ಪತ್ನಿಯ ಹೆಸರಿನಲ್ಲಿ PPF ಖಾತೆ ತೆರೆದರೆ ಪ್ರತಿ ತಿಂಗಳು ಲಕ್ಷಕ್ಕಿಂತ ಹೆಚ್ಚು ಆದಾಯ ! ಹೆಚ್ಚು ರಿಟರ್ನ್ ಪಡೆಯಲು ಇದೇ ನೋಡಿ ಸರಿಯಾದ ಟ್ರಿಕ್

Public Provident Fund: ಯಾವುದೇ ವ್ಯಕ್ತಿ ಕನಿಷ್ಠ 500 ರೂಪಾಯಿ ಹೂಡಿಕೆಯೊಂದಿಗೆ ಅಂಚೆ ಕಚೇರಿ ಅಥವಾ ಬ್ಯಾಂಕ್‌ನಲ್ಲಿ PPF ಖಾತೆಯನ್ನು ತೆರೆಯಬಹುದು. ಹೆಂಡತಿಯ ಹೆಸರಿನಲ್ಲಿಯೂ ನೀವು PPF ಖಾತೆಯನ್ನು ತೆರೆಯಬಹುದು.  

Written by - Ranjitha R K | Last Updated : Jan 21, 2025, 05:17 PM IST
  • ಪಿಪಿಎಫ್ ಸರ್ಕಾರವು ನಡೆಸುವ ದೀರ್ಘಾವಧಿಯ ಉಳಿತಾಯ ಯೋಜನೆ
  • ಈ ಯೋಜನೆಯನ್ನು ಭಾರತ ಸರ್ಕಾರವು 1968 ರಲ್ಲಿ ಪ್ರಾರಂಭಿಸಿತು.
  • ಕನಿಷ್ಠ 500 ರೂಪಾಯಿ ಹೂಡಿಕೆಯೊಂದಿಗೆ ಖಾತೆ ತೆರೆಯಬಹುದು
ಪತ್ನಿಯ ಹೆಸರಿನಲ್ಲಿ PPF ಖಾತೆ ತೆರೆದರೆ ಪ್ರತಿ ತಿಂಗಳು ಲಕ್ಷಕ್ಕಿಂತ ಹೆಚ್ಚು ಆದಾಯ ! ಹೆಚ್ಚು ರಿಟರ್ನ್ ಪಡೆಯಲು ಇದೇ ನೋಡಿ ಸರಿಯಾದ ಟ್ರಿಕ್  title=

Public Provident Fund : ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಸರ್ಕಾರವು ನಡೆಸುವ ದೀರ್ಘಾವಧಿಯ ಉಳಿತಾಯ ಯೋಜನೆಯಾಗಿದೆ. ಈ ಯೋಜನೆಯನ್ನು ಭಾರತ ಸರ್ಕಾರವು 1968 ರಲ್ಲಿ ಪ್ರಾರಂಭಿಸಿತು. ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಪ್ರಯೋಜನಗಳ ಜೊತೆಗೆ ಹೂಡಿಕೆದಾರರಿಗೆ ಖಾತರಿಯ ಆದಾಯವನ್ನು ಒದಗಿಸುವುದು ಇದರ ಉದ್ದೇಶವಾಗಿದೆ. ಯಾವುದೇ ವ್ಯಕ್ತಿ ಕನಿಷ್ಠ 500 ರೂಪಾಯಿ ಹೂಡಿಕೆಯೊಂದಿಗೆ ಅಂಚೆ ಕಚೇರಿ ಅಥವಾ ಬ್ಯಾಂಕ್‌ನಲ್ಲಿ PPF ಖಾತೆಯನ್ನು ತೆರೆಯಬಹುದು. ಹೆಂಡತಿಯ ಹೆಸರಿನಲ್ಲಿಯೂ ನೀವು PPF ಖಾತೆಯನ್ನು ತೆರೆಯಬಹುದು. ಇದರಲ್ಲಿ ಹೂಡಿಕೆದಾರರು ಪಿಪಿಎಫ್‌ನಿಂದ ಪ್ರತಿ ತಿಂಗಳು 1,06,828 ರೂಪಾಯಿಗಳ ತೆರಿಗೆ ಮುಕ್ತ ಆದಾಯವನ್ನು ಪಡೆಯಬಹುದು.  

