ಚೋರ ಮಗನಿಗೆ ಚಂಡಾಳ ಅಪ್ಪನೇ ಗುರು: ಬರೋಬ್ಬರಿ 65 ಕಳ್ಳತನ ಮಾಡಿದ್ದ ಚೋರ್ ಇಮ್ರಾನ್ ಅಂದರ್

ಜೈಲಲ್ಲಿ ಮುದ್ದೆ ಮುರಿದು ಬಂದ್ರೂ ಬುದ್ದಿ ಕಲಿಯದ ಖತರ್ನಾಕ್ ಖದೀಮ ಈಗ ಮತ್ತೆ ಪೊಲೀಸರ ಅತಿಥಿಯಾಗಿದ್ದಾನೆ. ಯಾಸೀನ್ ಖಾನ್ ಆಲಿಯಾಸ್ ಚೋರ್ ಇಮ್ರಾನ್ ಬಂಧಿತ ಆರೋಪಿ. ಈತ ನಗರದಲ್ಲಿ ನಿರಂತರವಾಗಿ ಕಳ್ಳತನ‌ ಕೃತ್ಯಗಳಲ್ಲಿ ಭಾಗಿಯಾಗಿದ್ದ. 

Written by - VISHWANATH HARIHARA | Edited by - Chetana Devarmani | Last Updated : Aug 10, 2022, 01:46 PM IST
  • ಜೈಲಲ್ಲಿ ಮುದ್ದೆ ಮುರಿದು ಬಂದ್ರೂ ಬುದ್ದಿ ಕಲಿಯದ ಖತರ್ನಾಕ್ ಖದೀಮ
  • ಚೋರ ಮಗನಿಗೆ ಚಂಡಾಳ ಅಪ್ಪನೇ ಗುರು
  • ಬರೋಬ್ಬರಿ 65 ಕಳ್ಳತನ ಮಾಡಿದ್ದ ಚೋರ್ ಇಮ್ರಾನ್ ಅಂದರ್
ಚೋರ ಮಗನಿಗೆ ಚಂಡಾಳ ಅಪ್ಪನೇ ಗುರು: ಬರೋಬ್ಬರಿ 65 ಕಳ್ಳತನ ಮಾಡಿದ್ದ ಚೋರ್ ಇಮ್ರಾನ್ ಅಂದರ್ title=
ಖತರ್ನಾಕ್ ಖದೀಮ

ಬೆಂಗಳೂರು: ಜೈಲಲ್ಲಿ ಮುದ್ದೆ ಮುರಿದು ಬಂದ್ರೂ ಬುದ್ದಿ ಕಲಿಯದ ಖತರ್ನಾಕ್ ಖದೀಮ ಈಗ ಮತ್ತೆ ಪೊಲೀಸರ ಅತಿಥಿಯಾಗಿದ್ದಾನೆ. ಯಾಸೀನ್ ಖಾನ್ ಆಲಿಯಾಸ್ ಚೋರ್ ಇಮ್ರಾನ್ ಬಂಧಿತ ಆರೋಪಿ. ಈತ ನಗರದಲ್ಲಿ ನಿರಂತರವಾಗಿ ಕಳ್ಳತನ‌ ಕೃತ್ಯಗಳಲ್ಲಿ ಭಾಗಿಯಾಗಿದ್ದ.  ಸದ್ಯ ಹಲಸೂರು ಗೇಟ್ ಪೊಲೀಸರು ಈತನನ್ನು ಬಂಧಿಸಿ ಲಕ್ಷಾಂತರ ಮೌಲ್ಯದ ಚಿನ್ನಾಭರಣವನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಯಿಂದ 6 ಲಕ್ಷದ ಮೌಲ್ಯದ 100 ಗ್ರಾಂ ಚಿನ್ನ, 2.5 ಕೆಜಿ ಬೆಳ್ಳಿ ಹಾಗೂ 39 ಸಾವಿರ ನಗದು ಜಪ್ತಿ ಮಾಡಿಕೊಂಡಿದ್ದಾರೆ. ಮೈಸೂರಿನ ವಾಲ್ಮೀಕಿ ನಗರದ ನಿವಾಸಿಯಾಗಿರುವ ಇಮ್ರಾನ್ ಸುಲಭವಾಗಿ ಹಣ ಸಂಪಾದನೆ ಮಾಡಲು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ. ಈತನ ವಿರುದ್ಧ ಬೆಂಗಳೂರಿನಲ್ಲಿಯೇ 30 ಪ್ರಕರಣ ದಾಖಲಾಗಿವೆ. ರಾಜ್ಯದ ಹಲವು ಕಡೆಗಳಲ್ಲಿ ಇಮ್ರಾನ್ ವಿರುದ್ಧ 60ಕ್ಕಿಂತ ಹೆಚ್ಚು ಕಳ್ಳತನ ಪ್ರಕರಣ ದಾಖಲಾಗಿವೆ. ಹಲವು ಬಾರಿ ಜೈಲಿಗೆ ಹೋಗಿಬಂದಿದ್ದರೂ ಒಂದು ಪ್ರಕರಣದಲ್ಲಿ ಈತನಿಗೆ  ಶಿಕ್ಷೆಯಾಗಿರಲಿಲ್ಲ.ಜಾಮೀನಿನ ಮೇಲೆ ಬಿಡುಗಡೆಯಾಗಿ ಮತ್ತೆ ತನ್ನ ಚಾಳಿ ಕೈಚಳಕ ತೋರುತ್ತಿದ್ದ.

