Tumakuru: ತುಮಕೂರಿನಲ್ಲಿ ನಾಪತ್ತೆಯಾಗಿದ್ದ 4 ಮಕ್ಕಳು ಹಾಸನದಲ್ಲಿ ಪತ್ತೆ..!

ಕಳೆದ 2 ವರ್ಷಗಳಿಂದ ಬಾಲಕಿ ರಮೇಶ್ ಎಂಬಾತನನ್ನು ಪ್ರೀತಿಸುತ್ತಿದ್ದಳಂತೆ. ತಮ್ಮಿಬ್ಬರ ಪ್ರೀತಿಗೆ ಸಹಾಯ ಮಾಡಿದಕ್ಕೆ ಮೂವರು ಮಕ್ಕಳನ್ನು ಬಾಲಕಿ ತಮ್ಮ ಜತೆಯಲ್ಲೇ ಬೆಂಗಳೂರಿಗೆ ಕರೆದೊಯ್ದಿದ್ದಾಳಂತೆ.

Written by - Zee Kannada News Desk | Last Updated : May 22, 2023, 05:48 PM IST
  • ತುಮಕೂರಿನ ಒಂದೇ ಗ್ರಾಮದಿಂದ ನಾಪತ್ತೆಯಾಗಿದ್ದ ನಾಲ್ವರು ಮಕ್ಕಳು ಹಾಸನದಲ್ಲಿ ಪತ್ತೆ
  • ಹಾಸನದ KSRTC ಬಸ್ ನಿಲ್ದಾಣದಲ್ಲಿ ಮಕ್ಕಳನ್ನು ರಕ್ಷಿಸಿದ ಪಟ್ಟನಾಯಕನಹಳ್ಳಿ ಪೊಲೀಸರು
  • ಯುವಕನನ್ನು ಪ್ರೀತಿಸುತ್ತಿದ್ದ ಬಾಲಕಿ ತನ್ನ ಜೊತೆಗೆ ಮೂವರು ಮಕ್ಕಳನ್ನು ಕರೆದೊಯ್ದಿದ್ದಳಂತೆ
Tumakuru: ತುಮಕೂರಿನಲ್ಲಿ ನಾಪತ್ತೆಯಾಗಿದ್ದ 4 ಮಕ್ಕಳು ಹಾಸನದಲ್ಲಿ ಪತ್ತೆ..! title=
ನಾಪತ್ತೆಯಾಗಿದ್ದ 4 ಮಕ್ಕಳು ಹಾಸನದಲ್ಲಿ ಪತ್ತೆ..!

ತುಮಕೂರು: ತುಮಕೂರಿನ ಒಂದೇ ಗ್ರಾಮದಿಂದ ನಾಪತ್ತೆಯಾಗಿದ್ದ ನಾಲ್ವರು ಮಕ್ಕಳು ಹಾಸನದಲ್ಲಿ ಪತ್ತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ನಾಪತ್ತೆಯಾಗಿದ್ದ ಈ ಮಕ್ಕಳನ್ನು ಹಾಸನದ KSRTC ಬಸ್ ನಿಲ್ದಾಣದಲ್ಲಿ ಪಟ್ಟನಾಯಕನಹಳ್ಳಿ ಪೊಲೀಸರು ಹಾಸನ ಪೊಲೀಸರ ಸಹಕಾರದೊಂದಿಗೆ ರಕ್ಷಿಸಿದ್ದಾರೆ. ಈ ಮೂಲಕ ನೊಂದ ಕುಟುಂಬದ ಸದಸ್ಯರ ಆಶಾಕಿರಣಗಳಾಗಿ ಹೊರ ಹೊಮ್ಮಿದ್ದಾರೆ.

