‌Bigg Boss: ʼಅವರ ಮೇಲೆ ನನಗೆ...ʼ ಸಹ ಸ್ಪರ್ಧಿಯೊಂದಿಗಿನ ಸಂಬಂಧದ ಬಗ್ಗೆ ಬಹಿರಂಗವಾಗಿ ಮಾತನಾಡಿದ ಬಿಗ್‌ಬಾಸ್ ವಿನ್ನರ್!

Bigg Boss Winner: ಬಿಗ್ ಬಾಸ್ ಮನೆಯಲ್ಲಿ ಮನ್ನಾರಾ ಚೋಪ್ರಾ ಮತ್ತು ಮುನಾವರ್ ಫರುಕಿ ಅವರ ಬಾಂಧವ್ಯವನ್ನು ಅಭಿಮಾನಿಗಳು ತುಂಬಾ ಇಷ್ಟಪಟ್ಟಿದ್ದಾರೆ. ಸದ್ಯ ಮುನವ್ವರ್ ಆ ಸಂಬಂಧದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ..   

Written by - Savita M B | Last Updated : Jan 29, 2024, 12:24 PM IST
  • ಬಿಗ್ ಬಾಸ್ ಮನೆಯಲ್ಲಿ ಮನ್ನಾರಾ ಚೋಪ್ರಾ ಮತ್ತು ಮುನಾವರ್ ಫಾರುಕಿ ಜೋಡಿಯ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ
  • ಆರಂಭದಿಂದಲೂ ಇಬ್ಬರೂ ಉತ್ತಮ ಸ್ನೇಹಿತರಾಗಿದ್ದರು.
  • ಆದರೆ ಅವರಿಬ್ಬರ ನಡುವೆ ಸ್ನೇಹಕ್ಕಿಂತ ಮಿಗಿಲಾದದ್ದೇನೋ ಇದೆ ಎನ್ನಲಾಗಿತ್ತು
‌Bigg Boss: ʼಅವರ ಮೇಲೆ ನನಗೆ...ʼ ಸಹ ಸ್ಪರ್ಧಿಯೊಂದಿಗಿನ ಸಂಬಂಧದ ಬಗ್ಗೆ ಬಹಿರಂಗವಾಗಿ ಮಾತನಾಡಿದ ಬಿಗ್‌ಬಾಸ್ ವಿನ್ನರ್!  title=

Bigg Boss: ಬಿಗ್ ಬಾಸ್ ಮನೆಯಲ್ಲಿ ಮನ್ನಾರಾ ಚೋಪ್ರಾ ಮತ್ತು ಮುನಾವರ್ ಫಾರುಕಿ ಜೋಡಿಯ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಆರಂಭದಿಂದಲೂ ಇಬ್ಬರೂ ಉತ್ತಮ ಸ್ನೇಹಿತರಾಗಿದ್ದರು. ಇಬ್ಬರ ನಡುವಿನ ಬಾಂಧವ್ಯ ತುಂಬಾ ಚೆನ್ನಾಗಿತ್ತು ಆದರೆ ಸ್ವಲ್ಪ ಸಮಯದ ನಂತರ ಅವರ ಸ್ನೇಹವೂ ಹದಗೆಡಲು ಪ್ರಾರಂಭಿಸಿ.. ಅವರನ್ನು ನೋಡಿದರೆ ಅವರಿಬ್ಬರ ನಡುವೆ ಸ್ನೇಹಕ್ಕಿಂತ ಮಿಗಿಲಾದದ್ದೇನೋ ಇದೆ ಎನ್ನಲಾಗಿತ್ತು..

ಇದೀಗ ಕಾರ್ಯಕ್ರಮ ಮುಗಿದು ಎಲ್ಲರೂ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಕಾರ್ಯಕ್ರಮದ ಅಂತ್ಯದ ನಂತರ, ಮನ್ನಾರಾ ಚೋಪ್ರಾ ಅವರೊಂದಿಗಿನ ಸಂಬಂಧದ ಸ್ಥಿತಿಯನ್ನು ಮುನಾವರ್ ಫರುಕಿ ಬಹಿರಂಗಪಡಿಸಿದ್ದಾರೆ.. ‌

ಇದನ್ನೂ ಓದಿ-BBK10 Winner: ಕಾರ್ತಿಕ್‌ ಕೈ ಸೇರಲ್ಲ ಸಂಪೂರ್ಣ 50 ಲಕ್ಷ ರೂಪಾಯಿ.. ವಿನ್ನರ್‌ಗೆ ಸಿಗುವ ಮೊತ್ತ ಇಷ್ಟೇ.!

