ಬೆಂಗಳೂರು : ಉನ್ನತ ಹುದ್ದೆಗಳಾದ ಐಎಎಸ್, ಐಪಿಎಸ್ ಸೇರಿದಂತೆ ಯುಪಿಎಸ್‍ಸಿ ಯ ವಿವಿಧ ಹುದ್ದೆಗಳನ್ನು ಉಚಿತ ತರಬೇತಿ ನೀಡಲು ಬೆಂಗಳೂರಿನಲ್ಲಿ ನೂತನವಾಗಿ ಆರಂಭವಾದ ಧೀ ಅಕಾಡೆಮಿಗೆ ವಿದ್ಯಾರ್ಥಿಗಳು ಅವಕಾಶ ಪಡೆಯಬಹುದು.
ಇದನ್ನೂ ಓದಿ: ಉಕ್ರೇನ್ - ರಷ್ಯಾ ಯುದ್ಧ ಪರಿಣಾಮ: ರಾಜ್ಯದಲ್ಲಿ ಗರಿಗೆದರಿದ ಹಸಿರು ಇಂಧನ ಕ್ಷೇತ್ರದಲ್ಲಿನ ಹೂಡಿಕೆ
ಬೆಂಗಳೂರಿನಲ್ಲಿಯೇ ಉತ್ಕøಷ್ಟ ಗುಣಮಟ್ಟದ ತರಬೇತಿಯನ್ನು ಪಡೆಯಲು ಅನುಕೂಲಕರ ವಾತಾವರಣ ನಿರ್ಮಾಣ ಮಾಡುವುದೇ ಧೀ ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ.
ಯುಪಿಎಸ್‍ಸಿ ಆಕಾಂಕ್ಷಿಗಳಿಗೆ ತರಬೇತಿ ನೀಡಲೆಂದೇ ದೆಹಲಿಯಿಂದ ನುರಿತ, ಅನುಭವಿ ಸಂಪನ್ಮೂಲ ವ್ಯಕ್ತಿಗಳ ತಂಡವನ್ನು ಬೆಂಗಳೂರಿಗೆ ಕರೆತಂದು ಸ್ಪರ್ಧಾರ್ಥಿಗಳಿಗೆ ಬೋಧನೆ ಮಾಡಿಸಲಾಗುವುದು. ಮಾತ್ರವಲ್ಲದೆ, ನಿವೃತ್ತ ಐಎಎಸ್, ಐಪಿಎಸ್ ಅಧಿಕಾರಿಗಳ ತಂಡವೂ ಅತಿಥಿ ಉಪನ್ಯಾಸಕರಾಗಿ ಬಂದು ಅಭ್ಯರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಲಿದ್ದಾರೆ.
ಇದನ್ನೂ ಓದಿ: ತಮಿಳು ʼವಾರಿಸುʼಗೆ ಕನ್ನಡತಿ ಜೋಡಿ : ವಿಜಯ್-ರಶ್ಮಿಕಾ ಡುಯೆಟ್ ಸಾಂಗ್ ರಿಲೀಸ್..!
ಧೀ ಅಕಾಡೆಮಿಗೆ ಈಗಾಗಲೇ ನೋಂದಾವಣಿ ಪ್ರಕ್ರಿಯೆಗಳು ಆರಂಭವಾಗಿದ್ದು, ಪ್ರತಿ ವಿಷಯಗಳಿಗೂ ಪ್ರತ್ಯೇಕ ಪರಿಣಿತರ ತಂಡದಿಂದ ಕೋಚಿಂಗ್ ದೊರೆಯಲಿದೆ. ಸರಳ, ಸ್ಪಷ್ಟ ಭಾಷೆಯಲ್ಲಿ ಅಭ್ಯರ್ಥಿಗಳಿಗೆ ಬೋಧಿಸಲಾಗುವುದು ಹಾಗೂ ಇಂಗ್ಲಿಷ್ ಭಾಷಾ ಕೌಶಲ್ಯ ಹೆಚ್ಚಿಸಲಾಗುವುದು. ವ್ಯಕ್ತಿತ್ವ ವಿಕಸನ ಪರೀಕ್ಷೆ ತಯಾರಿಗೆ ಬೇಕಾದ ಪೂರಕ ಚಟುವಟಿಕೆ, ಒತ್ತಡ ನಿರ್ವಹಣೆ ಮಾಡುವ ತರಗತಿಗಳನ್ನು ಇಲ್ಲಿ ವಿಶೇಷವಾಗಿ ನೀಡಲಾಗುತ್ತದೆ. ಮಾತ್ರವಲ್ಲದೆ, ಯೋಗ, ಧ್ಯಾನ ತರಬೇತಿಗಳನ್ನು ನೀಡುವ ಮೂಲಕ ಅಭ್ಯರ್ಥಿಗಳ ಮಾನಸಿಕ ಮಟ್ಟವನ್ನು ಸದೃಢಗೊಳಿಸಲಾಗುವುದು ಎಂದು ಕಾವ್ಯಾ ಅನಂತ್ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ದೆಹಲಿಯ ಇಂಡಿಯಾ ಗೇಟ್ ನಲ್ಲಿ ಕಾಂತಾರ ತಂಡದ ಭರ್ಜರಿ ಪ್ರೊಮೋಷನ್....!
ಪದವಿ ಪೂರ್ಣಗೊಳಿಸಿರುವ, ಅಂತಿಮ ಪದವಿಯಲ್ಲಿ ಅಭ್ಯಾಸ ನಡೆಸುತ್ತಿರುವವರು ಹಾಗೂ ಸ್ನಾತಕೋತ್ತರ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯದ ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದ್ದು, ಹೆಚ್ಚಿನ ಮಾಹಿತಿಗೆ ವೆಬ್‍ಸೈಟ್: www.dhiacademy.in ಅಥವಾ ಮೊ.ಸಂ. 9844868662 ಹಾಗೂ 9844868663 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.