ನಿಮ್ಮ ಫೋನಿನಲ್ಲಿ ಇದೊಂದನ್ನು ಸೆಟ್ ಮಾಡಿಟ್ಟುಕೊಳ್ಳಿ, ಇಂಟರ್ನೆಟ್ ಸ್ಲೋ ಆಗುವುದೇ ಇಲ್ಲ !

Boost Internet Speed: ಕಳಪೆ ನೆಟ್‌ವರ್ಕ್‌ನಿಂದಾಗಿ, ವೆಬ್ ಪುಟಗಳನ್ನು ತೆರೆಯಲು ಸಾಧ್ಯವಾಗುವುದಿಲ್ಲ. ಅಥವಾ ಹೆಚ್ಚು ಸಮಯ ಹಿಡಿಯುತ್ತದೆ. ವೀಡಿಯೊಗಳು ಬಫರ್ ಆಗುತ್ತವೆ, ಡೌನ್‌ಲೋಡ್ ವೇಗದ ಮೇಲೆ ಪರಿಣಾಮ ಬೀರುತ್ತದೆ.  

Written by - Ranjitha R K | Last Updated : Dec 19, 2024, 11:51 AM IST
  • ಕೆಲವೊಮ್ಮೆ ಸ್ಮಾರ್ಟ್‌ಫೋನ್‌ನಲ್ಲಿ ಇಂಟರ್ನೆಟ್ ಬಹಳ ನಿಧಾನವಾಗುತ್ತದೆ.
  • ನಮ್ಮ ಅನೇಕ ಕೆಲಸ ಕಾರ್ಯಗಳು ಕೂಡಾ ನಿಧಾನವಾಗತೊಡಗುತ್ತದೆ.
  • ವೀಡಿಯೊಗಳು ಬಫರ್ ಆಗುತ್ತವೆ, ಡೌನ್‌ಲೋಡ್ ವೇಗದ ಮೇಲೆ ಪರಿಣಾಮ ಬೀರುತ್ತದೆ.
ನಿಮ್ಮ ಫೋನಿನಲ್ಲಿ ಇದೊಂದನ್ನು ಸೆಟ್ ಮಾಡಿಟ್ಟುಕೊಳ್ಳಿ, ಇಂಟರ್ನೆಟ್  ಸ್ಲೋ ಆಗುವುದೇ ಇಲ್ಲ !  title=

Boost Internet Speed : ಕೆಲವೊಮ್ಮೆ  ಸ್ಮಾರ್ಟ್‌ಫೋನ್‌ನಲ್ಲಿ ಇಂಟರ್ನೆಟ್ ಬಹಳ ನಿಧಾನವಾಗುತ್ತದೆ. ಇದರಿಂದ ನಮ್ಮ ಅನೇಕ ಕೆಲಸ ಕಾರ್ಯಗಳು ಕೂಡಾ ನಿಧಾನವಾಗತೊಡಗುತ್ತದೆ. ಇದಕ್ಕೆ ಮುಖ್ಯ ಕಾರಣ ದುರ್ಬಲ ನೆಟ್ವರ್ಕ್ ಸಂಪರ್ಕ. ಕಳಪೆ ನೆಟ್‌ವರ್ಕ್‌ನಿಂದಾಗಿ, ವೆಬ್ ಪುಟಗಳನ್ನು ತೆರೆಯಲು ಸಾಧ್ಯವಾಗುವುದಿಲ್ಲ. ಅಥವಾ ಹೆಚ್ಚು ಸಮಯ ಹಿಡಿಯುತ್ತದೆ. ವೀಡಿಯೊಗಳು ಬಫರ್ ಆಗುತ್ತವೆ, ಡೌನ್‌ಲೋಡ್ ವೇಗದ ಮೇಲೆ ಪರಿಣಾಮ ಬೀರುತ್ತದೆ. ನೀವು ಸಹ ಈ ಸಮಸ್ಯೆಯಿಂದ ತೊಂದರೆಗೀಡಾಗಿದ್ದರೆ, ಚಿಂತಿಸಬೇಡಿ. ಈ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸುವುದು ಹೇಗೆ ಎನ್ನುವುದರ ಬಗ್ಗೆ ನಾವಿಲ್ಲಿ ಮಾಹಿತಿ ನೀಡುತ್ತೇವೆ.ಈ ವಿಧಾನಗಳನ್ನು ಅನುಸರಿಸುವ ಮೂಲಕ ಸ್ಮಾರ್ಟ್‌ಫೋನ್‌ನಲ್ಲಿ ಇಂಟರ್ನೆಟ್ ವೇಗವನ್ನು ಹೆಚ್ಚಿಸಬಹುದು.

