Share Price: ಒಂದು ಕಾಲದಲ್ಲಿ 800 ರೂ. ಇದ್ದ ಈ ಷೇರು ಈಗ ಕೇವಲ 2 ರೂ.ಗೆ ತಲುಪಿದೆ!

ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರಿಗೆ ಬಂಪರ್ ರಿಟರ್ನ್ಸ್ ನೀಡಿದ ಹಲವು ಷೇರುಗಳಿವೆ. ಆದಾಗ್ಯೂ, ಹೂಡಿಕೆದಾರರ ಸಂಪೂರ್ಣ ಹಣವನ್ನೇ  ಮುಳುಗಿಸಿದ ಷೇರುಗಳ ಬಗ್ಗೆ ತಿಳಿದುಕೊಳ್ಳುವುದ ಮುಖ್ಯ.

Written by - Puttaraj K Alur | Last Updated : Jul 31, 2022, 04:48 PM IST
  • ಪಾತಾಳ ಗರಡಿ ತಲುಪಿದ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಕಮ್ಯುನಿಕೇಷನ್ಸ್ ಷೇರು
  • 2008ರ ಆರಂಭದ ಮೊದಲು ಉತ್ತುಂಗ ತಲುಪಿದ್ದ ಷೇರು ಜನರ ಆಕರ್ಷಣೆಯಾಗಿತ್ತು
  • 820.80 ರೂ. ಸಾರ್ವಕಾಲಿಕ ಗರಿಷ್ಟ ಮಟ್ಟದಿಂದ 2.20 ರೂ.ಗೆ ಕುಸಿತ ಕಂಡ ಷೇರು ದರ
Share Price: ಒಂದು ಕಾಲದಲ್ಲಿ 800 ರೂ. ಇದ್ದ ಈ ಷೇರು ಈಗ ಕೇವಲ 2 ರೂ.ಗೆ ತಲುಪಿದೆ! title=
ಪಾತಾಳ ಗರಡಿ ತಲುಪಿದ ರಿಲಯನ್ಸ್ ಕಮ್ಯುನಿಕೇಷನ್ಸ್ ಷೇರು

ನವದೆಹಲಿ: ಷೇರು ಮಾರುಕಟ್ಟೆಯಲ್ಲಿ ಏರಿಳಿತ ಸಾಮಾನ್ಯ. ಇಲ್ಲಿ ಕೆಲವು ಹೂಡಿಕೆದಾರರು ನಷ್ಟ ಅನುಭವಿಸಿದರೆ, ಮತ್ತೆ ಕೆಲವರು ಭರ್ಜರಿ ಲಾಭ ಮಾಡಿಕೊಳ್ಳುತ್ತಾರೆ. ದೀರ್ಘಾವಧಿಯಲ್ಲಿ ಹೂಡಿಕೆದಾರರಿಗೆ ಬಂಪರ್ ಲಾಭ ನೀಡಿದ ಅನೇಕ ಷೇರುಗಳಿವೆ. ಈ ಷೇರುಗಳಿಂದ ಹೂಡಿಕೆದಾರರು ಕಡಿಮೆ ಸಮಯದಲ್ಲಿ ಹೆಚ್ಚು ಹಣ ಗಳಿಸಿದ್ದಾರೆ. ಆದಾಗ್ಯೂ, ಹೂಡಿಕೆದಾರರ ಸಂಪೂರ್ಣ ಹಣವನ್ನೇ ಮುಳುಗಿಸಿರುವ ಷೇರುಗಳು ಸಹ ಇವೆ. ಇಂತಹ ಷೇರುಗಳು ಹೂಡಿಕೆದಾರರಿಗೆ ದುಃಸ್ವಪ್ನವಾಗಿ ಕಾಡಿವೆ. ಈ ಪೈಕಿ ಟೆಲಿಕಾಂ ವಲಯದ ಷೇರುಗಳೂ ಇವೆ.

