ ಶಾರುಖ ಖಾನ್‌ ಭಾಗವಹಿಸಲಿದ್ದಾರೆ. ಇದಕ್ಕೂ ಮುನ್ನ ಅವರು, ಮಂಗಳವಾರ ತಡರಾತ್ರಿ ಮಾತಾ ವೈಷ್ಣೋದೇವಿ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. 

ಬಾದ್‌ ಶಾ ಶಾರುಖ್‌ ಮಂಗಳವಾರ ಸಂಜೆ ಬೇಸ್ ಕ್ಯಾಂಪ್ ಕತ್ರಾ ತಲುಪಿ ನಂತರ, ರಾತ್ರಿ 11.40 ರ ಸುಮಾರಿಗೆ ಮಾತಾ ವೈಷ್ಣೋದೇವಿ ದೇಗುಲವನ್ನು ತಲುಪಿದರು. ಹೊಸ ತಾರಾಕೋಟೆ ಮಾರ್ಗದ ಮೂಲಕ ದೇವಾಲಯಕ್ಕೆ ಬಂದು ಪ್ರಾರ್ಥನೆ ಸಲ್ಲಿಸಿದ್ದಾಗಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ವಿಜಯ್- ಸಮಂತಾ ʼಖುಷಿʼ ಸಿನಿಮಾ ರಿಲೀಸ್‌ಗೆ ದಿನಗಣನೆ..! ಸೆಪ್ಟಂಬರ್ 1ಕ್ಕೆ ಚಿತ್ರ ಬಿಡುಗಡೆ

ಈ ಕುರಿತು ವಿಡಿಯೋ ಸಹ ವೈರಲ್‌ ಆಗಿದೆ. ವಿಡಿಯೋದಲ್ಲಿ ಶಾರುಖ್‌ ನೀಲಿ ಬಣ್ಣದ ಜಾಕೆಟ್ ಧರಿಸಿ, ಸಂಪೂರ್ಣವಾಗಿ ಮುಖವನ್ನು ಮುಚ್ಚಿಕೊಂಡಿರುವುದನ್ನು ಕಾಣಬಹುದು. ಅವರ ಜೊತೆ ವೈಷ್ಣೋದೇವಿ ದೇಗುಲ ಮಂಡಳಿಯ ಅಧಿಕಾರಿಗಳು, ಪೊಲೀಸರು ಮತ್ತು ಅವರ ಸಿಬ್ಬಂದಿ ವಿಡಿಯೋ ಕ್ಲಿಪ್‌ನಲ್ಲಿದ್ದಾರೆ.

ಹೈ ಆಕ್ಷನ್ ಥ್ರಿಲ್ಲರ್ 'ಜವಾನ್' ಸಿನಿಮಾವನ್ನು ತಮಿಳು ಡೈರೆಕ್ಟರ್‌ ಅಟ್ಲೀ ನಿರ್ದೇಶಿಸಿದ್ದಾರೆ. ಇದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಸೆಪ್ಟೆಂಬರ್ 7 ರಂದು ರಿಲೀಸ್‌ ಆಗಲಿದೆ. ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಪ್ರಸ್ತುತಿ, ಗೌರಿ ಖಾನ್ ನಿರ್ಮಿಸಿದ್ದು, ಗೌರವ್ ವರ್ಮಾ ಸಹ-ನಿರ್ಮಾಣ ಜವಾನ್‌ ಚಿತ್ರಕ್ಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News