New Car Launch: ಮಾರುತಿ ಸುಜುಕಿ ಬರುವ ಆಗಸ್ಟ್ 18ರಂದು ತನ್ನ ಮೂರನೇ ತಲೆಮಾರಿನ ಆಲ್ಟೊ ಕೆ10 ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಇದಕ್ಕಾಗಿ ಕಂಪನಿ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಅಷ್ಟೇ ಅಲ್ಲ ಕೇವಲ 11 ಸಾವಿರ ರೂ.ಗಳಿಗೆ ಈ ಹ್ಯಾಚ್ ಬ್ಯಾಕ್ ಕಾರಿನ ಬುಕ್ಕಿಂಗ್ ಅನ್ನು ಕೂಡ ಕಂಪನಿ ಆರಂಭಿಸಿದೆ. ಮಾರುತಿ ಸುಜುಕಿ ಕಂಪನಿಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಅಥವಾ ನಿಮ್ಮ ಹತ್ತಿರದಲ್ಲಿರುವ ಮಾರುತಿ ಸುಜುಕಿ ಷೋರೂಮ್ ಗೆ ಭೇಟಿ ನೀಡುವ ಮೂಲಕ ನೀವು ಈ ಹೊಸ ಕಾರನ್ನು ಬುಕ್ ಮಾಡಬಹುದು.
ವೈಶಿಷ್ಟ್ಯಗಳು
ಮಾರುತಿ ಸುಜುಕಿ ಇತ್ತೀಚೆಗೆ ತನ್ನ ಹೊಸ ತಲೆಮಾರಿನ ಆಲ್ಟೊ ಕೆ10 ಕಾರಿನ ಕೆಲವು ಟೀಸರ್‌ಗಳನ್ನು ಬಿಡುಗಡೆ ಮಾಡಿದೆ. ಇದರ ಹೊರ ಮತ್ತು ಒಳಭಾಗದ ಫೋಟೋಗಳು ಈಗಾಗಲೇ ಅಂತರ್ಜಾಲದಲ್ಲಿ ಸೋರಿಕೆಯಾಗಿವೆ. ವಿನ್ಯಾಸದ ವಿಷಯದಲ್ಲಿ, ಹೊಸ ಆಲ್ಟೊ ಕೆ10 ದೊಡ್ಡ ರೇಡಿಯೇಟರ್ ಗ್ರಿಲ್, ಎತ್ತರಿಸಿದ ಬಾನೆಟ್, ಸಂಯೋಜಿತ ಟರ್ನ್ ಸಿಗ್ನಲ್‌ಗಳೊಂದಿಗೆ ರೌಂಡ್ ಹೆಡ್‌ಲೈಟ್‌ಗಳು ಮತ್ತು ಚೌಕಾಕಾರದ ಟೈಲ್‌ಲೈಟ್‌ಗಳನ್ನು ಹೊಂದಿದೆ.
ಇದನ್ನೂ ಓದಿ-Rakesh Jhunjhunwala: ಷೇರುಪೇಟೆ ಅಷ್ಟೇ ಅಲ್ಲ ಈ ವಿಷಯಗಳಲ್ಲಿಯೂ ಕೂಡ 'ಬಿಗ್ ಬುಲ್' ಆಗಿದ್ದ ರಾಕೇಶ್ ಝುನ್ಝುನ್ವಾಲಾ
ಸೋರಿಕೆಯಾದ ಚಿತ್ರಗಳ ಪ್ರಕಾರ, ಆಲ್ಟೊ ಕೆ10 ಮುಂಭಾಗದ ಬಂಪರ್‌ನಲ್ಲಿ ಡೇಟೈಮ್ ರನ್ನಿಂಗ್ ಲೈಟ್‌ಗಳನ್ನು ಪಡೆಯುತ್ತದೆ, ಅಧಿಕೃತ ಟೀಸರ್ ಫೋಟೋದಲ್ಲಿ DRL ಗಳನ್ನು ತೋರಿಸಲಾಗಿಲ್ಲ. ಈ ಹೊಸ ಹ್ಯಾಚ್‌ಬ್ಯಾಕ್ ಕಾರನ್ನು ಹಾರ್ಟೆಕ್ಟ್ ಪ್ಲಾಟ್‌ಫಾರ್ಮ್‌ನಲ್ಲಿ ಅಭಿವೃದ್ಧಿಪಡಿಸಲಾಗಿದೆ. ಮಾರುತಿ ಸುಜುಕಿ ಆಲ್ಟೊ ಕೆ10 ಒಳಭಾಗವು ಸಂಪೂರ್ಣ ಕಪ್ಪು ಟೋನ್‌ನೊಂದಿಗೆ ಬರುವ ಸಾಧ್ಯತೆ ಇದೆ. ಫೋಟೋದಲ್ಲಿನ ಡ್ಯಾಶ್‌ಬೋರ್ಡ್‌ನಲ್ಲಿ ವಿಂಡೋ ನಿಯಂತ್ರಣಗಳು, ಹಸ್ತಚಾಲಿತವಾಗಿ-ಹೊಂದಾಣಿಕೆ ಮಾಡಬಹುದಾದ ಬಾಹ್ಯ ಕನ್ನಡಿಗಳು ಮತ್ತು ಹವಾನಿಯಂತ್ರಣ ಸ್ವಿಚ್‌ಗಳು ಸಹ ಗೋಚರಿಸುತ್ತಿವೆ. ಇದಲ್ಲದೆ, ಮಾರುತಿ ಹೊಸ ಆಲ್ಟೊದಲ್ಲಿ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಸಹ ನೀಡುವ ಸಾಧ್ಯತೆ ಇದೆ.
ಇದನ್ನೂ ಓದಿ-Edible Oil Price: ದೇಶದ ಶ್ರೀಸಾಮಾನ್ಯರಿಗೊಂದು ಸಂತಸದ ಸುದ್ದಿ
ಇಂಜಿನ್ ಸಾಮರ್ಥ್ಯ
ನೆಕ್ಸ್ಟ್ ಜೇನ್ ಮಾರುತಿ ಸುಜುಕಿ ಆಲ್ಟೊ K10 ಕಾರು S-ಪ್ರೆಸ್ಸೊದ K10C 1.0-ಲೀಟರ್, ಇನ್‌ಲೈನ್-ಮೂರು, ಐದು-ಸ್ಪೀಡ್ ಮ್ಯಾನುವಲ್ ಅಥವಾ AMT ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾದ ನ್ಯಾಚ್ಯುರಲ್ ಎಪ್ಸಿರೇಟೆಡ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಣಕ್ಕೆ ಒಳಗಾಗಲಿದೆ. ಈ ಮೋಟಾರ್ 66bhp ಪವರ್ ಮತ್ತು 89Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಬಿಡುಗಡೆಯ ಬಳಿಕ, ಮಾರುತಿ ಕಂಪನಿಯ ಈ ಹೊಸ ಆಲ್ಟೊ ಕೆ10, ರೆನಾಲ್ಟ್ ಕ್ವಿಡ್‌ಗೆ ತೀವ್ರ ಪೈಪೋಟಿ ನೀಡಲಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.