EPFO: ಈ ಮಹತ್ವದ ಕೆಲಸವನ್ನು ಇಂದೇ ಮಾಡಿ, ಇಲ್ಲವೇ ಮುಂದಿನ ತಿಂಗಳಿನಿಂದ PF ಹಣ ಖಾತೆಗೆ ಬರುವುದಿಲ್ಲ!

EPFO Link Aadhaar:  ನೀವು ಇನ್ನೂ ನಿಮ್ಮ ಪಿಎಫ್ ಖಾತೆಯನ್ನು ಆಧಾರ್ ಜೊತೆ ಲಿಂಕ್ ಮಾಡದಿದ್ದರೆ, ತಕ್ಷಣ ಅದನ್ನು ಮಾಡಿ. ಏಕೆಂದರೆ ಸೆಪ್ಟೆಂಬರ್ 1 ರ ನಂತರ ನೀವು ನಷ್ಟವನ್ನು ಭರಿಸಬೇಕಾಗಬಹುದು.

Written by - Yashaswini V | Last Updated : Aug 13, 2021, 10:20 AM IST
  • ಪಿಎಫ್ ಖಾತೆಯನ್ನು ಆಧಾರ್ ಜೊತೆ ಲಿಂಕ್ ಮಾಡದಿದ್ದರೆ ಈಗಲೇ ಅದನ್ನು ಪೂರ್ಣಗೊಳಿಸಿ
  • ಇಲ್ಲದಿದ್ದರೆ ಸೆಪ್ಟೆಂಬರ್ 1 ರ ನಂತರ ಪಿಎಫ್ ಖಾತೆದಾರರು ನಷ್ಟ ಅನುಭವಿಸಬೇಕಾಗಬಹುದು
  • ಉದ್ಯೋಗದಾತರ ಕೊಡುಗೆಯನ್ನು ಸಹ ತಡೆಹಿಡಿಯಬಹುದು
EPFO: ಈ ಮಹತ್ವದ ಕೆಲಸವನ್ನು ಇಂದೇ ಮಾಡಿ, ಇಲ್ಲವೇ ಮುಂದಿನ ತಿಂಗಳಿನಿಂದ PF ಹಣ ಖಾತೆಗೆ ಬರುವುದಿಲ್ಲ! title=
PF-Aadhaar Link

ನವದೆಹಲಿ: EPFO Link Aadhaar- ನೀವು ಇನ್ನೂ ನಿಮ್ಮ ಪಿಎಫ್ ಖಾತೆಯನ್ನು ಆಧಾರ್ ಜೊತೆ ಲಿಂಕ್ (EPFO Link Aadhaar) ಮಾಡದಿದ್ದರೆ, ಆದಷ್ಟೂ ಬೇಗ ಈ ಕೆಲಸವನ್ನು ಮಾಡಿ. ಏಕೆಂದರೆ ಸೆಪ್ಟೆಂಬರ್ 1 ರ ನಂತರ ನೀವು ನಷ್ಟವನ್ನು ಭರಿಸಬೇಕಾಗಬಹುದು. ವಾಸ್ತವವಾಗಿ, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ (EPFO) ಹೊಸ ನಿಯಮಗಳ ಪ್ರಕಾರ, ಎಲ್ಲಾ ಇಪಿಎಫ್‌ಒ ಖಾತೆದಾರರು ತಮ್ಮ ಯುಎಎನ್ ಸಂಖ್ಯೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಬೇಕು.

ಕಂಪನಿ ಪಿಎಫ್ ಖಾತೆಗೆ ಹಣ ಹಾಕುವುದಿಲ್ಲ:
ಆಧಾರ್‌ನೊಂದಿಗೆ ತಮ್ಮ ಪಿಎಫ್ ಖಾತೆಯನ್ನು ಪರಿಶೀಲಿಸುವಂತೆ ತನ್ನ ಉದ್ಯೋಗಿಗಳನ್ನು ಕೇಳುವುದು ಉದ್ಯೋಗದಾತರ (Employer) ಜವಾಬ್ದಾರಿಯಾಗಿದೆ. ಇಲ್ಲದಿದ್ದರೆ, ಪಿಎಫ್ ಖಾತೆಗೆ ಅವರ ಉದ್ಯೋಗದಾತ ಕೊಡುಗೆಯನ್ನು ಸಹ ನಿಲ್ಲಿಸಬಹುದು. ಅಲ್ಲದೆ, ಖಾತೆದಾರನು ತನ್ನ ಪಿಎಫ್ ಅನ್ನು ಹಿಂಪಡೆಯಲು ಸಾಧ್ಯವಿಲ್ಲ ಮತ್ತು ಇತರ ಪ್ರಯೋಜನಗಳು ಲಭ್ಯವಿರುವುದಿಲ್ಲ. ಪಿಎಫ್ ಖಾತೆಯೊಂದಿಗೆ ಆಧಾರ್ ಲಿಂಕ್  (EPFO Link Aadhaar) ಮಾಡಲು ಈ ಮೊದಲು ಜೂನ್ 1, 2021 ರವರೆಗೆ ಗಡುವು ನೀಡಲಾಗಿತ್ತು. ಬಳಿಕ ಇದನ್ನು ಸೆಪ್ಟೆಂಬರ್ 1, 2021ರವರೆಗೆ ವಿಸ್ತರಿಸಲಾಯಿತು.

