Indian Railways: ರೈಲು ಪ್ರಯಾಣದಲ್ಲಿ ಹಠಾತ್ ಬದಲಾವಣೆ? ಟಿಕೆಟ್ ರದ್ದುಗೊಳಿಸದೆ ಪ್ರಯಾಣದ ದಿನಾಂಕವನ್ನು ಬದಲಾಯಿಸಿ

Indian Railways: ಭಾರತೀಯ ರೈಲ್ವೇ ತನ್ನ ಪ್ರಯಾಣಿಕರಿಗೆ ತಮ್ಮ ಕನ್ಫರ್ಮ್/ಆರ್‌ಎಸಿ/ವೇಟಿಂಗ್ ಟಿಕೆಟ್ ನಲ್ಲಿ ಪ್ರಯಾಣದ ದಿನಾಂಕವನ್ನು ಬದಲಾಯಿಸುವ ಸೌಲಭ್ಯವನ್ನು ಒದಗಿಸುತ್ತದೆ. 

Written by - Yashaswini V | Last Updated : Aug 10, 2021, 07:24 AM IST
  • ರೈಲಿನಲ್ಲಿ ಪ್ರಯಾಣಿಸುವ ಯೋಜನೆ ಇದ್ದಕ್ಕಿದ್ದಂತೆ ಬದಲಾದರೆ, ಚಿಂತಿಸಬೇಡಿ
  • ಈಗ ಟಿಕೆಟ್ ರದ್ದು ಮಾಡದೆ ಪ್ರಯಾಣದ ದಿನಾಂಕವನ್ನು ಬದಲಿಸಿ
  • ಪ್ರಯಾಣದ ದಿನಾಂಕವನ್ನು ಒಮ್ಮೆ ಮಾತ್ರ ಬದಲಾಯಿಸಬಹುದು
Indian Railways: ರೈಲು ಪ್ರಯಾಣದಲ್ಲಿ ಹಠಾತ್ ಬದಲಾವಣೆ? ಟಿಕೆಟ್ ರದ್ದುಗೊಳಿಸದೆ ಪ್ರಯಾಣದ ದಿನಾಂಕವನ್ನು ಬದಲಾಯಿಸಿ title=
ನಿಮ್ಮ ಪ್ರಯಾಣದಲ್ಲಿ ಹಠಾತ್ ಬದಲಾವಣೆ? ಈಗ ಟಿಕೆಟ್ ರದ್ದು ಮಾಡದೆ ಪ್ರಯಾಣದ ದಿನಾಂಕವನ್ನು ಬದಲಿಸಿ

ನವದೆಹಲಿ: Indian Railways- ಹಲವು ಬಾರಿ ನಾವು ಎಲ್ಲಿಯಾದರೂ ಪ್ರಯಾಣಿಸಲು ಮೊದಲೇ ರೈಲು ಟಿಕೆಟ್ ಕಾಯ್ದಿರಿಸುತ್ತೇವೆ, ಆದರೆ ಕೊನೆಯ ಸಂದರ್ಭದಲ್ಲಿ ನಮ್ಮ ಯೋಜನೆ ಬದಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಟಿಕೆಟ್ ರದ್ದುಗೊಳಿಸಿದಾಗ ನಿಮ್ಮ ಹಣವನ್ನು ಕೂಡ ಕಡಿತಗೊಳಿಸಲಾಗುತ್ತದೆ. ಆದರೆ ರೈಲ್ವೇಯ ನಿಯಮಗಳ ಪ್ರಕಾರ, ನಿಮಗೆ ಇನ್ನೊಂದು ಆಯ್ಕೆ ಇದೆ. ಇಂತಹ ಸನ್ನಿವೇಶದಲ್ಲಿ ನಿಮ್ಮ ರೈಲು ಪ್ರಯಾಣವನ್ನು ನೀವು 'ಪೂರ್ವಸಿದ್ಧ' (Preponed) ಅಥವಾ 'ಮುಂದೂಡಬಹುದು' (Postponed) ಎಂದು ನಿಮಗೆ ತಿಳಿದಿದೆಯೇ? ನೀವು ಬಯಸಿದರೆ, ನಿಮ್ಮ ಪ್ರಯಾಣದ ಬೋರ್ಡಿಂಗ್ ನಿಲ್ದಾಣವನ್ನು ಸಹ ನೀವು ಬದಲಾಯಿಸಬಹುದು.

