Petrol Price Today : ಹೊಸ ಪೆಟ್ರೋಲ್ - ಡೀಸೆಲ್ ದರ ಬಿಡುಗಡೆ ಮಾಡಿದ ತೈಲ ಕಂಪನಿಗಳು : ಇಂದಿನ ಬೆಲೆ ಎಷ್ಟು?

ಕಳೆದ ಹಲವು ತಿಂಗಳುಗಳಿಂದ ದೇಶದ ಹಲವು ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ ಇನ್ನೂ 100 ರೂ. ಹತ್ತಿರದಲ್ಲಿದೆ. ದೇಶದಲ್ಲಿ ತೈಲ ಬೆಲೆ ಇನ್ನೂ ಜನಸಾಮಾನ್ಯರ ಜೇಬಿನ ಮೇಲೆ ಪರಿಣಾಮ ಬೀರುತ್ತಿದೆ.

Written by - Channabasava A Kashinakunti | Last Updated : Feb 8, 2022, 08:14 AM IST
  • ಸರ್ಕಾರಿ ತೈಲ ಕಂಪನಿಗಳು ಇಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಬಿಡುಗಡೆ
  • ಇಂದಿಗೂ ಬೆಲೆ ಸ್ಥಿರವಾಗಿ ಉಳಿದ ಪೆಟ್ರೋಲ್ - ಡೀಸೆಲ್ ಬೆಲೆ
  • ದೇಶದಲ್ಲಿ ತೈಲ ಬೆಲೆ ಇನ್ನೂ ಜನಸಾಮಾನ್ಯರ ಜೇಬಿನ ಮೇಲೆ ಪರಿಣಾಮ ಬೀರುತ್ತಿದೆ.
 Petrol Price Today : ಹೊಸ ಪೆಟ್ರೋಲ್ - ಡೀಸೆಲ್ ದರ ಬಿಡುಗಡೆ ಮಾಡಿದ ತೈಲ ಕಂಪನಿಗಳು : ಇಂದಿನ ಬೆಲೆ ಎಷ್ಟು? title=

ನವದೆಹಲಿ : ಸರ್ಕಾರಿ ತೈಲ ಕಂಪನಿಗಳು ಇಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಬಿಡುಗಡೆ ಮಾಡಿದ್ದೂ, ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. ಇಂದಿಗೂ ಬೆಲೆ ಸ್ಥಿರವಾಗಿ ಉಳಿದಿವೆ. ಕಳೆದ ಹಲವು ತಿಂಗಳುಗಳಿಂದ ದೇಶದ ಹಲವು ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ ಇನ್ನೂ 100 ರೂ. ಹತ್ತಿರದಲ್ಲಿದೆ. ದೇಶದಲ್ಲಿ ತೈಲ ಬೆಲೆ ಇನ್ನೂ ಜನಸಾಮಾನ್ಯರ ಜೇಬಿನ ಮೇಲೆ ಪರಿಣಾಮ ಬೀರುತ್ತಿದೆ.

ದೆಹಲಿಯಲ್ಲಿ ಪೆಟ್ರೋಲ್ ಬೆಲೆ(Petrol Price) 95.41 ರೂ, ಡೀಸೆಲ್ ಬೆಲೆ ಲೀಟರ್‌ಗೆ 86.67 ರೂ. ಮುಂಬೈನಲ್ಲಿ ಪೆಟ್ರೋಲ್ ಬೆಲೆ 109.98 ರೂ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 94.14 ರೂ. ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ 104.67 ರೂ, ಡೀಸೆಲ್ ಬೆಲೆ ಲೀಟರ್‌ಗೆ 89.79 ರೂ. ಅದೇ ಸಮಯದಲ್ಲಿ, ಚೆನ್ನೈನಲ್ಲೂ ಪೆಟ್ರೋಲ್ ಲೀಟರ್‌ಗೆ 101.40 ರೂ ಮತ್ತು ಡೀಸೆಲ್ ಲೀಟರ್‌ಗೆ 91.43 ರೂ.

ಇದನ್ನೂ ಓದಿ : Salary Account: ನೀವು ಸಂಬಳ ಖಾತೆಯನ್ನು ಹೊಂದಿದ್ದರೆ ಈ ವಿಷಯಗಳನ್ನು ನೆನಪಿನಲ್ಲಿಡಿ

ಈ ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ ಇನ್ನೂ 100 ರೂ.

ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ(Karnataka), ಒಡಿಶಾ, ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನಲ್ಲಿ ಪೆಟ್ರೋಲ್ ಬೆಲೆ 100 ರೂ.ನಲ್ಲಿ ನಡೆಯುತ್ತಿದೆ. ಮುಂಬೈನಲ್ಲಿ ಪೆಟ್ರೋಲ್ ಬೆಲೆ ಅತ್ಯಧಿಕವಾಗಿದೆ.

ನಿಮ್ಮ ನಗರದಲ್ಲಿ ಬೆಲೆ SMS ಮೂಲಕ ತಿಳಿಯಿರಿ

ಎಸ್ ಎಂಎಸ್ ಮೂಲಕವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ(Petrol Diesel price)ಯನ್ನು ತಿಳಿಯಬಹುದು. ಇಂಡಿಯನ್ ಆಯಿಲ್ ವೆಬ್‌ಸೈಟ್‌ಗೆ ಹೋಗುವ ಮೂಲಕ, ನೀವು RSP ಮತ್ತು ನಿಮ್ಮ ಸಿಟಿ ಕೋಡ್ ಅನ್ನು ಬರೆಯಬೇಕು ಮತ್ತು ಅದನ್ನು 9224992249 ಸಂಖ್ಯೆಗೆ sms ಕಳುಹಿಸಬೇಕು. ಪ್ರತಿ ನಗರದ ಪಿನ್ ಕೋಡ್ ವಿಭಿನ್ನವಾಗಿರುತ್ತದೆ, ನೀವು IOCL ವೆಬ್‌ಸೈಟ್‌ನಿಂದ ಪಡೆಯಬಹುದು.

ಇದನ್ನೂ ಓದಿ : ಬ್ಯಾಂಕ್ ಗ್ರಾಹಕರಿಗೆ ಸಿಹಿ ಸುದ್ದಿ : Savings Account ಬಡ್ಡಿದರ ಹೆಚ್ಚಿಸಿದ ಈ ಬ್ಯಾಂಕ್‌ಗಳು!

ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗುತ್ತದೆ. ಹೊಸ ದರಗಳು ಬೆಳಗ್ಗೆ 6 ಗಂಟೆಯಿಂದಲೇ ಅನ್ವಯವಾಗಲಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕ, ಡೀಲರ್ ಕಮಿಷನ್ ಮತ್ತು ಇತರ ವಸ್ತುಗಳನ್ನು ಸೇರಿಸಿದ ನಂತರ, ಅದರ ಬೆಲೆ ಬಹುತೇಕ ದ್ವಿಗುಣಗೊಳ್ಳುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು  Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News