SBI ಗ್ರಾಹಕರಿಗೊಂದು ಸಂತಸದ ಸುದ್ದಿ, ಕಾರ್ ಹಾಗೂ ಗೋಲ್ಡ್ ಲೋನ್ ಮೇಲೆ ಸಿಗುತ್ತಿದೆ ಈ ಅದ್ಭುತ ಕೊಡುಗೆ

SBI Car Loan and Gold Loan: ಭಾರತ ಸರ್ಕಾರವು (Government Of India) ಸ್ವಾತಂತ್ರ್ಯದ 75 ನೇ ವರ್ಷವನ್ನು 'ಅಮೃತ್ ಮಹೋತ್ಸವ'ವಾಗಿ ಆಚರಿಸುತ್ತಿದೆ. ಈ ವಿಶೇಷ ಸಂದರ್ಭವನ್ನು ಗಮನದಲ್ಲಿಟ್ಟುಕೊಂಡು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಕಾರು ಸಾಲ (Car Loan)ಮತ್ತು ಚಿನ್ನದ ಸಾಲದ (Gold Loan) ಮೇಲೆ ವಿಶೇಷ ಕೊಡುಗೆಯನ್ನು ನೀಡುತ್ತಿದೆ. ಈ ಕೊಡುಗೆಯಲ್ಲಿ ಏನೆಲ್ಲಾ ಲಾಭ ಸಿಗುತ್ತಿದೆ ತಿಳಿದುಕೊಳ್ಳೋಣ ಬನ್ನಿ.

Written by - Nitin Tabib | Last Updated : Aug 16, 2021, 02:51 PM IST
  • ಹಬ್ಬದ ಋತುವಿನಲ್ಲಿ ತನ್ನ ಗ್ರಾಹಕರಿಗೆ ಭಾರಿ ಕೊಡುಗೆಗಳನ್ನು ಪ್ರಕಟಿಸಿದ SBI
  • ಕಾರ್ ಲೋನ್ ಮೇಲಿನ ಪ್ರೊಸೆಸಿಂಗ್ ಶುಲ್ಕವನ್ನು ಕೂಡ ರದ್ದುಗೊಳಿಸಿದ ಬ್ಯಾಂಕ್.
  • ಚಿನ್ನದ ಸಾಲದ ಮೇಲಿನ ಬಡ್ಡಿ ದರದಲ್ಲಿ 75 ಬೇಸಿಕ್ ಪಾಯಿಂಟ್ ಕಡಿತ.
SBI ಗ್ರಾಹಕರಿಗೊಂದು ಸಂತಸದ ಸುದ್ದಿ, ಕಾರ್ ಹಾಗೂ ಗೋಲ್ಡ್ ಲೋನ್ ಮೇಲೆ ಸಿಗುತ್ತಿದೆ ಈ ಅದ್ಭುತ ಕೊಡುಗೆ title=
SBI Car Loan and Gold Loan (File Photo)

SBI Car Loan and Gold Loan: ಭಾರತ ಸರ್ಕಾರವು (Government Of India) ಸ್ವಾತಂತ್ರ್ಯದ 75 ನೇ ವರ್ಷವನ್ನು 'ಅಮೃತ್ ಮಹೋತ್ಸವ'ವಾಗಿ ಆಚರಿಸುತ್ತಿದೆ. ಈ ವಿಶೇಷ ಸಂದರ್ಭವನ್ನು ಗಮನದಲ್ಲಿಟ್ಟುಕೊಂಡು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಕಾರು ಸಾಲ (Car Loan)ಮತ್ತು ಚಿನ್ನದ ಸಾಲದ (Gold Loan) ಮೇಲೆ ವಿಶೇಷ ಕೊಡುಗೆಯನ್ನು ನೀಡುತ್ತಿದೆ. ಈ ಕೊಡುಗೆಯಲ್ಲಿ ಏನೆಲ್ಲಾ ಲಾಭ ಸಿಗುತ್ತಿದೆ ತಿಳಿದುಕೊಳ್ಳೋಣ ಬನ್ನಿ.

ಕಾರ್ ಲೋನ್ ಮೇಲೆ ಸಿಗುತ್ತಿದೆ ಈ ರಿಯಾಯ್ತಿ
ಇತ್ತೀಚೆಗಷ್ಟೇ ದೇಶದ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಹೋಮ್ ಲೋನ್ ಮೇಲೆ ಪ್ರೊಸೆಸಿಂಗ್ ಶುಲ್ಕವನ್ನು ರದ್ದುಗೊಳಿಸಿತ್ತು. ಹೀಗಿರುವಾಗ ಇದೀಗ ಬ್ಯಾಂಕ್ ಕಾರ್ ಲೋನ್ ಮೇಲೂ ಕೂಡ ಪ್ರೊಸೆಸಿಂಗ್ ಶುಲ್ಕವನ್ನು ರದ್ದುಗೊಳಿಸುವುದಾಗಿ ಘೋಷಿಸಿದೆ. ಗ್ರಾಹಕರು ತಮ್ಮ ಕಾರ್ ಲೋನ್ ನ ಶೇ. 90ರಷ್ಟು ಆನ್ ರೋಡ್ ಫೈನಾನ್ಸ್ ಲಾಭ ಪಡೆಯಬಹುದಾಗಿದೆ. ಇದಲ್ಲದೆ ಒಂದು ವೇಳೆ ನೀವು SBI YONO ಆಪ್ ಬಳಸಿ ಲೋನ್ ಪಡೆದರೆ, ನಿಮಗೆ 25 BPS ಹೆಚ್ಚುವರಿ ರಿಯಾಯ್ತಿ ಪಡೆಯಬಹುದು. ಹೀಗಿರುವಾಗ ಯಾವುದೇ SBI YONO APP ಬಳಕೆದಾರರು ಆಪ್ ಮೂಲಕ ಸಾಲ ಪಡೆದು ಹೊಸ ಕಾರ್ ಖರೀದಿಸಿದರೆ, ಅವರು ವಾರ್ಷಿಕವಾಗಿ ಶೇ.7.5ರಷ್ಟು ಬಡ್ಡಿಯನ್ನು ಪಾವತಿಸಬೇಕಾಗಲಿದೆ.

