12,000 ದಷ್ಟು ಹೆಚ್ಚಾಗುವುದು ಸರ್ಕಾರಿ ನೌಕರರ ವೇತನ ! 24 ಗಂಟೆಯಲ್ಲಿ ನಿರ್ಧಾರ ಪ್ರಕಟ

7th Pay commission Latest News :ಬುಧವಾರದ ಕೇಂದ್ರ ಸಚಿವ ಸಂಪುಟದ ಸಭೆಯ ನಂತರ ಪ್ರಧಾನಿ ನರೇಂದ್ರ ಮೋದಿ,  ತುಟ್ಟಿಭತ್ಯೆ ಹೆಚ್ಚಳವನ್ನು ಘೋಷಿಸಲಿದ್ದಾರೆ.  ಹೆಚ್ಚಳವಾದ ತುಟ್ಟಿಭತ್ಯೆ ಜನವರಿ 2023 ರಿಂದ ಅನ್ವಯವಾಗಲಿದೆ.    

Written by - Ranjitha R K | Last Updated : Mar 14, 2023, 12:16 PM IST
  • ತುಟ್ಟಿಭತ್ಯೆ ಹೆಚ್ಚಳ ನಿರ್ಧಾರ 24 ಗಂಟೆಗಳಲ್ಲಿ ಪ್ರಕಟ
  • ಮೋದಿ ಸಂಪುಟ ಸಭೆಯಲ್ಲಿ ಡಿಎ ಹೆಚ್ಚಳಕ್ಕೆ ಸಿಗಲಿದೆ ಅನುಮೋದನೆ
  • ಹೊಸ ಡಿಎ ಜನವರಿ 2023 ರಿಂದ ಅನ್ವಯ
12,000 ದಷ್ಟು ಹೆಚ್ಚಾಗುವುದು ಸರ್ಕಾರಿ  ನೌಕರರ ವೇತನ !  24 ಗಂಟೆಯಲ್ಲಿ ನಿರ್ಧಾರ ಪ್ರಕಟ  title=

7th Pay commission Latest News : ತುಟ್ಟಿಭತ್ಯೆ ಹೆಚ್ಚಳಕ್ಕಾಗಿ ಕಾಯುತ್ತಿದ್ದ ಕೇಂದ್ರ ಸರ್ಕಾರಿ ನೌಕರರ ನಿರೀಕ್ಷೆ ಮುಂದಿನ 24 ಗಂಟೆಗಳಲ್ಲಿ ಪೂರ್ಣಗೊಳ್ಳಲಿದೆ.  ನಾಳೆ  ನಡೆಯಲಿರುವ ಮೋದಿ ಸಂಪುಟ ಸಭೆಯಲ್ಲಿ ಡಿಎ ಹೆಚ್ಚಳಕ್ಕೆ ಅನುಮೋದನೆ ದೊರೆಯಲಿದೆ. ಕಳೆದ ಆರು ತಿಂಗಳ ಎಐಸಿಪಿಐ ಆಧಾರದ ಮೇಲೆ ತುಟ್ಟಿಭತ್ಯೆಯಲ್ಲಿ ಶೇ.4ರಷ್ಟು ಹೆಚ್ಚಳವಾಗಲಿದೆ ಎಂದು ಹೇಳಲಾಗುತ್ತಿದೆ.  ಪ್ರಸ್ತುತ ಡಿಎ ಶೇ.38ರಷ್ಟಿದೆ. ಮುಂದಿನ ದಿನಗಳಲ್ಲಿ ಇದು ಶೇ 42ಕ್ಕೆ ಏರಿಕೆಯಾಗಲಿದೆ.

ಹೊಸ ಡಿಎ ಜನವರಿ 2023 ರಿಂದ ಅನ್ವಯ :
ಬುಧವಾರದ ಕೇಂದ್ರ ಸಚಿವ ಸಂಪುಟದ ಸಭೆಯ ನಂತರ ಪ್ರಧಾನಿ ನರೇಂದ್ರ ಮೋದಿ,  ತುಟ್ಟಿಭತ್ಯೆ ಹೆಚ್ಚಳವನ್ನು ಘೋಷಿಸಲಿದ್ದಾರೆ.  ಹೆಚ್ಚಳವಾದ ತುಟ್ಟಿಭತ್ಯೆ ಜನವರಿ 2023 ರಿಂದ ಅನ್ವಯವಾಗಲಿದೆ. ಮಾರ್ಚ್ ತಿಂಗಳ ವೇತನದಲ್ಲಿ ನೌಕರರಿಗೆ ಎರಡು ತಿಂಗಳ ಬಾಕಿ ಡಿಎ ಸಿಗಲಿದೆ. ತುಟ್ಟಿಭತ್ಯೆ ಹೆಚ್ಚಳಕ್ಕೆ ಬುಧವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಔಪಚಾರಿಕವಾಗಿ ಅನುಮೋದನೆ ದೊರೆಯಲಿದೆ.