ದಿನಾಂಕವನ್ನು ಹೇಗೆ ಬದಲಾಯಿಸುವುದು?
ಪ್ರಯಾಣಿಕರು ಬೋರ್ಡಿಂಗ್ ನಿಲ್ದಾಣದ ಮೂಲ ವ್ಯವಸ್ಥಾಪಕರಿಗೆ ಲಿಖಿತವಾಗಿ ಅರ್ಜಿ ಸಲ್ಲಿಸುವ ಮೂಲಕ ಅಥವಾ ರೈಲು ಹೊರಡುವ ಕನಿಷ್ಠ 24 ಗಂಟೆಗಳ ಮೊದಲು ಗಣಕೀಕೃತ ಮೀಸಲಾತಿ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಪ್ರಯಾಣದ ಬೋರ್ಡಿಂಗ್ ನಿಲ್ದಾಣವನ್ನು ಬದಲಾಯಿಸಬಹುದು. ಈ ಸೌಲಭ್ಯವು ಆಫ್‌ಲೈನ್ ಮತ್ತು ಆನ್‌ಲೈನ್ ಟಿಕೆಟ್‌ ಎರಡರಲ್ಲೂ ಲಭ್ಯವಿದೆ.

ಇದನ್ನೂ ಓದಿ- Indian Railways : ರೈಲು ಟಿಕೆಟ್ ಬುಕ್ ಮಾಡುವಾಗ ನೆನಪಿರಲಿ ಈ ಕೋಡ್ ಇಲ್ಲವಾದರೆ ಸಿಗುವುದಿಲ್ಲ ಸೀಟ್

ಪ್ರಯಾಣವನ್ನು ವಿಸ್ತರಿಸಬಹುದು:
ನೀವು ನಿಮ್ಮ ಪ್ರಯಾಣವನ್ನು ಮುಂದುವರಿಸಲು ಬಯಸಿದರೆ, ಅಂದರೆ, ನೀವು ಟಿಕೆಟ್ ಕಾಯ್ದಿರಿಸಿದ (Ticket Booking) ನಿಲ್ದಾಣದಿಂದಲೂ ಮುಂದೆ ಪ್ರಯಾಣಿಸಲು ಬಯಸಿದರೆ, ಇದಕ್ಕಾಗಿ ಪ್ರಯಾಣಿಕರು ಗಮ್ಯಸ್ಥಾನವನ್ನು ತಲುಪುವ ಮೊದಲು ಅಥವಾ ಕಾಯ್ದಿರಿಸಿದ ಪ್ರಯಾಣದ ನಂತರ ಟಿಕೆಟ್ ಪರಿಶೀಲಿಸುವ ಸಿಬ್ಬಂದಿಯನ್ನು ಸಂಪರ್ಕಿಸಬೇಕು. ನಂತರ ಅವರಿಗೆ ಪ್ರಯಾಣದ ವಿವರಗಳ ಬಗ್ಗೆ ಮಾಹಿತಿಯನ್ನು ನೀಡಬೇಕು.

ಪ್ರಯಾಣದ ದಿನಾಂಕವನ್ನು ಒಮ್ಮೆ ಮಾತ್ರ ಬದಲಾಯಿಸಬಹುದು:
ಭಾರತೀಯ ರೈಲ್ವೆಯ (Indian Railways) ವೆಬ್‌ಸೈಟ್‌ನ ಪ್ರಕಾರ, ನಿಲ್ದಾಣದ ಕೌಂಟರ್‌ನಲ್ಲಿ ಬುಕ್ ಮಾಡಿದ ಟಿಕೆಟಿನಲ್ಲಿ ಪ್ರಯಾಣದ ದಿನಾಂಕವನ್ನು ಒಮ್ಮೆ ಮಾತ್ರ 'ಪ್ರಿಪೋನ್' ಅಥವಾ 'ಪೋಸ್ಟ್‌ಪಾನ್' ಮಾಡಬಹುದು. ಪ್ರಯಾಣದ ದಿನಾಂಕವನ್ನು ವಿಸ್ತರಿಸಲು ಅಥವಾ ಮುಂದಕ್ಕೆ ಹಾಕಲು, ಪ್ರಯಾಣಿಕನು ಕಾಯ್ದಿರಿಸುವ ಕಛೇರಿಗೆ ಹೋಗುವ ಮೂಲಕ ರೈಲು ಹೊರಡುವ 48 ಗಂಟೆಗಳ ಮುಂಚಿತವಾಗಿ ತನ್ನ ಟಿಕೆಟ್ ಅನ್ನು ಸಲ್ಲಿಸಬೇಕು. ಈ ಸೌಲಭ್ಯವು ಆಫ್‌ಲೈನ್ ಟಿಕೆಟ್‌ಗಳಿಗೆ ಮಾತ್ರ ಲಭ್ಯವಿದೆ ಎಂಬುದನ್ನು ನೆನಪಿಡಿ, ಆನ್‌ಲೈನ್‌ನಲ್ಲಿ ಬುಕ್ ಮಾಡಿದ ಟಿಕೆಟ್‌ಗಳಲ್ಲಿ ಈ ಸೌಲಭ್ಯವು ಲಭ್ಯವಿರುವುದಿಲ್ಲ.

