ಜನಸಾಮಾನ್ಯರಿಗೆ ಸಂತಸದ ಸುದ್ದಿ.! ಅಗ್ಗವಾಗಲಿದೆ ಗ್ಯಾಸ್ ಸಿಲಿಂಡರ್ ಬೆಲೆ .!

Gas Price Today:  ಸದ್ಯದಲ್ಲೇ ಗ್ಯಾಸ್ ಬೆಲೆ ಅಗ್ಗವಾಗಿಸಲು ಕೇಂದ್ರ ಸರ್ಕಾರ ವಿಶೇಷ ಯೋಜನೆ ರೂಪಿಸುತ್ತಿದೆ. ಇದರಿಂದ ಅಡುಗೆ ಅನಿಲ ಸೇರಿದಂತೆ ಸಿಎನ್‌ಜಿ ಬೆಲೆ ಕೂಡಾ ಇಳಿಕೆಯಾಗಲಿದೆ.   

Written by - Ranjitha R K | Last Updated : Nov 28, 2022, 03:53 PM IST
  • ದಿನಬಳಕೆಯ ಗೃಹ ಬಳಕೆಯ ವಸ್ತುಗಳ ಬೆಲೆ ದಿನೇ ದಿನೇ ಹೆಚ್ಚುತ್ತಲೇ ಇದೆ
  • ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ.
  • ಜನ ಸಾಮಾನ್ಯರು ನಿಟ್ಟುಸಿರು ಬಿಡುವಂಥಹ ಸುದ್ದಿಯೊಂದು ಕೇಳಿ ಬಂದಿದೆ.
ಜನಸಾಮಾನ್ಯರಿಗೆ ಸಂತಸದ ಸುದ್ದಿ.!  ಅಗ್ಗವಾಗಲಿದೆ ಗ್ಯಾಸ್ ಸಿಲಿಂಡರ್ ಬೆಲೆ .! title=
Gas Price Today

Gas Price Today : ಈ ದುಬಾರಿ ದುನಿಯಾದಲ್ಲಿ ದಿನಬಳಕೆಯ ಗೃಹ ಬಳಕೆಯ ವಸ್ತುಗಳ ಬೆಲೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಅದರಲ್ಲೂ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ.  ಈ ಮಧ್ಯೆ ಜನ ಸಾಮಾನ್ಯರು ನಿಟ್ಟುಸಿರು ಬಿಡುವಂಥಹ ಸುದ್ದಿಯೊಂದು ಕೇಳಿ ಬಂದಿದೆ. ಹೌದು, ಸದ್ಯದಲ್ಲೇ ಗ್ಯಾಸ್ ಬೆಲೆ ಅಗ್ಗವಾಗಿಸಲು ಕೇಂದ್ರ ಸರ್ಕಾರ ವಿಶೇಷ ಯೋಜನೆ ರೂಪಿಸುತ್ತಿದೆ. ಇದರಿಂದ ಅಡುಗೆ ಅನಿಲ ಸೇರಿದಂತೆ ಸಿಎನ್‌ಜಿ ಬೆಲೆ ಕೂಡಾ ಇಳಿಕೆಯಾಗಲಿದೆ. 

ನಿರ್ಧಾರವಾಗಬಹುದು ಗ್ಯಾಸ್ ಬೆಲೆ ಮಿತಿ : 
ಅನಿಲ ಬೆಲೆಗಳನ್ನು ಪರಿಶೀಲಿಸುವ ಸಲುವಾಗಿ ಕಮಿಟಿ ವತಿಯಿಂದ ಯೋಜನೆಯನ್ನು ರೂಪಿಸಲಾಗುತ್ತಿದೆ. ಈ ಯೋಜನೆ ಅಡಿಯಲ್ಲಿ  ಸಾರ್ವಜನಿಕ ವಲಯದ ಕಂಪನಿಗಳ ಓಲ್ಡ್ ಫೀಲ್ಡ್ ನಿಂದ ಹೊರಬರುವ ನೈಸರ್ಗಿಕ ಅನಿಲದ ಬೆಲೆ ಮಿತಿಯನ್ನು ನಿಗದಿಪಡಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು. ಸರ್ಕಾರದ ಈ ನಿರ್ಧಾರದಿಂದ ಸಿಎನ್‌ಜಿ ಮತ್ತು ಪಿಎನ್‌ಜಿ ಎರಡರ ಬೆಲೆಯೂ ಇಳಿಕೆಯಾಗಲಿದೆ. 