PPF ಎಂದರೇನು?
PPF ಒಂದು ನಿವೃತ್ತಿ ಕೇಂದ್ರೀಕೃತ ಯೋಜನೆಯಾಗಿದ್ದು, ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 80C ಅಡಿಯಲ್ಲಿ ಖಾತರಿಯ ಆದಾಯ ಮತ್ತು ತೆರಿಗೆ ಪ್ರಯೋಜನಗಳನ್ನು ನೀಡುತ್ತದೆ. ಈ ಸಣ್ಣ ಉಳಿತಾಯ ಯೋಜನೆಯಲ್ಲಿ ಯಾರು ಬೇಕಾದರೂ ಹೂಡಿಕೆ ಮಾಡಬಹುದು. ಸಂಬಳ ಪಡೆಯುವ ವರ್ಗ ಅಥವಾ ವ್ಯಾಪಾರಸ್ಥರು ಇದರಲ್ಲಿ ಹೂಡಿಕೆ ಮಾಡಬಹುದು. ಇದರ ಅಡಿಯಲ್ಲಿ,ಆರ್ಥಿಕ ವರ್ಷದಲ್ಲಿ ಕನಿಷ್ಠ 500 ಮತ್ತು ಗರಿಷ್ಠ 1.5 ಲಕ್ಷ ರೂ.ಹೂಡಿಕೆ ಮಾಡಬಹುದು. 

ಇದನ್ನೂ ಓದಿ :ಎಚ್ಚರ… ಮಾರುಕಟ್ಟೆಯಲ್ಲಿ ಹೆಚ್ಚಾದ 500 ರೂಪಾಯಿ ನಕಲಿ ನೋಟುಗಳ ಹಾವಳಿ! ಅಸಲಿ ನೋಟನ್ನು ಪತ್ತೆಹಚ್ಚುವ ಮಾರ್ಗ ತಿಳಿಸಿದ ಆರ್‌ಬಿ‌ಐ

PPF ನ ಮೆಚುರಿಟಿ ಅವಧಿ ಎಷ್ಟು? : 
PPF ನ ಆರಂಭಿಕ ಲಾಕ್-ಇನ್ ಅವಧಿಯು 15 ವರ್ಷಗಳು. 15 ವರ್ಷಗಳ ನಂತರ, ಖಾತೆದಾರರು ತಮ್ಮ ಖಾತೆಯನ್ನು 5 ವರ್ಷಗಳ ಅನಿಯಮಿತ ಬ್ಲಾಕ್‌ಗೆ ವಿಸ್ತರಿಸಬಹುದು. ಯಾವುದೇ ಪಿಪಿಎಫ್ ಖಾತೆದಾರರು ಐದು ವರ್ಷಗಳ ನಂತರ ಹಣಕಾಸು ವರ್ಷದಲ್ಲಿ ಒಮ್ಮೆ ಹಣವನ್ನು  ಹಿಂಪಡೆಯಬಹುದು. ಹಣದ ಅಗತ್ಯವಿದ್ದಲ್ಲಿ, ನಾಲ್ಕನೇ ವರ್ಷದ ಕೊನೆಯಲ್ಲಿ ಅಥವಾ ಹಿಂದಿನ ವರ್ಷದ ಕೊನೆಯಲ್ಲಿ, 50 ಪ್ರತಿಶತದಷ್ಟು ಹಿಂಪಡೆಯಬಹುದು. 

ಪ್ರತಿ ತಿಂಗಳು 1.06 ಲಕ್ಷ ಪಡೆಯುವುದು ಹೇಗೆ?
ಪಿಪಿಎಫ್‌ನಿಂದ ಪ್ರತಿ ತಿಂಗಳು 1,06,828 ರೂ.ಗಳನ್ನು ಪಡೆಯಲು, ಒಬ್ಬರು ಪ್ರತಿ ಹಣಕಾಸು ವರ್ಷದಲ್ಲಿ 1.50 ಲಕ್ಷ ಹೂಡಿಕೆಯನ್ನು ಪ್ರಾರಂಭಿಸಬೇಕು. 15 ವರ್ಷಗಳ ಮೆಚುರಿಟಿ ಅವಧಿಯವರೆಗೆ ಅದನ್ನು ಮುಂದುವರಿಸಬೇಕು. ಬಡ್ಡಿಯ ಗರಿಷ್ಠ ಲಾಭವನ್ನು ಪಡೆಯಲು, ಪ್ರತಿ ಹಣಕಾಸು ವರ್ಷದ ಏಪ್ರಿಲ್ 1 ಮತ್ತು ಏಪ್ರಿಲ್ 5 ರ ನಡುವೆ ಹೂಡಿಕೆ ಮಾಡಬೇಕು. 