ಸೆಕ್ಷನ್ 142ಕ್ಕೆ ತಿದ್ದುಪಡಿ ಮಾಡಲಾಗಿದೆ:
ಕಾರ್ಮಿಕ ಸಚಿವಾಲಯವು ಸಾಮಾಜಿಕ ಭದ್ರತೆ ಕೋಡ್ 2020 ರ ಸೆಕ್ಷನ್ 142 ಕ್ಕೆ ತಿದ್ದುಪಡಿ ತರುವ ಮೂಲಕ ಈ ಹೊಸ ನಿಯಮವನ್ನು ಜಾರಿಗೆ ತಂದಿದೆ. ಸೆಕ್ಷನ್ 142 ಆಧಾರ್ ಸಂಖ್ಯೆಯ ಮೂಲಕ ಯಾವುದೇ ಉದ್ಯೋಗಿ ಅಥವಾ ಅಸಂಘಟಿತ ಕೆಲಸಗಾರ ಅಥವಾ ಯಾವುದೇ ವ್ಯಕ್ತಿಯ ಗುರುತನ್ನು ಸ್ಥಾಪಿಸುತ್ತದೆ, ಇದರಿಂದ ಅವರು ಕೋಡ್ ಅಡಿಯಲ್ಲಿ ಸೇವೆಗಳು ಮತ್ತು ಪ್ರಯೋಜನಗಳನ್ನು ಪಡೆಯುತ್ತಾರೆ.

ಇದನ್ನೂ ಓದಿ-  ಬದಲಾದ Bank Account ಮೂಲಕ EPF ನಿಂದ ಹಣ ಪಡೆಯಬೇಕೇ ? ಈ ವಿಧಾನವನ್ನು ಬಳಸಿ

ಹೊಸ ನಿಯಮ ಏನು?
ಇಪಿಎಫ್‌ಒ (EPFO) ಸಾಮಾಜಿಕ ಭದ್ರತೆ ಕೋಡ್ (Social Security Code) 2020 ರ ಸೆಕ್ಷನ್ 142 ರ ಅಡಿಯಲ್ಲಿ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಇದರಲ್ಲಿ ಸೆಪ್ಟೆಂಬರ್ 1 ರಿಂದ, ಯಾವುದೇ PF ಖಾತೆಯನ್ನು ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡದಿದ್ದರೆ ಅಥವಾ UAN ಅನ್ನು ಆಧಾರ್ ಪರಿಶೀಲಿಸದಿದ್ದರೆ, ಅದರ ECR- ಎಲೆಕ್ಟ್ರಾನಿಕ್ ಚಲನ್ ಕಮ್ ರಿಟರ್ನ್ ಅನ್ನು ಭರ್ತಿ ಮಾಡಲಾಗುವುದಿಲ್ಲ ಎಂದು EPFO ​​ಸ್ಪಷ್ಟವಾಗಿ ಉದ್ಯೋಗದಾತರಿಗೆ ಸೂಚನೆ ನೀಡಿದೆ.

7 ಲಕ್ಷ EDLI ಕವರ್ ಲಭ್ಯವಿರುವುದಿಲ್ಲ:
ಇದರರ್ಥ ನೀವು ಸೆಪ್ಟೆಂಬರ್ 1 ರ ಮೊದಲು ಪಿಎಫ್ ಯುಎಎನ್ ಮತ್ತು ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡದಿದ್ದರೆ, ನಿಮ್ಮ ಖಾತೆಯಲ್ಲಿ ಕಂಪನಿಯಿಂದ ಬರುವ ಕೊಡುಗೆಯನ್ನು ನಿಲ್ಲಿಸಲಾಗುತ್ತದೆ. ನೀವು ನಿಮ್ಮ ಆಧಾರ್ ಸಂಖ್ಯೆಯನ್ನು ಯುನಿವರ್ಸಲ್ ಅಕೌಂಟ್ ನಂಬರ್ (ಯುಎಎನ್) ಜೊತೆ ಲಿಂಕ್ ಮಾಡಿದರೆ ಮಾತ್ರ ನೀವು ನಿಮ್ಮ ಪಿಎಫ್ ಖಾತೆಯಲ್ಲಿ ಕಂಪನಿಯ ಪಾಲನ್ನು ಪಡೆಯುತ್ತೀರಿ. ಉದ್ಯೋಗಿಗಳು ಖಾತೆಯಲ್ಲಿ ತಮ್ಮದೇ ಕೊಡುಗೆಯನ್ನು ಮಾತ್ರ ನೋಡುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ಉದ್ಯೋಗಿಯ ಉದ್ಯೋಗಿ ಠೇವಣಿ ಲಿಂಕ್ಡ್ ಇನ್ಶೂರೆನ್ಸ್ (EDLI) ಕೂಡ ಠೇವಣಿ ಮಾಡಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಆ ಉದ್ಯೋಗಿಯು EDLI ಯೋಜನೆಯ ಕವರ್ ಅನ್ನು ಸಹ ಪಡೆಯುವುದಿಲ್ಲ. ಕರೋನಾ ಸಾಂಕ್ರಾಮಿಕದ ಮಧ್ಯೆ, ಸರ್ಕಾರವು EDLI ಯೋಜನೆಯಡಿಯಲ್ಲಿ ಮರಣ ವಿಮೆ ಪ್ರಯೋಜನವನ್ನು 7 ಲಕ್ಷಕ್ಕೆ ಹೆಚ್ಚಿಸಿದೆ. ಈ ಹಿಂದೆ, ಖಾತೆದಾರನ ಮರಣದ ನಂತರ, ಕನಿಷ್ಠ 2 ಲಕ್ಷ ಮತ್ತು ಗರಿಷ್ಠ 6 ಲಕ್ಷ ರೂ.ಗಳು ಲಭ್ಯವಿದ್ದು, ಇದನ್ನು ಸರ್ಕಾರವು ಕನಿಷ್ಠ 2.5 ಲಕ್ಷ ಮತ್ತು ಗರಿಷ್ಠ 7 ಲಕ್ಷಕ್ಕೆ ಹೆಚ್ಚಿಸಿದೆ.