ಸಿಮ್ ಸ್ಲಾಟ್‌ನ ಜಾಗವನ್ನು ಪರಿಶೀಲಿಸಿ : 
ಸಾಮಾನ್ಯವಾಗಿ ನಾವು SIM ಕಾರ್ಡ್ ಅನ್ನು ಸ್ಲಾಟ್ ನಲ್ಲಿ ಸರಿಯಾಗಿ ಸೇರಿಸುತ್ತೇವೆ.  ಆದರೆ ಕೆಲವೊಮ್ಮೆ SIM ಕಾರ್ಡ್ ಅದರ ಸ್ಥಳದಿಂದ ಸ್ವಲ್ಪ ಆಚೀಚೆ ಹೋಗುತ್ತದೆ.  ಈ ಕಾರಣದಿಂದಾಗಿ ಫೋನ್ ಸಿಮ್ ಕಾರ್ಡ್ ಅನ್ನು ಸರಿಯಾಗಿ ರೀಡ್ ಮಾಡುವುದು ಸಾಧ್ಯವಾಗುವುದಿಲ್ಲ. ಇಂಟರ್ನೆಟ್ ಸಂಪರ್ಕ ನಿಧಾನವಾಗುತ್ತದೆ. ಉತ್ತಮ ಇಂಟರ್ನೆಟ್ ಸಂಪರ್ಕ ಬೇಕಾದರೆ ಸಿಮ್ ಕಾರ್ಡ್ ಸ್ಲಾಟ್‌ನಲ್ಲಿ ಸರಿಯಾಗಿ ಕೂತಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. 

ಇದನ್ನೂ ಓದಿ : ಇದಕ್ಕಿಂತ ಹೆಚ್ಚು ಸಿಮ್ ಕಾರ್ಡ್ ನಿಮ್ಮ ಬಳಿ ಇದ್ರೆ ಭಾರೀ ದಂಡ, ಜೈಲು ಶಿಕ್ಷೆಗೂ ಗುರಿಯಾಗಬಹುದು...!

SIM 1 ಸ್ಲಾಟ್ ನಲ್ಲಿಯೇ SIM ಹಾಕಿ : 
ಸಾಮಾನ್ಯವಾಗಿ ನಾವು ಯಾವುದಾದರೊಂದು ಸ್ಲಾಟ್ ನಲ್ಲಿ ಸಿಮ್ ಕಾರ್ಡ್ ಹಾಕುತ್ತಾರೆ. ಆದರೆ ಹೀಗೆ ಮಾಡುವುದು ತಪ್ಪು. ಈ ರೀತಿ ಮಾಡುವುದರಿಂದ   ಇಂಟರ್ನೆಟ್ ವೇಗ ಮತ್ತು ಉತ್ತಮ ಕರೆ ಗುಣಮಟ್ಟವನ್ನು ಒದಗಿಸುವುದು ಸಾಧ್ಯವಿಲ್ಲ. ಹಾಗಾಗಿ SIM ಕಾರ್ಡ್ ಅನ್ನು ಯಾವಾಗಲೂ SIM ಸ್ಲಾಟ್ 1ರಲ್ಲಿಯೇ ಹಾಕಬೇಕು. SIM ಸ್ಲಾಟ್ 1 ಅನ್ನು ಪ್ರಾಥಮಿಕ ಸ್ಲಾಟ್ ಎಂದು ಪರಿಗಣಿಸಲಾಗುತ್ತದೆ. ಈ ಸ್ಲಾಟ್ ನಲ್ಲಿ ಸಿಮ್ ಹಾಕಿದರೆ ಉತ್ತಮ ನೆಟ್‌ವರ್ಕ್  ಸಿಗ್ನಲ್ ಸಿಗುತ್ತದೆ. 

ನೀವು ಇನ್ನೂ ಸಿಮ್ ಸ್ಲಾಟ್ ಬಗ್ಗೆ ಯೋಚಿಸದಿದ್ದರೆ, ಇಂದೇ ಅದನ್ನು ಬದಲಾಯಿಸಲು ಪ್ರಯತ್ನಿಸಿ. ಸಿಮ್ ಸ್ಲಾಟ್ 1 ರಲ್ಲಿ ಸಿಮ್ ಅನ್ನು ಹಾಕಿದರೆ  ಇಂಟರ್ನೆಟ್ ಸಂಪರ್ಕವು ಗಮನಾರ್ಹವಾಗಿ ಸುಧಾರಿಸುತ್ತದೆ.ಸ್ವಲ್ಪ ಸಮಯದಲ್ಲಿಯೇ ಅದರ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ.  

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News