EPFO: ನಿಮ್ಮ ಖಾತೆಗೆ PF ಹಣ ಜಮಾವಣೆಯಾಗುತ್ತಿದೆಯೇ ಇಲ್ಲವೇ ? ಈ ಸರಳ ವಿಧಾನದ ಮೂಲಕ ತಿಳಿದುಕೊಳ್ಳಿ

EPFO Balance: ಇಪಿಎಫ್ ಬ್ಯಾಲೆನ್ಸ್  ಪರಿಶೀಲಿಸಲು ನಿಮಗೆ ನಾಲ್ಕು ಮಾರ್ಗಗಳಿವೆ. ಮೊಬೈಲ್‌ನಿಂದ ಎಸ್‌ಎಂಎಸ್  ಕಳುಹಿಸುವ ಮೂಲಕ, ಮಿಸ್ಡ್ ಕಾಲ್ ನೀಡುವ ಮೂಲಕ ಮತ್ತು ವೆಬ್‌ಸೈಟ್ ಮೂಲಕವೂ ಪಿಎಫ್ ಬ್ಯಾಲೆನ್ಸ್ ಪರಿಶೀಲಿಸಬಹುದು.  

Written by - Ranjitha R K | Last Updated : Jul 26, 2021, 04:48 PM IST
  • ಇಪಿಎಫ್ ಖಾತೆಯಲ್ಲಿ ಬ್ಯಾಲೆನ್ಸ್ ಪರಿಶೀಲಿಸುವುದು ತುಂಬಾ ಸುಲಭ
  • ಈ ನಾಲ್ಕು ವಿಧಾನಗಳಲ್ಲಿ ಪಿಎಫ್ ಬ್ಯಾಲೆನ್ಸ್ ಅನ್ನು ಪರಿಶೀಲಿಸಬಹುದು
  • ಪಿಎಫ್ ಬ್ಯಾಲೆನ್ಸ್ ಅನ್ನು ಎಸ್‌ಎಂಎಸ್ ಮೂಲಕವೂ ತಿಳಿಯಬಹುದು
EPFO: ನಿಮ್ಮ ಖಾತೆಗೆ PF  ಹಣ ಜಮಾವಣೆಯಾಗುತ್ತಿದೆಯೇ ಇಲ್ಲವೇ ? ಈ ಸರಳ ವಿಧಾನದ ಮೂಲಕ ತಿಳಿದುಕೊಳ್ಳಿ title=
EPFO Balance (Photo zee news)

ನವದೆಹಲಿ : EPFO Balance: ಉದ್ಯೋಗದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗೂ ಇಪಿಎಫ್ (EPFO) ಹಣವು ಬಹಳ ಮುಖ್ಯವಾಗಿರುತ್ತದೆ.  ಆದ್ದರಿಂದ ನಿಮ್ಮ ಇಪಿಎಫ್ ಬ್ಯಾಲೆನ್ಸ್ ಎಷ್ಟಿದೆ (how to check pf balance) ಎನ್ನುವುದನ್ನು ಕಾಲಕಾಲಕ್ಕೆ ಪರಿಶೀಲಿಸುತ್ತಿರಬೇಕು. ಇದನ್ನು ಹೇಗೆ ಪರಿಶೀಲಿಸುವುದು ಎಂದು ಯೋಚನೆ ಮಾಡಬೇಕಿಲ್ಲ. ಅದಕ್ಕೆ ಸರಳ ವಿಧಾನಗಳಿವೆ. ಈ ಮಾರ್ಗಗಳನ್ನು ಅನುಸರಿಸುವ ಮೂಲಕ ನಿಮಿಷಗಳಲ್ಲಿ ಇಪಿಎಫ್ ಬ್ಯಾಲೆನ್ಸ್ ತಿಳಿದುಕೊಳ್ಳಬಹುದು.  

ಇಪಿಎಫ್ ಬ್ಯಾಲೆನ್ಸ್ ಪರಿಶೀಲಿಸುವ ಸುಲಭ ಮಾರ್ಗಗಳು :
ಇಪಿಎಫ್ ಬ್ಯಾಲೆನ್ಸ್ (EPF balance) ಪರಿಶೀಲಿಸಲು ನಿಮಗೆ ನಾಲ್ಕು ಮಾರ್ಗಗಳಿವೆ. ಮೊಬೈಲ್‌ನಿಂದ ಎಸ್‌ಎಂಎಸ್ (SMS) ಕಳುಹಿಸುವ ಮೂಲಕ, ಮಿಸ್ಡ್ ಕಾಲ್ ನೀಡುವ ಮೂಲಕ ಮತ್ತು ವೆಬ್‌ಸೈಟ್ ಮೂಲಕವೂ ಪಿಎಫ್ ಬ್ಯಾಲೆನ್ಸ್ ಪರಿಶೀಲಿಸಬಹುದು. ಆದರೆ, ಇದಕ್ಕಾಗಿ ಯುಎಎನ್ (UAN) ಸಂಖ್ಯೆ ಆಕ್ಟಿವ್  ಇರಬೇಕು.  ಯುಎಎನ್ ಅನ್ನು ಬ್ಯಾಂಕ್ ಖಾತೆ, ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್‌ಗೆ (Aadhaara link) ಲಿಂಕ್ ಮಾಡಿದ್ದರೆ ಮಾತ್ರ ಈ ಸೌಲಭ್ಯಗಳ ಲಾಭವನ್ನು ಪಡೆದುಕೊಳ್ಳಬಹುದು. 