ಇದನ್ನೂ ಓದಿ : Renault Triber: 7 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಅದ್ಭುತ ಕಾರು, ಬೆಲೆ ಎಷ್ಟು ಗೊತ್ತಾ?

ಮಾರ್ಚ್ ತಿಂಗಳ ವೇತನದೊಂದಿಗೆ ಸಿಗಲಿದೆ ಬಾಕಿ ಹಣ : 
ತುಟ್ಟಿ ಭತ್ಯೆ ಹೆಚ್ಚಳಕ್ಕೆ ಸ್ವತಃ ಪ್ರಧಾನಿ ಮೋದಿ ಸಂಪುಟ ಸಭೆಯಲ್ಲಿ ಅನುಮೋದಿಸುವ ನಿರೀಕ್ಷೆಯಿದೆ. ಇದಾದ ನಂತರ ಹಣಕಾಸು ಸಚಿವಾಲಯದಿಂದ ಸೂಚನೆ ನೀಡಲಾಗುವುದು. ಮಾರ್ಚ್ ತಿಂಗಳ  ವೇತನದೊಂದಿಗೆ ಹೆಚ್ಚಿದ ತುಟ್ಟಿಭತ್ಯೆ ಕೂಡಾ ನೌಕರರ ಖಾತೆ ಸೇರಲಿದೆ.  2023ರ ಜನವರಿಯಿಂದ ಈ ಭತ್ಯೆ ಜಾರಿಯಾಗಬೇಕಿರುವುದರಿಂದ ನೌಕರರು ಜನವರಿ ಮತ್ತು ಫೆಬ್ರವರಿ ತಿಂಗಳ ಬಾಕಿ ಡಿ ಎ ಯನ್ನು ಮಾರ್ಚ್ ವೇತನದಲ್ಲಿ ಪಡೆಯಲಿದ್ದಾರೆ. 

ಪ್ರತಿ ತಿಂಗಳು ಹೆಚ್ಚಾಗಲಿದೆ 1,000 ರೂಪಾಯಿ:
ತುಟ್ಟಿಭತ್ಯೆ  38 ಪ್ರತಿಶತದಿಂದ 42 ಪ್ರತಿಶತಕ್ಕೆ ಹೆಚ್ಚಾಗಲಿದೆ. ಪೇ ಬ್ಯಾಂಡ್ 3 ರಲ್ಲಿನ ಒಟ್ಟು ಹೆಚ್ಚಳ (18,000 ರೂ.  ಮೂಲ ವೇತನದೊಂದಿಗೆ) ತಿಂಗಳಿಗೆ 720 ರೂ. ಆಗಿರಲಿದೆ. ಅಂದರೆ ಜನವರಿ ಮತ್ತು ಫೆಬ್ರುವರಿ ತಿಂಗಳ ಬಾಕಿ ಡಿಎ  720X2=1440 ರೂ. ನಿಮ್ಮ ಮೂಲ ವೇತನ  25,000 ರೂಪಾಯಿ ಆಗಿದ್ದರೆ, ಪ್ರಸ್ತುತ 9500 ರೂಪಾಯಿ ತುಟ್ಟಿಭತ್ಯೆ ಸಿಗುತ್ತಿದೆ. ಆದರೆ ಡಿಎ ಶೇ.42ಕ್ಕೆ ಹೆಚ್ಚಾದಾಗ ಅದು 10,500 ರೂ. ಆಗುತ್ತದೆ. ಅಂದರೆ, ವಾರ್ಷಿಕವಾಗಿ ನಿಮ್ಮ ಸಂಬಳದಲ್ಲಿ 12,000 ರೂ. ಹೆಚ್ಚಾದಂತೆ ಆಗುತ್ತದೆ. 

ಇದನ್ನೂ ಓದಿ ಡಿಜಿಟಲ್ ಯುಗದಲ್ಲಿ ಕಾಂತ್ರಿ ಸೃಷ್ಟಿಸುತ್ತಿರುವ Unity Meta Token

ಪಿಂಚಣಿದಾರರಿಗೂ ಪರಿಹಾರ ಸಿಗಲಿದೆ :
ದೇಶದ ಲಕ್ಷಾಂತರ ಪಿಂಚಣಿದಾರರಿಗೂ ಈ ಬಾರಿ ಸಿಹಿ ಸುದ್ದಿ ಸಿಗಲಿದೆ. ಡಿಎ ಹೆಚ್ಚಳದ ಜೊತೆಗೆ, ಸರ್ಕಾರವು ಡಿಆರ್ ಅನ್ನು 4% ರಷ್ಟು ಹೆಚ್ಚಿಸಲು ಹೊರಟಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News