How to surrender LIC policy: ಅವಧಿಗೂ ಮುನ್ನ ಎಲ್‌ಐಸಿ ಪಾಲಿಸಿಯನ್ನು ಸರೆಂಡರ್ ಮಾಡಬೇಕೇ? ಹಾಗಿದ್ದರೆ ಏನು ಮಾಡಬೇಕು ತಿಳಿಯಿರಿ

ಎಲ್ಐಸಿ ದೇಶದ ಅತಿದೊಡ್ಡ ಮತ್ತು ಸರ್ಕಾರಿ ವಿಮಾ ಕಂಪನಿಯಾಗಿದೆ. LIC ತನ್ನ ಗ್ರಾಹಕರಿಗೆ ಪಾಲಿಸಿಯನ್ನು ಸರೆಂಡರ್ ಮಾಡುವ ಸೌಲಭ್ಯವನ್ನೂ ಒದಗಿಸುತ್ತದೆ.  

Written by - Ranjitha R K | Last Updated : Sep 17, 2021, 02:02 PM IST
  • ಎಲ್‌ಐಸಿ ಪಾಲಿಸಿಯನ್ನು ಸರೆಂಡರ್ ಮಾಡುವ ನಿಯಮಗಳು ಇವು
  • ಪಾಲಿಸಿಯನ್ನು ಎರಡು ರೀತಿಯಲ್ಲಿ ಒಪ್ಪಿಸಬಹುದು
  • ಪ್ರೀಮಿಯಂ ಭರಿಸಿದ 3 ವರ್ಷ ಪೂರ್ಣಗೊಂಡ ನಂತರವೇ ಸರೆಂಡರ್ ಮಾಡಬಹುದು
How to surrender LIC policy: ಅವಧಿಗೂ ಮುನ್ನ ಎಲ್‌ಐಸಿ ಪಾಲಿಸಿಯನ್ನು ಸರೆಂಡರ್ ಮಾಡಬೇಕೇ? ಹಾಗಿದ್ದರೆ ಏನು ಮಾಡಬೇಕು ತಿಳಿಯಿರಿ title=
ಎಲ್‌ಐಸಿ ಪಾಲಿಸಿಯನ್ನು ಸರೆಂಡರ್ ಮಾಡುವ ನಿಯಮಗಳು ಇವು (file photo)

ನವದೆಹಲಿ : LIC ಪಾಲಿಸಿಯನ್ನು ಖರೀದಿಸಿದ್ದು, ನಿಮ್ಮ ಪಾಲಿಸಿಯನ್ನು ಸರೆಂಡರ್ ಮಾಡಲು ಬಯಸಿದರೆ, ಈ ಸುದ್ದಿಯು ನಿಮ್ಮ ಉಪಯೋಗಕ್ಕೆ ಬರುತ್ತದೆ. ಅನೇಕ ಜನರು ಜೀವ ವಿಮಾ ನಿಗಮದ ಲಾಭ (Life Insurance Corporation of India)ಮತ್ತು ವೈಶಿಷ್ಟ್ಯಗಳನ್ನು ಸರಿಯಾಗಿ ತಿಳಿದುಕೊಳ್ಳದೆಯೇ  ಖರೀದಿಸುತ್ತಾರೆ. ನಂತರ ಈ ಪಾಲಿಸಿಯಿಂದ ತಮಗೆ ಯಾವುದೇ ಪ್ರಯೋಜನವಿಲ್ಲ ಅಂದುಕೊಂದು ಅರ್ಧದಲ್ಲಿಯೇ  ಕೊನೆಗೊಳಿಸಲು ಬಯಸುತ್ತಾರೆ. ಈ ಸಂದರ್ಭದಲ್ಲಿ ಎಲ್ಐಸಿ ಪಾಲಿಸಿಯನ್ನು ಸರೆಂಡರ್ ಮಾಡುವುದೊಂದೇ ಗ್ರಾಹಕರ ಮುಂದಿರುವ ಆಯ್ಕೆಯಾಗಿರುತ್ತದೆ. 

