ಆರ್‌ಬಿಐ ನೂತನ ಗವರ್ನರ್ ಸಾರಥ್ಯದಲ್ಲಿ MPC ಸಭೆ :ಬ್ಯಾಂಕ್ ಲೋನ್ ಮೇಲಿನ ಬಡ್ಡಿದರ ಕಡಿತವಾಗುವುದು ಬಹುತೇಕ ಖಚಿತ

RBI Repo Rate:ಡಿಸೆಂಬರ್ ಮೊದಲ ವಾರದಲ್ಲಿ ಶಕ್ತಿಕಾಂತ ದಾಸ್ ಅವರು ತಮ್ಮ ಅಧಿಕಾರಾವಧಿಯ ಕೊನೆಯ ಎಂಪಿಸಿಯಲ್ಲಿ ಭಾಗವಹಿಸಿದ್ದರು.

Written by - Ranjitha R K | Last Updated : Dec 11, 2024, 04:41 PM IST
  • ಇಂದು ಸಂಜಯ್ ಮಲ್ಹೋತ್ರಾ 26 ನೇ ಗವರ್ನರ್ ಆಗಿ ಜವಾಬ್ದಾರಿ
  • ಎರಡು ವರ್ಷಗಳಿಂದ ರೆಪೊ ದರವನ್ನು ಆರ್‌ಬಿಐ ಶೇಕಡಾ 6.5 ರ ಮಟ್ಟದಲ್ಲಿ
  • ಮುಂದಿನ ಎಂಪಿಸಿಯಲ್ಲಿ ಬಡ್ಡಿದರ ಕಡಿತದ ಸಾಧ್ಯತೆ
ಆರ್‌ಬಿಐ ನೂತನ ಗವರ್ನರ್ ಸಾರಥ್ಯದಲ್ಲಿ  MPC ಸಭೆ  :ಬ್ಯಾಂಕ್ ಲೋನ್ ಮೇಲಿನ ಬಡ್ಡಿದರ ಕಡಿತವಾಗುವುದು ಬಹುತೇಕ ಖಚಿತ  title=

RBI Repo Rate : ಶಕ್ತಿಕಾಂತ ದಾಸ್ ಅವರು ಡಿಸೆಂಬರ್ 10 ರಂದು ಆರ್‌ಬಿಐ ಗವರ್ನರ್ ಹುದ್ದೆಯಿಂದ ನಿವೃತ್ತರಾದ ನಂತರ,  ಇಂದು ಸಂಜಯ್ ಮಲ್ಹೋತ್ರಾ  26 ನೇ ಗವರ್ನರ್ ಆಗಿ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಕಳೆದ ಎರಡು ವರ್ಷಗಳಿಂದ ರೆಪೊ ದರವನ್ನು ಆರ್‌ಬಿಐ ಶೇಕಡಾ 6.5 ರ ಮಟ್ಟದಲ್ಲಿ ನಿರ್ವಹಿಸುತ್ತಿದೆ. ಇದನ್ನು ಕಡಿಮೆ ಮಾಡಬೇಕೆಂಬ ಬೇಡಿಕೆ ಬಹಳ ದಿನಗಳಿಂದ ಇತ್ತು. ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ದರದಲ್ಲಿ ಭಾರೀ ಕುಸಿತದ ನಂತರ, ಬಡ್ಡಿದರಗಳ ಕಡಿತದ ಬೇಡಿಕೆ ತೀವ್ರಗೊಂಡಿದೆ. ಡಿಸೆಂಬರ್ ಮೊದಲ ವಾರದಲ್ಲಿ ಶಕ್ತಿಕಾಂತ ದಾಸ್ ಅವರು ತಮ್ಮ ಅಧಿಕಾರಾವಧಿಯ ಕೊನೆಯ ಎಂಪಿಸಿಯಲ್ಲಿ ಭಾಗವಹಿಸಿದ್ದರು.

ಮುಂದಿನ ಎಂಪಿಸಿಯಲ್ಲಿ ಬಡ್ಡಿದರ ಕಡಿತದ ಸಾಧ್ಯತೆ : 
ಹೊಸ ಆರ್‌ಬಿಐ ಗವರ್ನರ್ ಆಗಿ ಸಂಜಯ್ ಮಲ್ಹೋತ್ರಾ ಅವರ ನೇಮಕವು ಫೆಬ್ರವರಿಯಲ್ಲಿ ಮುಂದಿನ ಹಣಕಾಸು ನೀತಿ ಪರಾಮರ್ಶೆ (ಎಂಪಿಸಿ) ಸಮಯದಲ್ಲಿ ಬಡ್ಡಿದರ ಕಡಿತದ ಸಾಧ್ಯತೆಯನ್ನು ಬಲಪಡಿಸಿದೆ.

