ಪತ್ರಿಕೋದ್ಯಮವು ಆತುರದ ಸಾಹಿತ್ಯವಾಗಿದೆ - ಆಯೇಶಾ ಖಾನಮ್

ಇದು ವಿವಿಧ ನಾಗರಿಕತೆಗಳೊಡನೆ ಮನುಷ್ಯನನ್ನು ಬೆಸೆಯುತ್ತದೆ. ಭಾರತದಲ್ಲಿ ಭಕ್ತಿ ಚಳುವಳಿ,ಸೂಫಿ ಚಳುವಳಿಯ ಕಾಲಘಟ್ಟ, ಸ್ವಾತಂತ್ರ್ಯೋತ್ತರ ಕಾಲಘಟ್ಟದಲ್ಲಿ ಸಾಹಿತ್ಯ ಹಾಗೂ ಪತ್ರಿಕೋದ್ಯಮವು  ತನ್ನದೇಯಾದ ಛಾಪು ಮೂಡಿಸಿದೆ

Written by - Manjunath N | Last Updated : Sep 13, 2024, 09:03 PM IST
  • “ಸಮಾಜದಲ್ಲಿ, ಸಾಹಿತ್ಯ ಮತ್ತು ಮಾಧ್ಯಮಗಳು ಸಾರ್ವಜನಿಕ ಪ್ರಜ್ಞೆಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ
  • ನಾವು ನಮ್ಮನ್ನು ಮತ್ತು ಇತರರನ್ನು ಹೇಗೆ ಗ್ರಹಿಸಬೇಕು ಎಂಬುದನ್ನು ತಿಳಿಸಿಕೊಡುತ್ತಿವೆ
  • ನಮ್ಮ ತಿಳುವಳಿಕೆಯನ್ನು ವಿಸ್ತರಿಸುವುದು ಹೇಗೆ ಎಂಬುದರ ಮೇಲೆ ಮಾದ್ಯಮಗಳು ಪ್ರಭಾವ ಬೀರುತ್ತಿವೆ
 ಪತ್ರಿಕೋದ್ಯಮವು ಆತುರದ ಸಾಹಿತ್ಯವಾಗಿದೆ - ಆಯೇಶಾ ಖಾನಮ್ title=

ಬೆಂಗಳೂರು:  ಜೈನ್ (ಡೀಮ್ಡ್ ಟು ಬಿ ಯೂನಿವರ್ಸಿಟಿ) ಯ ಸ್ಕೂಲ್ ಆಫ್ ಹ್ಯುಮ್ಯಾನಿಟೀಸ್ ಮತ್ತು ಸೋಷಿಯಲ್ ಸೈನ್ಸ್ ನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ಹಾಗೂ ರಿಸರ್ಚ್ ಕಲ್ಚರ್ ಸೊಸೈಟಿ ಸಹಯೋಗದಲ್ಲಿ “ಸಾಹಿತ್ಯ, ಸಮಾಜ ಮತ್ತು ಜಾಗತಿಕ ಮಾಧ್ಯಮ ಎಂಬ ವಿಷಯದ ಕುರಿತ 2ನೇ ಅಂತರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭ ಜರುಗಿತು.

