Relief To Telecom Sector: Telecom ಕ್ಷೇತ್ರದಲ್ಲಿ ಶೇ.100 ರಷ್ಟು FDIಗೆ ಅನುಮೋದನೆ ನೀಡಿದ Modi Cabinet

Relief To Telecom Sector: ದೀರ್ಘಕಾಲದಿಂದ ಎಜಿಆರ್ (AGR) ಬಾಕಿಯ ಬಿಕ್ಕಟ್ಟನ್ನು ಎದುರಿಸುತ್ತಿರುವ ಟೆಲಿಕಾಂ ಉದ್ಯಮಕ್ಕಾಗಿ (Telecom Industry) ಸರ್ಕಾರವು ಹಲವಾರು ಪ್ರಮುಖ ಘೋಷಣೆಗಳನ್ನು ಮಾಡಿದೆ.  ಇದರಿಂದ ಟೆಲಿಕಾಂ ಆಪರೇಟರ್ ಹಾಗೂ ಗ್ರಾಹಕರಿಗೆ ಭಾರಿ ಅನುಕೂಲವಾಗುವ ನಿರೀಕ್ಷೆಯಿದೆ. 

Written by - Nitin Tabib | Last Updated : Sep 15, 2021, 05:15 PM IST

    ದೀರ್ಘಕಾಲದಿಂದ AGR ಬಾಕಿಯ ಬಿಕ್ಕಟ್ಟನ್ನು ಎದುರಿಸುತ್ತಿರುವ ಟೆಲಿಕಾಂ ಉದ್ಯಮಕ್ಕಾಗಿ ಸರ್ಕಾರವು ಹಲವಾರು ಪ್ರಮುಖ ಘೋಷಣೆಗಳನ್ನು ಮಾಡಿದೆ.

    ಟೆಲಿಕಾಂ ವಲಯದಲ್ಲಿ ಶೇ.100 ರಷ್ಟು FDIಗೆ ಅನುಮೋದನೆ ನೀಡಿದ ಕೇಂದ್ರ ಸಚಿವ ಸಂಪುಟ.

    ಭಾರತದ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಆಟೋ, ಆಟೋ ಕಾಂಪೊನೆಂಟ್ ಮತ್ತು ಡ್ರೋನ್ ಉದ್ಯಮಕ್ಕಾಗಿ 26,058 ಕೋಟಿ ರೂ.ಗಳ PLI ಯೋಜನೆಗೆ ಅನುಮೋದನೆ.

Relief To Telecom Sector: Telecom ಕ್ಷೇತ್ರದಲ್ಲಿ ಶೇ.100 ರಷ್ಟು FDIಗೆ ಅನುಮೋದನೆ ನೀಡಿದ Modi Cabinet title=
Relief To Telecom Sector (File Photo)

Relief To Telecom Sector: ದೀರ್ಘಕಾಲದಿಂದ ಎಜಿಆರ್ (AGR) ಬಾಕಿಯ ಬಿಕ್ಕಟ್ಟನ್ನು ಎದುರಿಸುತ್ತಿರುವ ಟೆಲಿಕಾಂ ಉದ್ಯಮಕ್ಕಾಗಿ (Telecom Industry) ಸರ್ಕಾರವು ಹಲವಾರು ಪ್ರಮುಖ ಘೋಷಣೆಗಳನ್ನು ಮಾಡಿದೆ.  ಇದರಿಂದ ಟೆಲಿಕಾಂ ಆಪರೇಟರ್ ಹಾಗೂ ಗ್ರಾಹಕರಿಗೆ ಭಾರಿ ಅನುಕೂಲವಾಗುವ ನಿರೀಕ್ಷೆಯಿದೆ. ಟೆಲಿಕಾಂ ಉದ್ಯಮದ ಹಿತದೃಷ್ಟಿಯಿಂದ ಕೇಂದ್ರ ಕ್ಯಾಬಿನೆಟ್ (Modi Cabinet) ಯಾವ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ ಎಂಬುದನ್ನು ಒಂದೊಂದಾಗಿ ತಿಳಿದುಕೊಳ್ಳೋಣ ಬನ್ನಿ

