ICSE 10ನೇ ತರಗತಿ ಫಲಿತಾಂಶ ಇಂದು ಸಂಜೆ 5 ಗಂಟೆಗೆ ಪ್ರಕಟ.. Result ನೋಡಲು ಹೀಗೆ ಮಾಡಿ

ICSE 10th Results TODAY: ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (CISCE) ಇಂಡಿಯನ್ ಸರ್ಟಿಫಿಕೇಟ್ ಆಫ್ ಸ್ಕೂಲ್ ಎಕ್ಸಾಮ್ (ICSE) 10 ನೇ ತರಗತಿಯ ಫಲಿತಾಂಶವನ್ನು ಇಂದು ಸಂಜೆ 5 ಗಂಟೆಗೆ ಪ್ರಕಟಿಸಲಿದೆ. 

Written by - Chetana Devarmani | Last Updated : Jul 17, 2022, 12:31 PM IST
  • ICSE 10ನೇ ತರಗತಿ ಫಲಿತಾಂಶ ಇಂದು ಸಂಜೆ 5 ಗಂಟೆಗೆ ಪ್ರಕಟ
  • Result ನೋಡಲು ಹೀಗೆ ಮಾಡಿ
ICSE 10ನೇ ತರಗತಿ ಫಲಿತಾಂಶ ಇಂದು ಸಂಜೆ 5 ಗಂಟೆಗೆ ಪ್ರಕಟ.. Result ನೋಡಲು ಹೀಗೆ ಮಾಡಿ  title=
ಫಲಿತಾಂಶ

ICSE 10th Results TODAY: ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (CISCE) ಇಂಡಿಯನ್ ಸರ್ಟಿಫಿಕೇಟ್ ಆಫ್ ಸ್ಕೂಲ್ ಎಕ್ಸಾಮ್ (ICSE) 10 ನೇ ತರಗತಿಯ ಫಲಿತಾಂಶವನ್ನು ಇಂದು ಸಂಜೆ 5 ಗಂಟೆಗೆ ಪ್ರಕಟಿಸಲಿದೆ. ICSE 10ನೇ ತರಗತಿಯ ಫಲಿತಾಂಶಗಳನ್ನು cisce.org, results.cisce.org ನಲ್ಲಿ ಪರಿಶೀಲಿಸಬಹುದು.

ಇದನ್ನೂ ಓದಿ:  ಇಂದು ನೀಟ್‌ ಪರೀಕ್ಷೆ: ಕೇಂದ್ರಕ್ಕೆ ತೆರಳುವ ಮುನ್ನ ಈ ನಿಯಮ ಪಾಲಿಸಿ

ಐಸಿಎಸ್ಇ 10ನೇ ತರಗತಿಯ ಫಲಿತಾಂಶ ಇಂದು, ಜುಲೈ 17 ಭಾನುವಾರದಂದು ಸಂಜೆ 5 ಗಂಟೆಗೆ ಪ್ರಕಟವಾಗಲಿದೆ. ಐಸಿಎಸ್ಇ ಮಂಡಳಿಯ ಕಾರ್ಯದರ್ಶಿ ಗೆರ್ರಿ ಅರಾಥೂನ್ ಈ ಬಗ್ಗೆ ಶನಿವಾರ ಮಾಹಿತಿ ನೀಡಿದ್ದಾರೆ. ಐಸಿಎಸ್‌ಇ 10ನೇ ತರಗತಿಯ ಫಲಿತಾಂಶಗಳನ್ನು ಜುಲೈ 17 ರಂದು ಪ್ರಕಟಿಸಲಾಗುವುದು ಎಂದು ಅವರು ಹೇಳಿದ್ದಾರೆ. ಅಂತಿಮ ಅಂಕಗಳ ನೀಡಿಕೆಯಲ್ಲಿ ಮೊದಲ ಮತ್ತು ಎರಡನೇ ಸೆಮಿಸ್ಟರ್‌ಗಳ ಅಂಕಗಳನ್ನು ಸಮಾನವಾಗಿ ಪರಿಗಣಿಸಲಾಗುತ್ತದೆ. ಸೆಮಿಸ್ಟರ್ 1 ಅಥವಾ ಸೆಮಿಸ್ಟರ್ 2 ಪರೀಕ್ಷೆಗಳಿಗೆ ಹಾಜರಾಗದ ಅಭ್ಯರ್ಥಿಗಳನ್ನು ಗೈರುಹಾಜರೆಂದು ಗುರುತಿಸಲಾಗುತ್ತದೆ. ಅವರ ಫಲಿತಾಂಶಗಳನ್ನು ಪ್ರಕಟಿಸಲಾಗುವುದಿಲ್ಲ ಎಂದು ಗೆರ್ರಿ ಅರಾಥೂನ್ ಮಾಹಿತಿ ನೀಡಿದ್ದಾರೆ. 

ಐಎಸ್‌ಸಿಇ (ICSE) 10ನೇ ತರಗತಿಯ ಟರ್ಮ್ 2 ಪರೀಕ್ಷೆಗಳನ್ನು ಏಪ್ರಿಲ್ 25 ರಿಂದ ಮೇ 23, ರವರೆಗೆ ನಡೆಸಲಾಗಿತ್ತು. ಐಎಸ್‌ಸಿ (ISC) 10ನೇ ತರಗತಿಯ ಟರ್ಮ್ 2 ಪರೀಕ್ಷೆಗಳು ಏಪ್ರಿಲ್ 26 ರಿಂದ ಜೂನ್ 13, 2022 ರವರೆಗೆ ನಡೆದಿದ್ದವು.  

Result ನೋಡಲು ಹೀಗೆ ಮಾಡಿ: 

  • www.cisce.org ನಲ್ಲಿ CISCE ಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
  • ಮುಖಪುಟದಲ್ಲಿ, ಲಿಂಕ್ ಅನ್ನು ಕ್ಲಿಕ್ ಮಾಡಿ - ISC ತರಗತಿ 12 ಫಲಿತಾಂಶ ಅಥವಾ ICSE ತರಗತಿ 10 ಫಲಿತಾಂಶ 2022
  • ವಿಶಿಷ್ಟ ಗುರುತಿನ ಸಂಖ್ಯೆ, ಹುಟ್ಟಿದ ದಿನಾಂಕದಂತಹ ಲಾಗಿನ್ ರುಜುವಾತುಗಳನ್ನು ನಮೂದಿಸಿ
  • Submit ಕ್ಲಿಕ್ ಮಾಡಿ, ನಿಮ್ಮ ICSE ಕ್ಲಾಸ್ 10 ಮತ್ತು ISC ಕ್ಲಾಸ್ 12 ಮಾರ್ಕ್‌ಶೀಟ್  ಪರದೆಯ ಮೇಲೆ ಬರುತ್ತದೆ
  • ಫಲಿತಾಂಶವನ್ನು ಡೌನ್‌ಲೋಡ್ ಮಾಡಿ ಮತ್ತು ಪ್ರಿಂಟ್‌ಔಟ್‌ ತೆಗೆದುಕೊಳ್ಳಿ

ಇದನ್ನೂ ಓದಿ:  Social Mediaದಲ್ಲಿ ʻಹಿಂದೂ ವಿರೋಧಿʼ ಅಭಿಯಾನ.. ಆಘಾತಕಾರಿ ಸಂಗತಿ ಬಯಲು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News