6 ರಿಂದ 12 ನೇ ತರಗತಿಯ ವಿಜ್ಞಾನ ಇಂಟರ್ನಲ್ ಎಸೆಸ್ ಮೆಂಟ್ ಗಾಗಿ ಹೊಸ ಪ್ಲಾನ್ ಸಿದ್ದ ಪಡಿಸಿದ CBSE ! ಇನ್ನು ಮುಂದೆ ಎಲ್ಲವೂ ಸಿಸಿಟಿವಿಯಲ್ಲಿ ರೆಕಾರ್ಡ್

CBSE Science Internal Assessment:ಆಂತರಿಕ ಮೌಲ್ಯಮಾಪನದಲ್ಲಿ ಸ್ಥಿರತೆ, ಪಾರದರ್ಶಕತೆ ಮತ್ತು ನ್ಯಾಯೋಚಿತತೆಯನ್ನು ಖಚಿತಪಡಿಸಿಕೊಳ್ಳಲು CBSE  ಈ ಕ್ರಮಕ್ಕೆ ಮುಂದಾಗಿದೆ.

Written by - Ranjitha R K | Last Updated : Aug 29, 2024, 11:57 AM IST
  • 6 ರಿಂದ 12 ನೇ ತರಗತಿಗಳ ವಿಜ್ಞಾನ ವಿಷಯಗಳ ಆಂತರಿಕ ಮೌಲ್ಯಮಾಪನಕ್ಕಾಗಿ ಫ್ರೇಮ್ ವರ್ಕ್
  • ವಿದ್ಯಾರ್ಥಿಗಳು ಎದುರಿಸುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕ್ರಮ
  • ಪರೀಕ್ಷೆ ನಡೆಸುವ ತರಗತಿಗಳಲ್ಲಿ ಸಿಸಿಟಿವಿ ಕ್ಯಾಮೆರಾ
6 ರಿಂದ 12 ನೇ ತರಗತಿಯ ವಿಜ್ಞಾನ ಇಂಟರ್ನಲ್ ಎಸೆಸ್ ಮೆಂಟ್ ಗಾಗಿ  ಹೊಸ ಪ್ಲಾನ್ ಸಿದ್ದ ಪಡಿಸಿದ CBSE ! ಇನ್ನು ಮುಂದೆ ಎಲ್ಲವೂ ಸಿಸಿಟಿವಿಯಲ್ಲಿ ರೆಕಾರ್ಡ್ title=

CBSE Science Internal Assessment : 6 ರಿಂದ 12 ನೇ ತರಗತಿಗಳ ವಿಜ್ಞಾನ ವಿಷಯಗಳ ಆಂತರಿಕ ಮೌಲ್ಯಮಾಪನಕ್ಕಾಗಿ ಬ್ರಿಟಿಷ್ ಕೌನ್ಸಿಲ್ ಸಹಯೋಗದೊಂದಿಗೆ ಫ್ರೇಮ್ ವರ್ಕ್ ಅಭಿವೃದ್ಧಿಪಡಿಸಲು CBSE ಯೋಜಿಸಿದೆ ಎನ್ನಲಾಗಿದೆ.ಈ ಮೂಲಕ ಇಂಟರ್ನಲ್ ಅಸೆಸ್ ಮೆಂಟ್ ಅಂಕಗಳಲ್ಲಿ ವಿದ್ಯಾರ್ಥಿಗಳು ಎದುರಿಸುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿದೆ. 

ವಿದ್ಯಾರ್ಥಿಗಳು ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗುವ ತರಗತಿಗಳ ಸಿಸಿಟಿವಿ ರೆಕಾರ್ಡಿಂಗ್ ಅನ್ನು ಸಹ ಸಿಬಿಎಸ್‌ಇ ಪರಿಗಣಿಸುತ್ತಿದೆ ಎಂದು ಹೇಳಲಾಗಿದೆ. CBSE  ಬೆಂಚ್ ಮಾರ್ಕಿಂಗ್ ಮತ್ತು ಮಾನದಂಡಗಳ ಸಮೀಕ್ಷೆಗಾಗಿ ಫ್ರೇಮ್ ವರ್ಕ್ ಅಭಿವೃದ್ದಿಪಡಿಸುವುದಾಗಿ ಸಿಬಿಎಸ್ ಇ ಈಗಾಗಲೇ ಹೇಳಿದೆ. 

