Syndicate Bank ಗ್ರಾಹಕರ ಗಮನಕ್ಕೆ : ಬದಲಾಗಲಿದೆ ಸಿಂಡಿಕೇಟ್‌ ಬ್ಯಾಂಕ್ IFSC ಕೋಡ್‌!

 ಸಿಂಡಿಕೇಟ್ ಬ್ಯಾಂಕ್‌ನ ಶಾಖೆನ IFSC ಕೋಡ್‌ ಜುಲೈ 1ರಿಂದ ಬದಲಾಗಲಿದೆ

Last Updated : Jun 11, 2021, 05:36 PM IST
  • ಸಿಂಡಿಕೇಟ್ ಬ್ಯಾಂಕ್‌ನ ಶಾಖೆನ IFSC ಕೋಡ್‌ ಜುಲೈ 1ರಿಂದ ಬದಲಾಗಲಿದೆ
  • ಸಿಂಡಿಕೇಟ್‌ ಬ್ಯಾಂಕ್‌, ಕೆನರಾ ಬ್ಯಾಂಕ್‌ ಜೊತೆ ಈಗಾಗಲೇ ವಿಲೀನ ಆಗಿದ್ದು
  • ಕೆನರಾ ಬ್ಯಾಂಕ್‌ ನೀಡುವ ಹೊಸ IFSC ಕೋಡ್ ಬಳಕೆ ಮಾಡಬೇಕಿದೆ
Syndicate Bank ಗ್ರಾಹಕರ ಗಮನಕ್ಕೆ : ಬದಲಾಗಲಿದೆ ಸಿಂಡಿಕೇಟ್‌ ಬ್ಯಾಂಕ್ IFSC ಕೋಡ್‌! title=

ನವದೆಹಲಿ : ಹಿಂದಿನ ಸಿಂಡಿಕೇಟ್ ಬ್ಯಾಂಕ್‌ನ ಶಾಖೆನ ಐಎಫ್‌ಎಸ್‌ಸಿ(IFSC) ಕೋಡ್‌ ಜುಲೈ 1ರಿಂದ ಬದಲಾಗಲಿದೆ. ಸಿಂಡಿಕೇಟ್‌ ಬ್ಯಾಂಕ್‌, ಕೆನರಾ ಬ್ಯಾಂಕ್‌ ಜೊತೆ ಈಗಾಗಲೇ ವಿಲೀನ ಆಗಿದ್ದು,  NEFT, RTGS, IMPS ವ್ಯವಸ್ಥೆಗಳ ಮೂಲಕ ಹಣ ವರ್ಗಾವಣೆ ಮಾಡುವವರು ಕೆನರಾ ಬ್ಯಾಂಕ್‌ ನೀಡುವ ಹೊಸ IFSC ಕೋಡ್ ಬಳಕೆ ಮಾಡಬೇಕಿದೆ.

ಹಿಂದೆ ಸಿಂಡಿಕೇಟ್ ಬ್ಯಾಂಕ್‌ ಶಾಖೆ(Syndicate Bank Branches)ಗಳಾಗಿದ್ದ, ಈಗ ಕೆನರಾ ಬ್ಯಾಂಕ್‌ನ ಶಾಖೆಗಳಾಗಿ ಪರಿವರ್ತನೆ ಕಂಡಿರುವ ಶಾಖೆಗಳ IFSC ಕೋಡ್ ಯಾವುದು ಎಂಬುದನ್ನು canarabank.com/IFSC.html ವಿಳಾಸಕ್ಕೆ ಭೇಟಿ ನೀಡಿ ಕಂಡುಕೊಳ್ಳಬಹುದು ಎಂದು ಕೆನರಾ ಬ್ಯಾಂಕ್ ಪ್ರಕಟಣೆ ತಿಳಿಸಿದೆ. ಅಲ್ಲದೆ, ಕೆನರಾ ಬ್ಯಾಂಕ್‌ನ ಯಾವುದೇ ಶಾಖೆಗೆ ಭೇಟಿ ನೀಡಿ ಹೊಸ ಐಎಫ್‌ಎಸ್‌ಸಿ ಕೋಡ್‌ ತಿಳಿದುಕೊಳ್ಳಬಹುದು.

ಇದನ್ನೂ ಓದಿ : ನಿಮ್ಮಲ್ಲೂ ಈ ನಾಣ್ಯಗಳಿದ್ದರೆ ಕುಳಿತಲ್ಲೇ ಗಳಿಸಬಹುದು 5 ಲಕ್ಷ ರೂಪಾಯಿ

ಸಿಂಡಿಕೇಟ್ ಬ್ಯಾಂಕ್‌(Syndicate Bank)ನ ಗ್ರಾಹಕರಾಗಿದ್ದವರು ಬದಲಾಗಿರುವ IFSC ಹಾಗೂ MICR ಕೋಡ್ ಇರುವ ಹೊಸ ಚೆಕ್ ಬುಕ್ ಪಡೆದುಕೊಳ್ಳಬೇಕು.

ಇದನ್ನೂ ಓದಿ : PPF ಖಾತೆಯ ಮುಕ್ತಾಯದ ನಂತರ ಲಭ್ಯವಿರುವ ಈ 3 ಆಯ್ಕೆಗಳ ಬಗ್ಗೆ ನಿಮಗೆ ತಿಳಿದಿದೆಯೇ?

ವಿದೇಶಿ ವಿನಿಮಯ(Foreign Exchange) ವಹಿವಾಟುಗಳಲ್ಲಿ ಬಳಕೆ ಮಾಡುವ ಸ್ವಿಫ್ಟ್‌ ಕೋಡ್‌ ಸಹ ಜುಲೈ 1ರಿಂದ ಬದಲಾಗಲಿದೆ. ವಿದೇಶಿ ವಿನಿಮಯ ವಹಿವಾಟುಗಳಲ್ಲಿ ಗ್ರಾಹಕರು CNRBINBBFD ಕೋಡ್‌ಅನ್ನು ಬಳಕೆ ಮಾಡಬೇಕು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ : EPF Medical Advance: ಆಸ್ಪತ್ರೆಗೆ ದಾಖಲಾದರೆ ತಕ್ಷಣ ಸಿಗಲಿದೆ ಒಂದು ಲಕ್ಷ ರೂ.

ಸಿಂಡಿಕೇಟ್ ಬ್ಯಾಂಕ್‌, ಕೆನರಾ ಬ್ಯಾಂಕ್(Canara Bank) ಜೊತೆ 2020ರ ಏಪ್ರಿಲ್‌ನಲ್ಲಿ ವಿಲೀನಗೊಂಡಿದೆ. ವಿಲೀನದ ನಂತರ ಕೆನರಾ ಬ್ಯಾಂಕ್ ದೇಶದಲ್ಲಿ, ಸರ್ಕಾರಿ ಸ್ವಾಮ್ಯದ ನಾಲ್ಕನೆಯ ಅತಿದೊಡ್ಡ ಬ್ಯಾಂಕ್ ಆಗಿದೆ.

ಇದನ್ನೂ ಓದಿ : PPF Account Inactive: ಈ ತಪ್ಪು ಮಾಡಿದರೆ ಬಂದ್ ಆಗಲಿದೆ ನಿಮ್ಮ ಪಿಪಿಎಫ್ ಖಾತೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News