ಇದನ್ನೂ ಓದಿ- Indian Railways: ರೈಲು ಪ್ರಯಾಣಿಕರಿಗೆ ಬಿಗ್ ಶಾಕ್, ಇನ್ಮುಂದೆ ರೈಲಿನಲ್ಲಿ ಸಿಗಲ್ಲ ಈ ಸೌಕರ್ಯ

ನಿಮ್ಮ ರೈಲು ಪ್ರಯಾಣದ ದಿನಾಂಕವನ್ನು ಹೇಗೆ ಬದಲಾಯಿಸುವುದು?
ಭಾರತೀಯ ರೈಲ್ವೇ ತನ್ನ ಪ್ರಯಾಣಿಕರಿಗೆ ತಮ್ಮ ಕನ್ಫರ್ಮ್/ಆರ್‌ಎಸಿ/ವೇಟಿಂಗ್ ಟಿಕೆಟ್ ನಲ್ಲಿ ಪ್ರಯಾಣದ ದಿನಾಂಕವನ್ನು ಬದಲಾಯಿಸುವ ಸೌಲಭ್ಯವನ್ನು ಒದಗಿಸುತ್ತದೆ. ಭಾರತೀಯ ರೈಲ್ವೆಯ ಪ್ರಕಾರ, ಈ ಟಿಕೆಟ್‌ಗಳಲ್ಲಿ ಪ್ರಯಾಣದ ದಿನಾಂಕವನ್ನು 'ಪ್ರಿಪೋನ್' ಅಥವಾ 'ಪೋಸ್ಟ್‌ಪಾನ್ ಅದೇ ವರ್ಗ/ಉನ್ನತ ವರ್ಗಕ್ಕೆ ಅಥವಾ ನಿಗದಿತ ಶುಲ್ಕ ಪಾವತಿಯ ಮೇಲೆ ಅದೇ ಸ್ಥಳಕ್ಕೆ ತಲುಪಬಹುದು. ಇದರ ಹೊರತಾಗಿ, ಪ್ರಯಾಣಿಕರು ತಮ್ಮ ಪ್ರಯಾಣವನ್ನು ವಿಸ್ತರಿಸಲು, ತಮ್ಮ ಪ್ರಯಾಣದ ಬೋರ್ಡಿಂಗ್ ನಿಲ್ದಾಣವನ್ನು ಬದಲಾಯಿಸಲು ಮತ್ತು ಅವರ ಟಿಕೆಟ್‌ಗಳನ್ನು ಉನ್ನತ ದರ್ಜೆಗೆ ಅಪ್‌ಗ್ರೇಡ್ ಮಾಡಲು ಸಹ ರೈಲ್ವೇ ಅನುಮತಿಸುತ್ತದೆ. ಈ ಕೆಲವು ಸೌಲಭ್ಯಗಳು ಆಫ್‌ಲೈನ್ ಟಿಕೆಟ್‌ಗಳಿಗೆ ಮಾತ್ರ ಅನ್ವಯವಾಗಿದ್ದರೆ, ಇತರವು ಆಫ್‌ಲೈನ್ ಮತ್ತು ಆನ್‌ಲೈನ್ ಎರಡೂ ಟಿಕೆಟ್‌ಗಳಿಗೆ ಲಭ್ಯವಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News