ಸರ್ಕಾರಿ ನೌಕರರಿಗೆ ಹಳೇ ಪಿಂಚಣಿ ಯೋಜನೆ ಜಾರಿ ! ಸಚಿವ ಸಂಪುಟದಲ್ಲಿ ನಿರ್ಧಾರ

Old pension Latest news :ಸರ್ಕಾರಿ ನೌಕರರ ಬಹುಕಾಲದ ಪಿಂಚಣಿ ಬೇಡಿಕೆಗೆ ಸರ್ಕಾರ ಅಸ್ತು ಎಂದು ಹೇಳಿದೆ. ಹಳೆಯ ಪಿಂಚಣಿ ಯೋಜನೆ ಮರು ಜಾರಿಗೆ ಸರ್ಕಾರ ಅನುಮೋದನೆ ನೀಡಿದೆ.

Written by - Ranjitha R K | Last Updated : Jan 5, 2024, 03:04 PM IST
  • ಒಪಿಎಸ್‌ಗೆ ಆಗ್ರಹಿಸಿ ನೌಕರರು ಮುಷ್ಕರ ನಡೆಸಿದ್ದ ನೌಕರರು
  • ಹಳೇ ಪಿಂಚಣಿ ಯೋಜನೆ ಮರು ಜಾರಿಗೆ ಅನುಮೋದನೆ
  • ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಸರ್ಕಾರ ಅನುಮೋದನೆ
ಸರ್ಕಾರಿ ನೌಕರರಿಗೆ ಹಳೇ ಪಿಂಚಣಿ ಯೋಜನೆ ಜಾರಿ ! ಸಚಿವ ಸಂಪುಟದಲ್ಲಿ ನಿರ್ಧಾರ  title=

OPS News : ಸರ್ಕಾರಿ ನೌಕರರ ಬಹುಕಾಲದ ಪಿಂಚಣಿ ಬೇಡಿಕೆಗೆ ಸರ್ಕಾರ ಅಸ್ತು ಎಂದು ಹೇಳಿದೆ. ಹಳೆಯ ಪಿಂಚಣಿ ಯೋಜನೆ ಮರು ಜಾರಿಗೆ ಸರ್ಕಾರ ಅನುಮೋದನೆ ನೀಡಿದೆ.ಈ ಮೂಲಕ ನವೆಂಬರ್ 2005ರ ನಂತರ ಉದ್ಯೋಗಗಳನ್ನು ಪ್ರಾರಂಭಿಸಿದ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆಯ (OPS) ಪ್ರಯೋಜನಗಳನ್ನು ಪಡೆಯುವ ಆಯ್ಕೆಯನ್ನು ನೀಡಲಾಗುತ್ತದೆ. ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಸರ್ಕಾರ ಅನುಮೋದನೆ ನೀಡಿದೆ. 

ಒಪಿಎಸ್‌ಗೆ ಆಗ್ರಹಿಸಿ ನೌಕರರು ಮುಷ್ಕರ ನಡೆಸಿದ್ದ ನೌಕರರು : 
OPS ಮರು ಜಾರಿಗೆ ಒತ್ತಾಯಿಸಿ ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರು ಮತ್ತು ಅಧಿಕಾರಿಗಳು ಹಲವು ಸಮಯದಿಂದ ಮುಷ್ಕರ ನಡೆಸುತ್ತಿದ್ದರು. ಇದೀಗ ಮಹಾರಾಷ್ಟ್ರ ಸರ್ಕಾರ ಹಳೇ ಪಿಂಚಣಿ ಯೋಜನೆ ಮರು ಜಾರಿಗೆ ಅನುಮೋದನೆ ನೀಡಿ ನಿರ್ಧಾರ ಪ್ರಕಟಿಸಿದೆ. ನವೆಂಬರ್ 2005 ರ ನಂತರ ಕೆಲಸ ಪ್ರಾರಂಭಿಸಿದ ಉದ್ಯೋಗಿಗಳಿಗೆ ಒಪಿಎಸ್ ಆಯ್ಕೆಯನ್ನು ಒದಗಿಸುವ ಪ್ರಸ್ತಾವನೆಗೆ ಸಂಪುಟ ಅನುಮೋದನೆ ನೀಡಿದೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ. 

