ನವದೆಹಲಿ: ದೇಶದ ಎರಡನೇ ಅತಿದೊಡ್ಡ ಐಟಿ ಕಂಪನಿಯಾದ ಇನ್ಫೋಸಿಸ್, ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ನಿವ್ವಳ ಲಾಭದಲ್ಲಿ ಶೇ 14 ರಷ್ಟು ಏರಿಕೆ ಕಂಡು, 4,845 ಕೋಟಿ ರೂ ಗೆ ತಲುಪಿದೆ.
ಸೆಪ್ಟೆಂಬರ್ 30 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಅದರ ಆದಾಯವು ಅನುಕ್ರಮವಾಗಿ ಶೇಕಡಾ 3.82 ರಷ್ಟು ಹೆಚ್ಚಳವಾಗಿ, 24,570 ಕೋಟಿಗೆ ಏರಿದೆ ಎಂದು ಕಂಪನಿ ಹೇಳಿದೆ.
ಇನ್ಫೋಸಿಸ್ ಷೇರುಗಳಲ್ಲಿ ಕುಸಿತ, ಹೂಡಿಕೆದಾರರ 53,000 ಕೋಟಿ ರೂ.ನಷ್ಟ..!
ಕರೋನವೈರಸ್ ಬಿಕ್ಕಟ್ಟಿನ ಸಂದರ್ಭದಲ್ಲಿ ತನ್ನ ಡಿಜಿಟಲ್ ಸೇವೆಗಳಿಗೆ ಗ್ರಾಹಕರ ಬೇಡಿಕೆಯ ಬೆಳವಣಿಗೆಯು ಕಂಪನಿಯ ಲಾಭದಾಯಕತೆಯನ್ನು ಹೆಚ್ಚಿಸಿದೆ.ಜನವರಿ 1 ರಿಂದ ಎಲ್ಲಾ ಹಂತಗಳಲ್ಲಿ ಸಂಬಳ ಹೆಚ್ಚಳ ಮತ್ತು ಬಡ್ತಿಗಳನ್ನು ನೀಡುವುದಾಗಿ ಇನ್ಫೋಸಿಸ್ ಹೇಳಿದೆ.