ಇದನ್ನೂ ಓದಿ :  Bank Holidays in August 2021: ಮುಂದಿನ ತಿಂಗಳು 15 ದಿನಗಳ ಕಾಲ ಬ್ಯಾಂಕ್ ಗಳಿಗೆ ರಜೆ ಇರಲಿದೆ

 SMS ಮೂಲಕ  : 
ಇಪಿಎಫ್ ಖಾತೆಯ ಬ್ಯಾಲೆನ್ಸ್ ತಿಳಿಯಬೇಕಾದರೆ,   7738299899 ನಂಬರಿಗೆ ಎಸ್‌ಎಂಎಸ್ ಕಳುಹಿಸಬೇಕಾಗುತ್ತದೆ. ಮೆಸೇಜ್ ನ ಫಾರ್ಮಾಟ್ EPFOHO UAN ENG ಹೀಗಿರುತ್ತದೆ.  ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಈ ಮೆಸೇಜ್ ಅನ್ನು ಮೇಲೆ ತಿಳಿಸಿದ ನಂಬರಿಗೆ ಕಳುಹಿಸಿದರೆ, ಇಪಿಎಫ್ ಮಾಹಿತಿಯು ಇಂಗ್ಲೀಷ್ ನಲ್ಲಿ ಸಿಗುತ್ತದೆ. ಈ ಎಸ್‌ಎಂಎಸ್ ಸೇವೆ ಪಂಜಾಬಿ, ಮರಾಠಿ, ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಬಂಗಾಳಿ ಭಾಷೆಗಳಲ್ಲಿಯೂ ಲಭ್ಯವಿದೆ.

ಮಿಸ್ಡ್ ಕಾಲ್ ಮೂಲಕ  : 
ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ  011-22901406 ಈ ನಂಬರಿಗೆ ಮಿಸ್ಡ್ ಕಾಲ್ (Missed call) ಕೊಟ್ಟರೆ, ತಕ್ಷಣ ಇಪಿಎಫ್‌ಒನಿಂದ  ಸಂದೇಶವನ್ನು ಕಳುಹಿಸಲಾಗುತ್ತದೆ. ಈ ಮೆಸೇಜ್ ನಲ್ಲಿ ಪಿಎಫ್ ಖಾತೆಯ ಸಂಪೂರ್ಣ ಮಾಹಿತಿಯನ್ನು ಲಭ್ಯವಾಗುತ್ತದೆ. 

ಉಮಾಂಗ್ ಅಪ್ಲಿಕೇಶನ್ ಮೂಲಕ :
ಇಪಿಎಫ್‌ಒ ಅಪ್ಲಿಕೇಶನ್ ಉಮಾಂಗ್ (Umang) ಮೂಲಕವೂ ಖಾತೆಯ ಬ್ಯಾಲೆನ್ಸ್ ತಿಳಿದುಕೊಳ್ಳಬಹುದು. 
-ಇದಕ್ಕಾಗಿ, ಆಪ್ ನಲ್ಲಿ ಮೊದಲು ಇಪಿಎಫ್‌ಒಗೆ ಹೋಗಿ. 
-ನಂತರ Employee Centric Services ಮೇಲೆ ಕ್ಲಿಕ್ ಮಾಡಿ. 
-ಇದಾದ ನಂತರ View Passbook ಆಯ್ಕೆಮಾಡಿ 
-ಪಾಸ್‌ಬುಕ್ ವೀಕ್ಷಿಸಲು ಯುಎಎನ್‌ನೊಂದಿಗೆ ಲಾಗ್ ಇನ್ ಮಾಡಿ.
- ನಿಮ್ಮ ಬಳಿ ಈ ಅಪ್ಲಿಕೇಶನ್ ಇಲ್ಲದಿದ್ದರೆ ಮೊದಲು ಅದನ್ನು ಡೌನ್‌ಲೋಡ್ ಮಾಡಿ ನೋಂದಾಯಿಸಿ.

ಇದನ್ನೂ ಓದಿ :  UIDAI Aadhaar Alert: ನಿಮ್ಮ ಆಧಾರ್ ಸಂಖ್ಯೆಯಿಂದ ಬ್ಯಾಂಕ್ ಖಾತೆ ಹ್ಯಾಕ್ ಆಗುವ ಅಪಾಯವಿದೆಯೇ? ಯುಐಡಿಎಐ ಹೇಳಿದ್ದೇನು?

ವೆಬ್‌ಸೈಟ್ ಮೂಲಕ : 
EPFOನ  ಅಧಿಕೃತ ವೆಬ್ಸೈಟ್  epfindia.gov.inಗೆ ಹೋಗಿ  ಪಿಎಫ್ ಖಾತೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು.
ಹೊಂ ಪೇಜ್ ನಲ್ಲಿಯೇ ಇಪಿಎಫ್ ಪಾಸ್‌ಬುಕ್ ಪೋರ್ಟಲ್ ನೋಡಬಹುದು. 
ಇಲ್ಲಿ ಯುಎಎನ್ ಸಂಖ್ಯೆ ಮತ್ತು ಪಾಸ್‌ವರ್ಡ್‌ನೊಂದಿಗೆ ಲಾಗ್ ಇನ್ ಮಾಡಿ .
ನಂತರ  Download/View Passbook ಕ್ಲಿಕ್ ಮಾಡಿ. 
ಈಗ ಪಾಸ್ ಬುಕ್ ನಲ್ಲಿ ಬ್ಯಾಲೆನ್ಸ್ ನೋಡಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News