Home Loan Repo Rate: ಗೃಹ ಸಾಲದ ಮೇಲಿನ ಬಡ್ಡಿ ಹೆಚ್ಚಿಸಿದ ಈ ಎರಡು ಬ್ಯಾಂಕ್ ಗಳು.. !

Home Loan Repo Rate: ಇನ್ನು ಹೋಮ್ ಲೋನ್ ತೆಗೆದುಕೊಳ್ಳುವುದು ದುಬಾರಿಯಾಗಿದೆ. ದೇಶದ ಅತಿದೊಡ್ಡ ಗೃಹ ಸಾಲ ಒದಗಿಸುವ ಸಂಸ್ಥೆಯಾಗಿರುವ ಎಚ್‌ಡಿಎಫ್‌ಸಿ ಲಿಮಿಟೆಡ್ ತನ್ನ ಚಿಲ್ಲರೆ ಪ್ರೈಮ್ ಲ್ಯಾಂಡಿಂಗ್ ದರವನ್ನು ಅರ್ಧ ಶೇಕಡಾ ಹೆಚ್ಚಿಸಿದೆ. 

Written by - Ranjitha R K | Last Updated : Jun 10, 2022, 08:26 AM IST
  • ಬುಧವಾರ ರೆಪೋ ದರ ಹೆಚ್ಚಿಸಿದ್ದ ರಿಸರ್ವ್ ಬ್ಯಾಂಕ್
  • ತಿಂಗಳಿನಲ್ಲಿ ನಾಲ್ಕನೇ ಬಾರಿಗೆ ಬಡ್ಡಿದರ ಹೆಚ್ಚಿಸಿದ HDFC ಲಿಮಿಟೆಡ್
  • ಈ 4 ಬ್ಯಾಂಕ್‌ಗಳು ಕೂಡ ರೆಪೋ ದರವನ್ನು ಹೆಚ್ಚಿಸಿವೆ
Home Loan Repo Rate: ಗೃಹ ಸಾಲದ ಮೇಲಿನ ಬಡ್ಡಿ ಹೆಚ್ಚಿಸಿದ ಈ ಎರಡು ಬ್ಯಾಂಕ್ ಗಳು.. !  title=
Home Loan Repo Rate (file photo)

ನವದೆಹಲಿ : Home Loan Repo Rate : HDFC ಲಿಮಿಟೆಡ್ ದೇಶದ ಅತಿದೊಡ್ಡ ಗೃಹ ಸಾಲ ನೀಡುವ ಸಂಸ್ಥೆಯಾಗಿದೆ. ತನ್ನ ರಿಟೇಲ್ ಪ್ರೈಮ್ ಲ್ಯಾಂಡಿಂಗ್ ದರವನ್ನು ಅರ್ಧ ಪ್ರತಿಶತದಷ್ಟು ಹೆಚ್ಚಿಸಿದೆ. ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಕೂಡ ತನ್ನ ರೆಪೋ ದರ ಆಧಾರಿತ ಬಡ್ಡಿ ದರವನ್ನು ಹೆಚ್ಚಿಸಿದೆ.

ಬುಧವಾರ ರೆಪೋ ದರ ಹೆಚ್ಚಿಸಿದ್ದ ರಿಸರ್ವ್ ಬ್ಯಾಂಕ್  : 
ಭಾರತೀಯ ರಿಸರ್ವ್ ಬ್ಯಾಂಕ್ ಬುಧವಾರ ರೆಪೋ ದರವನ್ನು ಶೇಕಡಾ 0.50 ರಷ್ಟು ಹೆಚ್ಚಿಸಿದೆ. ಇದಾದ ನಂತರ ಇತರ ಹಣಕಾಸು ಕಂಪನಿಗಳು ಸಹ ಬಡ್ಡಿದರಗಳನ್ನು ಹೆಚ್ಚಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದವು. HDFC  ಲಿಮಿಟೆಡ್ ಗುರುವಾರ, ಷೇರು ಮಾರುಕಟ್ಟೆಗೆ ಮಾಹಿತಿಯನ್ನು ಕಳುಹಿಸುವ ಮೂಲಕ, ಗೃಹ ಸಾಲಗಳ ರಿಟೇಲ್  ಪ್ರೈಮ್ ಸಾಲದ ದರವನ್ನು ಶೇಕಡಾ 0.50 ರಷ್ಟು ಹೆಚ್ಚಿಸಿರುವುದಾಗಿ ತಿಳಿಸಿದೆ. ಈ ಏರಿಕೆ ದರ ಇಂದಿನಿಂದ  ಅನ್ವಯವಾಗಲಿದೆ. 