15 ವರ್ಷಗಳ ನಂತರ ಮೆಚ್ಯೂರಿಟಿ:
ಪ್ರತಿ ವರ್ಷ 1.5 ಲಕ್ಷ ಹೂಡಿಕೆ ಮಾಡಿದರೆ, 15 ವರ್ಷಗಳಲ್ಲಿ ಒಟ್ಟು 22.50 ಲಕ್ಷ ರೂ. ಹೂಡಿಕೆ ಮಾಡಿದ ಹಾಗೆ ಆಗುತ್ತದೆ. ಈ ಅವಧಿಯಲ್ಲಿ ಸುಮಾರು 18.18 ಲಕ್ಷ ರೂ.ಗಳ ಬಡ್ಡಿ ಹಣಕ್ಕೆ ಸಿಗಲಿದೆ. ಇದರ ಪ್ರಕಾರ ಮೆಚ್ಯೂರಿಟಿ ಮೊತ್ತ 40,68,209 ರೂ. ಹೂಡಿಕೆದಾರರು ಇದರ ಮೇಲೆ ಐದು ವರ್ಷಗಳ ವಿಸ್ತರಣೆಯನ್ನು ತೆಗೆದುಕೊಳ್ಳಬಹುದು.  

ಇದನ್ನೂ ಓದಿ :8ನೇ ವೇತನ ಆಯೋಗದ ಜೊತೆಗೆ ಪಿಂಚಣಿಯಲ್ಲಿಯೂ ಹೊಸ ವ್ಯವಸ್ಥೆ ಜಾರಿ ! ಪಿಂಚಣಿದಾರರಿಗೂ, ಕುಟುಂಬಕ್ಕೂ ಭರ್ಜರಿ ಲಾಭ

20 ಮತ್ತು 25 ವರ್ಷಗಳ ಮುಕ್ತಾಯದ ನಂತರ, ಹೂಡಿಕೆಯ ಮೊತ್ತವು 20 ವರ್ಷಗಳಲ್ಲಿ 30,00,000 ರೂ.ಗೆ ಹೆಚ್ಚಾಗುತ್ತದೆ ಮತ್ತು ಅದರ ಮೇಲೆ 36,58,288 ರೂ.ಗಳ ಬಡ್ಡಿ ಸಿಗುತ್ತದೆ. ಈ ರೀತಿಯಾಗಿ ಮೆಚ್ಯೂರಿಟಿ ಮೊತ್ತವು ಸುಮಾರು 66,58,288 ರೂ. ಆಗುತ್ತದೆ. ಇಲ್ಲಿ ಹೂಡಿಕೆದಾರರು ಐದು ವರ್ಷಗಳ ಮತ್ತೊಂದು ವಿಸ್ತರಣೆಯನ್ನು ತೆಗೆದುಕೊಳ್ಳಬಹುದು. ಅದೇ ರೀತಿ 25 ವರ್ಷಗಳಲ್ಲಿ 37.50 ಲಕ್ಷ ಹೂಡಿಕೆ ಮೊತ್ತದ ಬಡ್ಡಿ 65,58,015 ರೂ. ಆಗುತ್ತದೆ. ಅಂದರೆ ಒಟ್ಟು ಮೆಚ್ಯೂರಿಟಿ ಮೊತ್ತ 1,03,08,015 ರೂ.ಇರುತ್ತದೆ. 

