OMG: ಪ್ರೀತಿ ಒಪ್ಪದಿದ್ದಕ್ಕೆ ಯುವತಿ ಕೊಂದು ಸೂಸೈಡ್ ಮಾಡಿಕೊಂಡ ಪಾಗಲ್ ಪ್ರೇಮಿ!

ಪ್ರೀತಿ ಮಾಡುವಂತೆ ಸುಮಾಳ ಹಿಂದೆ ಪ್ರಕಾಶ್ ಭಜಂತ್ರಿ ದುಂಬಾಲು ಬಿದ್ದಿದ್ದ. ಈ ವಿಷಯ ಹುಡುಗಿ ಮನೆಯವರಿಗೂ ತಿಳಿದಿತ್ತು. ಇದಕ್ಕೆ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ ಆತನಿಗೆ ಬುದ್ಧಿವಾದವನ್ನೂ ಹೇಳಿದ್ದರಂತೆ.

Written by - Puttaraj K Alur | Last Updated : Jan 15, 2023, 06:41 AM IST
  • ಮಟಮಟ ಮಧ್ಯಾಹ್ನವೇ ಮಲಗಿದ ಸ್ಥಿತಿಯಲ್ಲೇ ಹೆಣವಾದ ಕೊಪ್ಪಳದ ಪ್ರೇಮಿಗಳು!
  • ಪಿಯುಸಿ ಓದುತ್ತಿದ್ದ ಯುವತಿಯನ್ನು ಪ್ರೀತಿಸುವಂತೆ ದುಂಬಾಲು ಬಿದ್ದಿದ್ದ ಪಾಗಲ್ ಪ್ರೇಮಿ
  • ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ ಯುವತಿಯ ಹತ್ಯೆ ಮಾಡಿ ಸೂಸೈಡ್ ಮಾಡಿಕೊಂಡ ಪ್ರೇಮಿ
OMG: ಪ್ರೀತಿ ಒಪ್ಪದಿದ್ದಕ್ಕೆ ಯುವತಿ ಕೊಂದು ಸೂಸೈಡ್ ಮಾಡಿಕೊಂಡ ಪಾಗಲ್ ಪ್ರೇಮಿ! title=
ಇಬ್ಬರ ದುರಂತ ಅಂತ್ಯ!

ಕೊಪ್ಪಳ: ಅವರಿಬ್ಬರದ್ದು ಹದಿ ಹರಿಯದ ವಯಸ್ಸು… ಆ ವಯಸ್ಸೇ ಹಾಗೇ ಎಂತವರನ್ನೂ ಸಹ ಪ್ರೀತಿ ಎಂಬ ಮಾಯೆಗೆ ಸಿಲುಕಿಸಿಬಿಡುತ್ತೆ. ಇಲ್ಲೊಬ್ಬ ಯುವಕ ಕೂಡ ಪ್ರೀತ್ಸೆ.. ಪ್ರೀತ್ಸೆ… ಅಂತಾ ಹುಡುಗಿಯ ಪ್ರಾಣ ತಿಂತಿದ್ದ. ಪ್ರೀತಿಸು ಎಂದು ದುಂಬಾಲು ಬಿದ್ದಿದ್ದ ಆತ ಆಕೆಯ ಮನೆಗೆ ಹೋಗಿದ್ದ. ಆದರೆ ಮಟಮಟ ಮಧ್ಯಾಹ್ನವೇ ಇಬ್ಬರು ರಕ್ತದ ಮಡುವಿನಲ್ಲಿ ಹೆಣವಾಗಿದ್ದಾರೆ.   