ಇದನ್ನೂ ಓದಿ : Gold Price Today : ದಿನೇ ದಿನೇ ದುಬಾರಿಯಾಗುತ್ತಿದೆ ಚಿನ್ನ ! ಬೆಳ್ಳಿ ಬೆಲೆಯಲ್ಲೂ ಕೊಂಚ ಏರಿಕೆ

ಒಂದು ತಿಂಗಳಿನಲ್ಲಿ ನಾಲ್ಕನೇ ಬಾರಿಗೆ ಬಡ್ಡಿದರ ಹೆಚ್ಚಿಸಿದ HDFC ಲಿಮಿಟೆಡ್  :
ವರದಿಯ ಪ್ರಕಾರ, ಇದು ಸೇರಿದರೆ ಕಳೆದ ಒಂದು ತಿಂಗಳಲ್ಲಿ ನಾಲ್ಕನೇ ಬಾರಿ, HDFC Ltd.ತನ್ನ ಗೃಹ ಸಾಲದ ದರಗಳನ್ನು ಹೆಚ್ಚಿಸಿದೆ. ಕಂಪನಿಯು ಗೃಹ ಸಾಲವನ್ನು ಶೇಕಡಾ ಅರ್ಧದಷ್ಟು 50 ಬೇಸಿಸ್ ಪಾಯಿಂಟ್‌ಗಳಿಂದ ಹೆಚ್ಚಿಸಿದೆ ಎಂದು ಹೇಳಿಕೆ ನೀಡಿದೆ. ಈ ಹಿಂದೆ ಮೇ 2, ಮೇ 9 ಮತ್ತು ಜೂನ್ 1 ರಂದು ಕೂಡ ಬಡ್ಡಿದರಗಳನ್ನು ಹೆಚ್ಚಿಸಲಾಗಿತ್ತು. 

ಈ 4 ಬ್ಯಾಂಕ್‌ಗಳು ಕೂಡ ರೆಪೋ ದರವನ್ನು ಹೆಚ್ಚಿಸಿವೆ : 
ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ರೆಪೊ ಆಧಾರಿತ ಸಾಲದ ದರವನ್ನು  7.75ರಷ್ಟು ಹೆಚ್ಚಿಸಿದೆ. ಈ ಹೆಚ್ಚಳ ಕೂಡಾ ಇಂದಿನಿಂದ ಅನ್ವಯವಾಗುತ್ತದೆ. HDFC ಲಿ. ಮತ್ತು IOB ಗಿಂತ ಮೊದಲು, ಇಂಡಿಯನ್ ಬ್ಯಾಂಕ್, PNB ಮತ್ತು ಬ್ಯಾಂಕ್ ಆಫ್ ಇಂಡಿಯಾ ಬುಧವಾರ, ರೆಪೊ ದರವನ್ನು ಅರ್ಧದಷ್ಟು ಹೆಚ್ಚಿಸುವುದಾಗಿ ಘೋಷಿಸಿವೆ. 

ಇದನ್ನೂ ಓದಿ : ಜಿಯೋ ಗ್ರಾಹಕರಿಗೆ ಶಾಕ್: ಪ್ಲಾನ್ ಬೆಲೆಯಲ್ಲಿ 150 ರೂ. ಹೆಚ್ಚಳ!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News