ಕರ್ನಾಟಕ NEET UG,KCET ರೌಂಡ್ 2 ಕೌನ್ಸೆಲಿಂಗ್ 2024 ಪ್ರಾರಂಭ! ವೇಳಾಪಟ್ಟಿ, ಫೀಸ್, ಅಗತ್ಯ ದಾಖಲೆಗಳ ವಿವರ ಇಲ್ಲಿದೆ

ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ  ಲಭ್ಯವಾಗುವ ಖಾಲಿ  ಸೀಟುಗಳನ್ನು ಅದೇ ಸುತ್ತಿನಲ್ಲಿಯೇ ನೀಡಲಾಗುತ್ತದೆ. 

Written by - Ranjitha R K | Last Updated : Sep 9, 2024, 11:06 AM IST
  • NEET UG ರೌಂಡ್ 2 ಮತ್ತು ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ ಗಾಗಿ ಕೌನ್ಸೆಲಿಂಗ್
  • ಕೌನ್ಸೆಲಿಂಗ್‌ನಲ್ಲಿ ಭಾಗಿಯಾಗಲು ಅಧಿಕೃತ ವೆಬ್ ಸೈಟ್
  • ಅಗತ್ಯ ದಾಖಲೆಗಳ ಪಟ್ಟಿ ಇಲ್ಲಿದೆ
ಕರ್ನಾಟಕ NEET UG,KCET ರೌಂಡ್ 2 ಕೌನ್ಸೆಲಿಂಗ್ 2024 ಪ್ರಾರಂಭ! ವೇಳಾಪಟ್ಟಿ, ಫೀಸ್, ಅಗತ್ಯ ದಾಖಲೆಗಳ ವಿವರ ಇಲ್ಲಿದೆ  title=

ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) NEET UG ರೌಂಡ್ 2 ಮತ್ತು ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET) ಗಾಗಿ ಕೌನ್ಸೆಲಿಂಗ್ ಪ್ರಕ್ರಿಯೆಗಾಗಿ ಅರ್ಜಿಗಳನ್ನು ಸ್ವೀಕರಿಸುವ ಪ್ರಕ್ರಿಯೆ ಆರಂಭಿಸಿದೆ.ಅಭ್ಯರ್ಥಿಗಳು ಸೆಪ್ಟೆಂಬರ್ 11 ರವರೆಗೆ ಅಧಿಕೃತ ವೆಬ್‌ಸೈಟ್ cetonline.karnataka.gov.in ಗೆ ಭೇಟಿ ನೀಡುವ ಮೂಲಕ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಬಹುದು.

ಅಧಿಕೃತ ದಾಖಲೆ ಪ್ರಕಾರ ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಲಭ್ಯವಾಗುವ ಸೀಟುಗಳನ್ನು ಅದೇ ಸುತ್ತಿನಲ್ಲಿ ನೀಡಲಾಗುವುದು. ಸೀಟ್ ಮ್ಯಾಟ್ರಿಕ್ಸ್ ನಲ್ಲಿ ಅಭ್ಯರ್ಥಿಗಳ ಹೆಸರು ತೋರಿಸದೇ ಹೋದರೂ ಕೂಡಾ ಸೀಟುಗಳನ್ನು ಉಳಿಸಿಕೊಳ್ಳುವಂತೆ ಅಭ್ಯರ್ಥಿಗಳಿಗೆ ಸೂಚನೆ ನೀಡಲಾಗಿದೆ.ಯಾಕೆಂದರೆ ತಮ್ಮ ಆಯ್ಕೆಗಳನ್ನು ನಮೂದಿಸಿದ ಬಳಿಕ ಅಭ್ಯರ್ಥಿಗಳಿಗೆ ಒಳ್ಳೆಯ ಕಾಲೇಜಿನಲ್ಲಿ ಸೀಟು ಸಿಗುವ ಸಾಧ್ಯತೆ ಇರುತ್ತದೆ. 

ಇದನ್ನೂ ಓದಿ : Optical Illusion: ಜಿಂಕೆಗಳ ನಡುವೆ ಅಡಗಿದ ಆ ವಿಶೇಷ ಪ್ರಾಣಿ ಗುರುತಿಸಿ ನೋಡೋಣ.. ತಲೆ ಇದ್ದವರಿಗೆ ಮಾತ್ರ ಹೊಳೆಯುವುದು!

