ನವದೆಹಲಿ : LIC Aadhaar Shila : ಭಾರತೀಯ ಜೀವ ವಿಮಾ ನಿಗಮ (LIC) ತನ್ನ ಗ್ರಾಹಕರಿಗೆ ಕಾಲಕಾಲಕ್ಕೆ ಅತ್ಯುತ್ತಮ ಯೋಜನೆಗಳನ್ನು ನೀಡುತ್ತಲೇ ಇದೆ. ಈಗ ಎಲ್ಐಸಿ ವಿಶೇಷವಾಗಿ ಮಹಿಳೆಯರಿಗಾಗಿ ವಿಶೇಷ ಯೋಜನೆಯನ್ನು ತಂದಿದೆ. ಮಹಿಳೆಯರ ಹಿತದೃಷ್ಟಿಯಿಂದ ಮಾಡಿದ ಈ ಯೋಜನೆಯ ಹೆಸರು ಎಲ್‌ಐಸಿ ಆಧಾರ್ ಶಿಲಾ ಯೋಜನೆ (LIC Aadhaar Shila). ಎಲ್ಐಸಿಯ ಈ ವಿಶೇಷ ಯೋಜನೆಯಡಿ, 8 ರಿಂದ 55 ವರ್ಷ ವಯಸ್ಸಿನ ಮಹಿಳೆಯರು ಹೂಡಿಕೆ ಮಾಡಬಹುದು.
ಈ ಯೋಜನೆಯ ನಿಯಮಗಳು :
ಎಲ್ಐಸಿಯ ಆಧಾರ್ ಶಿಲಾ ಯೋಜನೆ (LIC Aadhaar Shila Scheme), ತನ್ನ ಗ್ರಾಹಕರಿಗೆ ಭದ್ರತೆ ಮತ್ತು ಉಳಿತಾಯ ಎರಡನ್ನೂ ನೀಡುತ್ತದೆ. ಆದರೆ, ಆಧಾರ್ ಕಾರ್ಡ್ (Aadhaar card) ಹೊಂದಿರುವ ಮಹಿಳೆಯರು ಮಾತ್ರ ಇದರ ಲಾಭ ಪಡೆಯಬಹುದು. ಪಾಲಿಸಿ ಮೆಚ್ಯುರಿಟಿ ನಂತರ ಇದರಲ್ಲಿ ಪಾಲಿಸಿದಾರನಿಗೆ ಹಣ ಸಿಗಲಿದೆ. LIC ಯ ಈ ಯೋಜನೆಯು ಪಾಲಿಸಿದಾರರಿಗೆ ಮತ್ತು ಅವನ ಮರಣದ ನಂತರ ಕುಟುಂಬಕ್ಕೆ ಹಣಕಾಸಿನ ಸಹಾಯವನ್ನು ಒದಗಿಸುತ್ತದೆ.
ಇದನ್ನೂ ಓದಿ : Indian Railways: ಆನ್ ಲೈನ್ ಟಿಕೆಟ್ ಬುಕಿಂಗ್ ನಿಯಮದಲ್ಲಿ ಬದಲಾವಣೆ, ಇನ್ನು ಈ ಪ್ರಕ್ರಿಯೆ ಪೂರ್ಣಗೊಳಿಸುವುದು ಅಗತ್ಯ
ಈ ಯೋಜನೆಯಲ್ಲಿ ಎಷ್ಟು ಹೂಡಿಕೆ ಮಾಡಬೇಕು?
ಎಲ್ಐಸಿ ಆಧಾರ್ ಶಿಲಾ ಯೋಜನೆಯಡಿ, ಕನಿಷ್ಠ 75,000 ಮತ್ತು ಗರಿಷ್ಠ 3 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಬಹುದು. ಈ ಪಾಲಿಸಿಯ (LIC Policy) ಮುಕ್ತಾಯ ಅವಧಿ ಕನಿಷ್ಠ 10 ವರ್ಷಗಳು ಮತ್ತು ಗರಿಷ್ಠ 20 ವರ್ಷಗಳು. 8 ರಿಂದ 55 ವರ್ಷ ವಯಸ್ಸಿನ ಮಹಿಳೆ ಎಲ್ಐಸಿ ಯ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಈ ಯೋಜನೆಯಡಿ, ಗರಿಷ್ಠ ಮೆಚ್ಯುರಿಟಿ ವಯಸ್ಸು 70 ವರ್ಷಗಳು. ಅದೇ ಸಮಯದಲ್ಲಿ, ಈ ಯೋಜನೆಯ ಪ್ರೀಮಿಯಂ ಪಾವತಿಯನ್ನು (Premium payment) ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕ ಆಧಾರದ ಮೇಲೆ ಮಾಡಲಾಗುತ್ತದೆ.
ಏನಿದು ಪಾಲಿಸಿ :
ಉದಾಹರಣೆಯೊಂದಿಗೆ ಈ ಯೋಜನೆಯನ್ನು ಅರ್ಥಮಾಡಿಕೊಳ್ಳಬಹುದು. ನೀವು 30 ವರ್ಷ ವಯಸ್ಸಿನವರಾಗಿದ್ದು, 20 ವರ್ಷಗಳವರೆಗೆ ಪ್ರತಿದಿನ 29 ರೂ.ಗಳನ್ನು ಹೂಡಿಕೆ ಮಾಡಿದರೆ, ಮೊದಲ ವರ್ಷದಲ್ಲಿ ಒಟ್ಟು 10,959 ರೂ. ಹೂಡಿಕೆ ಮಾಡಿದಂತೆ ಆಗುತ್ತದೆ. ಇದರಲ್ಲಿ 4.5 ಪ್ರತಿಶತ ತೆರಿಗೆ ಕೂಡಾ ಇರುತ್ತದೆ. ಮುಂದಿನ ವರ್ಷ ಮತ್ತೆ, 10,723ರೂ ಪಾವತಿಸಬೇಕಾಗುತ್ತದೆ. ಈ ರೀತಿಯಾಗಿ, ಪ್ರತಿ ತಿಂಗಳು, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕ ಆಧಾರದ ಮೇಲೆ ಪ್ರೀಮಿಯಂಗಳನ್ನು ಠೇವಣಿ ಮಾಡಬಹುದು. ನೀವು 20 ವರ್ಷಗಳಲ್ಲಿ 2,14,696 ರೂ.ಗಳನ್ನು ಜಮಾ ಮಾಡಬೇಕಾಗುತ್ತದೆ. ಆದರೆ ಪಾಲಿಸಿ ಮೆಚ್ಯುರಿಟಿ ವೇಳೆ, ಒಟ್ಟು 3,97,000 ರೂಗಳನ್ನು ಪಡೆಯಬಹುದು.
ಇದನ್ನೂ ಓದಿ : Gold Price Today: ಚಿನ್ನದ ಬೆಲೆಯಲ್ಲಿ ಕಂಡುಬಂದ ಭಾರಿ ಸುಸ್ತಿ, ಖರೀದಿಗೆ ಉತ್ತಮ ಅವಕಾಶ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.