ಇದನ್ನೂ ಓದಿ-  PF ಖಾತೆ ಹಣ ಹಿಂಪಡೆಯಲು ಬಯಸುವಿರಾ? ಹಾಗಿದ್ರೆ ಈ ತಪ್ಪುಗಳನ್ನ ಮಾಡಬೇಡಿ! 

ಆಧಾರ್ ಜೊತೆ ಇಪಿಎಫ್ ಖಾತೆಯನ್ನು ಲಿಂಕ್ ಮಾಡುವುದು ಹೇಗೆ?
ನೀವು ಇನ್ನೂ ನಿಮ್ಮ ಪಿಎಫ್ ಖಾತೆಯನ್ನು (PF Account) ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ, ಇಪಿಎಫ್‌ಒನ ಅಧಿಕೃತ ವೆಬ್‌ಸೈಟ್‌ಗೆ ಹೋಗುವ ಮೂಲಕ, ಮೊದಲು ನಿಮ್ಮ ಖಾತೆಯನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಿ ಮತ್ತು ನಿಮ್ಮ ಯುಎಎನ್ ಅನ್ನು ಆಧಾರ್‌ನೊಂದಿಗೆ ಪರಿಶೀಲಿಸಿ.  

1. ಮೊದಲು ನೀವು EPFO ​​ವೆಬ್‌ಸೈಟ್ www.epfindia.gov.in ಗೆ ಲಾಗ್ ಇನ್ ಆಗಬೇಕು.
2. ಇದರ ನಂತರ, ಆನ್ಲೈನ್ ​​ಸೇವೆಗಳಿಗೆ ಹೋಗುವ ಮೂಲಕ, ಇ-ಕೆವೈಸಿ ಪೋರ್ಟಲ್ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ ಯುಎಎನ್ ಆಧಾರ್ ಲಿಂಕ್ ಮಾಡಿ.
3. UAN ಖಾತೆಯಲ್ಲಿ ನೋಂದಾಯಿಸಲಾದ ನಿಮ್ಮ UAN ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ನೀವು ಅಪ್‌ಲೋಡ್ ಮಾಡಬೇಕು.
4. ನಿಮ್ಮ ಮೊಬೈಲ್ ಸಂಖ್ಯೆಗೆ OTP ಸಂಖ್ಯೆ ಬರುತ್ತದೆ.
5. ನಿಮ್ಮ 12 ಅಂಕಿಯ ಆಧಾರ್ ಸಂಖ್ಯೆಯನ್ನು ಆಧಾರ್ ಬಾಕ್ಸ್ ನಲ್ಲಿ ನಮೂದಿಸಿ ಮತ್ತು ಸಲ್ಲಿಸಿ
6. ನಂತರ ಒಟಿಪಿ ಪರಿಶೀಲನೆಗೆ ಮುಂದುವರಿಯಿರಿ, ಅದರ ಮೇಲೆ ಕ್ಲಿಕ್ ಮಾಡಿ
7. ಆಧಾರ್ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಲು, ಮೊಬೈಲ್ ಸಂಖ್ಯೆ ಅಥವಾ ಆಧಾರ್‌ನೊಂದಿಗೆ ಲಿಂಕ್ ಮಾಡಲಾದ ಮೇಲ್‌ನಲ್ಲಿ OTP ಅನ್ನು ಜನರೇಟ್ ಮಾಡಬೇಕು.
8. ಪರಿಶೀಲನೆಯ ನಂತರ, ನಿಮ್ಮ ಆಧಾರ್ ಅನ್ನು ನಿಮ್ಮ ಪಿಎಫ್ ಖಾತೆಗೆ ಲಿಂಕ್ ಮಾಡಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News