ಈ ವಿಚಾರ ಸಂಕಿರಣದಲ್ಲಿ ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಂಡು ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿಗಳಾದ  ಪ್ರೊ ಬಿ. ಕೆ.ರವಿ, “ಸಾಹಿತ್ಯ,ಸಮಾಜ ಹಾಗೂ ಜಾಗತಿಕ ಮಾಧ್ಯಮ ಎನ್ನುವುದು ವಿಶಾಲವಾದ ವಿಷಯ. ಮೊಗೆದಷ್ಟೂ ವಿಷಯಗಳು ನಮಗೆ ದೊರಕುತ್ತವೆ. ಇದು ವಿವಿಧ ನಾಗರಿಕತೆಗಳೊಡನೆ ಮನುಷ್ಯನನ್ನು ಬೆಸೆಯುತ್ತದೆ. ಭಾರತದಲ್ಲಿ ಭಕ್ತಿ ಚಳುವಳಿ,ಸೂಫಿ ಚಳುವಳಿಯ ಕಾಲಘಟ್ಟ, ಸ್ವಾತಂತ್ರ್ಯೋತ್ತರ ಕಾಲಘಟ್ಟದಲ್ಲಿ ಸಾಹಿತ್ಯ ಹಾಗೂ ಪತ್ರಿಕೋದ್ಯಮವು  ತನ್ನದೇಯಾದ ಛಾಪು ಮೂಡಿಸಿದೆ. ಸ್ವಾತಂತ್ರ್ಯ ನಂತರದಲ್ಲಿ ಆಡಳಿತ ವರ್ಗಗಳೊಂದಿಗೆ ಜನ ಸಾಮಾನ್ಯರನ್ನು ಜೋಡಿಸುವ ಕೊಂಡಿಯಾಗಿ ಮಾಧ್ಯಮ ಮಾರ್ಪಾಡುಗೊಂಡಿದ್ದು ಮಹತ್ವದ್ದೆನಿಸುತ್ತದೆ. ಕರ್ನಾಟಕದಲ್ಲಿ ವಚನ ಸಾಹಿತ್ಯ ಹಾಗೂ ದಾಸ ಸಾಹಿತ್ಯ ಸಮಾಜಕ್ಕೆ ಸರಿಯಾದ ದಿಕ್ಕನ್ನು  ತೋರುವುದರ ಮೂಲಕ  ಸಮಾಜದಲ್ಲಿದ್ದ ಮೌಡ್ಯಾಚರಣೆಗಳನ್ನು ಹೋಗಲಾಡಿಸಲು ನೆರವಾಯಿತು.ಕಅಧುನಿಕ ನ್ನಡ ಸಾಹಿತ್ಯದಲ್ಲಿ ಗುರುತಿಸಿಕೊಂಡ  ಕುವೆಂಪು, ಯು.ಆರ್.ಅನಂತ ಮೂರ್ತಿಯವರ ಸಾಹಿತ್ಯವು ಈ ನೆಲೆಯಲ್ಲಿ ಮಾರ್ಗದರ್ಶಿಯಂತಿವೆ. ಇದರೊಂದಿಗೆ ಮಾದ್ಯಮದಲ್ಲಿ ತನ್ನದೇ ಪ್ರಭಾವ ಬೀರಿದ ಆಲ್ ಇಂಡಿಯಾ ರೇಡಿಯೋ ರಾಷ್ಟ್ರ ಮಟ್ಟದಲ್ಲಿ ಹಸಿರು ಕ್ರಾಂತಿಗೆ ನೆರವಾದರೆ, ನಮ್ಮ ಕುಡ್ಲದಂತಹ ಸ್ಥಳೀಯ ಮಟ್ಟದ ಮಾಧ್ಯಮಗಳು ಗ್ರಾಮೀಣ ಸಮಸ್ಯೆಗಳನ್ನು ಎತ್ತಿ ಹಿಡಿದಿವೆ.ಈ ಎಲ್ಲವೂ ದಿನನಿತ್ಯ ಸಮಾಜವನ್ನು ತಿದ್ದಲು ಸಹಕಾರಿಯಾಗಿವೆ ಎಂದರು. ಇನ್ನೋರ್ವ ಅತಿಥಿಗಳಾಗಿ ಪಾಲ್ಗೊಂಡ ಕರ್ನಾಟಕ ರಾಜ್ಯ ಮಾಧ್ಯಮ ಅಕಾಡಮಿಯ ಅಧ್ಯಕ್ಷರಾದ ಶ್ರೀಮತಿ ಆಯೇಷಾ ಖಾನುಮ್ ಮಾತನಾಡುತ್ತ“ಮಾಧ್ಯಮಗಳು ಸತ್ಯಾಧಾರಿತ ಕತೆಗಳನ್ನು ಹೇಳುತ್ತವೆ. ಇವುಗಳ ಮೇಲೆ ಜಾಗತಿಕ ಮಾಧ್ಯಮದ ಪ್ರಭಾವ ಇದ್ದೇ ಇರುತ್ತದೆ. ಜಾಗತಿಕ ಮಾಧ್ಯಮದಲ್ಲಿ ಪ್ರತಿಯೊಬ್ಬರ ದೃಷ್ಟಿಕೋನ ವಿಭಿನ್ನವಾಗಿರುತ್ತದೆ. ಇದು ಪ್ರತಿಯೊಬ್ಬನು ಸುದ್ದಿ ನೋಡುವ ಬಗೆಯನ್ನು ತಿಳಿಸುತ್ತದೆ.  ಜೊತೆಗೆ  ಒಮ್ಮೊಮ್ಮೆ ಸುದ್ದಿಯ ಅಪಾರ್ಥಕ್ಕೂ ಕಾರಣವಾಗುತ್ತದೆ.

