Diwali gift From central government: ಹಬ್ಬ ಹರಿದಿನಗಳಲ್ಲಿ ಆಹಾರ ಪದಾರ್ಥಗಳ ದುಬಾರಿ ಬೆಲೆಯಿಂದ ಜನಸಾಮಾನ್ಯರು ಪರದಾಡುವಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರವು ಹಣದುಬ್ಬರದಿಂದ ಸಾಮಾನ್ಯ ಜನರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ದೊಡ್ಡ ಘೋಷಣೆ ಮಾಡಿದೆ. ದೀಪಾವಳಿಗೂ ಮುನ್ನ ದೇಶದ ಸಾಮಾನ್ಯರಿಗೆ ಹಿಟ್ಟು, ಅಕ್ಕಿ, ಬೇಳೆಕಾಳುಗಳನ್ನು ಅಗ್ಗದ ದರದಲ್ಲಿ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಸರ್ಕಾರದ ಪ್ರಕಾರ, ಭಾರತ್ ಬ್ರಾಂಡ್ ಯೋಜನೆಯ 2ನೇ ಹಂತವನ್ನು ಅಕ್ಟೋಬರ್ 23ರ ಬುಧವಾರದಿಂದ ಪ್ರಾರಂಭಿಸಲಾಗುತ್ತಿದೆ. ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಕಳೆದ ವರ್ಷ ಈ ಯೋಜನೆಯನ್ನು ಪ್ರಾರಂಭಿಸಿತ್ತು.
ಇದನ್ನೂ ಓದಿ: ನಕಲಿ ದಾಖಲೆ ತೋರಿಸಿ ಬಿಪಿಎಲ್ ಕಾರ್ಡ್ ಪಡೆದು ಶಾಕ್‌ನಲ್ಲಿದ್ದವರಿಗೆ ಗುಡ್ ನ್ಯೂಸ್..!
ದೆಹಲಿ, ಮಹಾರಾಷ್ಟ್ರ, ರಾಜಸ್ಥಾನ & ಗುಜರಾತ್‌ನಲ್ಲಿ ಮೊದಲು ಮಾರಾಟ
ಭಾರತ್ ಬ್ರಾಂಡ್ ಯೋಜನೆಯಡಿ, ಕೇಂದ್ರ ಸರ್ಕಾರವು ಹಿಟ್ಟು, ಅಕ್ಕಿ ಮತ್ತು ಕಾಳುಗಳನ್ನು ಅಗ್ಗದ ಬೆಲೆಗೆ ಮಾರಾಟ ಮಾಡುತ್ತಿದೆ. ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ 2ನೇ ಹಂತದ ಯೋಜನೆಯನ್ನು ಉದ್ಘಾಟಿಸಲಿದ್ದಾರೆ. ಆಹಾರ ಸಚಿವಾಲಯದ ಏಜೆನ್ಸಿಯಾದ ಎನ್‌ಸಿಸಿಎಫ್ ಯೋಜನೆಯಡಿ, ದೆಹಲಿ, ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಅಗ್ಗದ ದರದಲ್ಲಿ ಹಿಟ್ಟು, ಅಕ್ಕಿ ಮತ್ತು ಬೇಳೆಕಾಳುಗಳ ಮಾರಾಟವನ್ನು ಮೊದಲು ಪ್ರಾರಂಭಿಸಲಾಗುವುದು. ನಂತರ ಮುಂದಿನ 10 ದಿನಗಳಲ್ಲಿ ದೇಶದಾದ್ಯಂತ ಅಗ್ಗದ ಹಿಟ್ಟು, ಅಕ್ಕಿ ಮತ್ತು ಬೇಳೆಕಾಳುಗಳ ಮಾರಾಟ ಪ್ರಾರಂಭವಾಗಲಿದೆ.
ಹಿಟ್ಟು, ಅಕ್ಕಿ & ಬೇಳೆಕಾಳುಗಳಿಗೆ ಬೆಲೆ ನಿಗದಿ
ವರದಿಯ ಪ್ರಕಾರ, ಎನ್‌ಸಿಸಿಎಫ್ ಜೊತೆಗೆ ಅಗ್ಗದ ಹಿಟ್ಟು, ಅಕ್ಕಿ ಮತ್ತು ಬೇಳೆಕಾಳುಗಳನ್ನು ಸಹ ನಾಫೆಡ್ ಮತ್ತು ಕೇಂದ್ರೀಯ ಭಂಡಾರ್ ಮೂಲಕ ಮಾರಾಟ ಮಾಡಲಾಗುತ್ತದೆ. ಇದರೊಂದಿಗೆ ಈ ಆಹಾರ ಪದಾರ್ಥಗಳ ಮಾರಾಟಕ್ಕಾಗಿ ಸರ್ಕಾರವು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಮತ್ತು ಚಿಲ್ಲರೆ ವ್ಯಾಪಾರಿಗಳೊಂದಿಗೆ ಮಾತುಕತೆ ನಡೆಸುತ್ತಿದೆ. ಭಾರತ್ ಬ್ರಾಂಡ್‌ನ 2ನೇ ಹಂತದಲ್ಲಿ 10 ಕೆಜಿ ಹಿಟ್ಟಿನ ಪ್ಯಾಕೆಟ್‌ಗೆ 300 ರೂ., 10 ಕೆಜಿ ಅಕ್ಕಿ ಪ್ಯಾಕೆಟ್‌ಗೆ 340 ರೂ., 1 ಕೆಜಿ ಚನಾ ದಾಲ್‌ಗೆ 70 ರೂ., 1 ಕೆಜಿ ಮೂಂಗ್ ದಾಲ್‌ಗೆ 93 ರೂ. ಮತ್ತು 1 ಕೆಜಿ ಮಸೂರ್ ದಾಲ್‌ಗೆ 89 ರೂ. ನಿಗದಿಪಡಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.