ಇದನ್ನೂ ಓದಿ : Arecanut today price: ರಾಜ್ಯದ ಮಾರುಕಟ್ಟೆಯಲ್ಲಿ ಕುಸಿತ ಕಂಡ ಅಡಿಕೆ ದರ

 ಶೀಘ್ರದಲ್ಲೇ ಸರ್ಕಾರದ ಮುಂದೆ  ವರದಿ ಮಂಡನೆ : 
 ಸುದ್ದಿ ಮೂಲಗಳ ಪ್ರಕಾರ, ಮಾಜಿ ಯೋಜನಾ ಆಯೋಗದ ಸದಸ್ಯ ಕಿರೀಟ್ ಎಸ್. ಪರೇಖ್ ನೇತೃತ್ವದ ಸಮಿತಿಯು ಈ ಬಗ್ಗೆ ಕಾರ್ಯನಿರ್ವಹಿಸುತ್ತಿದೆ. ಅದಕ್ಕೆ ಅಂತಿಮ ರೂಪ ನೀಡುವ ಹಂತದಲ್ಲಿದೆ. ಸಮಿತಿಯು ಶೀಘ್ರದಲ್ಲೇ ತನ್ನ ವರದಿಯನ್ನು ಸರ್ಕಾರದ ಮುಂದೆ ಮಂಡಿಸಲಿದೆ ಎನ್ನಲಾಗಿದೆ.

ಅಧಿಕಾರಿಗಳ ಮೂಲದಿಂದ ಬಂದ ಮಾಹಿತಿ : 
ಅಧಿಕಾರಿಗಳಿಂದ ಪಡೆದ ಮಾಹಿತಿಯ ಪ್ರಕಾರ, ಸಮಿತಿಯು 2 ರೀತಿಯ ಬೆಲೆಯ ಬಗ್ಗೆ ಶಿಫಾರಸು ಮಾಡಬಹುದು. ಇದರೊಂದಿಗೆ ಓಎನ್‌ಜಿಸಿ ಮತ್ತು ಆಯಿಲ್ ಇಂಡಿಯಾ ಲಿಮಿಟೆಡ್‌ನ ಹಳೆಯ ಫೀಲ್ಡ್‌ಗಳಿಂದ ಹೊರಬರುವ ಗ್ಯಾಸ್ ಬೆಲೆ ಮಿತಿಯನ್ನು ನಿಗದಿಪಡಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. 

ಇದನ್ನೂ ಓದಿ : Gold Price Today : ವಾರದ ಮೊದಲ ದಿನ ಎಷ್ಟಿದೆ ಚಿನ್ನ ಬೆಳ್ಳಿ ಬೆಲೆ ?

ಸ್ಥಳಕ್ಕನುಗುಣವಾಗಿ ಸಿದ್ದವಾಗಲಿದೆ ಸೂತ್ರ : 
ಪ್ರದೇಶಕ್ಕೆ ಅನುಗುಣವಾಗಿ, ಸರ್ಕಾರವು ವಿಭಿನ್ನ ಸೂತ್ರಗಳನ್ನು ಮಾಡುವ ತಯಾರಿಯಲ್ಲಿದೆ. ಅಲ್ಲದೆ, ಅಸ್ತಿತ್ವದಲ್ಲಿರುವ ಸೂತ್ರವನ್ನು ನಿರ್ವಹಿಸುವ ಸಾಧ್ಯತೆಯಿದೆ ಎಂದು ನಿರೀಕ್ಷಿಸಲಾಗಿದೆ.  ಅಸ್ತಿತ್ವದಲ್ಲಿರುವ ಸೂತ್ರದ ಪ್ರಕಾರ ಹೆಚ್ಚಿನ ದರ ಪಾವತಿಸಲಾಗುತ್ತದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News