ಇದನ್ನೂ ಓದಿ : Job Alert: ಬೆಂಗಳೂರಿನ ಸೆಂಟ್ರಲ್ ಸಿಲ್ಕ್ ಬೋರ್ಡ್‌ನಲ್ಲಿ ನೇಮಕಾತಿ, ಇಂದೇ ಅರ್ಜಿ ಸಲ್ಲಿಸಿರಿ

ಆಂತರಿಕ ಮೌಲ್ಯಮಾಪನದಲ್ಲಿ (Internal assesment) ಸ್ಥಿರತೆ, ಪಾರದರ್ಶಕತೆ ಮತ್ತು ನ್ಯಾಯಸಮ್ಮತತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು "ಶೈಕ್ಷಣಿಕ ಫಲಿತಾಂಶಗಳಲ್ಲಿನ ಅಸಮಾನತೆ ಮತ್ತು ವಿದ್ಯಾರ್ಥಿಗಳ ಅಸಮಾಧಾನದಂಥಹ  ಸಮಸ್ಯೆಗಳನ್ನು ಪರಿಹರಿಸಲು CBSE ಅಧಿಕಾರಿಗಳ ತಂಡವು ಶಾಲಾ ನಾಯಕರು ಮತ್ತು ಸಂಯೋಜಕರಿಗೆ ಸಾಮರ್ಥ್ಯ ನಿರ್ಮಾಣ ಕಾರ್ಯಾಗಾರಗಳನ್ನು ನಡೆಸುತ್ತದೆ ಎಂದು ಅದು ಹೇಳಿದೆ.

ಆಂತರಿಕ ಮೌಲ್ಯಮಾಪನ ಚೌಕಟ್ಟು ಶಾಲಾ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ (NCFSE) ಮತ್ತು ಓವರ್ ಆಲ್ ಪ್ರೋಗ್ರೆಸ್ ಕಾರ್ಡ್ ನ ನಿಬಂಧನೆಗಳಿಗೆ ಅನುಗುಣವಾಗಿರುತ್ತದೆ.ಇದನ್ನು NCFSEಯೊಂದಿಗೆ  ಸ್ಕೂಲ್ ರಿಪೋರ್ಟ್ ಕಾರ್ಡ್ ಅನ್ನು ಮರುಹೊಂದಿಸುವ ಸರ್ಕಾರದ ಪ್ರಯತ್ನದ ಭಾಗವಾಗಿ ಅಭಿವೃದ್ಧಿಪಡಿಸಲಾಗಿದೆ.

ಇದನ್ನೂ ಓದಿ : ನಿಮಗಿದು ಗೊತ್ತಾ ? ಈ ಜೀವಿ ನೀರಿನಲ್ಲಿಯೇ ಇದ್ದರೂ ನೀರು ಕುಡಿಯುವುದೇ ಇಲ್ಲ!

ಪರೀಕ್ಷೆ ನಡೆಸುವ ತರಗತಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಶಾಲೆಗಳಿಗೆ ನಿರ್ದೇಶನ ನೀಡುವುದನ್ನು ಪ್ರಸ್ತಾವನೆ ಒಳಗೊಂಡಿದೆ. ಅದರ ಭಾಗಶಃ ವೆಚ್ಚವನ್ನು CBSE ಭರಿಸಲಿದೆ.CBSE ಪ್ರಧಾನ ಕಚೇರಿಯಲ್ಲಿ ಡೇಟಾ ಬ್ಯಾಂಕ್ ರಚಿಸಲಾಗುವುದು. ಇದರಲ್ಲಿ ಪರೀಕ್ಷಾ ಕೇಂದ್ರಗಳು ವೆಬ್ ಲಿಂಕ್ ಮೂಲಕ ಪ್ರತಿ ಪರೀಕ್ಷಾ ದಿನದ CCTV ರೆಕಾರ್ಡಿಂಗ್‌ಗಳನ್ನು ಸಲ್ಲಿಸಬಹುದು.

ಪ್ರಾಯೋಗಿಕ ಯೋಜನೆಯಾಗಿ ಒಂದು ಪ್ರದೇಶದಲ್ಲಿ ಕನಿಷ್ಠ ಶೇ.30ರಷ್ಟು ಕೇಂದ್ರಗಳನ್ನು ಇದರಲ್ಲಿ ಸೇರಿಸಲಾಗಿದೆ.ನಂತರ ಎಲ್ಲಾ ಕೇಂದ್ರಗಳಿಗೂ ಈ ಯೋಜನೆಯನ್ನು ವಿಸ್ತರಿಸಬಹುದು ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News