ಇದನ್ನೂ ಓದಿ : RBI ಹೊಸ ಗವರ್ನರ್ ಆಗಿ ಸಂಜಯ್ ಮಲ್ಹೋತ್ರಾ ಅಧಿಕಾರ

ಜಪಾನಿನ ಬ್ರೋಕ್ರೆಜ್ ವಿಶ್ಲೇಷಕ ನೋಮುರಾ ಪ್ರಕಾರ ಮಲ್ಹೋತ್ರಾ ಅವರು ಅಧಿಕಾರಶಾಹಿ ಮತ್ತು ಅವರ ನಾಯಕತ್ವದಲ್ಲಿ ವಿತ್ತೀಯ ನೀತಿಯು ಮೊದಲಿಗಿಂತ ಹೆಚ್ಚು ಉದಾರವಾಗಿರಬಹುದು. ಫೆಬ್ರುವರಿ ಎಂಪಿಸಿಯಲ್ಲಿ ದರ ಕಡಿತದ ಸಾಧ್ಯತೆ ಇದೆ ಎಂದು ಬ್ರೋಕರೇಜ್ ಹೌಸ್ ಹೇಳಿದೆ. ಜಿಡಿಪಿ ಹೆಚ್ಚಿಸಲು ಮುಂದಿನ ಸಭೆಯಲ್ಲಿ ದರ ಕಡಿತ ಮಾಡುವುದು ಸೂಕ್ತ ಎಂದು ನೋಮುರ ಹೇಳಿದರು. ಕಳೆದ ಕೆಲವು ವಾರಗಳಲ್ಲಿ, ಬಡ್ಡಿದರ ಕಡಿತದ ವಿಷಯದ ಬಗ್ಗೆ ಸರ್ಕಾರ ಮತ್ತು ಆರ್‌ಬಿಐ ನಡುವೆ ಸ್ಪಷ್ಟವಾದ ವಿಭಜನೆಯು ಹೊರಹೊಮ್ಮುತ್ತಿದೆ ಎಂದು ಬ್ರೋಕರೇಜ್ ಹೇಳಿದೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಸಚಿವ ಪಿಯೂಷ್ ಗೋಯಲ್ ಇಬ್ಬರೂ ಎಂಪಿಸಿ ನೀತಿಯನ್ನು ಕಟ್ಟುನಿಟ್ಟಾಗಿ ಇರಿಸಿಕೊಂಡಿರುವ ಬಗ್ಗೆ  ಆರ್‌ಬಿಐಯನ್ನು ಟೀಕಿಸಿದ್ದಾರೆ. ಹಾಗಾಗಿ ಫೆಬ್ರವರಿಯಲ್ಲಿ ದರ ಕಡಿತದ ಸಾಧ್ಯತೆಯನ್ನು ತಳ್ಳಿಹಾಕುವುದಿಲ್ಲ ಎಂದು ಹೇಳಿದೆ. ಅಲ್ಲದೆ, ಎಂ.ಕೆ. ಮಲ್ಹೋತ್ರಾ ಅವರನ್ನು ನೇಮಕ ಮಾಡುವ ನಿರ್ಧಾರವನ್ನು ಕೊನೆಯ ಕ್ಷಣದಲ್ಲಿ ತೆಗೆದುಕೊಳ್ಳಲಾಗಿದೆ  ಎಂದು ಹೇಳಿದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಹಣಕಾಸು ಸಚಿವಾಲಯದಿಂದ ಹೊಸ ಗವರ್ನರ್ ಆಗಮನದೊಂದಿಗೆ, ವಿತ್ತೀಯ ನೀತಿ ನಿರ್ಧಾರಗಳಲ್ಲಿ ಸರ್ಕಾರದ ಪಾತ್ರವು ಬಲಗೊಳ್ಳಬಹುದು ಎಂದು ಬ್ರೋಕರೇಜ್ ಯುಬಿಎಸ್ ವಿಶ್ಲೇಷಕರು ಹೇಳಿದ್ದಾರೆ. ಮಲ್ಹೋತ್ರಾ ಅವರು ಬೆಳವಣಿಗೆಯ ಅಪಾಯಗಳನ್ನು ಮತ್ತು ಇತ್ತೀಚಿನ ಹಣದುಬ್ಬರ ಏರಿಕೆಯನ್ನು ಸಮತೋಲನಗೊಳಿಸಬೇಕಾಗುತ್ತದೆ ಎಂದು ಅವರು ಹೇಳಿದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News