Free LPG : ಉಚಿತ ಸಿಲಿಂಡರ್ ಪಡೆಯಲು ಇನ್ನೆರಡೇ ದಿನ ಬಾಕಿ

ಎಚ್‌ಪಿ, ಇಂಡೇನ್ ಮತ್ತು ಭಾರತ್ ಗ್ಯಾಸ್ ಕಂಪನಿಯ ಎಲ್‌ಪಿಜಿ (LPG) ಸಿಲಿಂಡರ್ ಅನ್ನು ಉಚಿತವಾಗಿ ಖರೀದಿಸಲು ಇನ್ನು ಕೇವಲ ಎರಡು ದಿನಗಳು ಮಾತ್ರ ಉಳಿದಿವೆ.

Written by - Ranjitha R K | Last Updated : Jan 29, 2021, 08:30 PM IST
  • LPG ಸಿಲಿಂಡರ್ ಉಚಿತವಾಗಿ ಖರೀದಿಸಲು ಎರಡು ದಿನಗಳು ಮಾತ್ರ ಬಾಕಿ
  • ಜ. 31ರ ವರೆಗೆ Paytm ನೀಡುತ್ತಿದೆ ಕ್ಯಾಶ್‌ಬ್ಯಾಕ್ ಕೊಡುಗೆ
  • Paytm ಮೂಲಕ ಗ್ಯಾಸ್ ಬುಕ್ ಮಾಡಿದರೆ ಸಿಗಲಿದೆ ಲಾಭ
Free LPG : ಉಚಿತ ಸಿಲಿಂಡರ್ ಪಡೆಯಲು ಇನ್ನೆರಡೇ ದಿನ ಬಾಕಿ title=
Paytm ಮೂಲಕ ಗ್ಯಾಸ್ ಬುಕ್ ಮಾಡಿದರೆ ಸಿಗಲಿದೆ ಲಾಭ(file photo)

ನವದೆಹಲಿ: ಎಚ್‌ಪಿ, ಇಂಡೇನ್ ಮತ್ತು ಭಾರತ್ ಗ್ಯಾಸ್ ಕಂಪನಿಯ ಎಲ್‌ಪಿಜಿ (LPG) ಸಿಲಿಂಡರ್ ಅನ್ನು ಉಚಿತವಾಗಿ ಖರೀದಿಸಲು ಇನ್ನು ಕೇವಲ ಎರಡು ದಿನಗಳು ಮಾತ್ರ ಉಳಿದಿವೆ. ನೀವು ಇನ್ನೂ Paytm ನ ಹೊಸ ಯೋಜನೆಯ ಲಾಭವನ್ನು ಪಡೆದುಕೊಳ್ಳದಿದ್ದರೆ, ಇನ್ನು ಮುಂದೆ ವಿಳಂಬ ಮಾಡಬೇಡಿ.

Paytm ನೀಡುತ್ತಿದೆ ಕ್ಯಾಶ್‌ಬ್ಯಾಕ್ ಕೊಡುಗೆ :
ಪೇಟಿಎಂನ (Paytm) ಹೊಸ ಯೋಜನೆಯಡಿ, ಎಲ್‌ಪಿಜಿ (LPG) ಸಿಲಿಂಡರ್‌ಗಳ ಬುಕಿಂಗ್‌ನಲ್ಲಿ 700 ರೂ.ಗಳ ಕ್ಯಾಶ್‌ಬ್ಯಾಕ್ (Cashback) ಆಫರ್   ನೀಡಲಾಗುತ್ತಿದೆ. ಅಂದರೆ, ನಿಮಗೆ ಸಿಗುವ  ಎಲ್ಪಿಜಿ ಸಿಲಿಂಡರ್ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಯಾಕೆಂದರೆ ಸಬ್ಸಿಡಿಯ ನಂತರ ರೀಫಿಲ್ ಸಿಲಿಂಡರ್ ಬೆಲೆ ಸುಮಾರು 700-750 ರೂಪಾಯಿಗಳು ಮಾತ್ರ ಆಗಿರುತ್ತವೆ. 

ಇದನ್ನೂ ಓದಿ : February Changes: ದೈನಂದಿನ ಜೀವನಕ್ಕೆ ಸಂಬಂಧಿಸಿದ ಈ ನಿಯಮಗಳು ಫೆ.1 ರಿಂದ ಬದಲಾಗುತ್ತಿವೆ

ಉಚಿತ ಎಲ್ ಪಿಜಿ ಸಿಲಿಂಡರ್ ಪಡೆಯಲು ಏನು ಮಾಡಬೇಕು :
ಎಲ್ ಪಿಜಿ ಸಿಲಿಂಡರ್ ಬುಕ್ ಮಾಡುವ ವೇಳೆ ನಿಮಗೆ ಒಂದು ಸ್ಕ್ರಾಚ್ ಕಾರ್ಡನ್ನು ನೀಡಲಾಗುತ್ತದೆ. ಅದನ್ನು HP, Indane ಅಥವಾ Bharat Gas ಬುಕ್ಕಿಂಗ್ ವೇಳೆ ಬಳಸಬಹುದಾಗಿದೆ. ಇದರಲ್ಲಿ ಸಿಗುವ ಕ್ಯಾಶ ಬ್ಯಾಕ್ 24 ಗಂಟೆಗಳ ಒಳಗೆ ನಿಮ್ಮ Paytm ವಾಲೆಟ್ ನಲ್ಲಿ ಕಾಣಿಸಿಕೊಳ್ಳುತ್ತದೆ. ಈ ಆಫರ್ ಜ 31ರ ವರೆಗೆ ಮಾತ್ರ ಇರಲಿದೆ. ಈ ಆಫರ್ ನ ಲಾಭವನ್ನು ಕೇವಲ ಒಂದು ಬಾರಿ ಮಾತ್ರ ಪಡೆಯಬಹುದಾಗಿದೆ.

ಯಾರಿಗೆ ಸಿಗಲಿದೆ ಉಚಿತ ಎಲ್ ಪಿಜಿ ಸಿಲಿಂಡರ್ :
Paytm app ಮೂಲಕ ಮೊದಲ ಬಾರಿಗೆ ಗ್ಯಾಸ್ ಸಿಲಿಂಡರ್ ಬುಕ್ ಮಾಡುವ ಗ್ರಾಹಕರಿಗೆ ಈ ಲಾಭ ಸಿಗಲಿದೆ. ಅಲ್ಲದೆ IVRS ಮೂಲಕ ಬುಕ್ಕಿಂಗ್ ಮಾಡುವವರಿಗೂ ಈ ಲಾಭ ಸಿಗಲಿದೆ ಆದರೆ ಮೊದಲ ಪೇಮೆಂಟ್ ಮಾತ್ರ Paytm app ಮೂಲಕವೇ ಮಾಡಬೇಕು.ಸ್ಕ್ರಾಚ್ ಕಾರ್ಡ್ (Scratch card) ದೊರೆತ 7 ದಿನಗಳ ನಂತರ ಅದನ್ನು ಬಳಸಲು ಸಾಧ್ಯವಾಗುವುದಿಲ್ಲ. ಹಾಗಾಗಿ 7 ದಿನಗಳ ಒಳಗೆ ಸ್ಕ್ರಾಚ್ ಕಾರ್ಡ್ ಅನ್ನು ಬಳಸಿಕೊಳ್ಳಬೇಕು. 
ಇದನ್ನೂ ಓದಿ : Nandini Milk: ಮನೆ ಮನೆಗೆ ಹಾಲು ಸರಬರಾಜು ಮಾಡಲು ಮುಂದಾದ ನಂದಿನಿ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News