ಅಲ್ಲು ಅರ್ಜುನ್‌ ಫ್ಯಾನ್ಸ್‌ಗೆ ಶಾಕ್‌..! ಇನ್ನೂ ಸಿದ್ಧವಾಗದ 'ಪುಷ್ಪ 2' 3D ಪ್ರಿಂಟ್.. ಪ್ರದರ್ಶನ ರದ್ದು!!

Pushpa 2 The Rule: 3D ಪ್ರಿಂಟ್ ಸಿದ್ಧವಾಗಲು ಇನ್ನೂ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ನಿರ್ಮಾಪಕರು ಹೇಳಿದ್ದಾರೆ. ಮಧ್ಯರಾತ್ರಿಯ ಶೋ ವೀಕ್ಷಿಸಲು ಯೋಜಿಸುತ್ತಿದ್ದ ವೀಕ್ಷಕರು ಈಗ 2D ಆವೃತ್ತಿಯಲ್ಲಿಯೇ ಸಿನಿಮಾ ವೀಕ್ಷಿಸಬೇಕಾದ ಅನಿವಾರ್ಯತೆ ಎದುರಾಗಿದೆ. ​

Written by - Puttaraj K Alur | Last Updated : Dec 5, 2024, 06:00 PM IST
  • ಸ್ಟೈಲಿಶ್‌ ಸ್ಟಾರ್ ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಬಿಗ್‌ ಶಾಕ್!‌
  • ಇನ್ನೂ ಸಿದ್ಧವಾಗದ 'ಪುಷ್ಪ 2' 3D ಪ್ರಿಂಟ್.. ಪ್ರದರ್ಶನಗಳು ರದ್ದು!
  • Pushpa 2 The Rule ಬಾಕ್ಸ್‌ಆಫೀಸ್‌ ಮೇಲೆ ದೊಡ್ಡ ಪರಿಣಾಮ
ಅಲ್ಲು ಅರ್ಜುನ್‌ ಫ್ಯಾನ್ಸ್‌ಗೆ ಶಾಕ್‌..! ಇನ್ನೂ ಸಿದ್ಧವಾಗದ 'ಪುಷ್ಪ 2' 3D ಪ್ರಿಂಟ್.. ಪ್ರದರ್ಶನ ರದ್ದು!! title=
Pushpa 2 The Rule

Pushpa 2 The Rule Movie: ಸ್ಟೈಲಿಶ್‌ ಸ್ಟಾರ್ ಅಲ್ಲು ಅರ್ಜುನ್ ನಟನೆಯ ʼಪುಷ್ಪ 2: ದಿ ರೂಲ್ʼ ಗುರುವಾರ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಈ ಚಿತ್ರವನ್ನು ವೀಕ್ಷಿಸಲು ಅಲ್ಲು ಅರ್ಜುನ್ ಅಭಿಮಾನಿಗಳು ತಡರಾತ್ರಿಯಿಂದಲೇ ಥಿಯೇಟರ್‌ಗೆ ನುಗ್ಗಿದ್ದಾರೆ. ಆದರೆ 'ಪುಷ್ಪ 2' ಬಿಡುಗಡೆಗೆ ಮುನ್ನವೇ ಚಿತ್ರತಂಡಕ್ಕೆ ಬಹುದೊಡ್ಡ ಶಾಕ್‌ ಎದುರಾಗಿದೆ. ಏಕೆಂದರೆ ಈ ಚಿತ್ರದ 3D ಪ್ರಿಂಟ್ ಲಭ್ಯವಿಲ್ಲವಾಗಿಲ್ಲವೆಂದು ಹೇಳಲಾಗಿದೆ. ಹೀಗಾಗಿ ಹಲವೆಡೆ ಪ್ರದರ್ಶನಗಳನ್ನು ರದ್ದುಗೊಳಿಸಲಾಗಿದ್ದು, ಇದು ಬಾಕ್ಸ್ ಆಫೀಸ್ ಕಲೆಕ್ಷನ್ ಮೇಲೆ ದೊಡ್ಡ ಪರಿಣಾಮವನ್ನುಂಟು ಮಾಡಿದೆ. 

ಸಿದ್ಧವಾಗದ 'ಪುಷ್ಪ 2' ಚಿತ್ರದ 3D ಆವೃತ್ತಿ!

'ಪುಷ್ಪ 2: ದಿ ರೂಲ್' ಮೇಕರ್ಸ್ ಚಿತ್ರದ 3D ಆವೃತ್ತಿ ಇನ್ನೂ ಸಿದ್ಧವಾಗಿಲ್ಲವೆಂದು ಮಾಹಿತಿ ನೀಡಿದ್ದಾರೆ. ಇದರಿಂದಾಗಿ 3D ಶೋಗಳ ಬಿಡುಗಡೆ ವಿಳಂಬವಾಗುತ್ತಿದೆ. ವರದಿಗಳ ಪ್ರಕಾರ, ಡಿಸೆಂಬರ್ 5ಕ್ಕೆ ನಿಗದಿಯಾಗಿದ್ದ 3D ಶೋಗಳನ್ನು ರದ್ದುಗೊಳಿಸಲಾಗಿದೆ. ಹೆಚ್ಚುವರಿಯಾಗಿ ಹಿಂದಿ ಆವೃತ್ತಿಯ ಮಧ್ಯರಾತ್ರಿಯ ಪ್ರದರ್ಶನಗಳು ಡಿಸೆಂಬರ್ 4ರ ರಾತ್ರಿ ಪ್ರದರ್ಶನಗೊಂಡಿಲ್ಲ. ಹೀಗಾಗಿ ಸಾವಿರಾರು ವೀಕ್ಷಕರಿಗೆ ನಿರಾಸೆ ಮೂಡಿದೆ. 

