ನವದೆಹಲಿ : ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿಯಲ್ಲಿ ಗೋಧಿಯ ಕೋಟಾವನ್ನು ಕಡಿಮೆ ಮಾಡುವ ಮೂಲಕ ಕೇಂದ್ರ ಸರ್ಕಾರವು ಅಕ್ಕಿಯ ಕೋಟಾವನ್ನು ಹೆಚ್ಚಿಸಿದೆ. ಈ ಬದಲಾವಣೆಯನ್ನು ಹಲವು ರಾಜ್ಯಗಳು ಮತ್ತು ಕೆಲವು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಾಡಲಾಗಿದೆ. ಇದರೊಂದಿಗೆ ಪಡಿತರ ಚೀಟಿದಾರರಿಗೆ ಮೊದಲಿಗಿಂತ ಕಡಿಮೆ ಗೋಧಿ ದೊರೆಯಲಿದೆ.
PMGKAY ಅಡಿಯಲ್ಲಿ 25 ರಾಜ್ಯಗಳ ಕೋಟಾದಲ್ಲಿ ಯಾವುದೇ ಬದಲಾವಣೆ ಇಲ್ಲ :
ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಡಿಯಲ್ಲಿ ಮೇ ನಿಂದ ಸೆಪ್ಟೆಂಬರ್ ವರೆಗೆ ಹಂಚಿಕೆ ಮಾಡಬೇಕಾದ ಗೋಧಿಯ ಪ್ರಮಾಣವನ್ನು ಕಡಿಮೆ ಮಾಡಿದೆ. PMGKAY ಅಡಿಯಲ್ಲಿ ಮೂರು ರಾಜ್ಯಗಳಾದ ಬಿಹಾರ, ಕೇರಳ ಮತ್ತು ಉತ್ತರ ಪ್ರದೇಶಗಳಿಗೆ ಉಚಿತ ವಿತರಣೆಗೆ ಗೋಧಿಯನ್ನು ನೀಡಲಾಗುವುದಿಲ್ಲ. ಇದಲ್ಲದೆ, ದೆಹಲಿ, ಗುಜರಾತ್, ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳದ ಗೋಧಿ ವಿತರಣೆಯನ್ನು ಕಡಿಮೆ ಮಾಡಲಾಗಿದೆ. ಉಳಿದ 25 ರಾಜ್ಯಗಳ ಕೋಟಾದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಇದನ್ನೂ ಓದಿ : Small Business idea: ಕರಿಮೆಣಸು ವ್ಯವಸಾಯದಲ್ಲಿ ಕಡಿಮೆ ಹೂಡಿಕೆ ಮಾಡಿ, ಲಕ್ಷಾಂತರ ರೂ. ಗಳಿಸಿ
ಕಡಿಮೆಯಾದ ಗೋಧಿ ಬದಲಿಗೆ ಅಕ್ಕಿ :
ಕೇಂದ್ರವು ರಾಜ್ಯಗಳಿಗೆ ನೀಡಿರುವ ಮಾಹಿತಿಯ ಪ್ರಕಾರ, 'ಮೇ ನಿಂದ ಸೆಪ್ಟೆಂಬರ್‌ವರೆಗೆ ಉಳಿದ 5 ತಿಂಗಳವರೆಗೆ ಎಲ್ಲಾ 36 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಅಕ್ಕಿ ಮತ್ತು ಗೋಧಿಯ ಹಂಚಿಕೆಯನ್ನು ಬದಲಾಯಿಸಲು ನಿರ್ಧರಿಸಲಾಗಿದೆ. ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವು, ಕಡಿಮೆ ಮಾಡಿದ ಗೋಧಿಯ ಪ್ರಮಾಣದ ಬದಲಿಗೆ ಅಕ್ಕಿಯನ್ನು ಒದಗಿಸಲಿದೆ.
ಈ ತಿದ್ದುಪಡಿಯು ಪಿಎಂಜಿಕೆವೈಗೆ ಮಾತ್ರ ಅನ್ವಯವಾಗಲಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ-2013ರ ಅಡಿಯಲ್ಲಿ ಹಂಚಿಕೆ ಮಾಡುವ ಕುರಿತು ರಾಜ್ಯಗಳೊಂದಿಗೆ ಚರ್ಚೆ ನಡೆಯುತ್ತಿದೆ. 'ಕೆಲವು ರಾಜ್ಯಗಳು ಎನ್‌ಎಫ್‌ಎಸ್‌ಎ ಅಡಿಯಲ್ಲಿ ಹೆಚ್ಚಿನ ಅಕ್ಕಿಯನ್ನು ತೆಗೆದುಕೊಳ್ಳಲು ಬಯಸಿದರೆ, ಅವರ ಮನವಿಯನ್ನು ಪರಿಗಣಿಸಲಾಗುವುದು ಎಂದು ಸಚಿವ ಸುಧಾಂಶು ಪಾಂಡೆ ತಿಳಿಸಿದ್ದಾರೆ.
ಇದನ್ನೂ ಓದಿ : PM Kisan Yojana: 11ನೇ ಕಂತಿನ ಹಣ ಖಾತೆಗೆ ಬರಬೇಕಾದರೆ ತಕ್ಷಣ ಮಾಡಿ ಮುಗಿಸಿ ಈ ಕೆಲಸ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.