ಸ್ವಂತ ಜಮೀನು ಹೊಂದಿರುವವರಿಗೆ ಸರ್ಕಾರದ ಮಹತ್ವದ ಘೋಷಣೆ!

ಇದೀಗ ಸರ್ಕಾರ ಭೂಮಿಗೂ ಆಧಾರ್ ಸಂಖ್ಯೆ ಅಗತ್ಯ ಎಂದು ಹೇಳಿದೆ. ಒಂದು ದೇಶ ಒಂದು ನೋಂದಣಿ ಯೋಜನೆಯಡಿ ಕೇಂದ್ರ ಸರ್ಕಾರ ಈ  ನಿಯಮವನ್ನು ಜಾರಿಗೆ ತರಲಿದೆ. ಈ ಯೋಜನೆ ಅಡಿಯಲ್ಲಿ ಭೂ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಇಡಲಾಗುವುದು.  

Written by - Ranjitha R K | Last Updated : Feb 22, 2023, 12:20 PM IST
  • ಭಾರತದ ನಾಗರಿಕರಿಗೆ ಆಧಾರ್ ಕಾರ್ಡ್ ಪ್ರಮುಖ ಗುರುತಿನ ದಾಖಲೆ
  • ಭೂಮಿಗೂ ಆಧಾರ್ ಸಂಖ್ಯೆ ಅಗತ್ಯ
  • ಭೂ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಇಡಲಾಗುವುದು.
ಸ್ವಂತ ಜಮೀನು ಹೊಂದಿರುವವರಿಗೆ ಸರ್ಕಾರದ ಮಹತ್ವದ ಘೋಷಣೆ!  title=

ನವದೆಹಲಿ : ಭಾರತದ ನಾಗರಿಕರಿಗೆ ಆಧಾರ್ ಕಾರ್ಡ್ ಪ್ರಮುಖ ಗುರುತಿನ ದಾಖಲೆಯಾಗಿದೆ. ಭಾರತದ ವಿಶಿಷ್ಟ ಗುರುತಿನ ದಾಖಲೆಯಿಂದ ನೀಡಲಾದ ಈ ಕಾರ್ಡ್, ಎಲ್ಲಾ ಸರ್ಕಾರಿ ಕೆಲಸಗಳಿಗೂ ಬೇಕಾಗುವ ಅಗತ್ಯ ದಾಖಲೆಯಾಗಿದೆ. ಈ ಹಿನ್ನೆಲೆಯಲ್ಲಿಯೇ ಇತರ ಪ್ರಮುಖ ದಾಖಲೆಗಳೊಂದಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವಂತೆ ಸರ್ಕಾರ ಪದೇ ಪದೇ  ಸೂಚಿಸುತ್ತಿರುತ್ತದೆ. ಇದೀಗ ಸರ್ಕಾರ ಭೂಮಿಗೂ ಆಧಾರ್ ಸಂಖ್ಯೆ ಅಗತ್ಯ ಎಂದು ಹೇಳಿದೆ. ಒಂದು ದೇಶ ಒಂದು ನೋಂದಣಿ ಯೋಜನೆಯಡಿ ಕೇಂದ್ರ ಸರ್ಕಾರ ಈ  ನಿಯಮವನ್ನು ಜಾರಿಗೆ ತರಲಿದೆ. ಈ ಯೋಜನೆ ಅಡಿಯಲ್ಲಿ ಭೂ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಇಡಲಾಗುವುದು.  

ಈ ಸಂಬಂಧ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಭೂ ದಾಖಲೆಗಳನ್ನು ಡಿಜಿಟಲ್ ಆಗಿ ಇರಿಸಲು ಐಪಿ ಆಧಾರಿತ ತಂತ್ರಜ್ಞಾನವನ್ನು ಬಳಸಲಾಗುವುದು. ಇಂತಹ ಡಿಜಿಟಲ್ ಭೂ ದಾಖಲೆಗಳಿಂದ ಜನರಿಗೆ ಹಲವು ರೀತಿಯಲ್ಲಿ ಅನುಕೂಲವಾಗಲಿದೆ ಎನ್ನಲಾಗಿದೆ. ಇದನ್ನು 3C ಸೂತ್ರದ ಅಡಿಯಲ್ಲಿ ವಿತರಿಸಲಾಗುವುದು.  ಇದರ ಅಡಿಯಲ್ಲಿ ಸೆಂಟ್ರಲ್ ಆಫ್ ರೆಕಾರ್ಡ್, ಕಲೆಕ್ಷನ್ ಆಫ್ ರೆಕಾರ್ಡ್ ಮೂಲಕ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.

