ಪ್ರತಿ ದಿನ 7 ರೂಪಾಯಿ ಹೂಡಿಕೆ ಮಾಡಿ ತಿಂಗಳಿಗೆ ಪಡೆಯಿರಿ 5,000 ರೂ; ತಿಳಿದಿರಲಿ ಸರ್ಕಾರದ ಈ ಯೋಜನೆ

ನೀವು ಕೂಡಾ ಪ್ರತಿ ತಿಂಗಳಿಗೆ 5000 ರೂ.ಗಳ ಪಿಂಚಣಿ ಪಡೆಯಲು ಬಯಸುವುದಾದರೆ ಈ ಸ್ಕೀಮ್ ಅನ್ನು ಪಡೆದುಕೊಳ್ಳಬಹುದು. 18 ರಿಂದ 40 ವರ್ಷದವರೆಗಿನವರು ಈ ಯೋಜನೆಯಲ್ಲಿ ಹಣ ಹೂಡಬಹುದು. ಈ ಯೋಜನೆಯಡಿ,  ಕನಿಷ್ಠ 20 ವರ್ಷಗಳವರೆಗೆ ಹೂಡಿಕೆಯನ್ನು ಮುಂದುವರಿಸಬೇಕಾಗುತ್ತದೆ. 

Written by - Ranjitha R K | Last Updated : May 13, 2021, 11:07 AM IST
  • APYಯಲ್ಲಿ ಹಣ ಹೂಡಿದರೆ ಪ್ರತಿ ತಿಂಗಳು ಸಿಗಲಿದೆ 5 ಸಾವಿರ ರೂ ಪಿಂಚಣಿ
  • 18 ವರ್ಷದಿಂದ 40 ವರ್ಷ ವಯಸ್ಸಿನವರು ಈ ಯೋಜನೆ ಲಾಭ ಪಡೆದುಕೊಳ್ಳಬಹುದು
  • ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಆರಂಭಿಸಲಾದ ಯೋಜನೆ
ಪ್ರತಿ ದಿನ 7 ರೂಪಾಯಿ ಹೂಡಿಕೆ ಮಾಡಿ ತಿಂಗಳಿಗೆ ಪಡೆಯಿರಿ 5,000 ರೂ;  ತಿಳಿದಿರಲಿ ಸರ್ಕಾರದ ಈ ಯೋಜನೆ  title=
APYಯಲ್ಲಿ ಹಣ ಹೂಡಿದರೆ ಪ್ರತಿ ತಿಂಗಳು ಸಿಗಲಿದೆ 5 ಸಾವಿರ ರೂ ಪಿಂಚಣಿ (file photo)

 ನವದೆಹಲಿ : ಅಟಲ್ ಪಿಂಚಣಿ ಯೋಜನೆ (APY) ಸರ್ಕಾರವು ನಡೆಸುವ ಯಶಸ್ವಿ ಪಿಂಚಣಿ ಯೋಜನೆಯಾಗಿದೆ. ಈ ಯೋಜನೆಯನ್ನು ಇನ್ಶುರೆನ್ಸ್ ರೆಗ್ಯುಲೇಟರ್   PFRDA  ನಿರ್ವಹಿಸುತ್ತದೆ. ಅಸಂಘಟಿತ ವಲಯದ ಉದ್ಯೋಗಿಗಳಿಗಾಗಿ ಈ ಯೋಜನೆಯನ್ನು ಆರಂಭಿಸಲಾಗಿದೆ. ಈ ಯೋಜನೆಯಲ್ಲಿ, ಪಿಂಚಣಿಗೆ ಸಂಬಂಧಿಸಿದ ಎಲ್ಲಾ ಪ್ರಯೋಜನಗಳನ್ನು ಭಾರತ ಸರ್ಕಾರ ಖಾತ್ರಿಗೊಳಿಸುತ್ತದೆ. 

ನೀವು ಕೂಡಾ ಪ್ರತಿ ತಿಂಗಳಿಗೆ 5000 ರೂ.ಗಳ ಪಿಂಚಣಿ (Pension) ಪಡೆಯಲು ಬಯಸುವುದಾದರೆ ಈ ಸ್ಕೀಮ್ ಅನ್ನು ಪಡೆದುಕೊಳ್ಳಬಹುದು. 18 ರಿಂದ 40 ವರ್ಷದವರೆಗಿನವರು ಈ ಯೋಜನೆಯಲ್ಲಿ ಹಣ ಹೂಡಬಹುದು. ಈ ಯೋಜನೆಯಡಿ,  ಕನಿಷ್ಠ 20 ವರ್ಷಗಳವರೆಗೆ ಹೂಡಿಕೆಯನ್ನು ಮುಂದುವರಿಸಬೇಕಾಗುತ್ತದೆ.      ಯೋಜನೆಯಲ್ಲಿ ಹಣ ಹೂಡಬೇಕಾದರೆ, ಆಧಾರ್‌ಗೆ ಲಿಂಕ್ ಮಾಡಲಾದ ಬ್ಯಾಂಕ್ ಖಾತೆಯನ್ನು (Bank account) ಹೊಂದಿರಬೇಕು. SBI ಮತ್ತು ಖಾಸಗಿ ವಲಯದ ಬ್ಯಾಂಕುಗಳು ಸಹ ಅಟಲ್ ಪಿಂಚಣಿ ಯೋಜನೆ (APY) ಯ ಖಾತೆಗಳನ್ನು ತೆರೆಯುತ್ತಿವೆ.

