Bajaj Triumph Scrambler 400X-Triumph ಸ್ಪೀಡ್ ಮಾರುಕಟ್ಟೆಗೆ ಬಿಡುಗಡೆ, ಬೆಲೆ, ವೈಶಿಷ್ಟ್ಯ ಹಾಗೂ ಮೈಲೆಜ್ ವಿವರ ಇಲ್ಲಿದೆ

New Bikes 2023: ಸ್ಟೈಲಿಶ್ ಬೈಕ್ ಪ್ರಿಯರಿಗೆ ಜುಲೈ 5, 2023 ದಿನ ಅತ್ಯಂತ ವಿಶೇಷ ಸಾಬೀತಾಗಿದೆ. ಹೌದು, Bajaj Triumph Speed 400 ಹಾಗೂ Triumph Scrambler ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.   

Written by - Nitin Tabib | Last Updated : Jul 5, 2023, 04:41 PM IST
  • ಟ್ರಯಂಫ್ ಸ್ಪೀಡ್ 400 ರ ಆರಂಭಿಕ ಬೆಲೆ 2.33 ಲಕ್ಷ ರೂ.ಗಳಿಗೆ ಇರಿಸಲಾಗಿದೆ ಆದರೆ,
  • ಗ್ರಾಹಕರನ್ನು ಸೆಳೆಯಲು ಕಂಪನಿ ಆಫರ್ ಕೂಡ ನೀಡಿದೆ. ಇದರ ಅಡಿಯಲ್ಲಿ, ಆರಂಭಿಕ 10,000 ಗ್ರಾಹಕರು ಈ ಬೈಕ್ ಅನ್ನು 10,000 ರೂ.ಗೆ ಅಗ್ಗವಾಗಿ 2.23 ಲಕ್ಷಕ್ಕೆ ಖರೀದಿಸಬಹುದು.
  • ಆದರೆ, ಕಂಪನಿಯು ಇದುವರೆಗೆ ಟ್ರಯಂಫ್ ಸ್ಕ್ರ್ಯಾಂಬ್ಲರ್ 400X ಬೆಲೆಯನ್ನು ಬಹಿರಂಗಪಡಿಸಿಲ್ಲ.
Bajaj Triumph Scrambler 400X-Triumph ಸ್ಪೀಡ್ ಮಾರುಕಟ್ಟೆಗೆ ಬಿಡುಗಡೆ, ಬೆಲೆ, ವೈಶಿಷ್ಟ್ಯ ಹಾಗೂ ಮೈಲೆಜ್ ವಿವರ ಇಲ್ಲಿದೆ title=

Automobile News In Kannada: ಸ್ಟೈಲಿಶ್ ಬೈಕ್‌ ಪ್ರಿಯರಿಗೆ ಜುಲೈ 5  ವಿಶೇಷ ದಿನ ಸಾಬೀತಾಗಿದೆ. ದೇಶದ ಮುಂಚೂಣಿಯಲ್ಲಿರುವ ಆಟೋ ಮೊಬೈಲ್ ಕಂಪನಿ ಬಜಾಜ್ ಆಟೋ (Bajaj Auto), ಬಜಾಜ್ ಟ್ರಯಂಫ್ ಸ್ಪೀಡ್ 400 ಮತ್ತು ಟ್ರಯಂಫ್ ಸ್ಕ್ರ್ಯಾಂಬ್ಲರ್ 400 ಎಕ್ಸ್ 2 ಬೈಕ್‌ಗಳನ್ನು ಬಿಡುಗಡೆ ಮಾಡಿದೆ. ಈ ಎರಡೂ ಬೈಕ್‌ಗಳನ್ನು ಬಜಾಜ್ ಮತ್ತು ಟ್ರಯಂಫ್ ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ಇದಕ್ಕೂ ಮುನ್ನ ಮಾರುತಿ ಸುಜುಕಿಯ ಪ್ರೀಮಿಯಂ ಕಾರು ಮಾರುತಿ ಇನ್ವಿಕ್ಟೊ ಬಿಡುಗಡೆ ಮಾಡಲಾಗಿತ್ತು.

ಟ್ರಯಂಫ್ ಸ್ಪೀಡ್ 400 ಮತ್ತು ಟ್ರಯಂಫ್ ಸ್ಕ್ರ್ಯಾಂಬ್ಲರ್ 400X ಬೆಲೆ
ಟ್ರಯಂಫ್ ಸ್ಪೀಡ್ 400 ರ ಆರಂಭಿಕ ಬೆಲೆ 2.33 ಲಕ್ಷ ರೂ.ಗಳಿಗೆ ಇರಿಸಲಾಗಿದೆ ಆದರೆ, ಗ್ರಾಹಕರನ್ನು ಸೆಳೆಯಲು ಕಂಪನಿ ಆಫರ್ ಕೂಡ ನೀಡಿದೆ. ಇದರ ಅಡಿಯಲ್ಲಿ, ಆರಂಭಿಕ 10,000 ಗ್ರಾಹಕರು ಈ ಬೈಕ್ ಅನ್ನು 10,000 ರೂ.ಗೆ ಅಗ್ಗವಾಗಿ 2.23 ಲಕ್ಷಕ್ಕೆ ಖರೀದಿಸಬಹುದು. ಆದರೆ, ಕಂಪನಿಯು ಇದುವರೆಗೆ ಟ್ರಯಂಫ್ ಸ್ಕ್ರ್ಯಾಂಬ್ಲರ್ 400X ಬೆಲೆಯನ್ನು ಬಹಿರಂಗಪಡಿಸಿಲ್ಲ.

