ಇದೇ ತಿಂಗಳಿನಲ್ಲಿ ರಾಜ್ಯಕ್ಕೆ ಮತ್ತೊಂದು ವಂದೇ ಭಾರತ್ ಎಕ್ಸ್‌ಪ್ರೆಸ್ ! ಬೆಂಗಳೂರಿನಿಂದಲೇ ಓಡಾಟ ನಡೆಸಲಿರುವ ರೈಲು

 ಎರಡು ನಗರಗಳ ನಡುವಿನ 610-ಕಿಮೀ ದೂರವನ್ನು ಸುಮಾರು ಏಳು ಗಂಟೆಗಳಲ್ಲಿ ಕ್ರಮಿಸುತ್ತದೆ ಎಂದು ಹೇಳಲಾಗಿದೆ. ಅಂದರೆ ಇದು ಡುರೊಂಟೊ ಎಕ್ಸ್‌ಪ್ರೆಸ್‌ಗಿಂತ ಎರಡು ಗಂಟೆಗಳ ವೇಗದಲ್ಲಿ ಚಲಿಸುತ್ತದೆ.   

Written by - Ranjitha R K | Last Updated : Aug 4, 2023, 12:25 PM IST
  • ರಾಜ್ಯಕ್ಕೆ ಮತ್ತೊಂದು ವಂದೇ ಭಾರತ ಎಕ್ಸ್ಪ್ರೆಸ್ ರೈಲು
  • ಆಗಸ್ಟ್ ನಿಂದಲೇ ಈ ರೈಲು ಓಡಾಟ ಆರಂಭ
  • ಬೆಂಗಳೂರು ಮತ್ತು ಆಂಧ್ರಪ್ರದೇಶ ನಡುವೆ ಸಂಚಾರ
ಇದೇ ತಿಂಗಳಿನಲ್ಲಿ ರಾಜ್ಯಕ್ಕೆ ಮತ್ತೊಂದು ವಂದೇ ಭಾರತ್ ಎಕ್ಸ್‌ಪ್ರೆಸ್  ! ಬೆಂಗಳೂರಿನಿಂದಲೇ ಓಡಾಟ ನಡೆಸಲಿರುವ ರೈಲು title=

ಬೆಂಗಳೂರು : ಇದೇ ತಿಂಗಳಿನಲ್ಲಿ ರಾಜ್ಯಕ್ಕೆ ಮತ್ತೊಂದು ವಂದೇ ಭಾರತ ಎಕ್ಸ್ಪ್ರೆಸ್ ರೈಲು. ಎರಡು ರಾಜ್ಯಗಳ ಮದ್ಯೆ ಈ ರೈಲು ಓಡಾಟ ನಡೆಸಲಿದೆ. ಮೂಲಗಳ ಪ್ರಕಾರ ಇದೇ ತಿಂಗಳು ಅಂದರೆ ಆಗಸ್ಟ್ ನಿಂದಲೇ ಈ ರೈಲು ಬೆಂಗಳೂರು ಮತ್ತು ಆಂಧ್ರಪ್ರದೇಶ ನಡುವೆ  ಓಡಾಟ ಆರಂಭಿಸಲಿದೆ. ಈ ರೈಲು ಸುಮಾರು ಏಳು ಗಂಟೆಗಳಲ್ಲಿ ಯಶವಂತಪುರದಿಂದ ಕಾಸಿಗುದ ತಲುಪಲು ಕೇವಲ ಏಳು ಗಂಟೆ ಸಾಕು.

ಕಳೆದ ಎರಡು ದಿನಗಳಿಂದ ಕಾಚೀಗುಡ ಮತ್ತು ಧೋನೆ ನಡುವೆ ಈ ರೈಲಿನ ಪ್ರಾಯೋಗಿಕ ಓಡಾಟ ನಡೆಸಲಾಗುತ್ತಿದೆ. ಪೂರ್ಣ ಪ್ರಮಾಣದ ರೈಲು ಸೆಟ್ ಸಿಕ್ಕ ತಕ್ಷಣ ರೈಲು  ಸೇವೆ ಆರಂಭವಾಗಲಿದೆ ಎಂದು ಎಸ್‌ಸಿಆರ್ ಅಧಿಕಾರಿಯೊಬ್ಬರು  ಮಾಧ್ಯಮಗಳಿಗೆ ತಿಳಿಸಿದ್ದಾರೆ. 