AGR ಕುರಿತು ಯಾವ ನಿರ್ಧಾರ ಕೈಗೊಳ್ಳಲಾಗಿದೆ: ದೀರ್ಘಕಾಲದಿಂದ, ಟೆಲಿಕಾಂ ವಲಯವು Adjusted Gross Revenue (AGR) ಕುರಿತು ಪ್ರಮುಖ ಸರ್ಕಾರದ ವತಿಯಿಂದ ಪ್ರಮುಖ ನಿರ್ಧಾರಕ್ಕಾಗಿ ಕಾಯುತ್ತಿತ್ತು. ಆದರೆ, ಇದೀಗ ಸರ್ಕಾರ ಎಜಿಆರ್ ಬಾಕಿಗಳ (AGR Balance) ವ್ಯಾಖ್ಯೆಯನ್ನು  ಬದಲಾಯಿಸಲಾಗುವುದು ಎಂದು ಹೇಳಿದೆ. ಟೆಲಿಕಾಂ ಕಂಪನಿಗಳು ಕೂಡ ಈ ಬೇಡಿಕೆ ಇಟ್ಟಿದ್ದವು. ಇದೇ ವೇಳೆ, ಟೆಲಿಕಾಂ ಕಂಪನಿಗಳಿಗೆ ಮಾಸಿಕ ಬಡ್ಡಿ ದರವನ್ನು ಇದೀಗ ವಾರ್ಷಿಕ ಮಾಡಲಾಗಿದೆ. ಇದಲ್ಲದೇ, ದಂಡದ ಪಾವತಿಯ ಮೇಲೆ ಪರಿಹಾರವನ್ನೂ ಸಹ ಘೋಷಿಸಲಾಗಿದೆ.

ಇದರ ಜೊತೆಗೆ,  ಟೆಲಿಕಾಂ ಆಪರೇಟರ್‌ಗಳು ಬಾಕಿಗಳ ಮೇಲೆ ಮೊರಟೋರಿಯಂ ತೆಗೆದುಕೊಳ್ಳಲು ಸಾಧ್ಯವಾಗಲಿದೆ. ಇದನ್ನು 4 ವರ್ಷಗಳ ಅವಧಿಗೆ ನೀಡಲಾಗುತ್ತದೆ. ಈ ಆಯ್ಕೆಯನ್ನು ಆಯ್ದುಕೊಂಡ ಟೆಲಿಕಾಂ ಆಪರೇಟರ್‌ಗಳು ಸರ್ಕಾರಕ್ಕೆ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಎಜಿಆರ್‌ನಿಂದಾಗಿ ವೊಡಾಫೋನ್-ಐಡಿಯಾ ಮತ್ತು ಏರ್‌ಟೆಲ್ ಮೇಲೆ ದೊಡ್ಡ ಆರ್ಥಿಕ ಹೊರೆ ಬಿದ್ದಿತ್ತು ಎಂಬುದು ಇಲ್ಲಿ ಉಲ್ಲೇಖನೀಯ.  ಈ ಕಾರಣದಿಂದಾಗಿ ಕಂಪನಿಗಳು ತುಂಬಾ ಬಿಕ್ಕಟ್ಟನ್ನು ಎದುರಿಸುತ್ತಿದ್ದವು. ಇದರ ವಿರುದ್ಧ ಕಂಪನಿಗಳು ನ್ಯಾಯಾಲಯದ ಮೊರೆ ಹೋಗಿದ್ದವು.