ಇದನ್ನೂ ಓದಿ : Gold-Silver price today : ಇಳಿಮುಖದತ್ತ ಸಾಗುತ್ತಿದೆ ಬಂಗಾರದ ಬೆಲೆ ! ಬೆಳ್ಳಿ ದರದಲ್ಲಿಯೂ ದೊಡ್ಡ ಮಟ್ಟದ ಕಡಿತ

ಮಹಾರಾಷ್ಟ್ರ ಸರ್ಕಾರದ ಈ ನಿರ್ಧಾರದಿಂದ 26,000 ಉದ್ಯೋಗಿಗಳು ಪ್ರಯೋಜನ ಪಡೆಯಲಿದ್ದಾರೆ. 26,000 ಉದ್ಯೋಗಿಗಳಿಗೆ ಒಪಿಎಸ್ ಮತ್ತು ಹೊಸ ಪಿಂಚಣಿ ಯೋಜನೆಗಳ ನಡುವೆ  ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಬಗ್ಗೆ ಮುಂದಿನ ಎರಡು ತಿಂಗಳಲ್ಲಿ ಸಂಬಂಧಿಸಿದ ದಾಖಲೆಗಳನ್ನು ತಮ್ಮ ಇಲಾಖೆಗಳಿಗೆ ಸಲ್ಲಿಸುವಂತೆ ಕ್ಯಾಬಿನೆಟ್ ನಲ್ಲಿ ಸೂಚಿಸಲಾಗಿದೆ. 

ಹಳೆಯ ಪಿಂಚಣಿ ಯೋಜನೆ ಎಂದರೇನು? :
ಹಳೆ ಪಿಂಚಣಿ ಯೋಜನೆ (OPS)ಯನ್ನು ಸರ್ಕಾರವು 1952ರಲ್ಲಿ ಪ್ರಾರಂಭಿಸಿತು. ಈ ಯೋಜನೆಯಡಿ, ಸರ್ಕಾರಿ ನೌಕರರಿಗೆ ನಿವೃತ್ತಿಯ ನಂತರ ಅವರ ಕೊನೆಯ ಸಂಬಳದ ಅರ್ಧದಷ್ಟು ಪಿಂಚಣಿ ನೀಡಲಾಗುತ್ತದೆ. ಸರ್ಕಾರವು ಹೆಚ್ಚಿಸಿರುವ ತುಟ್ಟಿಭತ್ಯೆಯು ಪಿಂಚಣಿ ಮೊತ್ತಕ್ಕೂ ಅನ್ವಯಿಸುತ್ತದೆ. ಹಳೆಯ ಪಿಂಚಣಿ ಯೋಜನೆಯಡಿ, ನೌಕರನ ಮರಣದ ನಂತರ ಅವರ ಕುಟುಂಬಕ್ಕೆ ಪಿಂಚಣಿ ಪಡೆಯಲು ಅವಕಾಶವಿದೆ. OPS ಉದ್ಯೋಗಿಗಳಿಗೆ ಹೆಚ್ಚು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಇದು ನಿವೃತ್ತಿಯ ನಂತರ ಅವರಿಗೆ ನಿಯಮಿತ ಆದಾಯವನ್ನು ಖಾತರಿಪಡಿಸುತ್ತದೆ.

ಇದನ್ನೂ ಓದಿ : EPFO Update: ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಮಹತ್ವದ ಅಪ್ಡೇಟ್ ಪ್ರಕಟಿಸಿದ ಕೇಂದ್ರ ಸರ್ಕಾರ!

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಎಂದರೇನು? :
ಹಳೆಯ ಪಿಂಚಣಿ ಯೋಜನೆಯ ಬದಲಾಗಿ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಅನ್ನು ಜನವರಿ 1, 2004 ರಿಂದ ಜಾರಿಗೆ ತರಲಾಯಿತು.NPS ಅಡಿಯಲ್ಲಿ ನೌಕರರು ತಮ್ಮ ಸೇವೆಯ ಸಮಯದಲ್ಲಿ ನಿಗದಿತ ಮೊತ್ತವನ್ನು ಕೊಡುಗೆ ನೀಡುತ್ತಾರೆ. ನಿವೃತ್ತಿಯ ನಂತರ, ಉದ್ಯೋಗಿ ಮಾಡಿದ ಹೂಡಿಕೆಯ ಆಧಾರದ ಮೇಲೆ ಪಿಂಚಣಿ ಪಡೆಯುತ್ತಾರೆ.ಇದು ಹಳೆಯ ಪಿಂಚಣಿ ಯೋಜನೆಗಿಂತ ಕಡಿಮೆ ಪ್ರಯೋಜನಕಾರಿ ಎನ್ನಲಾಗಿದೆ. ನಿವೃತ್ತಿಯ ನಂತರ ಉದ್ಯೋಗಿಗಳಿಗೆ ನಿಯಮಿತ ಆದಾಯವನ್ನು ಖಾತರಿಪಡಿಸುವುದಿಲ್ಲ. ಕಳೆದ ಕೆಲವು ದಿನಗಳಿಂದ ಹಲವು ರಾಜ್ಯಗಳ ನೌಕರರು ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವಂತೆ ಒತ್ತಾಯಿಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News