ಇದನ್ನೂ ಓದಿ : Bigg Boss Kannada OTT : ಸ್ಫೂರ್ತಿ ಗೌಡ ಮೇಲೆ ರಾಕೇಶ್​​ಗೆ ಲವ್ ಆಗೋಯ್ತಾ?

ಕಳ್ಳತನವನ್ನೇ‌ ಕಾಯಕ ಮಾಡಿಕೊಂಡಿದ್ದ ಯಾಸೀನ್, ಏಕಾಂಗಿಯಾಗಿ ಸುಖಾಸುಮ್ಮನೆ ತಿರುಗುತ್ತಿದ್ದ. ಮನೆಯಲ್ಲಿ ಅಥವಾ ಅಂಗಡಿ-ಕಚೇರಿಗಳಲ್ಲಿ ಯಾರು ಇಲ್ಲದ ಸಮಯ ನೋಡಿಕೊಂಡು ವ್ಯವಸ್ಥಿತವಾಗಿ ಸಂಚು ರೂಪಿಸಿ ಕಳ್ಳತನ ಮಾಡುತ್ತಿದ್ದ‌. ಕೃತ್ಯದ ಬಳಿಕ ಗೋವಾ, ಮೈಸೂರು ಹಾಗೂ ರಾಯಚೂರು ಸೇರಿ ಹಲವು ಕಡೆಗಳಲ್ಲಿ ಕದ್ದ ಮಾಲುಗಳನ್ನು ಮಾರಾಟ ಮಾಡಿ ಶೋಕಿ‌ ಜೀವನ ನಡೆಸುತ್ತಿದ್ದ. 

ಇದನ್ನೂ ಓದಿ : Bihar Political Crisis : ಶೀಘ್ರದಲ್ಲೇ ಸಿಎಂ ಸ್ಥಾನಕ್ಕೆ ನಿತೀಶ್‌ ಕುಮಾರ್‌ ರಾಜೀನಾಮೆ!?

ಇನ್ನೂ ಆಶ್ಚರ್ಯಕರ ಸಂಗತಿ ಎಂದರೆ ಯಾಸೀನ್ ತಂದೆ ಎಜಾಜ್ ಖಾನ್ ಆಲಿಯಾಸ್ ದಾದಾಪೀರ್ ಈ ಹಿಂದೆ ಕೆಲ ಕಾಲ ಪೊಲೀಸರಿಗೆ ಮಾಹಿತಿದಾರನಾಗಿ ಕೆಲಸ ಮಾಡುತ್ತಿದ್ದ. ಪೊಲೀಸ್ ಕಾರ್ಯಾಚರಣೆಗಳ ಬಗ್ಗೆ ತಿಳಿದುಕೊಂಡಿದ್ದ ಎಜಾಜ್ ಖಾನ್ ತನ್ನ ಮಗ ಯಾಸೀನ್ ಗೆ ಪೊಲೀಸರ ಕಾರ್ಯಾಚರಣೆಗಳ ಬಗ್ಗೆ ತಿಳಿಸಿದ್ದಲ್ಲದೇ, ಆತನಿಗೆ ಚಿಕ್ಕವಯಸ್ಸಿನಲ್ಲೇ ಕಳ್ಳತನ ಮಾಡುವುದರ ಬಗ್ಗೆ ತರಬೇತಿ ನೀಡಿದ್ದ. ಅಪ್ಪನಿಂದ ಕಳ್ಳತನದ ಟ್ರೈನಿಂಗ್ ಪಡೆದಿದ್ದ ಚೋರ್ ಇಮ್ರಾನ್ ಎಂತಹುದೇ ಭದ್ರತೆ ಇದ್ದರೂ ಮನೆಗಳಿಗೂ ನುಗ್ಗಿ ಕಳ್ಳತನ ಮಾಡಿ ಎಸ್ಕೇಪ್ ಆಗುತ್ತಿದ್ದ. ಕಳೆದ ತಿಂಗಳು ಎಜಾಜ್ ಖಾನ್ ನನ್ನ ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News