Holi 2023 : ಭಾರತವು ವೈವಿಧ್ಯಮಯ ಸಂಸ್ಕೃತಿಗಳು ಮತ್ತು ಸಂಪ್ರದಾಯಗಳ ನಾಡು. ಇಲ್ಲಿ ಪ್ರತಿಯೊಂದು ಆಚರಣೆ, ಅಚಾರ, ಪದ್ದತಿಗಳಿಗೆ ತಮ್ಮದೆಯಾದ ಮಹತ್ವವಿದೆ. ಸದ್ಯ ಬಣ್ಣಗಳ ಹಬ್ಬ ಹೋಳಿಯನ್ನು ಆಚರಿಸಲು ರಾಷ್ಟ್ರದಾದ್ಯಂತ ಜನರು ತುದಿಗಾಲಿನಲ್ಲಿ ನಿಂತಿದ್ದಾರೆ. ಈಗಾಗಲೇ ಎಲ್ಲಾ ಕಡೆ ಹೋಳಿ ಹಬ್ಬವನ್ನು ಸ್ವಾಗತಿಸಲು ಯುವಪಡೆ ಸಿದ್ದತೆ ನಡೆಸುತ್ತಿದೆ. ಈ ವರ್ಷ ಮಾರ್ಚ್ 8 ಬಣ್ಣದ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬವು ಫಾಲ್ಗುಣ ಮಾಸದ ಪೂರ್ಣಿಮಾ (ಹುಣ್ಣಿಮೆಯ ದಿನ) ಸಂಜೆ ಪ್ರಾರಂಭವಾಗುತ್ತದೆ. ಹೋಳಿಯನ್ನು ಭಾರತದ ವಿವಿಧ ಭಾಗಗಳಲ್ಲಿ 'ವಸಂತ ಹಬ್ಬ' ಎಂದೂ ಸಹ ಆಚರಿಸಲಾಗುತ್ತದೆ.
ಹೋಳಿ ಹಬ್ಬದ ಮಹತ್ವ : ಭಾರತದಲ್ಲಿ ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸುವ ಹಬ್ಬಗಳಲ್ಲಿ ಒಂದಾದ ಹೋಳಿ ಹಬ್ಬ ಸಮೀಪಿಸುತ್ತಿದೆ. ನಾಡಿನೆಲ್ಲೆಡೆ ಉತ್ಸಾಹದ ವಾತಾವರಣ ಸೃಷ್ಟಿಯಾಗುತ್ತಿದೆ. ಪುರಾಣಗಳಲ್ಲಿ, ಈ ಹಬ್ಬದ ಮೊದಲ ದಿನದ ಸಂಜೆಯಂದು 'ಹೋಳಿಕಾ ದಹನ' ಅಥವಾ 'ಚಿಕ್ಕ ಹೋಳಿ' ಎಂದು ಆಚರಿಸಲಾಗುತ್ತದೆ. ನಂತರ ಮರುದಿನದಂದು ದೊಡ್ಡದಾಗಿ ಆಚರಣೆ ಮಾಡಲಾಗುತ್ತದೆ. ಅಂದು ಪರಸ್ಪರ ಬಣ್ಣಗಳನ್ನು ಎರಚಿ ಸಂಭ್ರಮಿಸುತ್ತಾರೆ. ಈ ಹಬ್ಬವನ್ನು ಚಳಿಗಾಲದ ದಿನಗಳಿಗೆ 'ವಿದಾಯ' ಮತ್ತು ಬೇಸಿಗೆಗೆ ʼಸ್ವಾಗತʼ ಎಂದು ಪರಿಗಣಿಸುತ್ತಾರೆ.
ಇದನ್ನೂ ಓದಿ: Holi 2023 ದಿನ ನಿಮ್ಮ ರಾಶಿಗೆ ಅನುಗುಣವಾಗಿ ಈ ಉಪಾಯ ಮಾಡಿ, ತಾಯಿ ಲಕ್ಷ್ಮಿಯ ಕೃಪೆಗೆ ಪಾತ್ರರಾಗಿ!
ಹೋಳಿ ಹಬ್ಬದ ಹಿಂದಿನ ಕಥೆ : ಹಿಂದೂ ಪುರಾಣಗಳಲ್ಲಿ ಹೋಳಿಯನ್ನು 'ಹೊಳಿಕಾ'ನ ಹತ್ಯೆ ಎಂದು ಕರೆಯಲಾಗುತ್ತದೆ. ಪ್ರಹ್ಲಾದನು ತನ್ನ ತಂದೆ ಹಿರಣ್ಯಕಶ್ಯಪುವಿನ ಆಜ್ಞೆಯನ್ನು ಸ್ವೀಕರಿಸಲು ನಿರಾಕರಿಸಿದಾಗ ಮತ್ತು ಭಗವಾನ್ ವಿಷ್ಣುವಿಗಾಗಿ ಪ್ರಾರ್ಥಿಸುತ್ತಿದ್ದಾಗ, ಹಿರಣ್ಯಕಶ್ಯಪು ತನ್ನ ಮಗನನ್ನು ಕೊಲ್ಲಲು ತನ್ನ ಸಹೋದರಿ ಹೋಳಿಕಾಳ ಸಹಾಯವನ್ನು ಪಡೆಯುತ್ತಾನೆ ಎಂದು ಪುರಾಣಗಳು ಹೇಳಲಾಗುತ್ತದೆ. ಹೋಳಿಕಾಗೆ ತನ್ನ ಮೈಯಿಂದಲೇ ಬೆಂಕಿ ಸೃಷ್ಟಿಸುವ ಸಾಮರ್ಥ್ಯ ಇರುತ್ತದೆ.
ಅದಕ್ಕೆ ಅಣ್ಣ ಆಜ್ಞೆಯಂತೆ ಆಕೆ ತನ್ನ ಮಡಿಲಲ್ಲಿ ಪ್ರಹ್ಲಾದನನ್ನು ಕುಡಿಸಿಕೊಂಡು ಬೆಂಕಿಯ ಜ್ವಾಲೆಯಂತೆ ಧಗ ಧಗನೇ ಉರಿಯಲು ಪ್ರಾರಂಭಿಸುತ್ತಾಳೆ. ಆದ್ರೆ, ವಿಷ್ಣುವಿನ ಕೃಪ ಕಟಾಕ್ಷದಿಂದ ಪ್ರಹ್ಲಾದನಿಗೆ ಯಾವುದೇ ಹಾನಿಯಾಗುವುದಿಲ್ಲ. ಬದಲಿಗೆ ತಾನು ಸೃಷ್ಟಿಸಿದ್ದ ಜಾಲ್ವೆಯಲ್ಲಿ ತಾನೇ ಸುಟ್ಟು ಭಸ್ಮವಾಗುತ್ತಾಳೆ. ಆದ್ದರಿಂದ ಹೋಳಿ ಹಬ್ಬದ ಒಂದು ದಿನ ಮುಂಚಿತವಾಗಿ 'ಹೋಳಿಕಾ ದಹನ್' ಎಂದು ಆಚರಿಸಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.