ಇದನ್ನೂ ಓದಿ- ಮುಡಾ ಹಗರಣದಂತೆ ಬಿಡಿಎ ಹಗರಣ ಕೂಡ ನಿಮ್ಮ ಕೊರಳಿಗೆ ಸುತ್ತಿಕೊಳ್ಳಲಿದೆ: ಸಿಎಂ ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಚಂದ್ರು ಎಚ್ಚರಿಕೆ

ಪ್ರಸ್ತುತ ಜಾಗತಿಕ ಮಾಧ್ಯಮಗಳು ಭಾರತವನ್ನು ನೋಡುವ ದೃಷ್ಟಿಕೋನ ಬದಲಾಯಿಸಿಕೊಂಡಿವೆ. ಇದಕ್ಕೆ ಮುಖ್ಯ ಕಾರಣ ಜಾಗತಿಕ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುವ ಭಾರತೀಯರು ಎಂಬುದು ಮಹತ್ವದ ಸಂಗತಿ. ಭಾರತೀಯರ ಯೋಗ ವಿದ್ಯೆಯು ಈ ನಿಟ್ಟಿನಲ್ಲಿ ಮಹತ್ತರ ಪಾತ್ರವಹಿಸಿದೆ. 'ವಸುದೈವ ಕುಟುಂಬಕಂ' ಎನ್ನುವ ಮಾತು ಸಾಹಿತ್ಯ,ಸಮಾಜ ಹಾಗೂ ಜಾಗತಿಕ ಮಾಧ್ಯಮಕ್ಕೆ ಸೂಕ್ತವಾಗಿದೆ ಎಂದರು. ಎರಡು ದಿನಗಳ ಕಾಲ ನಡೆಯುವ ಈ ಅಂತರಾಷ್ಟ್ರೀಯ ವಿಚಾರ ಸಂಕಿರಣದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಯುನಿವರ್ಸಿಟಿ ಆಫ್ ನಾರ್ಥ್ ಟೆಕ್ಸಾಸ್ ನ ಭಗವಾನ್ ಆದಿನಾಥ ಪೀಠ, ಧರ್ಮ ಮತ್ತು ತತ್ವಶಾಸ್ತ್ರ ವಿಭಾಗದ ಮುಖ್ಯಸ್ಥರಾದ ,ಗೌರವಾನ್ವಿತ ಪ್ರೊ ಜಾರ್ಜ್ ಆಲ್ಫ್ರೆಡ್ ಜೇಮ್ಸ್, ಸಾಹಿತ್ಯವು ಸಾಮಾಜಿಕ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ ಮತ್ತು ವಿಕಾಸಗೊಳ್ಳುತ್ತಿರುವ ಮಾಧ್ಯಮದ ಭೂದೃಶ್ಯಕ್ಕೆ ಹೇಗೆ ಹೊಂದಿಕೊಳ್ಳುತ್ತದೆ ಎಂಬುದರ ಮಹತ್ವವನ್ನು ತಿಳಿಸುತ್ತದೆ  "ಇಂದು ಸಾರ್ವಜನಿಕರು ಬಹು ಸುದ್ದಿ ಮಳಿಗೆಗಳಿಗೆ ಪ್ರವೇಶ ಹೊಂದಿದ್ದಾರೆ, ವಿಶೇಷವಾಗಿ ಅಮೆರಿಕಾದಲ್ಲಿ ಮತ್ತು ಭಾರತದಲ್ಲಿ ಅದರ ಸತ್ಯಾಸತ್ಯತೆಯ ಆಳ ಅಗಲವನ್ನು ಅರಿಯಬಹುದು ಎನ್ನುತ್ತಾ ಪರಿಸರ ಸಮಸ್ಯೆಗಳ ಬಗ್ಗೆ ಪ್ರತಿಕ್ರಿಯಿಸಿ, “ಭಾರತದಲ್ಲಿ, ಮಾಧ್ಯಮಗಳು ವಿಶ್ವ ಮಾಧ್ಯಮದಷ್ಟು ಪರಿಸರ ಸಮಸ್ಯೆಗಳಿಗೆ ಇಂಬು  ನೀಡುತ್ತಿಲ್ಲ ಎಂದು ನಾನು ಗಮನಿಸಿದ್ದೇನೆ. ಜನರು ಪಾಶ್ಚಿಮಾತ್ಯ ಜಗತ್ತಿನಲ್ಲಿ ಚಿಪ್ಕೊ ಚಳುವಳಿಯನ್ನು