ನಟರಾಗುವ ಬಯಕೆ ನಿಮ್ಮಲ್ಲಿದೆಯೇ? ಹಾಗಿದ್ದಲ್ಲಿ ರಂಗಾಯಣದಿಂದ ಇಲ್ಲೊಂದು ಸುವರ್ಣಾವಕಾಶ....!

ಮೈಸೂರಿನಲ್ಲಿ ಕರ್ನಾಟಕ ಸರ್ಕಾರದ ವತಿಯಿಂದ ನಡೆಸಲ್ಪಡುವ ರಂಗಾಯಣದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವು ಕೂಡ ಒಂದು ವರ್ಷದ ರಂಗಶಿಕ್ಷಣ (ಡಿಪ್ಲೋಮಾ) ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ ಆದ್ದರಿಂದ ಈಗ ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು.

Written by - Zee Kannada News Desk | Last Updated : Jun 9, 2022, 09:46 PM IST
  • ರಂಗಾಯಣದ ಪೂರ್ಣ ಮಾಹಿತಿಗಾಗಿ ಬಣ್ಣದ ಬದುಕಿನ ಬಾಗಿಲು ಸಾಕ್ಷ್ಯಚಿತ್ರವನ್ನು ನೋಡಬಹುದು.
  • ತರಬೇತಿಯ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0821-2512639, ಮೊ.ಸಂ.9448938661 ಗೆ ಸಂಪರ್ಕಿಸಲು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಟರಾಗುವ ಬಯಕೆ ನಿಮ್ಮಲ್ಲಿದೆಯೇ? ಹಾಗಿದ್ದಲ್ಲಿ ರಂಗಾಯಣದಿಂದ ಇಲ್ಲೊಂದು ಸುವರ್ಣಾವಕಾಶ....! title=
file photo

ಬೆಂಗಳೂರು: ಮೈಸೂರಿನಲ್ಲಿ ಕರ್ನಾಟಕ ಸರ್ಕಾರದ ವತಿಯಿಂದ ನಡೆಸಲ್ಪಡುವ ರಂಗಾಯಣದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವು ಕೂಡ ಒಂದು ವರ್ಷದ ರಂಗಶಿಕ್ಷಣ (ಡಿಪ್ಲೋಮಾ) ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ ಆದ್ದರಿಂದ ಈಗ ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು.

ರಂಗ ತರಬೇತಿ ಕೋರ್ಸ್ಗೆ ಸೇರಲು ಇಚ್ಚಿಸುವ ವಿದ್ಯಾರ್ಥಿಗಳು ಕನಿಷ್ಠ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆ ತೇರ್ಗಡೆ ಹೊಂದಿರಬೇಕು, 18 ರಿಂದ 28 ವಯಸ್ಸಿನ ವಯೊಮಿತಿ ನಿಗದಿಪಡಿಸಲಾಗಿದ್ದು, ಆಯ್ಕೆಯಾದ ವಿದ್ಯಾರ್ಥಿಗಳಿಗೆ ನಿಯಮಾನುಸಾರ ರಂಗಾಯಣದಿಂದಲೇ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು ಮತ್ತು ಮಾಹೆಯಾನ ರೂ. 3,000 ಗಳ ವಿದ್ಯಾರ್ಥಿ ವೇತನ ಹಾಗೂ ಮಾಸಿಕ ರೂ. 2,000 ಗಳ ಊಟೋಪಚಾರದ ಭತ್ಯೆ ನೀಡಲಾಗುವುದು.

ಇದನ್ನೂ ಓದಿ : President Election 2022 : ಜು.18 ರಂದು ರಾಷ್ಟ್ರಪತಿ ಚುನಾವಣೆಗೆ ಮತದಾನ, ಜು. 21 ರಂದು ಫಲಿತಾಂಶ!

