ದೇಶದ ಮೊದಲ ವಂದೇ ಮೆಟ್ರೋ ರೈಲಿಗೆ ಇಂದು ಚಾಲನೆ: ಇಲ್ಲಿದೆ ವಿವರ

First Vande Bharat Metro: ದೇಶದ ಮೊಟ್ಟ ಮೊದಲ ವಂದೇ ಮೆಟ್ರೋ ರೈಲಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಹಸಿರು ನಿಶಾನೆ ತೋರಿಸಲಿದ್ದಾರೆ.  ಭುಜ್ ನಿಂದ ಅಹಮದಾಬಾದ್ ಗೆ ಸಂಪರ್ಕ ಕಲ್ಪಿಸಲಿರುವ ಈ ಮೆಟ್ರೊ ರೈಲಿನ ವಿಶೇಷತೆಗಳೇನು ಎಂದು ತಿಳಿಯಿರಿ. 

Written by - Yashaswini V | Last Updated : Sep 16, 2024, 09:59 AM IST
  • ವಂದೇ ಮೆಟ್ರೋಗೆ ಇಂದು ಗುಜರಾತ್ ನಲ್ಲಿ ಹಸಿರು ನಿಶಾನೆ ತೋರಿಸಲಿರುವ ಪ್ರಧಾನಿ ಮೋದಿ
  • ಭುಜ್ ನಿಂದ ಹೊರಟು ಅಹಮದಾಬಾದ್ ತಲುಪಲಿರುವ ವಂದೇ ಮೆಟ್ರೋ
  • ಗರಿಷ್ಠ 100 ಕಿ. ಮೀಟರ್ ವೇಗವಾಗಿ ಚಲಿಸಲಿರುವ ವಂದೇ ಮೆಟ್ರೋ, 349 ಕಿ.ಮೀ ದೂರವನ್ನು 5.45 ಗಂಟೆಗಳಲ್ಲಿ ಕ್ರಮಿಸಲಿರುವ ಅತ್ಯಾಧುನಿಕ ಮೆಟ್ರೋ ರೈಲು
ದೇಶದ ಮೊದಲ ವಂದೇ ಮೆಟ್ರೋ ರೈಲಿಗೆ ಇಂದು ಚಾಲನೆ: ಇಲ್ಲಿದೆ ವಿವರ  title=

Country s First Vande Bharat Metro: ದೇಶದಲ್ಲಿ ವಂದೇ ಭಾರತ್ ರೈಲಿನ ಯಶಸ್ಸಿನ ಬೆನ್ನಲ್ಲೇ ಇಂದಿನಿಂದ ದೇಶದ ಮೊದಲ ವಂದೇ ಭಾರತ್ ಮೆಟ್ರೋ ರೈಲು ಸಂಚರಿಸಲು ಸಜ್ಜಾಗಿದೆ. ಭಾರತದ ರೈಲು ಸಾರಿಗೆಯ ಮಹತ್ವದ ಮೈಲಿಗಲ್ಲಾಗಿರುವ ಮೊದಲ ವಂದೇ ಮೆಟ್ರೋಗೆ  ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. 

ಸೆಮಿ-ಹೈ-ಸ್ಪೀಡ್ ವಂದೇ ಭಾರತ್ ರೈಲುಗಳ ಯಶಸ್ಸಿನ ಬಳಿಕ ಭಾರತೀಯ ರೈಲ್ವೆಯು ದೇಶದಲ್ಲಿ ಮೊದಲ ವಂದೇ ಮೆಟ್ರೋ ರೈಲನ್ನು ಓಡಿಸಲು ಮುಂದಾಗಿದೆ. ಭಾರತೀಯ ರೈಲ್ವೆ ಇತಿಹಾಸದಲ್ಲಿ ಇದು ಮತ್ತೊಂದು ಮಹತ್ವದ ಮೈಲುಗಲ್ಲಾಗಲಿದೆ.  ದೇಶದ ಮೊದಲ ವಂದೇ ಭಾರತ್ ಮೆಟ್ರೋ ರೈಲು ಗುಜರಾತಿನ ಅಹಂದಾಬಾದ್ ಮತ್ತು ಭುಜ್ ನಡುವೆ ಸಂಪರ್ಕ ಕಲ್ಪಿಸಲಿದೆ. 

ಇದನ್ನೂ ಓದಿ- ಗೃಹಲಕ್ಷ್ಮಿ ಯೋಜನೆ: ಮಹಿಳೆಯರಿಗೆ ಶಾಕ್! 2 ಲಕ್ಷ ಮಹಿಳೆಯರಿಗಿಲ್ಲ ಹಣ, ನಿಮ್ಮ ಹೆಸರೂ ಇದ್ಯಾ?

