ಗಾಯಗೊಂಡಿದ್ದ ಪಕ್ಷಿ ಕಾಪಾಡಲು ಹೋದವರಿಗೆ ಕಾರು ಡಿಕ್ಕಿ: ಇಬ್ಬರ ಪ್ರಾಣಪಕ್ಷಿ ಹಾರೇಹೋಯ್ತು!

ಮಲಾಡ್‌ಗೆ ತೆರಳುವಾಗ ಬಾಂದ್ರಾ ವರ್ಲಿ ಸೀಲಿಂಕ್‌ ಬಳಿ ಅಮರ್‌ ಕಾರಿಗೆ ಹಕ್ಕಿಯೊಂದು ಡಿಕ್ಕಿ ಹೊಡೆದಿದೆ. ಗಾಯಗೊಂಡು ನೆಲಕ್ಕೆ ಬಿದ್ದ ಪಕ್ಷಿಯನ್ನು ಕಾಪಾಡಲು ಕಾರಿನಿಂದ ಕೆಳಗಿಳಿದ ಚಾಲಕ ಮತ್ತು ಅಮರ್‌ಗೆ ಇದ್ದಕ್ಕಿದ್ದಂತೆ ವೇಗವಾಗಿ ಬಂದ ಟ್ಯಾಕ್ಸಿಯೊಂದು ಡಿಕ್ಕಿ ಹೊಡೆದಿದೆ.

Written by - Bhavishya Shetty | Last Updated : Jun 11, 2022, 04:02 PM IST
  • ಮುಂಬೈನ ಬಾಂದ್ರಾ-ವರ್ಲಿ ಸೀಲಿಂಕ್‌ನಲ್ಲಿ ಅಪಘಾತ
  • ಇಬ್ಬರಿಗೆ ಕಾರು ಡಿಕ್ಕಿ, ಸ್ಥಳದಲ್ಲೇ ಸಾವು
  • ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
ಗಾಯಗೊಂಡಿದ್ದ ಪಕ್ಷಿ ಕಾಪಾಡಲು ಹೋದವರಿಗೆ ಕಾರು ಡಿಕ್ಕಿ: ಇಬ್ಬರ ಪ್ರಾಣಪಕ್ಷಿ ಹಾರೇಹೋಯ್ತು! title=
Sea Link Viral Video

ಮಹಾರಾಷ್ಟ್ರ: ಮುಂಬೈನ ಬಾಂದ್ರಾ-ವರ್ಲಿ ಸೀಲಿಂಕ್‌ನಲ್ಲಿ ಗಾಯಗೊಂಡು ಬಿದ್ದಿದ್ದ ಪಕ್ಷಿಯನ್ನು ಕಾಪಾಡಲೆಂದು ಕಾರಿನಿಂದ ಕೆಳಗಿಳಿದ ಇಬ್ಬರಿಗೆ ವೇಗವಾಗಿ ಬಂದ ಟ್ಯಾಕ್ಸಿ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರೂ ಸಹ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 

ಇದನ್ನೂ ಓದಿ: Indian Railways: ರೈಲ್ವೆಯಿಂದ ಹೊಸ ಸೇವೆ, ಈಗ ನಿಮಗೆ ಶೀಘ್ರವೇ ದೃಢೀಕೃತ ಸೀಟು ಸಿಗಲಿದೆ!

ಘಟನೆಯ ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೇ 30 ರಂದು ಮಧ್ಯಾಹ್ನ ಉದ್ಯಮಿ ಅಮರ್ ಮನೀಶ್(43) ಮಲಾಡ್‌ಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

 

ಮಲಾಡ್‌ಗೆ ತೆರಳುವಾಗ ಬಾಂದ್ರಾ ವರ್ಲಿ ಸೀಲಿಂಕ್‌ ಬಳಿ ಅಮರ್‌ ಕಾರಿಗೆ ಹಕ್ಕಿಯೊಂದು ಡಿಕ್ಕಿ ಹೊಡೆದಿದೆ. ಗಾಯಗೊಂಡು ನೆಲಕ್ಕೆ ಬಿದ್ದ ಪಕ್ಷಿಯನ್ನು ಕಾಪಾಡಲು ಕಾರಿನಿಂದ ಕೆಳಗಿಳಿದ ಚಾಲಕ ಮತ್ತು ಅಮರ್‌ಗೆ ಇದ್ದಕ್ಕಿದ್ದಂತೆ ವೇಗವಾಗಿ ಬಂದ ಟ್ಯಾಕ್ಸಿಯೊಂದು ಡಿಕ್ಕಿ ಹೊಡೆದಿದೆ. ತಕ್ಷಣವೇ ಇಬ್ಬರನ್ನು ಸಹ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಸಹ ಪ್ರಯೋಜನವಾಗಿಲ್ಲ. ಅದಾಗಲೇ ಅಮರ್‌ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಇನ್ನು ಕಾರು ಚಾಲಕ ಕಾಮತ್‌ಗೆ ಚಿಕಿತ್ಸೆ ನೀಡಿದರೂ ಸಹ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. 

ಇದನ್ನೂ ಓದಿ: ಆಗ್ರಾ ಕೋರ್ಟ್‌ ಅಲಹಾಬಾದ್‌ ಹೈಕೋರ್ಟ್‌ ಆಗಿದ್ಹೇಗೆ? ಇದರ ಹಿಂದಿದೆ ರೋಚಕ ಕಥೆ

ಟ್ಯಾಕ್ಸಿ ಚಾಲಕ ರವೀಂದ್ರ ಕುಮಾರ್ ಜೈಸ್ವರ್ ವಿರುದ್ಧ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ಬಾಂದ್ರಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News