29 ವರ್ಷಗಳ ಕಾಲ ಪಿಪಿಎಫ್‌ನಲ್ಲಿ ಪ್ರತಿ ವರ್ಷ 1.5 ಲಕ್ಷ ರೂ.ಗಳನ್ನು ಹೂಡಿಕೆ ಮಾಡುತ್ತಾ ಬಂದರೆ ಈ ಅವಧಿಯಲ್ಲಿ ಒಟ್ಟು 43.50 ಲಕ್ಷ ರೂ.ಹೂಡಿಕೆಯಾಗುತ್ತದೆ. ಈ ಅವಧಿಯಲ್ಲಿ ಸುಮಾರು 99.26 ಲಕ್ಷ ರೂಪಾಯಿಗಳ ಬಡ್ಡಿಯನ್ನು ಪಡೆಯಬಹುದು. ಅಂದರೆ ನಿಮ್ಮ ಮೆಚ್ಯೂರಿಟಿ ಮೊತ್ತ 1 ಕೋಟಿ 42 ಲಕ್ಷ 76 ಸಾವಿರದ 621 ಆಗಲಿದೆ. ಅದೇ ರೀತಿ 32 ವರ್ಷಗಳಲ್ಲಿ ಒಟ್ಟು ಹೂಡಿಕೆ 48,00,000 ರೂ.ಗೆ ಏರಿಕೆಯಾಗಲಿದ್ದು, ಬಡ್ಡಿ ಸುಮಾರು 1,32,55,534 ರೂ.ಆಗುವುದು.32 ವರ್ಷಗಳ ನಂತರ ನೀವು ಮೆಚ್ಯೂರಿಟಿಯಲ್ಲಿ 1 ಕೋಟಿ 80 ಲಕ್ಷದ 55 ಸಾವಿರದ 534 ರೂ.ಆಗುತ್ತದೆ.  ಇಲ್ಲಿ ನೀವು ನಿಮ್ಮ ಹೂಡಿಕೆಯನ್ನು ನಿಲ್ಲಿಸಬಹುದು.

ಈಗ ನೀವು ಈ ಹಣದ ಮೇಲಿನ ಬಡ್ಡಿಯನ್ನು ಪ್ರತಿ ತಿಂಗಳು ಹಿಂಪಡೆಯಬಹುದು. ನೀವು ಈ ಯೋಜನೆಯನ್ನು 15 ವರ್ಷಗಳ ನಂತರ ವಿಸ್ತರಿಸಿದ್ದರೆ, ಪ್ರತಿ ವರ್ಷಕ್ಕೆ ಒಮ್ಮೆ ಮಾತ್ರ ಬಡ್ಡಿಯನ್ನು ಹಿಂಪಡೆಯಬಹುದು. ಮೆಚ್ಯೂರಿಟಿಯಲ್ಲಿ 1 ಕೋಟಿ 80 ಲಕ್ಷ ರೂಪಾಯಿಗಳನ್ನು ಬ್ಯಾಂಕಿನಲ್ಲಿ ಠೇವಣಿ ಮಾಡಿದರೆ ಬ್ಯಾಂಕ್ ನಿಮಗೆ ವಾರ್ಷಿಕವಾಗಿ 7.1% ಬಡ್ಡಿಯನ್ನು ನೀಡುತ್ತದೆ. ಆಗ ಒಂದು ವರ್ಷದಲ್ಲಿ ಸುಮಾರು 15 ಲಕ್ಷ 4 ಸಾವಿರ ರೂಪಾಯಿಗಳ ಬಡ್ಡಿ ಸಿಗುತ್ತದೆ. ಈ ಬಡ್ಡಿಯನ್ನು 12 ತಿಂಗಳ ಅವಧಿಯಲ್ಲಿ ವಿತರಿಸಿದರೆ ಪ್ರತಿ ತಿಂಗಳು ಸುಮಾರು 1 ಲಕ್ಷ 6 ಸಾವಿರ ರೂ.ನಿಮ್ಮ ಕೈ ಸೇರುತ್ತದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

(ಸೂಚನೆ : ಈ ಎಲ್ಲಾ ಲೆಕ್ಕಾಚಾರಗಳು ಅಂದಾಜುಗಳನ್ನು ಮಾತ್ರ ಆಧರಿಸಿವೆ. ನೀವು ಯಾವುದೇ ಹೂಡಿಕೆ ನಿರ್ಧಾರವನ್ನು ತೆಗೆದುಕೊಳ್ಳಬೇಕಾದ ಖಚಿತವಾದ ಮಾಹಿತಿ ಇದಲ್ಲ. ಯಾವುದೇ ರೀತಿಯ ಹೂಡಿಕೆ ಮಾಡುವ ಮೊದಲು  ತಜ್ಞರನ್ನು ಅಥವಾ ನಿಮ್ಮ ಹಣಕಾಸು ಸಲಹೆಗಾರರನ್ನು ಸಂಪರ್ಕಿಸಿ.) 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News