ಉಲ್ಲೇಖಿಸುತ್ತಾರೆ, ದುರದೃಷ್ಟವಶಾತ್, ಇಲ್ಲಿನ ಕಾಳಜಿಯು ಪ್ರೋತ್ಸಾಹದಾಯಕವಾಗಿಲ್ಲ. ಇಂಗಾಲದ ಹೊರಸೂಸುವಿಕೆಯು ಪ್ರಪಂಚದ ಅಸ್ತಿತ್ವಕ್ಕೆ ತುಂಬಾ ಅಪಾಯಕಾರಿಯಾದ ಮಟ್ಟದಲ್ಲಿದೆ. ನಾವೆಲ್ಲರೂ ಅದರ ಬಗ್ಗೆ ಯೋಚಿಸಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜೈನ್ (ಡೀಮ್ಡ್ -ಟು -ಬಿ ಯೂನಿವರ್ಸಿಟಿ)ಯ ಪ್ರೊ ವೈಸ್ ಚಾನ್ಸಲರ್ ಡಾ. ದಿನೇಶ್ ನೀಲಕಂಠ್ ವಿಚಾರ ಸಂಕಿರಣದ ಕುರಿತು  ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತ “ಸಮಾಜದಲ್ಲಿ, ಸಾಹಿತ್ಯ ಮತ್ತು ಮಾಧ್ಯಮಗಳು ಸಾರ್ವಜನಿಕ ಪ್ರಜ್ಞೆಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ನಾವು ನಮ್ಮನ್ನು ಮತ್ತು ಇತರರನ್ನು ಹೇಗೆ ಗ್ರಹಿಸಬೇಕು ಎಂಬುದನ್ನು ತಿಳಿಸಿಕೊಡುತ್ತಿವೆ. ಭಾರತದ ವೈವಿಧ್ಯಮಯ ಸಂಸ್ಕೃತಿಗಳ ಮತ್ತು ಸಾಮಾಜಿಕ ಸಮಸ್ಯೆಗಳ ಬಗ್ಗೆ ನಮ್ಮ ತಿಳುವಳಿಕೆಯನ್ನು ವಿಸ್ತರಿಸುವುದು ಹೇಗೆ ಎಂಬುದರ ಮೇಲೆ ಮಾದ್ಯಮಗಳು ಪ್ರಭಾವ ಬೀರುತ್ತಿವೆ. ಕಥೆ ಹೇಳುವ ಮೂಲಕ, ಸಾಹಿತ್ಯವು ಸಹಾನುಭೂತಿಯನ್ನು ಬೆಳೆಸುತ್ತದೆ, ಓದುಗರನ್ನು ತಮ್ಮದೇಯಾದ ಮಾನವ ಅನುಭವಗಳಿಗೆ ಬೆಸೆಯುತ್ತಿದೆ.  “ಸಾಹಿತ್ಯ, ಸಮಾಜ ಮತ್ತು ಜಾಗತಿಕ ಮಾಧ್ಯಮಗಳು ನಮ್ಮ ದೃಷ್ಟಿಕೋನವನ್ನು ವಿಶ್ವ ದೃಷ್ಟಿಕೋನವಾಗಿ ರೂಪಿಸುವ ಪ್ರಬಲ ಸಾಧನಗಳಾಗಿವೆ. ಸಾಹಿತ್ಯವು ಮಾನವ ಅನುಭವಗಳ ಜಟಿಲತೆಗಯನ್ನು ಪ್ರತಿಬಿಂಬಿಸುತ್ತದೆ ಮತ್ತು ವಿಮರ್ಶಾತ್ಮಕ ಚಿಂತನೆ ಹಾಗೂ ಸಹಾನುಭೂತಿಯನ್ನು ಉತ್ತೇಜಿಸುವ ವೈವಿಧ್ಯಮಯ ದೃಷ್ಟಿಕೋನಗಳನ್ನು ಒದಗಿಸುತ್ತಿದೆ. ಜಾಗತಿಕ ಮಟ್ಟದಲ್ಲಿರುವ ಸಾಮಾಜಿಕ ಸಮಸ್ಯೆಗಳನ್ನು ಗುರುತಿಸಲು ಪ್ರೇರೇಪಿಸುತ್ತಿದೆ. ಒಟ್ಟಾಗಿ ಎಲ್ಲರೂ ಒಳಗೊಳ್ಳುವಿಕೆ ಮತ್ತು ಮಾನವ ಪ್ರಗತಿಯನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿವೆ ಎಂದರು.