ನಿಯಮ ಏನು ಗೊತ್ತಾ? :
ಎಲ್ಐಸಿ (LIC) ದೇಶದ ಅತಿದೊಡ್ಡ ಮತ್ತು ಸರ್ಕಾರಿ ವಿಮಾ ಕಂಪನಿಯಾಗಿದೆ. LIC ತನ್ನ ಗ್ರಾಹಕರಿಗೆ ಪಾಲಿಸಿಯನ್ನು ಸರೆಂಡರ್ ಮಾಡುವ ಸೌಲಭ್ಯವನ್ನೂ ಒದಗಿಸುತ್ತದೆ.  ಮುಕ್ತಾಯಕ್ಕೆ ಮುನ್ನ ಪಾಲಿಸಿಯನ್ನು ಸರೆಂಡರ್ ಮಾಡಿದರೆ, ಅದರ ಮೌಲ್ಯ ಕಡಿಮೆಯಾಗುತ್ತದೆ. 3 ವರ್ಷಗಳ ಮೊದಲು ಸರೆಂಡರ್ ಮಾಡಿದರೆ ಯಾವುದೇ ಮೌಲ್ಯವನ್ನು ನೀಡಲಾಗುವುದಿಲ್ಲ. ಪಾಲಿಸಿಯನ್ನು ಸರೆಂಡರ್ (Policy surrender) ಮಾಡಬೇಕಾದರೆ, ಪ್ರೀಮಿಯಂ ಅನ್ನು 3 ವರ್ಷಗಳವರೆಗೆ ಪಾವತಿಸಬೇಕು. 3 ವರ್ಷಗಳವರೆಗೆ ಪ್ರೀಮಿಯಂ ಪಾವತಿಸಿದರೆ, ಮಾತ್ರ ಪಾಲಿಸಿಯನ್ನು ಸರೆಂಡರ್ ಮಾಡಬಹುದು. 

ಇದನ್ನೂ ಓದಿ :  Best Investment idea : ಅಂಚೆ ಕಚೇರಿಯ ಈ 4 ಯೋಜನೆಗಳಲ್ಲಿ ಹೂಡಿಕೆ ಮಾಡಿ ಮಿಲಿಯನೇರ್ ಆಗಿ : ಇಲ್ಲಿದೆ ಸಂಪೂರ್ಣ ಮಾಹಿತಿ!

1. ಗ್ಯಾರಂಟಿ ಸರೆಂಡರ್ ವ್ಯಾಲ್ಯೂ(GSV)
ಇದರ ಅಡಿಯಲ್ಲಿ, ಪಾಲಿಸಿದಾರನು ತನ್ನ ಪಾಲಿಸಿಯನ್ನು 3 ವರ್ಷಗಳನ್ನು ಪೂರ್ಣಗೊಳಿಸಿದ ನಂತರವೇ ಸರೆಂಡರ್ ಮಾಡಬೇಕು. ಅಂದರೆ ಪ್ರೀಮಿಯಂ (Policy premium) ಅನ್ನು 3 ವರ್ಷಗಳವರೆಗೆ ಪಾವತಿಸಬೇಕು. 3 ವರ್ಷಗಳ ನಂತರ ಪಾಲಿಸಿಯನ್ನು ಸರೆಂಡರ್ ಮಾಡಿದರೆ, ಮೊದಲ ವರ್ಷದಲ್ಲಿ ಪಾವತಿಸಿದ ಪ್ರೀಮಿಯಂ ಮತ್ತು ಆಕಸ್ಮಿಕ ಪ್ರಯೋಜನಗಳಿಗಾಗಿ ಪಾವತಿಸಿದ ಪ್ರೀಮಿಯಂಗಳನ್ನು ಹೊರತುಪಡಿಸಿ, ಸರೆಂಡರ್ ಮೌಲ್ಯವು ಪಾವತಿಸಿದ ಪ್ರೀಮಿಯಂನ ಸುಮಾರು 30 ಪ್ರತಿಶತದಷ್ಟು ಇರುತ್ತದೆ. ನೀವು ಎಷ್ಟು ತಡವಾಗಿ ಪಾಲಿಸಿಯನ್ನು ಸರೆಂಡರ್ ಮಾಡುತ್ತಿರೋ ಅಷ್ಟು ಹೆಚ್ಚಿನ ಮೌಲ್ಯ ಸಿಗುತ್ತದೆ.