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಮದುವೆ ಡೇಟ್‌ ಫಿಕ್ಸ್‌!? ಈ ವಿಷಯ ಕೇಳಿ ಫ್ಯಾನ್ಸ್‌ ಫುಲ್‌ ಖುಷ್‌

3D ಪ್ರಿಂಟ್‌ನಲ್ಲಿ ವಿಳಂಬ!

3D ಪ್ರಿಂಟ್ ಸಿದ್ಧವಾಗಲು ಇನ್ನೂ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ನಿರ್ಮಾಪಕರು ಹೇಳಿದ್ದಾರೆ. ಮಧ್ಯರಾತ್ರಿಯ ಶೋ ವೀಕ್ಷಿಸಲು ಯೋಜಿಸುತ್ತಿದ್ದ ವೀಕ್ಷಕರು ಈಗ 2D ಆವೃತ್ತಿಯಲ್ಲಿಯೇ ಸಿನಿಮಾ ವೀಕ್ಷಿಸಬೇಕಾದ ಅನಿವಾರ್ಯತೆ ಎದುರಾಗಿದೆ. 

ಮಲ್ಟಿಪ್ಲೆಕ್ಸ್ ಮ್ಯಾನೇಜರ್‌ಗಳು ಹೇಳಿದ್ದೇನು?

"ನಾವು 3D ಶೋಗಾಗಿ ಸಂಪೂರ್ಣ ಸಿದ್ಧತೆಗಳನ್ನು ನಡೆಸಿದ್ದೇವೆ, ಆದರೆ ಈಗ 3D ಆವೃತ್ತಿಯ ಬಿಡುಗಡೆಯನ್ನು ಮುಂದೂಡಲಾಗಿದೆ ಎಂಬ ನಮಗೆ ಮಾಹಿತಿ ಬಂದಿದೆ. ಅನೇಕ ವೀಕ್ಷಕರು ಈಗಾಗಲೇ 3D ಶೋಗಾಗಿ ತಮ್ಮ ಟಿಕೆಟ್‌ಗಳನ್ನ ಕಾಯ್ದಿರಿಸಿದ್ದಾರೆ. ಇದೀಗ ಅವರು 2D ಆವೃತ್ತಿ ವೀಕ್ಷಿಸಲು ಅಥವಾ ಅವರ 3D ಟಿಕೆಟ್ ಮೊತ್ತವನ್ನು ಪಡೆಯುವ ಆಯ್ಕೆಯನ್ನು ಹೊಂದಿರುತ್ತಾರೆ. 3D ಅವತರಣಿಕೆ ತಡವಾಗುತ್ತಿರುವುದರಿಂದ ಚಿತ್ರ ವೀಕ್ಷಿಸಲು ಕಾತುರರಾಗಿರುವ ಪ್ರೇಕ್ಷಕರಿಗೆ ನಿರಾಸೆಯಾಗಿದೆ. ಆದರೆ ಆದಷ್ಟು ಬೇಗ 3D ಆವೃತ್ತಿಯನ್ನು ಪ್ರೇಕ್ಷಕರಿಗೆ ತಲುಪಿಸಲು ಪ್ರಯತ್ನಿಸಲಾಗುತ್ತಿದೆ ಎಂದು ನಿರ್ಮಾಪಕರು ನಮಗೆ ಭರವಸೆ ನೀಡಿದ್ದಾರೆಂದು ಮಲ್ಟಿಪ್ಲೆಕ್ಸ್ ಮ್ಯಾನೇಜರ್‌ಗಳು ತಿಳಿಸಿದ್ದಾರೆ.

ಇದನ್ನೂ ಓದಿ: Pushpa 2 OTT Release: ಈ ವಿಶೇಷ ದಿನದಂದು ಒಟಿಟಿಯಲ್ಲಿ ಪುಷ್ಪ 2 ರಿಲೀಸ್...‌ ಎಲ್ಲಿ, ಯಾವಾಗ ನೋಡಬೇಕು ಇಲ್ಲಿ ತಿಳಿಯಿರಿ!

'ಪುಷ್ಪ 2: ದಿ ರೂಲ್'

ಡಿಸೆಂಬರ್ 4ರ ಮಧ್ಯರಾತ್ರಿಯಿಂದಲೇ 'ಪುಷ್ಪ 2: ದಿ ರೂಲ್' ಬಿಡುಗಡೆಯಾಗಿದೆ. ಚಿತ್ರವು ಇಲ್ಲಿಯವರೆಗೆ ಉತ್ತಮ ಆರಂಭ ಪಡೆದುಕೊಂಡಿದ್ದು, ಸುಕುಮಾರ್ ನಿರ್ದೇಶನದ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಹೊಸ ದಾಖಲೆ ನಿರ್ಮಿಸುವತ್ತ ಮುನ್ನುಗ್ಗುತ್ತಿದೆ. ಅಲ್ಲು ಅರ್ಜುನ್‌ಗೆ ಜೊತೆಯಾಗಿ ರಶ್ಮಿಕಾ ಮಂದಣ್ಣ, ತಾರಕ್ ಪೊನ್ನಪ್ಪ, ಫಹಾದ್‌ ಫಾಸಿಲ್, ಜಗಪತಿ ಬಾಬು, ಡಾಲಿ ಧನಂಜಯ ಮತ್ತು ಐಟಂ ಸಾಂಗ್‌ನಲ್ಲಿ ಶ್ರೀಲೀಲಾ ಕಾಣಿಸಿಕೊಂಡಿದ್ದಾರೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News