ರಂಗಾಯಣದ ವೆಬ್‌ಸೈಟ್ www.rangayana.org ನಲ್ಲಿ ಅರ್ಜಿ ಡೌನ್‌ಲೋಡ್ ಮಾಡಿಕೊಂಡು ಅಥವಾ ರಂಗಾಯಣದ ಕಚೇರಿಯಲ್ಲಿ ಖುದ್ದಾಗಿ ಪಡೆದು ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಅರ್ಜಿ ಶುಲ್ಕ ಮತ್ತು ರಂಗ ಕೈಪಿಡಿ ಸೇರಿ (ಸಾಮಾನ್ಯ ವರ್ಗಕ್ಕೆ  200ರೂ, ಪ.ಜಾ, ಪ.ವರ್ಗ ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ 150ರೂ) ಡಿ.ಡಿ.ಯನ್ನು ಉಪ ನಿರ್ದೇಶಕರು, ರಂಗಾಯಣ, ಕಲಾಮಂದಿರ ಆವರಣ, ವಿನೋಬಾ ರಸ್ತೆ, ಮೈಸೂರು 570005 ಇವರ ಹೆಸರಿನಲ್ಲಿ ಪಡೆದು ರಂಗಾಯಣದ ವಿಳಾಸಕ್ಕೆ ಜೂ.17 ಸಂಜೆ 05 ಗಂಟೆಯೊಳಗೆ ತಲುಪುವಂತೆ ಅಂಚೆಯ ಮೂಲಕ ಅಥವಾ ಖುದ್ದಾಗಿ ರಂಗಾಯಣದ ಕಚೇರಿಗೆ ತಲುಪಿಸಬೇಕು. ಅಂಚೆ ಮೂಲಕ ಅರ್ಜಿ ಕಳುಹಿಸುವವರಿಗೆ ಕಚೇರಿಯಿಂದ ಕಳುಹಿಸಬೇಕಾಗಿರುವ ರಂಗಕೈಪಿಡಿ ಅಂಚೆ ವೆಚ್ಚ ರೂ. 30 ನ್ನು ಒಳಗೊಂಡ 230ರೂ ಮೊತ್ತದ ಡಿ.ಡಿ. ಸಲ್ಲಿಸಬೇಕು.

ಇದನ್ನೂ ಓದಿ : President Election 2022 : ರಾಷ್ಟ್ರಪತಿ ಚುನಾವಣೆ ಹೇಗಿರುತ್ತೆ? MLA, MP ಗಳ ಮತದ ಮೌಲ್ಯ ಎಷ್ಟು; ಸಂಪೂರ್ಣ ಮಾಹಿತಿ ಇಲ್ಲಿದೆ

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಪತ್ರದ ಮೂಲಕ ಸಂದರ್ಶನದ ದಿನಾಂಕವನ್ನು ತಿಳಿಸಲಾಗುತ್ತದೆ.ರಂಗಾಯಣದ ಆವರಣದಲ್ಲಿ ನಡೆಯುವ ಈ ಸಂದರ್ಶನಕ್ಕೆ ವಿದ್ಯಾರ್ಥಿಗಳು ತಮ್ಮ ಸ್ವಂತಖರ್ಚಿನಲ್ಲೇ ಹಾಜರಾಗಬೇಕು.ಗರಿಷ್ಠ 15 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿರುತ್ತದೆ. ಸಂದರ್ಶನದ ದಿನ ಮಧ್ಯಾಹ್ನ ಲಘು ಉಪಹಾರದ ವ್ಯವಸ್ಥೆಯನ್ನು ಮಾತ್ರ ರಂಗಾಯಣದಿಂದ ಮಾಡಲಾಗುತ್ತದೆ.ಯಾವುದೇ ವಸತಿ ವ್ಯವಸ್ಥೆ ಇರುವುದಿಲ್ಲ.ಕೋವಿಡ್ ನಿರ್ಬಂಧಗಳ ಹಿನ್ನೆಲೆಯಲ್ಲಿ ಸರ್ಕಾರವು ಹೊರಡಿಸುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಲಾಗುವುದು.

ರಂಗಾಯಣದ ಪೂರ್ಣ ಮಾಹಿತಿಗಾಗಿ ಬಣ್ಣದ ಬದುಕಿನ ಬಾಗಿಲು ಸಾಕ್ಷ್ಯಚಿತ್ರವನ್ನು ನೋಡಬಹುದು ಮತ್ತು ತರಬೇತಿಯ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0821-2512639, ಮೊ.ಸಂ.9448938661 ಗೆ ಸಂಪರ್ಕಿಸಲು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

 

Trending News