ಇದನ್ನೂ ಓದಿ- ಸರ್ಕಾರಿ ಶಾಲೆಗಳಿಗೆ ದೇಣಿಗೆ ನೀಡಿ ಶಾಲೆಗಳ ಚಿತ್ರಣವೇ ಬದಲಾಗುತ್ತದೆ-ಸಚಿವ ಮಧು ಬಂಗಾರಪ್ಪ 

ಅತಿಥಿಗಳಾದ ಜೈನ್  ಸಮೂಹ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷರಾದ ಶ್ರೀ ರವೀಂದ್ರ ಭಂಡಾರಿಯವರು ಮಾತನಾಡುತ್ತ"ಸಾಹಿತ್ಯವು ಹೊಸ ಆಲೋಚನೆಗಳನ್ನು ಮತ್ತು ಆಲೋಚನಾ ವಿಧಾನಗಳನ್ನು ಅಭಿವೃದ್ಧಿಪಡಿಸಲು ಜನರಿಗೆ ಅಧಿಕಾರ ನೀಡುತ್ತದೆ, ಆದರೆ ಮಾಧ್ಯಮವು ಜನರ ಕಲ್ಪನೆಗಳು ಮತ್ತು ನಂಬಿಕೆಗಳನ್ನು ರೂಪಿಸಲು ಒಂದು ಮಾಧ್ಯಮವಾಗಿದೆ ಎಂದರು.ವಿಚಾರ ಸಂಕಿರಣದ ಸಂಘಟಕರಾದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ   ಮುಖ್ಯಸ್ಥರಾದ ಡಾ. ಭಾರ್ಗವಿ ಡಿ ಹೆಮ್ಮಿಗೆಯವರು ಮಾತನಾಡುತ್ತ  “ಸಾಹಿತ್ಯವು ಸಮಯಾತೀತತೆಯನ್ನು ನೀಡುತ್ತದೆ. ಆದರೆ ಪತ್ರಿಕೋದ್ಯಮದ ಪ್ರಮುಖ ಮುಖ್ಯ ಅಂಶ ಸಮಯಪ್ರಜ್ಞೆಯಾಗಿದೆ. ಸಾಹಿತ್ಯ ಮತ್ತು ಪತ್ರಿಕೋದ್ಯಮದ ನಿರೂಪಣೆ, ಘರ್ಷಣೆಗಳು ಮತ್ತು ಪರಸ್ಪರ ಸಂಪರ್ಕಗಳು ಮತ್ತು ಅವು ನಮ್ಮ ಸಮಾಜವನ್ನು ಹೇಗೆ ರೂಪಿಸುತ್ತವೆ ಎಂಬುದರ ಕುರಿತು ಚರ್ಚಿಸಲು ಈ  ವಿಚಾರ ಸಂಕಿರಣ ಸೂಕ್ತವಾದ ವೇದಿಕೆಯಾಗಿದೆ ಎಂದರು. ಈ ವಿಚಾರ ಸಂಕಿರಣದಲ್ಲಿ ಮಂಡನೆಗೊಳ್ಳಲು ದೇಶದ ಮತ್ತು ವೇದಶದ ಸುಮಾರು 300 ಪ್ರಂಧದ ಸಾರಾಂಶಗಳು ಸಂಗ್ರಹ  ಗೊಂಡಿವೆ.ಹಾಗು  ವಿವಿಧ ವಿಷಯಗಳಾಧಾರಿತ 230 ಸಂಶೋದನಾ  ಪ್ರಬಂಧಗಳು ಆಯ್ಕೆಗೊಂಡಿವೆ. ಇಂಗ್ಲಿಷ್ ಸಾಹಿತ್ಯ, ಪತ್ರಿಕೋದ್ಯಮ, ಸಮಾಜಶಾಸ್ತ್ರ, ಸಾದೃಶ್ಯ, ಜೈನಾಲಜಿ, ರಾಜಕೀಯ ಇತ್ಯಾದಿ ವಿಭಾಗಗಳಿಂದ ಕನ್ನಡ, ಹಿಂದಿ, ಸಂಸ್ಕೃತ ಮತ್ತು ತೆಲುಗು ಮೊದಲಾದ ಭಾಷೆಯಲ್ಲಿ ರಚಿತಗೊಂಡ ಪ್ರಬಂಧಗಳನ್ನು ಆಯ್ಕೆ  ಮಾಡುವಲ್ಲಿ ನಾವು ಬಹಳಷ್ಟು ಪತ್ರಿಕೆಗಳಲ್ಲಿ ಪತ್ರಿಕೆಗಳನ್ನು ಸ್ವೀಕರಿಸಲು ನಾವು ಹರ್ಷಗೊಂಡಿದ್ದೇವೆ.