ರಿಲಯನ್ಸ್ ಕಮ್ಯೂನಿಕೇಷನ್ಸ್ ಷೇರು

ಒಂದು ಕಾಲದಲ್ಲಿ ಜನರ ಕಣ್ಣಿಗೆ ಮಣ್ಣೆರಚುತ್ತಿದ್ದ ಹಲವು ಷೇರುಗಳು ಷೇರುಪೇಟೆಯಲ್ಲಿದ್ದವು. ಬಹುಪಾಲು ಜನರು ಆ ಕಂಪನಿಗಳ ಷೇರುಗಳನ್ನು ಕಣ್ಣುಮುಚ್ಚಿ ಖರೀದಿಸುತ್ತಿದ್ದರು. ಆದರೆ ಇಂದು ಅದೇ ಷೇರುಗಳು ಹೂಡಿಕೆದಾರರ ಸಂಪೂರ್ಣ ಹಣವನ್ನೇ ಮುಳಿಸಿವೆ. ಈ ಷೇರುಗಳನ್ನು ಖರೀದಿಸಿದ ಹೂಡಿಕೆದಾರರು ಇಂದು ಬೀದಿಗೆ ಬಂದಿದ್ದಾರೆ. ಲಾಭ ಆಸೆಗೆ ಕಣ್ಣುಮುಚ್ಚಿ ಹೂಡಿಕೆ ಮಾಡಿದ ಜನರಿಗೆ ಈ ಷೇರುಗಳು ಕಣ್ಣೀರು ತರಿಸಿವೆ. ಈ ಪೈಕಿ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಕಮ್ಯುನಿಕೇಷನ್ಸ್ ಕೂಡ ಒಂದು.

ಇದನ್ನೂ ಓದಿ: Pulsar NS160 ಬೈಕ್ ಗೆ ಭಾರಿ ಪೈಪೋಟಿ ನೀಡಲು ಬಿಡುಗಡೆಯಾಗಿದೆ ಹೀರೋ ಕಂಪನಿಯ ಈ ಹೊಸ ಬೈಕ್

ಉತ್ತುಂಗದಲ್ಲಿದ್ದ ಷೇರು

ರಿಲಯನ್ಸ್ ಕಮ್ಯುನಿಕೇಷನ್ಸ್ ಅಂದರೆ RCom ಅನಿಲ್ ಅಂಬಾನಿಯವರ ಕಂಪನಿ. 2008ರ ಆರಂಭದ ಮೊದಲು ಈ ಸ್ಟಾಕ್‌ನಲ್ಲಿ ಉತ್ತುಂಗ ತಲುಪಿತ್ತು. ಜನರು ಈ ಕಂಪನಿಯ ಷೇರುಗಳನ್ನು ಮನಬಂದಂತೆ ಖರೀದಿಸುತ್ತಿದ್ದರು. ಜನವರಿ 10, 2008ರಂದು ಆರ್‌ಕಾಮ್‌ನ ಷೇರುಗಳು ಸಾರ್ವಕಾಲಿಕ ಗರಿಷ್ಠ ಮಟ್ಟ 820.80 ರೂ. ತಲುಪಿತ್ತು.   

ಬೀದಿಗೆ ಬಿದ್ದ ಹೂಡಿಕೆದಾರರು!

ಅಂದು ಉತ್ತುಂಗ ತಲುಪಿದ್ದ ಈ ಷೇರು ಅನಿಲ್ ಅಂಬಾನಿ ದಿವಾಳಿಯಾಗುತ್ತಿದ್ದಂತೆಯೇ ಪಾತಾಳ ಗರಡಿ ತಲುಪಿತು. ನಿರಂತರವಾಗಿ ಕುಸಿಯುತ್ತಲೇ ಬಂದ ಈ ಷೇರು ಇಂದು ಕೇವಲ 2.20 ರೂ.ಗೆ ಕುಸಿತ ಕಂಡಿದೆ. ಕೇವಲ 14 ವರ್ಷಗಳಲ್ಲಿ ಆರ್‌ಕಾಮ್ ಷೇರು ಹೂಡಿಕೆದಾರರ ಸಂಪೂರ್ಣ ಹಣವನ್ನೇ ಮುಳುಗಿಸಿದೆ. 820.80 ರೂ.ನಿಂದ ಇಂದು 2.20 ರೂ.ಗೆ ಕುಸಿತ ಕಾಣುವ ಮೂಲಕ ಈ ಷೇರು ಅನೇಕ ಹೂಡಿಕೆದಾರರಿಗೆ ದೊಡ್ಡ ನಷ್ಟವನ್ನುಂಟು ಮಾಡಿದೆ. ಇದರಲ್ಲಿ ಹೂಡಿಕೆ ಮಾಡಿದ ಜನರು ಕೈಕೈ ಹಿಸುಕಿಕೊಳ್ಳುವಂತಾಗಿದೆ.

ಇದನ್ನೂ ಓದಿ: Paperless Banking: ಬ್ಯಾಂಕ್‌ಗಳಲ್ಲಿ ‘ಪೇಪರ್’ ಬಳಕೆ ಬಂದ್, ‘ಇ-ರಶೀದಿ ನೀಡುವಂತೆ RBI ಆದೇಶ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News