ಇದನ್ನೂ ಓದಿ : ವಿದೇಶಗಳಲ್ಲಿಯೂ ನಡೆಸಬಹುದು ಯುಪಿಐ ವಹಿವಾಟು! ಸರ್ಕಾರದಿಂದ ವಿಶೇಷ ಸೌಲಭ್ಯ ಪ್ರಾರಂಭ

ಭೂಮಿ ನೋಂದಣಿಯಲ್ಲಿ 14 ಅಂಕಿಗಳ ULPIN ಸಂಖ್ಯೆಯನ್ನು ನೀಡಲಾಗುವುದು. ಇನ್ನೂ ಸುಲಭವಾಗಿ ಹೇಳಬೇಕೆಂದರೆ  ಇದು ನಿಮ್ಮ ಜಮೀನಿನ ಆಧಾರ್  ಸಂಖ್ಯೆಯಾಗಿರುತ್ತದೆ. ಈ ಭೂಮಿ ಆಧಾರ್ ಸಂಖ್ಯೆಯೊಂದಿಗೆ  ಒಂದೇ ಕ್ಲಿಕ್‌ನಲ್ಲಿ ನಿಮ್ಮ ಭೂಮಿ ಸಂಬಂಧಿತ ಎಲ್ಲಾ ದಾಖಲೆಗಳನ್ನು ಮನೆಯಿಂದಲೇ ಪರಿಶೀಲಿಸಬಹುದು. ಇದಲ್ಲದೇ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಂತಹ ಅನೇಕ ಯೋಜನೆಗಳಿಗೆ ಈ ULPIN ಅನ್ನು ಬಳಸಬಹುದು. ಮತ್ತು ULPIN ಸಂಖ್ಯೆಯೊಂದಿಗೆ ದೇಶದಲ್ಲಿ ಎಲ್ಲಿ ಬೇಕಾದರೂ ಭೂಮಿಯನ್ನು ಖರೀದಿಸುವ ಮತ್ತು ಮಾರಾಟ ಮಾಡಬಹುದು. ಈ ಪ್ರಕ್ರಿಯೆಯಲ್ಲಿ ಯಾವುದೇ ಗೊಂದಲ ಇರುವುದಿಲ್ಲ.  ಈ  ULPIN ಸಂಖ್ಯೆಯ ಮೂಲಕ ಜಮೀನು ಖರೀದಿದಾರ ಮತ್ತು ಮಾರಾಟಗಾರರ ಬಗ್ಗೆ ಎಲ್ಲಾ ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳಬಹುದು. ಒಂದು ವೇಳೆ ನಿಮ್ಮಲ್ಲಿರುವ ಜಮೀನು ವಿಭಜನೆಯಾದರೆ ಆಗ ಅದರ ಆಧಾರ್ ಸಂಖ್ಯೆ ಕೂಡಾ ಬೇರೆಯಾಗಲಿದೆ.

ಡಿಜಿಟಲ್ ದಾಖಲೆಯಿಂದಾಗಿ ಮೊದಲು ಜಮೀನಿನ ವಾಸ್ತವ ಸ್ಥಿತಿ ತಿಳಿಯಲಿದೆ. ಏಕೆಂದರೆ ಡ್ರೋನ್ ಕ್ಯಾಮೆರಾದ ಸಹಾಯದಿಂದ ಇಲ್ಲಿ  ಭೂಮಿಯನ್ನು ಅಳೆಯಲಾಗುತ್ತದೆ. ಹೀಗಾಗಿ ಯಾವುದೇ ರೀತಿಯ ತಪ್ಪಾಗುವ ಸಾಧ್ಯತೆಗಳು ತೀರಾ ಕಡಿಮೆ. ಡಿಜಿಟಲ್ ದಾಖಲೆಯ ನಂತರ,   ನಗರದ ಸಾಮಾನ್ಯ ಸೇವಾ ಕೇಂದ್ರಕ್ಕೆ ಹೋಗುವ ಮೂಲಕ ತನ್ನ ಭೂಮಿಯ ಬಗ್ಗೆ ಮಾಹಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ. 

ಇದನ್ನೂ ಓದಿ : ಕಡಿಮೆ ಅವಧಿಯಲ್ಲಿ ಹಣವೂ ದ್ವಿಗುಣ ಬಡ್ಡಿದರವೂ ಹೆಚ್ಚು ! ಅಂಚೆ ಕಚೇರಿಯ ಹೊಸ ಸ್ಕೀಮ್

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News