ಬೆಂಗಳೂರು : ಐಪಿಎಸ್ ಡಿ.ರೂಪ ಮತ್ತು ಐಎಎಸ್ ರೋಹಿಣಿ ನಡುವಿನ ಹಾದಿ ಬೀದಿ ರಂಪಾಟದ ನಡುವೆ 8 ವರ್ಷದಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ ಡಿಕೆ ರವಿ ಸಾವು ಮತ್ತು ಸುದ್ದಿಯಾಗುತ್ತಿದೆ. ಡಿ. ರೂಪ ಪದೇ ಪದೇ ರವಿ ಹೆಸರನ್ನ ಬಳಸಿರೋದಕ್ಕೆ ಒಂದಷ್ಟು ಪರ ವಿರೋಧದ ಚರ್ಚೆಗಳಾಗುತ್ತಿವೆ.
ಈ ಮಧ್ಯೆ ಕಾಂಗ್ರೆಸ್ ಮುಖಂಡ ವಕೀಲ ಸೂರ್ಯ ಮುಕುಂದರಾಜ್ ಹೊಸ ಬಾಂಬ್ ಸಿಡಿಸಿ ಡಿಕೆ ರವಿ ಸಾವಿನ ಸಿಬಿಐ ತನಿಖಾ ವರದಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : ಗಂಡನ ಜೊತೆ ಅಕ್ರಮವಾಗಿ ನೆಲೆಸಿದ್ದ ಪಾಕ್ ಯುವತಿ ಗಡಿಪಾರು : ಪಾಕ್'ಗೆ ಹೋಗಲ್ಲ ಎಂದು ಹೈಡ್ರಾಮ!
"ಸಿಂಧೂರಿಯ ಸಿಂಧುತ್ವದ ಬಗ್ಗೆ ಪ್ರಶ್ನೆ ಮಾಡಿರುವ ಕನ್ನಡ ಮಣ್ಣಿನ ಐಪಿಎಸ್ ಅಧಿಕಾರಿ ರೂಪ ಅವರ ನಡೆಯನ್ನು ಪ್ರಶ್ನೆ ಮಾಡುವವರು ಸಿಬಿಐ ಕೊಟ್ಟಿರುವ ಡಿಕೆ ರವಿ ಸಾವಿಗೆ ಕಾರಣವಾದ ಅಂಶಗಳ ವರದಿಯನ್ನು ಓದಬೇಕು. ಡಿಕೆ ರವಿ ಸಾವನ್ನು ಇಂದಿಗೂ ರಾಜಕೀಯ ಲಾಭಕ್ಕಾಗಿ ಬಿಜೆಪಿಗರು ಬಳಸಿಕೊಳ್ಳುತ್ತಿದ್ದಾರೆ. ಆತನ ಸಾವಿನಿಂದ ಅತಿ ಹೆಚ್ಚು ತೇಜೋವಧೆ, ಅವಮಾನಕ್ಕೀಡಾದವರು ಕುಸುಮ ಹನುಮಂತರಾಯಪ್ಪ ಅವರ ಕುಟುಂಬ ಮತ್ತು ಸಿದ್ದರಾಮಯ್ಯ. ಪೋಸ್ಟ್ ಟ್ರೂಥ್ ಕಾಲಘಟ್ಟದಲ್ಲಿ ರವಿಯ ವೈಯಕ್ತಿಕ ಪ್ರೇಮ ಪ್ರಕರಣ ಮುನ್ನೆಲೆಗೆ ಬರಲೇ ಇಲ್ಲ. ಆತ ಸಾವಿಗೀಡಾದ ನಂತರ ರೋಹಿಣಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಾಗಬೇಕಿತ್ತು. ಆದರೆ ರೋಹಿಣಿಯ ಅದೃಷ್ಟವೋ ಏನೋ ಆಕೆಯ ವಿರುದ್ಧ ಪ್ರಕರಣ ದಾಖಲಾಗಿಲಿಲ್ಲ. ಆ ನೋವನ್ನು ಕುಸುಮಾ ಮತ್ತು ಸಿದ್ದರಾಮಯ್ಯ ಸರ್ಕಾರ ಅನುಭವಿಸಬೇಕಾಯಿತು. ಒಬ್ಬ ಅಧಿಕಾರಿಯ ಸಾವಿನ ನಂತರವೂ ಬದಲಾಗದ ಸಿಂಧೂರಿ, ತನ್ನ ಚೆಲ್ಲಾಟವನ್ನು ಮುಂದುವರೆಸಿದ್ದಾರೆ. ಈಗ ರೂಪ ಅದಕ್ಕೆ ಅಂತ್ಯವಾಡುತ್ತಿದ್ದಾರೆ."
ಈ ರೀತಿಯ ಅಭಿಪ್ರಾಯವನ್ನ ತಮ್ಮ ಫೇಸ್ ಬುಕ್ ನಲ್ಲಿ ಸೂರ್ಯ ಮುಕುಂದ್ ರಾಜ್ ಪ್ರಸ್ತಾಪಿಸಿ ವಿವಾದಕ್ಕೆ ಮತ್ತಷ್ಟು ತುಪ್ಪ ಸುರಿದಿದ್ದಾರೆ.
ಇದನ್ನೂ ಓದಿ : Harohalli : ಹಾರೋಹಳ್ಳಿ ನೂತನ ತಾಲೂಕು ಕೇಂದ್ರವಾಗಿ ಇಂದು ಲೋಕಾರ್ಪಣೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.