Tumkur Crime News: ಪದೇ ಪದೇ ಮೂತ್ರ ಮಾಡಿದನೆಂದ ಬಾಲಕನ ಗುಪ್ತಾಂಗವನ್ನೇ ಸುಟ್ಟ ಪಾಪಿ ಶಿಕ್ಷಕಿ!

ಮೂರು ವರ್ಷದ ಬಾಲಕ ಪದೇ ಪದೇ ಚಡ್ಡಿಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾನೆ ಎಂದು ಕೋಪಗೊಂಡ ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿ ಮಹುವಿನ ಗುಪ್ತಾಂಗವನ್ನು ಸುಟ್ಟಿದ್ದಾರೆ

Written by - Bhavishya Shetty | Last Updated : Sep 2, 2022, 02:15 PM IST
    • ತುಮಕೂರಿನ ಅಂಗನವಾಡಿಯಲ್ಲೊಂದು ಕ್ರೂರ ಕೃತ್ಯ ನಡೆದಿದೆ
    • ಚಡ್ಡಿಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾನೆ ಎಂದು ಗುಪ್ತಾಂಗವನ್ನು ಸುಟ್ಟ ಶಿಕ್ಷಕಿ
    • ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ನಡೆದ ಘಟನೆ
Tumkur Crime News: ಪದೇ ಪದೇ ಮೂತ್ರ ಮಾಡಿದನೆಂದ ಬಾಲಕನ ಗುಪ್ತಾಂಗವನ್ನೇ ಸುಟ್ಟ ಪಾಪಿ ಶಿಕ್ಷಕಿ! title=
Tumkur

Tumkur Crime News: ಪುಟ್ಟ ವಯಸ್ಸಿನಲ್ಲಿ ಮಕ್ಕಳು ತಪ್ಪುಗಳನ್ನು ಮಾಡೋದು ಸಹಜ. ಆದರೆ ಅಂತಹ ಸಂದರ್ಭದಲ್ಲಿ ಹಿರಿಯರಾದವರು ತಿಳುವಳಿಕೆ ಹೇಳಿ, ಅವರನ್ನು ಸರಿ ದಾರಿಗೆ ಕರೆದುಕೊಂಡು ಬರಬೇಕು. ಹೊರತಾಗಿ ಶಿಕ್ಷೆಗಳನ್ನು ನೀಡಬಾರದು. ಆದರೆ ತುಮಕೂರಿನ ಅಂಗನವಾಡಿಯಲ್ಲೊಂದು ಕ್ರೂರ ಕೃತ್ಯ ನಡೆದಿದೆ. ಈ ಕೃತ್ಯ ಎಸಗಿದ್ದು ಮತ್ತಾರು ಅಲ್ಲ. ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿ. 

ಇದನ್ನೂ ಓದಿ: Laxman Savadi Car Accident : ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕಾರು ಅಪಘಾತ..! 

ಮೂರು ವರ್ಷದ ಬಾಲಕ ಪದೇ ಪದೇ ಚಡ್ಡಿಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾನೆ ಎಂದು ಕೋಪಗೊಂಡ ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿ ಮಹುವಿನ ಗುಪ್ತಾಂಗವನ್ನು ಸುಟ್ಟಿದ್ದಾರೆ. ಈ ಘಟನೆ ನಡೆದಿರುವುದು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ. ಬಾಲಕನನ್ನು ಬೆದರಿಸಲೆಂದು ಗುಪ್ತಾಂಗವನ್ನು ಬೆಂಕಿ ಕಡ್ಡಿಯಿಂದ ಸುಟ್ಟಿದ್ದಾರೆ. ಇದೀಗ ಬಾಲಕನ ಗುಪ್ತಾಂಗ ಮತ್ತು ತೊಡೆಯ ಬಳಿ ಸುಟ್ಟ ಗಾಯಗಳಾಗಿವೆ. 

ಇದನ್ನೂ ಓದಿ: ಮುರುಘಾ ಶ್ರೀ ಅರೆಸ್ಟ್.. ಚಿತ್ರದುರ್ಗದಲ್ಲಿ ಹೈ ಅಲರ್ಟ್..!

ಸದ್ಯ ಜಿಲ್ಲಾ ಮಕ್ಕಳ ಹಕ್ಕು ರಕ್ಷಣಾ ಘಟಕದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಇನ್ನು ಘಟನೆ ಸಂಬಂಧ ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿಗೆ ನೋಟೀಸ್ ನೀಡಲಾಗಿದೆ. ಅಷ್ಟೇ ಅಲ್ಲದೆ, ಅವರನ್ನು ಅಮಾನತು ಮಾಡಲಾಗಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News