ಅಂದಹಾಗೆ ಇವರು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಚಿಕ್ಕಬಾಣಗೆರೆ ಗ್ರಾಮದ ಒಂದೇ ಮನೆಯ ನಾಲ್ವರು ಮಕ್ಕಳಾಗಿದ್ದಾರೆ. ಮೊನ್ನೆ ಶನಿವಾರ (ಮೇ 20)ರಂದು ನಾಪತ್ತೆಯಾಗಿ ಈ ಪ್ರಕರಣ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿ ತನಿಖಾ ಹಂತದಲ್ಲಿತ್ತು. ಪೊಲೀಸರು ಇವರನ್ನು ಹುಡುಕಿದ ಸ್ಥಳ ಒಂದಲ್ಲ ಎರಡಲ್ಲ. ತುಮಕೂರು, ಚಿಕ್ಕಮಗಳೂರು, ಬೆಂಗಳೂರು, ಹಾಸನ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹುಡುಕಾಡಿ ಹೈರಾಣಾಗಿದ್ದರು.

ಇದನ್ನೂ ಓದಿ: ಕಾಲುವೆಯಲ್ಲಿ ಮುಳುಗಿ ಮೂವರು ಯುವಕರ ದಾರುಣ ಸಾವು

ಕೊನೆಗೆ ಹಾಸನದ KSRTC ಬಸ್ ನಿಲ್ದಾಣದಲ್ಲಿ ನಾಲ್ವರು ಮಕ್ಕಳು ಪತ್ತೆಯಾಗಿ ಪ್ರಕರಣ ಸುಖಾಂತ್ಯ ಕಂಡಿದೆ. ಈ ಬಗ್ಗೆ ಪಟ್ಟನಾಯಕಹಳ್ಳಿ DYSP ನವೀನ್ ನೇತೃತ್ವದಲ್ಲಿ 4 ತಂಡಗಳು ಶ್ರಮಿಸಿವೆ. ಈ ಮಕ್ಕಳು ಓಡಿ ಬಂದ ವಿಷಯ ಕೇಳಿದರೆ ಆಶ್ಚರ್ಯ ಪಡುತ್ತೀರಾ! ಕಳೆದ 2 ವರ್ಷಗಳಿಂದ ಬಾಲಕಿ ರಮೇಶ್ ಎಂಬಾತನನ್ನು ಪ್ರೀತಿಸುತ್ತಿದ್ದಳಂತೆ. ತಮ್ಮಿಬ್ಬರ ಪ್ರೀತಿಗೆ ಸಹಾಯ ಮಾಡಿದಕ್ಕೆ ಮೂವರು ಮಕ್ಕಳನ್ನು ಬಾಲಕಿ ತಮ್ಮ ಜತೆಯಲ್ಲೇ ಬೆಂಗಳೂರಿಗೆ ಕರೆದೊಯ್ದಿದ್ದಾಳಂತೆ.

ಬಳಿಕ ಬೆಂಗಳೂರಿನಿಂದ ಹಾಸನಕ್ಕೆ ಬಂದಿದ್ದಾರೆ. ಇದೀಗ ಪೊಲೀಸರ ಸತತ ಪ್ರಯತ್ನದಿಂದ ನಾಲ್ವರು ಮಕ್ಕಳನ್ನು ಪೊಲೀಸರು ಪತ್ತೆ ಮಾಡಿ ಈ ಹೈಲಾಟಕ್ಕೆ ಬ್ರೇಕ್ ಹಾಕಿದ್ದಾರೆ. ಮಕ್ಕಳ ಆಟ, ಪೋಷಕರಿಗೆ ಸಂಕಟ ಎಂಬತಾಗಿದೆ ಈ ಘಟನೆ.

ಇದನ್ನೂ ಓದಿ: ಸಿದ್ದರಾಮಯ್ಯ ಬಗ್ಗೆ ಫೇಕ್ ನ್ಯೂಸ್ ಹಂಚಿದ ಶಿಕ್ಷಕ ಅಮಾನತು; ಕಾಂಗ್ರೆಸ್ ವಿರುದ್ಧ ಬಿಜೆಪಿ ಆಕ್ರೋಶ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News