ಇದನ್ನೂ ಓದಿ : ಇಂದಿನ ಅಡಿಕೆ ಧಾರಣೆ: ಯಾವ ಮಾರುಕಟ್ಟೆಯಲ್ಲಿ ಎಷ್ಟು ದರ ಇದೆ..?

ನಿಖರವಾದ ಮಾರ್ಗ, ಮತ್ತುಯಾವ ದಿನಾಂಕದಿಂದ ಈ ರೈಲು ಓಡಾಟ ಆರಂಭವಾಗಲಿದೆ ಎನ್ನುವುದು ಇನ್ನು ಕೂಡಾ ದೃಢಪಟ್ಟಿಲ್ಲ. ಈ ರೈಲು 16 ಕೋಚ್‌ಗಳನ್ನು ಹೊಂದಿರರಲಿದ್ದು, ಎರಡು ನಗರಗಳ ನಡುವಿನ 610-ಕಿಮೀ ದೂರವನ್ನು ಸುಮಾರು ಏಳು ಗಂಟೆಗಳಲ್ಲಿ ಕ್ರಮಿಸುತ್ತದೆ ಎಂದು ಹೇಳಲಾಗಿದೆ. ಅಂದರೆ ಇದು ಡುರೊಂಟೊ ಎಕ್ಸ್‌ಪ್ರೆಸ್‌ಗಿಂತ ಎರಡು ಗಂಟೆಗಳ ವೇಗದಲ್ಲಿ ಚಲಿಸುತ್ತದೆ. 

ಜೂನ್ 27, 2023 ರಂದು, ಬೆಂಗಳೂರಿನ ಎರಡನೇ ವಂದೇ ಭಾರತ್ ರೈಲು (ಬೆಂಗಳೂರು-ಹುಬ್ಬಳ್ಳಿ-ಧಾರವಾಡ) ಉದ್ಘಾಟನೆಯಾಯಿತು. ಬೆಂಗಳೂರಿನ ಮೂಲಕ ಚಲಿಸುವ ಮೊದಲ  ವಂದೇ ಭಾರತ್  ಚೆನ್ನೈ-ಮೈಸೂರು ರೈಲನ್ನು ನವೆಂಬರ್ 11, 2022 ರಂದು ಉದ್ಘಾಟಿಸಲಾಯಿತು. ಹೈದರಾಬಾದ್‌ ನಲ್ಲಿ  ಸಿಕಂದರಾಬಾದ್-ವಿಶಾಖಪಟ್ಟಣಂ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಜನವರಿ 15, 2023 ರಂದು ಪ್ರಾರಂಭವಾದರೆ ತಿರುಪತಿಗೆ ಏಪ್ರಿಲ್ 8, 2023 ರಂದು ಈ ರೈಲು ಸೇವೆ ಸಿಕ್ಕಿತ್ತು. 

ಇದನ್ನೂ ಓದಿ : ಮಹಿಳೆಯರ ಕಲ್ಯಾಣಕ್ಕಾಗಿಯೇ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳಿವು! ನೀವೂ ಲಾಭ ಪಡೆಯಬಹುದು

ಈ ಸೆಮಿ-ಹೈ-ಸ್ಪೀಡ್ ರೈಲುಗಳು ಆಧುನಿಕ ಸೌಕರ್ಯಗಳಾದ ಇನ್ಫೋಟೈನ್‌ಮೆಂಟ್ ಸಿಸ್ಟಂಗಳು, ಸಿಸಿಟಿವಿ ಕ್ಯಾಮೆರಾಗಳು, ಆರಾಮದಾಯಕ ಆಸನಗಳು, ಪ್ಯಾಂಟ್ರಿ ಕಾರ್, ಸ್ವಯಂಚಾಲಿತ ಬಾಗಿಲುಗಳು, ಬಯೋ-ವ್ಯಾಕ್ಯೂಮ್ ಟಾಯ್ಲೆಟ್‌ಗಳು ಮತ್ತು ವೈ-ಫೈಗಳನ್ನು ಹೊಂದಿವೆ. ಈ ರೈಲುಗಳು ಅಲ್ಯೂಮಿನಿಯಂನಿಂದ ಮಾಡಲ್ಪಟ್ಟ ಬಾಡಿಯನ್ನು  ಹೊಂದಿದ್ದು ಗರಿಷ್ಠ 180 kmph ವೇಗದಲ್ಲಿ ಚಲಿಸಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News