ಹೌದು., ‘ಪ್ರೀತಿ ಮಾಯೆ ಹುಷಾರು...ಕಣ್ಣೀರ್ ಮಾರೋ ಬಜಾರು’ ಅನ್ನೋ ಹಾಡಿನಂತೆ ಇಲ್ಲೊಂದು ಒನ್ ಸೈಡ್ ಲವ್ ಸ್ಟೋರಿ ದುರಂತ ಅಂತ್ಯ ಕಂಡಿದ್ದು, ಹೆತ್ತವರು ಕಣ್ಣೀರು ಹಾಕುವಂತೆ ಮಾಡಿದೆ. ಪಾಗಲ್ ಪ್ರೇಮಿಯೊಬ್ಬನ ಅಟ್ಟಹಾಸಕ್ಕೆ ಇಬ್ಬರು ರಕ್ತದ ಮಡುವಿನಲ್ಲಿ ಬಿದ್ದು ಪ್ರಾಣಬಿಟ್ಟಿದ್ದಾರೆ. ಇಂತಹ ಭೀಕರ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಬಳಿಗೇರಿ ಗ್ರಾಮ.

ಅಂದಹಾಗೇ ಇಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರೋ ಯುವತಿ ಹೆಸರು ಹೆಸರು ಸುಮಾ ಮತ್ತು ಯುವಕನ ಹೆಸರು ಪ್ರಕಾಶ ಭಜಂತ್ರಿ. ಇಬ್ಬರು ಹೆಚ್ಚು ಕಮ್ಮಿ ಒಂದೇ ಏರಿಯಾದವರೇ. ಹೀಗಾಗಿಯೇ ಒಬ್ಬರಿಗೊಬ್ಬರು ಪರಿಚಯವಿತ್ತು. ಪ್ರಕಾಶ್ ಸುಮಾಳನ್ನು ಪ್ರೀತಿಸುತ್ತಿದ್ದನಂತೆ. ಆದರೆ ಅದು ಒನ್ ಸೈಡ್ ಲವ್ ಸ್ಟೋರಿಯಾಗಿತ್ತು. ಹೀಗಾಗಿ ತನ್ನನ್ನು ಪ್ರೀತಿಸುವಂತೆ ಆತ ಆಕೆಯ ಹಿಂದೆ ಬಿದ್ದಿದ್ದನಂತೆ. ಪದೇ ಪದೇ ಆಕೆಯನ್ನು ಪ್ರೀತಿಸುವಂತೆ ದುಂಬಾಲು ಬಿದ್ದದ್ದ ಪ್ರಕಾಶ್ ಒಂದು ರೀತಿ ಪಾಗಲ್ ಪ್ರೇಮಿಯಾಗಿದ್ದ.

ಇದನ್ನೂ ಓದಿ: ಯಾವುದೇ ಆಡಿಯೋ, ವಿಡಿಯೋ ಬಗ್ಗೆ ಮಾತನಾಡುವುದಿಲ್ಲ: ಸಿಎಂ ಬೊಮ್ಮಾಯಿ

ಯಾರು ಇಲ್ಲದ ಸಮಯ ನೋಡಿಕೊಂಡು ಯುವತಿಯ ಮನೆಗೆ ನುಗ್ಗಿದ್ದ ಆತ ಆಕೆಗೆ ಮನಬಂದಂತೆ ಚಾಕುವಿನಿಂದ ಇರಿದು ಭೀಕರ ಹತ್ಯೆ ಮಾಡಿದ್ದಾನೆ.‌ ನಂತರ ತಾನೂ ಸಹ ಅದೇ ಚಾಕುವಿನಿಂದ ಇರಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಹೇಳಲಾಗಿದೆ. ಇಬ್ಬರು ಹಾಡಹಗಲೇ ಈ ರೀತಿ ಪ್ರಾಣ ಕಳೆದುಕೊಂಡಿರುವುದು ಪೋಷಕರಿಗೆ ಬರಸಿಡಿಲು ಬಡಿದಂತಾಗಿದೆ. ಎರಡೂ ಕುಟುಂಬದ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಇತ್ತ ಹುಡುಗನ ತಾಯಿ ತನ್ನ ಮಗನದ್ದು ಏನು ತಪ್ಪಿಲ್ಲ. ಆತ ಆಕಯನ್ನು ಪ್ರೀತ ಮಾಡೋ ವಿಷಯವೂ ನಮಗೆ ತಿಳಿದಿಲ್ಲ. ಯುವತಿ ಮನೆಯವರೇ ಆತನನ್ನು ಮನೆಗೆ ಕರೆಯಿಸಿಕೊಂಡು ಮೋಸ ಮಾಡಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.

