Job Alert: ಆ.29ರಿಂದ ಆಡಿಯೋ-ವಿಡಿಯೋ ಎಡಿಟಿಂಗ್ ತರಬೇತಿ ಕಾರ್ಯಾಗಾರ

Audio & Video Editing Training Workshop: ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗ ಸಂಸ್ಥೆಯಾದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ವತಿಯಿಂದ ಆಡಿಯೋ ಮತ್ತು ವಿಡಿಯೋ ಎಡಿಟಿಂಗ್ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.

Written by - Zee Kannada News Desk | Last Updated : Aug 2, 2023, 07:03 PM IST
  • ಆ.29ರಿಂದ ಸೆಪ್ಟೆಂಬರ್ 2ರವರೆಗೆ ಆಡಿಯೋ-ವಿಡಿಯೋ ಎಡಿಟಿಂಗ್ ತರಬೇತಿ ಕಾರ್ಯಾಗಾರ ನಡೆಯಲಿದೆ
  • ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ವತಿಯಿಂದ ನಡೆಯಲಿರುವ ತರಬೇತಿ ಕಾರ್ಯಾಗಾರ
  • ಬೆಂಗಳೂರಿನ ಅಕಾಡೆಮಿ ಕಚೇರಿಯಲ್ಲಿ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ & ಸಂಶೋಧನಾ ವಿದ್ಯಾರ್ಥಿಗಳಿಗೆ ಕಾರ್ಯಾಗಾರ
Job Alert: ಆ.29ರಿಂದ ಆಡಿಯೋ-ವಿಡಿಯೋ ಎಡಿಟಿಂಗ್ ತರಬೇತಿ ಕಾರ್ಯಾಗಾರ title=
ಆಡಿಯೋ-ವಿಡಿಯೋ ಎಡಿಟಿಂಗ್ ತರಬೇತಿ

ಬೆಂಗಳೂರು: ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗ ಸಂಸ್ಥೆಯಾದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ವತಿಯಿಂದ ಆಡಿಯೋ ಮತ್ತು ವಿಡಿಯೋ ಎಡಿಟಿಂಗ್ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.

ಆಗಸ್ಟ್ 29ರಿಂದ ಸೆಪ್ಟೆಂಬರ್ 2ರವರೆಗೆ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಉಪನ್ಯಾಸಕರು, ಸಂಶೋಧನಾ ವಿದ್ಯಾರ್ಥಿಗಳಿಗೆ ಈ ತರಬೇತಿ ಕಾರ್ಯಾಗಾರವು ಬೆಂಗಳೂರಿನ ಅಕಾಡೆಮಿ ಕಚೇರಿಯಲ್ಲಿ(ಯು.ಆರ್.ರಾವ್ ವಿಜ್ಞಾನ ಭವನ ತೋಟಗಾರಿಕಾ ವಿಜ್ಞಾನಗಳ ಕಾಲೇಜು ಮಹಾದ್ವಾರ, ಜಿಕೆವಿಕೆ ಆವರಣ, ದೊಡ್ಡಬೆಟ್ಟ ಹಳ್ಳಿ ಬಸ್ ನಿಲ್ದಾಣ, ವಿದ್ಯಾರಣ್ಯಪುರ, ಬೆಂಗಳೂರು-560097)ನಡೆಯಲಿದೆ.

ಇದನ್ನೂ ಓದಿ: ವರ್ಕೌಟ್‌ ಮಾಡಿ ಸುಸ್ತಾದ ಶಿಲ್ಪಾ ಶೆಟ್ಟಿ, ವಿಡಿಯೋ ನೋಡಿ

ಆಸಕ್ತರು ಗೂಗಲ್ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಬಹುದಾಗಿದೆ.(https://forms.gle/2qH2JmtMfCBFq7zv5). ಹೆಚ್ಚಿನ ವಿವರಗಳನ್ನು ಅಕಾಡೆಮಿಯ ವೆಬ್‍ಸೈಟ್‍ನಲ್ಲಿ(kstacademy.in) ನಲ್ಲಿ ಲಭ್ಯವಿರುತ್ತದೆ.

ಅಕಾಡೆಮಿಯ ದೂ.ಸಂ. 080-29721550 ಮೂಲಕವೂ ಆಕಸ್ತರು ಮಾಹಿತಿ ಪಡೆಯಬಹುದು ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎ.ಎಂ.ರಮೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿʼಶಕ್ತಿʼಯ ವ್ಯಯದ ಮೊತ್ತ ಬಿಡುಗಡೆ ಮಾಡಿದ ಸರ್ಕಾರ : ಯಾವ ಸಾರಿಗೆ ನಿಗಮಕ್ಕೆ ಎಷ್ಟು..?

ಇಂದಿನ ಡಿಜಿಟಲ್ ಯುಗದಲ್ಲಿ ಆಡಿಯೋ ಮತ್ತು ವಿಡಿಯೋ ಎಡಿಟಿಂಗ್ ಕ್ಷೇತ್ರದಲ್ಲಿ ವಿಪುಲ ಉದ್ಯೋಗಾವಕಾಶಗಳಿವೆ. ವಿಡಿಯೋ ಮತ್ತು ಆಡಿಯೋ ಎಡಿಟಿಂಗ್ ಕಲಿತುಕೊಂಡರೆ ಕೈತುಂಬಾ ಹಣ ಸಂಪಾದಿಸಬಹುದು ಅಥವಾ ಎಂಎನ್‍ಸಿ ಮತ್ತು ಮೀಡಿಯಾ ಕಂಪನಿಗಳಲ್ಲಿ ಉತ್ತಮ ಸಂಬಳ ಪಡೆಯುವ ಕೆಲಸಕ್ಕೆ ಸೇರಬಹುದು. ಹೀಗಾಗಿ ಆಸಕ್ತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News