ಪ್ರಮುಖಾಂಶಗಳು
>> ಟೆಲಿಕಾಂ ಕ್ಷೇತ್ರದಲ್ಲಿ ಆಟೋಮ್ಯಾಟಿಕ್ ರೂಟ್ ಮೂಲಕ ಶೇ.100 FDIಗೆ ಅವಕಾಶ ಕಲ್ಪಿಸಲಾಗಿದೆ ಎಂದು ಐಟಿ ಸಚಿವ ಅಶ್ವಿನಿ ವೈಷ್ಣವ್ (IT Minister Ashwin Vaishnav) ಹೇಳಿದ್ದಾರೆ.
>> ಇದಲ್ಲದೇ, ಟೆಲಿಕಾಂ ವಲಯದಲ್ಲಿ, ಇದೀಗ ಡಿಜಿಟಲ್ ರೂಪದಲ್ಲಿ ಗ್ರಾಹಕರ ಪರಿಶೀಲನೆ (KYC) ನಡೆಯಲಿದೆ. ಇದುವರೆಗೆ ಈ ಕಾರ್ಯಕ್ಕೆ  ದಾಖಲೆಗಳನ್ನು ಸಲ್ಲಿಸಬೇಕಾಗಿತ್ತು, ಆದರೆ ಸರ್ಕಾರದ ಈ ನಿರ್ಧಾರದಿಂದ, ಗ್ರಾಹಕರು ಇದೀಗ ಯಾವುದೇ ದಾಖಲೆಯ ಹಾರ್ಡ್‌ಕಾಪಿ ಇಲ್ಲದೆ ಪರಿಶೀಲನೆಯನ್ನು ಮಾಡಬಹುದಾಗಿದೆ. Candidate Application Form (CAF) ಅನ್ನು ದತಾಂಶದ ಡಿಜಿಟಲ್ ಸಂಗ್ರಹಣೆಯೊಂದಿಗೆ ಬದಲಾಯಿಸಲಾಗುವುದು ಎಂದು ಐಟಿ ಸಚಿವರು ಮಾಹಿತಿ ನೀಡಿದ್ದಾರೆ. 
>> ಇದರ ಹೊರತಾಗಿ, ಪ್ರಿಪೇಯ್ಡ್‌ನಿಂದ ಪೋಸ್ಟ್‌ಪೇಯ್ಡ್‌ಗೆ ಹೋಗುವಾಗ ಗ್ರಾಹಕರಿಗೆ ಮತ್ತೆ ಕೆವೈಸಿ ನೀಡುವ ಅಗತ್ಯವಿಲ್ಲ.
>> ಇದರ ಜೊತೆಗೆ Tower ಸ್ಥಾಪನೆಯ ನಿಯಮಗಳು ಸಹ ಬದಲಾಗಿವೆ. ಇನ್ಮುಂದೆ ಈ ಕೆಲಸವನ್ನು ಸ್ವಯಂ ಘೋಷಣೆಯ (Self Declaration) ಆಧಾರದ ಮೇಲೆ ಮಾಡಬಹುದು.
>> ಸ್ಪೆಕ್ಟ್ರಮ್ ಹರಾಜನ್ನು ಸಾಮಾನ್ಯವಾಗಿ ಪ್ರತಿ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದಲ್ಲಿ ನಡೆಸಲಾಗುವುದು.
>> ಭವಿಷ್ಯದ ಹರಾಜಾಗುವ ಸ್ಪೆಕ್ಟ್ರಮ್ ಅವಧಿಯನ್ನು 20 ರಿಂದ 30 ವರ್ಷಗಳಿಗೆ ಹೆಚ್ಚಿಸಲಾಗಿದೆ, ಭವಿಷ್ಯದಲ್ಲಿ ಸ್ಪೆಕ್ಟ್ರಮ್ ಪಡೆಯಲು, 10 ವರ್ಷಗಳ ನಂತರ ಸ್ಪೆಕ್ಟ್ರಮ್ ಸರೆಂಡರ್ ಗೆ ಅವಕಾಶ ನೀಡಲಾಗುವುದು.

ಇದನ್ನೂ ಓದಿ-PM Awas Yojana ಯ ಸಮಸ್ಯೆಗಳ ಬಗ್ಗೆ ದೂರು ಸಲ್ಲಿಸುವುದು ಹೇಗೆ ಗೊತ್ತಾ? ಇಲ್ಲಿದೆ ಸಂಪೂರ್ಣ ಡಿಟೈಲ್

Auto Sectorಗೆ ಸಿಕ್ಕಿದ್ದೇನು?
ಭಾರತದ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಆಟೋ, ಆಟೋ ಕಾಂಪೊನೆಂಟ್ ಮತ್ತು ಡ್ರೋನ್ ಉದ್ಯಮಕ್ಕಾಗಿ 26,058 ಕೋಟಿ ರೂ.ಗಳ ಉತ್ಪಾದನೆ ಆಧಾರಿತ ಪ್ರೋತ್ಸಾಹಕ (Production Linked Incentive Scheme) ಯೋಜನೆಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ. PLI ಯೋಜನೆಯು (PLI Scheme) ಭಾರತದಲ್ಲಿ ಸುಧಾರಿತ ಆಟೋಮೋಟಿವ್ ತಂತ್ರಜ್ಞಾನದ ಜಾಗತಿಕ ಪೂರೈಕೆ ಸರಪಳಿಯ ಅಭಿವೃದ್ಧಿಯನ್ನುಉತ್ತೇಜಿಸಲಿದೆ. ಈ ಹೆಜ್ಜೆಯಿಂದ 7.6 ಲಕ್ಷಕ್ಕೂ ಅಧಿಕ ಜನರಿಗೆ ಹೆಚ್ಚುವರಿ ಉದ್ಯೋಗಾವಕಾಶ ಒದಗಿಸುವ ನಿರೀಕ್ಷೆ ಹೊಂದಲಾಗಿದೆ.

ಇದನ್ನೂ ಓದಿ-Coronavirus: ಇನ್ನೂ ಎಷ್ಟು ದಿನ ಇರುತ್ತೆ ಈ ಸಾಂಕ್ರಾಮಿಕ ರೋಗ? ಕಳವಳಕಾರಿ ವಿಷಯ ಹೇಳಿದ WHO

ಇದನ್ನೂ ಓದಿ-IPL 2021 2nd Phase: ಖಾಲಿ ಸ್ಟೇಡಿಯಂಗಳಲ್ಲಿ ನಡೆಯಲ್ಲ ಪಂದ್ಯಗಳು, ಟಿಕೆಟ್ ಹೇಗೆ ಬುಕ್ ಮಾಡಬೇಕು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News