ಪಿಯುಸಿ ಓದುತ್ತಿದ್ದ ಯುವತಿ ಅಪ್ರಾಪ್ತೆಯಾಗಿದ್ದಳು. ಆದರೆ ಐಟಿಐ ಮುಗಿಸಿ ಊರಿನಲ್ಲೇ ಕೆಲಸ ಮಾಡಿಕೊಂಡಿದ್ದ ಪ್ರಕಾಶ್ ಪ್ರೀತಿಸುವಂತೆ ಆಕೆಯನ್ನು ಪೀಡಿಸುತ್ತಿದ್ದ. ಆದರೆ ಯುವತಿ ಮಾತ್ರ ಒಪ್ಪಿರಲಿಲ್ಲವಂತೆ.‌ ಮೇಲಾಗಿ ಇಬ್ಬರದ್ದು ಜಾತಿ ಬೇರೆ ಬೇರೆ ಇತ್ತು ಎಂದು ಹೇಳಲಾಗುತ್ತಿದೆ. ಹೀಗಾಗಿಯೇ ಪ್ರಕಾಶನ ಪ್ರೀತಿಯನ್ನು ಸುಮಾ ಒಪ್ಪಿರಲಿಲ. ಈ ವಿಷಯ ಗ್ರಾಮದಲ್ಲಿನ ಜನರಿಗೂ ಗೊತ್ತಿತ್ತಂತೆ. ಅಲ್ಲದೇ ಪ್ರಕಾಶ್‍ಗೆ ಈ ಬಗ್ಗೆ ಬುದ್ದಿಮಾತು ಕೂಡ ಹೇಳಲಾಗಿತ್ತು.

ಆದರೆ ಇದ್ಯಾವದಕ್ಕೂ ಕ್ಯಾರೆ ಎನ್ನದ ಪ್ರಕಾಶ್ ಯಾರು ಇಲ್ಲದನ್ನು ಗಮನಿಸಿ ಆಕೆಯ ಮನೆಗೆ ಚಾಕು ಹಿಡಿದುಕೊಂಡೇ ಹೋಗಿದ್ದಾನೆ. ತನ್ನ ಪ್ರೀತಿ ಒಪ್ಪಿಕೊಳ್ಳವಂತೆ ಸುಮಾಳಿಗೆ ಪೀಡಿಸಿದ್ದಾನೆ. ಆಕೆ ಒಪ್ಪದಿದ್ದಾಗ ಚಾಕುವಿನಿಂದ ಇರಿದು ಹತ್ಯೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕುಕನೂರು ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಇದು ಒನ್ ಸೈಡ್ ಲವ್ ಸ್ಟೋರಿನಾ? ಅಥವಾ ಬೇರೆ ಇನ್ನೇನಾದ್ರೂ ಇದ್ಯಾ ಅನ್ನೋ ಬಗ್ಗೆ ಖಾಕಿಪಡೆ ತನಿಖೆ ನಡೆಸುತ್ತಿದೆ. ಒಟ್ನಲ್ಲಿ ಪಾಗಲ್ ಪ್ರೇಮಿಯ ಅಟ್ಟಹಾಸಕ್ಕೆ ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ. ಪ್ರೀತಿ ಎಂಬ ಮಾಯೆಗೆ ಇಬ್ಬರು ದುರಂತ ಅಂತ್ಯ ಕಂಡಿದ್ದು ನಿಜಕ್ಕೂ ಬೇಜಾರಿನ ಸಂಗತಿಯೇ ಸರಿ.

ಇದನ್ನೂ ಓದಿ: GS Basavaraj : ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಸಂಸದ ಜಿಎಸ್ ಬಸವರಾಜ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News