ಕರ್ನಾಟಕ NEET UG, KCET ರೌಂಡ್ 2 ಕೌನ್ಸೆಲಿಂಗ್ 2024: ವೇಳಾಪಟ್ಟಿ
೧.ವೈದ್ಯಕೀಯ ಸೀಟ್‌ಗಾಗಿ ಪೇಮೆಂಟ್ ಇಫ್ ಕಾಶನ್ ಡೆಪಾಸಿಟ್ 1,00,000  (SC/ST ಅಭ್ಯರ್ಥಿಗಳಿಗೆ ರೂ 50,000) ಸೆಪ್ಟೆಂಬರ್ 09, 2024 ರಿಂದ ಸೆಪ್ಟೆಂಬರ್ 11, 2024 (ಬ್ಯಾಂಕಿಂಗ್ ಸಮಯದಲ್ಲಿ)
೨.ರೀ ಅರೆಂಜ್ ಮೆಂಟ್ ಆಫ್ ಆಪ್ಷನ್ (modify/delete/re-order options): ಸೆಪ್ಟೆಂಬರ್ 08, 2024 ರಂದು ಮಧ್ಯಾಹ್ನ 2 ಗಂಟೆಯಿಂದ ಸೆಪ್ಟೆಂಬರ್ 11, 2024 ಮಧ್ಯಾಹ್ನ 2 ಗಂಟೆಯವರೆಗೆ. 

KCET 2024 ಕೌನ್ಸೆಲಿಂಗ್: ಅಗತ್ಯವಿರುವ ದಾಖಲೆಗಳು
1.KCET 2024 ಅರ್ಜಿ ನಮೂನೆ
2.KCET 2024 ಪ್ರವೇಶ ಕಾರ್ಡ್
3.12ನೇ ತರಗತಿ ಅಥವಾ 2ನೇ ಪಿಯುಸಿ ಅಂಕಪಟ್ಟಿ
4.ಎರಡು ಪಾಸ್‌ಪೋರ್ಟ್ ಗಾತ್ರದ ಫೋಟೋಗಳು
5.10 ನೇ ತರಗತಿ ಅಂಕಪಟ್ಟಿ
6.ಸಂಬಂಧಿತ ಬಿಇಒ ಅಥವಾ ಡಿಡಿಪಿಐ ಪ್ರತಿಸಹಿ ಮಾಡಿದ ಅಧ್ಯಯನ ಪ್ರಮಾಣಪತ್ರ
7.ನೋಂದಣಿ ಶುಲ್ಕ ಪಾವತಿ ಪುರಾವೆ
8.ಕನ್ನಡ ಮಾಧ್ಯಮ ಪ್ರಮಾಣ ಪತ್ರ
9.ಗ್ರಾಮೀಣ ಅಧ್ಯಯನ ಪ್ರಮಾಣಪತ್ರ
10.ಜಾತಿ ಆದಾಯ ಪ್ರಮಾಣ ಪತ್ರ
11. ಆದಾಯ ಪ್ರಮಾಣಪತ್ರ

ಇದನ್ನೂ ಓದಿ :ಈ ಕಾಲೇಜಿನಲ್ಲಿ MBBS ಮಾಡಲು ವರ್ಷಕ್ಕೆ ನೀಡಬೇಕಾಗಿರುವುದು ಕೇವಲ 1,600 ಫೀಸ್ ! ಅತ್ಯಂತ ಕಡಿಮೆ ಖರ್ಚಿನಲ್ಲಿ ಈಡೇರುವುದು ಡಾಕ್ಟರ್ ಆಗುವ ಕನಸು

ಕೆಸಿಇಟಿ ಪರೀಕ್ಷೆಯನ್ನು ಕರ್ನಾಟಕದಲ್ಲಿನ ಸಂಸ್ಥೆಗಳಲ್ಲಿ ಎಂಜಿನಿಯರಿಂಗ್, ಕೃಷಿ ಮತ್ತು ಫಾರ್ಮಸಿಯಲ್ಲಿ ಪದವಿಪೂರ್ವ ಕಾರ್ಯಕ್ರಮಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ ನಡೆಸಲಾಗುತ್ತದೆ.ಈ ವರ್ಷ, ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯು ಏಪ್ರಿಲ್ 18 ಮತ್ತು 19 ರಂದು ಎರಡು ಪಾಳಿಗಳಲ್ಲಿ ನಡೆಯಿತು. 

ಕರ್ನಾಟಕ NEET UG 2024 ಕೌನ್ಸೆಲಿಂಗ್: ಅಗತ್ಯ ದಾಖಲೆಗಳು
1.NEET 2024 ಹಾಲ್ ಟಿಕೆಟ್
2.NEET 2024 ಫಲಿತಾಂಶ
3.ಜಾತಿ ಪ್ರಮಾಣಪತ್ರ (ಅನ್ವಯಿಸಿದರೆ)
4.ಎರಡು ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರಗಳು
5.ನಿವಾಸ ಪ್ರಮಾಣಪತ್ರ (ಅರ್ಹತಾ ಮಾನದಂಡಗಳನ್ನು ಪೂರೈಸಲು)

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News