ಅಭಿಮಾನ ಪಟ್ಟಿದ್ದೇವೆ ಎಂದರು. (ಡೀಮ್ಡ್ -ಟು -ಬಿ ಯೂನಿವರ್ಸಿಟಿ)ಯ ಪ್ ಅಕಾಡೆಮಿಕ್ ಚೀಫ್ ಡಾ.ಶ್ರದ್ಧಾ ಕನ್ವರ್ ಎಲ್ಲರನ್ನೂ ಸ್ವಾಗತಿಸಿದರು.ಭಾಷಾ ವಿಭಾಗದ ಮುಖ್ಯಸ್ಥರಾದ .ಡಾ. ರಜನಿ ಜಯರಾಮ್ ವಂದಿಸಿದರು. ವಿಚಾರ ಸಂಕಿರಣದ ಡಾ. ಶ್ಯಾಮಲಿ ಬ್ಯಾನರ್ಜಿ ಮಾತನಾಡಿದರು.ರಾಷ್ಟ್ರ ಮತ್ತು ಅಂತರಾಷ್ಟ್ರ ಖ್ಯಾತಿಯ ಸಂಪನ್ಮೂಲ ವ್ಯಕ್ತಿಗಳು ಹಾಗೂ ವಿವಿಧ ಗೋಷ್ಠಿಗಳಲ್ಲಿ ಪ್ರಬಂಧ ಮಂಡಿಸಲು ಪ್ರತಿನಿಧಿಗಳಾಗಿ ವಿವಿಧ ವಿಶ್ವವಿದ್ಯಾಲಯದ ಸಂಶೋಧಕರು ಪಾಲ್ಗೊಂಡಿದ್ದರು.ವಿಶ್ವವಿದ್ಯಾಲಯದ ವಿವಿಧ ಕ್ಯಾಂಪಸ್ ನ  ಪ್ರಾಧ್ಯಾಪಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸಂಪರ್ಕ ಮಾಹಿತಿ:

ಡಾ. ಭಾರ್ಗವಿ ಡಿ ಹೆಮ್ಮಿಗೆ, ಪ್ರೊಫೆಸರ್ ಮತ್ತು ವಿಭಾಗ ಮುಖ್ಯಸ್ಥರು– 97399 74938 | dr.bhargavi_d@cms.ac.in 
ಡಾ. ಜೀಸಸ್ ಮಿಲ್ಟನ್ ಆರ್.ಎಸ್., ಅಸೋಸಿಯೇಟ್ ಪ್ರೊಫೆಸರ್ – 7892155436 | dr.jesus_milton@cms.ac.in  
ಶ್ರೀಮತಿ ರಾಜೇಶ್ವರಿ ವೈಎಂ, ಸಹಾಯಕ ಪ್ರಾಧ್ಯಾಪಕಿ – 9964663510  |  ym.rajeshwari@jainuniversity.ac.in 
ರಾಜಕುಮಾರ ಬಡಿಗೇರ, ಸಹಾಯಕ ಪ್ರಾಧ್ಯಾಪಕ – 98800 89797 | b.rajkumar@jainuniversity.ac.in

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News