ಬಿಗ್ ಬಾಸ್ 17 ರ ಗ್ರ್ಯಾಂಡ್ ಫಿನಾಲೆ ಮುಗಿದಿದೆ.. ಈ ಸೀಸನ್‌ನ ವಿಜೇತರು ಬೇರೆ ಯಾರೂ ಅಲ್ಲ ಮುನಾವರ್ ಫಾರೂಕಿ. ಮುನವ್ವರ್ ಮತ್ತು ಮನ್ನಾರ ಇಬ್ಬರೂ ಟಾಪ್ 3 ಲಿಸ್ಟ್‌ನಲ್ಲಿ ಸ್ಥಾನ ಪಡೆದಿದ್ದರು ಆದರೆ ಕಡಿಮೆ ಮತಗಳಿಂದ ಮನ್ನಾರಾ ಟಾಪ್ 2 ಬರಲು ಸಾಧ್ಯವಾಗಲಿಲ್ಲ. 

ಇದನ್ನೂ ಓದಿ-BBK10 Winner: ಕಾರ್ತಿಕ್‌ ಕೈ ಸೇರಲ್ಲ ಸಂಪೂರ್ಣ 50 ಲಕ್ಷ ರೂಪಾಯಿ.. ವಿನ್ನರ್‌ಗೆ ಸಿಗುವ ಮೊತ್ತ ಇಷ್ಟೇ.!

ಇನ್ನು ಮುನವ್ವರ್ ಕಾರ್ಯಕ್ರಮದಲ್ಲಿ ವಿಜೇತರಾದ ಬಳಿಕ ಮನ್ನಾರ ಕುರಿತು ಮಾತನಾಡಿದ್ದಾರೆ.. "ಮುನವ್ವರ್ ಆರಂಭದಲ್ಲಿ ನಿಮಗೆ ಮನ್ನಾರ ಮೇಲೆ ಯಾವ ಭಾವನೆಗಳು ಇರಲಿಲ್ಲವೇ? ನೀವು ಅವರೆಂದರೇ ಕರಗುತ್ತಿದ್ದೀರಿ ಎಂದು ಸಲ್ಮಾನ್ ಜಿ ಕೂಡ ಹೇಳುತ್ತಿದ್ದರು" ಎಂದು ಮಾಧ್ಯಮದವರು ಕೇಳಿದಾಗ.. ಈ ಬಗ್ಗೆ ಮುನವ್ವರ್ "ನಾನು ನಿಜ ಹೇಳುತ್ತೇನೆ, ನಾನು ಮನ್ನಾರನ್ನು ನೋಡಿದಾಗ.. ಅವರೊಂದಿಗೆ ಸ್ನೇಹ ಬೆಳೆಸಿದಾಗ ಎಲ್ಲ ವಿಷಗಳ ಬಗ್ಗೆಯೂ ನಾನು ಚರ್ಚೆ ಮಾಡುತ್ತಿದ್ದೆ.. ಆದರೆ ನಾನು ಆಕೆಯೊಂದಿಗೆ ಎಚ್ಚರಿಕೆಯಿಂದ ಇದ್ದೆ.. ಅವರ ಕಾಳಜಿ ನನಗೆ ಬೇರೆ ರೀತಿಯೇ ಭಾಸವಾಗುತ್ತಿದ್ದಂತೆ ನಾನೇ ಒಂದು ಹೆಜ್ಜೆ ಹಿಂದೆ ಸರಿದೆ... ಇದರಿಂದ ನನ್ನ ಮತ್ತು ಮನ್ನಾರ ನಡುವಿನ ಸಂಬಂಧದಲ್ಲಿ ಯಾವುದೇ ವ್ಯತ್ಯಾಸವಾಗಲಿಲ್ಲ. ನಾವು ನಮ್ಮ ಪಾಡಿಗೆ ಸುಮ್ಮನೆ ಆರಾಮವಾಗಿದ್ದೆವು. ಆ ರೀತಿಯಲ್ಲಿ ನನಗೆ ಅವರ ಮೇಲೆ ಯಾವುದೇ ಭಾವನೆಗಳಿರಲಿಲ್ಲ" ಎಂದಿದ್ದಾರೆ..

ಮನ್ನಾರ ಮುನವರ್‌ ಬಗ್ಗೆ ಹೇಳಿದ್ದು ಹೀಗೆ:
ಮನ್ನಾರ ಕೂಡ ಮನೆಯಿಂದ ಹೊರಗೆ ಬಂದು ಮುನವ್ವರ ಬಗ್ಗೆ ಹಲವು ಸಂದರ್ಶನಗಳಲ್ಲಿ ಮಾತನಾಡಿದ್ದು... ಈ ವೇಳೆ "ನಾನು ಮುನವ್ವರ್‌ಗೆ ಒಳ್ಳೆಯ ಫ್ರೆಂಡ್‌ ಮತ್ತು ಸ್ನೇಹ ಎಂದಿಗೂ ಒಂದು ಕಡೆಯಿಂದಲ್ಲ, ಎರಡೂ ಕಡೆಯಿಂದಲೇ ಆಗುತ್ತದೆ" ಎಂದು ಹೇಳಿದ್ದಾರೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News