ಇದನ್ನೂ ಓದಿ-Harley Davidson ಬೈಕ್ ಖರೀದಿಸುವ ನಿಮ್ಮ ಕನಸು ಶೀಘ್ರದಲ್ಲೇ ನನಸಾಗಲಿದೆ, ಇಂದು ಭಾರತದಲ್ಲಿ ಬಿಡುಗಡೆಯಾಗುತ್ತಿದೆ ಈ ಅಗ್ಗದ ಬೈಕ್!

ಟ್ರಯಂಫ್ ಸ್ಪೀಡ್ 400 ನಲ್ಲಿ ಈ ವೈಶಿಷ್ಟ್ಯಗಳಿವೆ
ಟ್ರಯಂಫ್ ಸ್ಪೀಡ್ 400 ನಲ್ಲಿ ಲಭ್ಯವಿರುವ ವೈಶಿಷ್ಟ್ಯಗಳ ಕುರಿತು ಹೇಳುವುದಾದರೆ, ಈ ಬೈಕ್ 3 ಬಣ್ಣ ರೂಪಾಂತರಗಳಲ್ಲಿ ಲಭ್ಯವಿರುತ್ತದೆ. ಈ ಬೈಕ್ ಲಿಕ್ವಿಡ್ ಕೂಲ್ಡ್, 4 ವಾಲ್ವ್, 398.15 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. ಈ ಎಂಜಿನ್ 8000 rpm ನಲ್ಲಿ 40ps ಗರಿಷ್ಠ ಶಕ್ತಿಯನ್ನು ಮತ್ತು 6500 rpm ನಲ್ಲಿ 37.5 Nm ಟಾರ್ಕ್ ಉಪಾಡಿಸುತ್ತದೆ. ಈ ಬೈಕ್ ನಲ್ಲಿ ನಿಮಗೆ 6 ಸ್ಪೀಡ್ ಗೇರ್ ಬಾಕ್ಸ್ ನೀಡಲಾಗುವುದು. ಇದಲ್ಲದೆ ಬೈಕ್‌ನಲ್ಲಿ 13 ಲೀಟರ್ ಸಾಮರ್ಥ್ಯದ ಟ್ಯಾಂಕ್ ನೀಡಲಾಗಿದೆ. ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಈ ಬೈಕ್ ಅನಲಾಗ್ ಸ್ಪೀಡೋಮೀಟರ್ ಫುಲ್ ಫೀಚರ್ LCD ಡಿಸ್ಪ್ಲೇ ನೀಡಲಾಗಿದೆ.

ಇದನ್ನೂ ಓದಿ-7th Pay Commission: ಸರ್ಕಾರಿ ನೌಕರರ ವೇತನದಲ್ಲಿ ಬಂಪರ್ ಹೆಚ್ಚಳ ಬಹುತೇಕ ಫಿಕ್ಸ್!

ಟ್ರಯಂಫ್ ಸ್ಕ್ರ್ಯಾಂಬ್ಲರ್ 400X ನಲ್ಲಿ ಏನು ವಿಶೇಷತೆ?
ಇನ್ನು ಟ್ರಯಂಫ್ ಸ್ಕ್ರ್ಯಾಂಬ್ಲರ್ 400X ಬೈಕ್‌ನ ವೈಶಿಷ್ಟ್ಯತೆಗಳ ಬಗ್ಗೆ ಹೇಳುವುದಾದರೆ, ಈ ಬೈಕ್‌ನಲ್ಲಿ 398.15 ಸಿಸಿ ಲಿಕ್ವಿಡ್ ಕೂಲ್ಡ್, 4 ವಾಲ್ವ್, ಸಿಂಗಲ್ ಸಿಲಿಂಡರ್ ಎಂಜಿನ್ ನೀಡಲಾಗಿದೆ. ಈ ಎಂಜಿನ್ 8000 rpm ನಲ್ಲಿ 40ps ಗರಿಷ್ಠ ಶಕ್ತಿಯನ್ನು ಮತ್ತು 6500 rpm ನಲ್ಲಿ 37.5 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಬೈಕ್‌ನಲ್ಲಿ 6 ಸ್ಪೀಡ್ ಗೇರ್ ಬಾಕ್ಸ್ ಸಹ ಲಭ್ಯವಿದೆ. ಬೈಕ್ 13 ಲೀಟರ್ ಟ್ಯಾಂಕ್ ಸಾಮರ್ಥ್ಯವನ್ನು ಸಹ ಪಡೆದುಕೊಂಡಿದೆ. ಈ ಬೈಕಿನ ಬಹುತೇಕ ವೈಶಿಷ್ಟ್ಯಗಳು ಟ್ರಯಂಫ್ ಸ್ಪೀಡ್ 400 ಅನ್ನು ಹೋಲುತ್ತವೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News