ಈ ಮೆಟ್ರೋ ಯೋಜನೆಯ ಜೊತೆಗೆ ಇಂದು ಪುಣೆಯಿಂದ ಹುಬ್ಬಳ್ಳಿ, ನಾಗಪುರದಿಂದ ಸಿಕಂದರಾಬಾದ್, ಕೊಲ್ಲಾಪುರದಿಂದ ಪುಣೆ, ಆಗ್ರಾ ಕ್ಯಾಂಟ್ ದಿಂದ ಬ್ನಾರಾಸ್ ಮತ್ತು ದುರ್ಗ್ ದಿಂದ ವಿಶಾಖಪಟ್ಟಣಂ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗಳ ಆರಂಭಕ್ಕೂ ಚಾಲನೆ ನೀಡಲಾಗುತ್ತದೆ. 

ವಂದೇ ಮೆಟ್ರೋ ರೈಲಿನ ಸಮಯ: 
ಗುಜರಾತಿನ ಅಹಮದಾಬಾದ್ ಮತ್ತು ಭುಜ್ ನಡುವೆ ಸಂಪರ್ಕ ಕಲ್ಪಿಸಲಿರುವ ದೇಶದ ಮೊದಲ ವಂದೇ ಮೆಟ್ರೋ ಸಮಯ ಹೀಗಿರಲಿದೆ.  ರೈಲು ಭುಜ್ ನಿಂದ ಬೆಳಕ್ಕೆ 5.05ಕ್ಕೆ ಹೊರಟು 10.50ಕ್ಕೆ ಅಹಂದಾಬಾದ್ ಗೆ ತಲುಪಲಿದೆ.  ಇದೇ ರೈಲು ಸಂಜೆ 5.30ಕ್ಕೆ ಅಹಮದಾಬಾದ್ ನಿಂದ ಹೊರಟು ರಾತ್ರಿ 11.10ಕ್ಕೆ ಭುಜ್ ತಲುಪಲಿದೆ. ಗಂಟೆಗೆ 360 ಕಿಲೋ ಮೀಟರ್ ವೇಗದಲ್ಲಿ ಚಲಿಸುವ ವಂದೇ ಭಾರತ್ ರೈಲು  ಅಹಮದಾಬಾದ್ ಮತ್ತು ಭುಜ್ ನಡುವೆ ಸಂಪರ್ಕ ಸಾಧಿಸಲು 5 ಗಂಟೆ 45 ನಿಮಿಷ ಸಮಯವನ್ನು ತೆಗೆದುಕೊಳ್ಳಲಿದೆ. 

ಇದನ್ನೂ ಓದಿ- ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ ಅಪ್ಲೈ ಮಾಡಿದ್ರೆ ತಿಂಗಳಿಗೆ ಖಾತೆ ಸೇರುತ್ತೆ 3000 ರೂ.

ವಂದೇ ಮೆಟ್ರೋ ವಿಶೇಷತೆ?
* ವಂದೇ ಮೆಟ್ರೋದಿಂದ ನಗರಗಳ ನಡುವಿನ ಸಂಚಾರ ಕ್ಷೇತ್ರದಲ್ಲಿ ಹೊಸ ಸಂಪರ್ಕ ಕ್ರಾಂತಿ.
* ಅತ್ಯುತ್ತಮ ದರ್ಜೆಯ ಸೀಟುಗಳು.
* ಹವಾನಿಯಂತ್ರಿತ ಕ್ಯಾಬಿನ್ ಮತ್ತು ಮಾಡ್ಯುಲರ್ ಇಂಟೀರಿಯರ್ಸ್.
* ಅಪಘಾತ ತಡೆ ತಂತ್ರಜ್ಞಾನ ಕವಚ್
* ಬೆಂಕಿ ಅವಘಡ ಪತ್ತೆ ತಂತ್ರಜ್ಞಾನ
* ಎಮರ್ಜೆನ್ಸಿ ಲೈಟ್ ಗಳ ಅಳವಡಿಕೆ
* 12 ಬೋಗಿಗಳನ್ನ ಒಳಗೊಂಡಿರುತ್ತದೆ
* ಒಂದು ಬಾರಿ 1150 ಪ್ರಯಾಣಿಕರ ಸಂಚರಿಸಬಹುದು
* ಗರಿಷ್ಠ 130 ಕಿ.ಮೀ ಮೆಟ್ರೋ ಸಂಚರಿಸುವ ಕ್ಷಮತೆ
*  ಭುಜ್-ಅಹಮದಾಬಾದ್ ಸಂಚಾರ ಶುಲ್ಕ 455 ರೂ.
* 150 ಕಿ.ಮೀ.  ಅಂತರದ ನಗರಗಳ ನಡುವಿನ ಸಂಪರ್ಕಕ್ಕೆ ಸೀಮಿತವಾದ ಯೋಜನೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News