2.ಸ್ಪೆಷಲ್ ಸರೆಂಡರ್ ವ್ಯಾಲ್ಯೂ:
ಸ್ಪೆಷಲ್ ಸರೆಂಡರ್ ವ್ಯಾಲ್ಯೂವನ್ನು ಪಡೆಯಬೇಕಾದರೆ ಒಂದು ಸೂತ್ರವನ್ನು ಅನುಸರಿಸಬೇಕಾಗುತ್ತದೆ. ಸೂತ್ರವು (ಮೂಲ ವಿಮಾ ಮೊತ್ತ * (ಪಾವತಿಸಿದ ಪ್ರೀಮಿಯಂಗಳ ಸಂಖ್ಯೆ / ಪಾವತಿಸಬೇಕಾದ ಪ್ರೀಮಿಯಂಗಳ ಸಂಖ್ಯೆ) + ಸ್ವೀಕರಿಸಿದ ಒಟ್ಟು ಬೋನಸ್) ಇದು ಸರೆಂಡರ್ ಫ್ಯಾಕ್ಟರ್ ವ್ಯಾಲ್ಯೂ. 

ಇದನ್ನೂ ಓದಿ:  Voter ID Card: ಮನೆಯಲ್ಲಿ ಕುಳಿತು ಆನ್‌ಲೈನ್‌ನಲ್ಲಿ ವೋಟರ್ ಐಡಿ ಪಡೆಯಲು ಈ ರೀತಿ ಅರ್ಜಿ ಸಲ್ಲಿಸಿ

ಸರೆಂಡರ್ ವ್ಯಾಲ್ಯೂ ಎಷ್ಟು ? 
ಜೀವ ವಿಮೆಯಲ್ಲಿ ಪಾಲಿಸಿಯನ್ನು ಸರೆಂಡರ್ ಮಾಡುವ ವೇಳೆ, ಪಾವತಿಸಿದ ಪ್ರೀಮಿಯಂನ ಒಂದು ಭಾಗವನ್ನು ವಾಪಸ್ ಪಡೆಯುತ್ತೀರಿ. ಇದರಲ್ಲಿ ಶುಲ್ಕಗಳನ್ನು ಕಡಿತಗೊಳಿಸಲಾಗುತ್ತದೆ. ಈ ಮೊತ್ತವನ್ನು ಸರೆಂಡರ್ ವ್ಯಾಲ್ಯೂ ಎಂದು ಕರೆಯಲಾಗುತ್ತದೆ.

ಎಲ್ಐಸಿ ಪಾಲಿಸಿ ಸರೆಂಡರ್ ಮಾಡಿದ ಮೇಲೆ ಏನಾಗುತ್ತದೆ ? 
ಒಮ್ಮೆ ಎಲ್ಐಸಿ ಪಾಲಿಸಿಯನ್ನು (LIC Policy) ಸರೆಂಡರ್ ಮಾಡಿದ ನಂತರ, ಜೀವ ವಿಮಾ ರಕ್ಷಣೆಯು ಕೊನೆಗೊಳ್ಳುತ್ತದೆ. ಯಾಕೆಂದರೆ ಎಲ್ಐಸಿ ಪಾಲಿಸಿಯನ್ನು ಒಪ್ಪಿಸುವ ಕುರಿತು ನಿಮ್ಮ ಮತ್ತು ವಿಮಾ ಕಂಪನಿಯ ನಡುವೆ ಒಪ್ಪಂದವಾಗಿರುತ್ತದೆ. ಐಟಿ ಕಾಯ್ದೆಯ (Income tax) ಸೆಕ್ಷನ್ 80 ಸಿ ಅಡಿಯಲ್ಲಿ ನೀವು ತೆರಿಗೆ ಪ್ರಯೋಜನಗಳನ್ನು ಪಡೆಯುವುದು ಕೂಡಾ ನಿಲ್ಲುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News