ಇದನ್ನೂ ಓದಿ-ಸ್ವಾತಂತ್ರ್ಯ ದಿನದಂದು SBI ಗ್ರಾಹಕರಿಗೆ ಸಿಹಿ ಸುದ್ದಿ : Home Lone ಗೆ ಭರ್ಜರಿ ಆಫರ್, ಹೇಗೆ ಅರ್ಜಿ ಸಲ್ಲಿಸಬೇಕು?

ಚಿನ್ನದ ಸಾಲದ ಮೇಲೆ ಏನು ಕೊಡುಗೆ ಸಿಗುತ್ತಿದೆ
ಒಂದು ವೇಳೆ ಯಾವುದೇ SBI ಗ್ರಾಹಕರು ಚಿನ್ನದ ಸ್ಸಾಲವನ್ನು ಪಡೆದರೆ, ಅವರಿಗೆ 75 ಬೇಸ್ ಪಾಯಿಂಟ್ ಗಳ ರಿಯಾಯಿತಿ ಸಿಗಲಿದೆ. ಬ್ಯಾಂಕ್ ನ ಈ ಕಡಿತದ ಬಳಿಕ ಇದೀಗ ಚಿನ್ನದ ಸಾಲಕ್ಕೆ ಗ್ರಾಹಕರು ವಾರ್ಷಿಕ ಶೇ.7.5ರಷ್ಟು ಬಡ್ಡಿ ಪಾವತಿಸಬೇಕಾಗಲಿದೆ. ಇನ್ನೊಂದೆಡೆ ಯೋನೋ ಆಪ್ ಬಳಕೆದಾರರಿಗೆ ಪ್ರೊಸೆಸಿಂಗ್ ಶುಲ್ಕದಿಂದ ರಿಯಾಯಿತಿ ನೀಡಲಾಗಿದೆ.

ಇದನ್ನೂ ಓದಿ-SBI ಬ್ಯಾಂಕ್ ಖಾತೆಯಲ್ಲಿ ಮಿನಿಮಂ ಬ್ಯಾಲೆನ್ಸ್ ಎಷ್ಟಿರಬೇಕು?

ಬ್ಯಾಂಕ್ ಹೇಳಿದ್ದೇನು?
ಈ ಕುರಿತು ಹೇಳಿಕೆ ನೀಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ರಿಟೇಲ್ ಹಾಗೂ ಡಿಜಿಟಲ್ ಬ್ಯಾಂಕಿಂಗ್ ಸೆಕ್ಟರ್ MD ಸಿ. ಎಸ್. ಶೆಟ್ಟಿ, 'ಹಬ್ಬರ ಋತು ಆರಂಭವಾಗುವುದಕ್ಕೂ ಮುನ್ನ ನಾವು ನಮ್ಮ ಗ್ರಾಹಕರಿಗೆ ಚಿಲ್ಲರೆ ಸಾಲದ ಮೇಲೆ ಹಲವು ರೀತಿಯ ಕೊಡುಗೆಗಳನ್ನು ಜಾರಿಗೊಳಿಸಿದ್ದೇವೆ. ಈ ಕೊಡುಗೆಗಳ ಮೂಲಕ ನಮ್ಮ ಗ್ರಾಹಕರು ಉತ್ತಮ ರೀತಿಯಲ್ಲಿ ಉಳಿತಾಯ ಮಾಡುವ ಭರವಸೆ ಇದೆ ಮತ್ತು ಅವರ ಹಬ್ಬದ ಆನಂದ ದ್ವಿಗುಣಗೊಳ್ಳಲಿದೆ. ಇದಲ್ಲದೆ ನಾವು ಎಂದಿಗೂ ಕೂಡ ಗ್ರಾಹಕರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ನಮ್ಮ ಯೋಜನೆಗಳನ್ನು ರೂಪಿಸುತ್ತೇವೆ' ಎಂದು ಹೇಳಿದ್ದಾರೆ. 

ಇದನ್ನೂ ಓದಿ-SBI ಚಿನ್ನದ ಸಾಲದ ಮೇಲೆ ಭರ್ಜರಿ ಆಫರ್ : YONO SBI ಮೂಲಕ ಪಡೆಯುವುದು ಹೇಗೆ? 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News