ಇದನ್ನೂ ಓದಿ : Bankನ ಈ SMS ಅಪ್ಪಿ-ತಪ್ಪಿಯೂ ಕೂಡ IGNORE ಮಾಡ್ಬೇಡಿ, ಇಲ್ದಿದ್ರೆ ಬೀಳುತ್ತೆ 1000 ರೂ. ದಂಡ

ಪ್ರತಿ ತಿಂಗಳು ಪಡೆಯಬಹುದು 5000 ರೂಪಾಯಿ ಪಿಂಚಣಿ : 
 ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಈ ಯೋಜನೆಯನ್ನು ಆರಂಭಿಸಲಾಗಿದೆ. ಈ ವಲಯದ ಜನರ ಸಂಪಾದನೆ ಅತ್ಯಂತ ಕಡಿಮೆಯಾಗಿದ್ದು, 60 ವರ್ಷದ ನಂತರ ಇವರ ಜೀವನ, ಹಣಕಾಸಿನ ತೊಂದರೆ ಇರದೆ ನಡೆಸಲು ಸಹಾಯವಾಗಲಿ ಎಂಬ ಉದ್ದೇಶದಿಂದ, ಈ ಯೋಜನೆಯನ್ನು ಆರಂಭಿಸಲಾಗಿದೆ.  ಆದಾಯ ತೆರಿಗೆ (income tax) ಸ್ಲ್ಯಾಬ್‌ನಿಂದ ಹೊರಗಿರುವವರು ಮಾತ್ರ ಈ ಯೋಜನೆಯ ಲಾಭವನ್ನು ಪಡೆಯಬಹುದು. ಅಟಲ್ ಪಿಂಚಣಿ ಯೋಜನೆಯಲ್ಲಿ (Atal Pension Yojana)  ಕನಿಷ್ಠ  1000 ರೂ ಮತ್ತು ಗರಿಷ್ಠ 5000 ರೂಪಾಯಿಗಳವರೆಗೆ ಪಿಂಚಣಿ ಸಿಗಲಿದೆ. 

ಹೂಡಿಕೆದಾರನ ವಯಸ್ಸಿಗೆ ಅನುಗುಣವಾಗಿ ಹೂಡಿಕೆಯ ಮೊತ್ತ ಕೂಡಾ ಬದಲಾಗುತ್ತದೆ. ಈ ಯೋಜನೆಯಲ್ಲಿ ಬಹಳ ಬೇಗನೆ ಹೂಡಿಕೆ ಆರಂಭಿಸುವುದು ಒಳ್ಳೆಯದು. ಯಾಕೆಂದರೆ ಎಷ್ಟು ಬೇಗ ಹೂಡಿಕೆ ಆರಂಭಿಸುತ್ತಿರೋ ಹೂಡಿಕೆ ಮಾಡುವ ಮೊತ್ತ ಕೂಡಾ ಅಷ್ಟೇ ಕಡಿಮೆಯಾಗುತ್ತದೆ.  ನೀವು 18 ವರ್ಷಗಳಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರೆ, ಮಾಸಿಕ 5000 ರೂ.ಗಳ ಪಿಂಚಣಿಗಾಗಿ, ಪ್ರತಿ ತಿಂಗಳು 210 ರೂಪಾಯಿಗಳನ್ನು ಠೇವಣಿಯಿಟ್ಟರೆ ಸಾಕು. ಅಂದರೆ ದಿನಕ್ಕೆ ಕೇವಲ 7 ರೂಪಾಯಿಗಳು. ಒಂದು ವೇಳೆ ನೀವು 30 ವರ್ಷ ವಯಸ್ಸಿನಲ್ಲಿ ಹೂಡಿಕೆ ಆರಂಭಿಸಿದರೆ,  ಪ್ರತಿ ತಿಂಗಳು 577 ರೂಗಳನ್ನು ಪಾವತಿಸಬೇಕಾಗುತ್ತದೆ. 39 ವರ್ಷದವರಾಗಿದ್ದರೆ,  ಪ್ರತಿ ತಿಂಗಳು 1318 ರೂಗಳನ್ನು ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ : One Rupee Note: ನಿಮ್ಮ ಬಳಿಯೂ ಇದೆಯೇ 1 ರೂ. ನೋಟು, ಪಡೆಯಿರಿ 45,000 ರೂ.

ಅಟಲ್ ಪಿಂಚಣಿ ಯೋಜನೆ (APY) ಯಲ್ಲಿ ಹಣ ಹೂಡಿಕೆ ಮಾಡುತ್ತಿದ್ದ ವ್ಯಕ್ತಿ ಮೃತಪಟ್ಟರೆ, ಆ ವ್ಯಕ್ತಿಯ ಕುಟುಂಬಕ್ಕೆ ಈ ಯೋಜನೆಯ ಲಾಭ ಸಿಗಲಿದೆ. . ವ್ಯಕ್ತಿಯ ಮರಣದ ನಂತರ, ಆತನ ಪತ್ನಿ, ಪತ್ನಿಯ ಸಾವಿನ ನಂತರ ಆತನ ಮಕ್ಕಳಿಗೆ ಪಿಂಚಣಿ ಸಿಗುತ್ತದೆ. ಲಾಕ್‌ಡೌನ್‌ನಲ್ಲಿ (Lockdown) , ಎಪಿವೈ ಯೋಜನೆಯಲ್ಲಿಹೆಚ್ಚಿನ ಸಂಖ್ಯೆಯಲ್ಲಿ ಜನ ಹೂಡಿಕೆ ಮಾಡುತ್ತಿದ್ದಾರೆ ಎಂದು   PFRDA ಹೇಳಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News