Budget 2024 Expectations : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1, 2024 ರಂದು ಬಜೆಟ್ ಮಂಡಿಸಲಿದ್ದಾರೆ.ಈ ವರ್ಷ ಸಾರ್ವತ್ರಿಕ ಚುನಾವಣೆ ನಡೆಯಲಿರುವುದರಿಂದ ಈ ಬಜೆಟ್ ಮಧ್ಯಂತರ ಬಜೆಟ್ ಆಗಲಿದೆ. ಚುನಾವಣೆಯ ನಂತರ ಹೊಸ ಸರ್ಕಾರ ರಚನೆಯಾದ ನಂತರ ಜುಲೈನಲ್ಲಿ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಾಗುವುದು.ಇದು ಮಧ್ಯಂತರ ಬಜೆಟ್ ಆಗಿರುವುದರಿಂದ ಯಾವುದೇ ಪ್ರಮುಖ ಘೋಷಣೆಗಳನ್ನು ಮಾಡಲಾಗುವುದಿಲ್ಲ. ಆದರೆ ಮತದಾರರನ್ನು ಸೆಳೆಯಲು ಸರ್ಕಾರ ಕೆಲವು ಪ್ರಮುಖ ಘೋಷಣೆಗಳನ್ನು ಮಾಡಬಹುಡು ಎಂದು ಕೂಡಾ ಹೇಳಲಾಗಿದೆ.
ಬಜೆಟ್ 2024 ನಿರೀಕ್ಷೆಗಳು :
ಈ ಬಾರಿಯ ಬಜೆಟ್ ನಲ್ಲಿ ಕೇಂದ್ರ ಸರ್ಕಾರಿ ನೌಕರರಿಗಾಗಿ ಕೆಲವು ಮಹತ್ವದ ಘೋಷಣೆಗಳು ಘೋಷಣೆಯಾಗಲಿವೆ ಎನ್ನುತ್ತಿವೆ ಮೂಲಗಳು.ನೌಕರರ ಬಹುಕಾಲದ ಬೇಡಿಕೆಗಳಿಗೆ ಸರ್ಕಾರ ಅಸ್ತು ಎನ್ನಬಹುದು. ಸರ್ಕಾರಿ ನೌಕರರು ಫಿಟ್ಮೆಂಟ್ ಅಂಶ ಹೆಚ್ಚಿಸಬೇಕು ಎಂದು ಬಹಳ ದಿನಗಳಿಂದ ಒತ್ತಾಯಿಸುತ್ತಿದ್ದಾರೆ. ನೌಕರರ ಈ ಬೇಡಿಕೆ ಈಡೇರಿದರೆ ನೌಕರರು ಪಡೆಯುವ ಮೂಲ ವೇತನ ಕೂಡಾ ಹೆಚ್ಚಾಗಲಿದೆ.
ಇದನ್ನೂ ಓದಿ :Today Arecanut Price: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ ಹೇಗಿದೆ..?
ಈ ಬಾರಿ ಸರ್ಕಾರ ಬಜೆಟ್ ನಲ್ಲಿ ಫಿಟ್ ಮೆಂಟ್ ಅಂಶ ಹೆಚ್ಚಿಸಲಿದೆ ಎಂಬ ವಿಶ್ವಾಸ ನೌಕರರದ್ದು.ಇದು 2024ರ ಬಜೆಟ್ ನಂತರ ನೌಕರರ ಮೂಲ ವೇತನವನ್ನು ಹೆಚ್ಚಿಸಲಿದೆ ಎನ್ನಲಾಗಿದೆ.
ಫಿಟ್ಮೆಂಟ್ ಅಂಶದಲ್ಲಿ ಹೆಚ್ಚಳ :
- ಫಿಟ್ಮೆಂಟ್ ಅಂಶ ಹೆಚ್ಚಿಸುವಂತೆ ನೌಕರರ ಸಂಘಗಳು ಬಹಳ ದಿನಗಳಿಂದ ಸರಕಾರಕ್ಕೆ ಮನವಿ ಮಾಡುತ್ತಲೇ ಬಂದಿವೆ.
- ಸರ್ಕಾರಿ ನೌಕರರ ವೇತನವನ್ನು ಫಿಟ್ಮೆಂಟ್ ಅಂಶದ ಆಧಾರದ ಮೇಲೆ ನಿಗದಿಪಡಿಸಲಾಗಿದೆ.
- ಪ್ರಸ್ತುತ ಫಿಟ್ಮೆಂಟ್ ಅಂಶವು ಶೇಕಡಾ 2.57 ರಷ್ಟಿದೆ.
- ಉದಾಹರಣೆಗೆ, 4200 ದರ್ಜೆಯ ವೇತನದಲ್ಲಿರುವ ವ್ಯಕ್ತಿಯು 15,500 ರೂ. ಮೂಲ ವೇತನವನ್ನು ಪಡೆಯುತ್ತಾನೆ ಎಂದಿಟ್ಟುಕೊಳ್ಳಿ, ಆಗ ಆತನ ಒಟ್ಟು ವೇತನ 15,500×2.57 ಅಂದರೆ 39,835 ರೂ. ಆಗಿರುತ್ತದೆ.
- ಈ ಫಿಟ್ಮೆಂಟ್ ಅಂಶವನ್ನು 3.68ಕ್ಕೆ ಹೆಚ್ಚಿಸಲು ನೌಕರರ ಸಂಘ ಒತ್ತಾಯಿಸುತ್ತಿದೆ.
- ಈ ಹೆಚ್ಚಳವು ಕನಿಷ್ಟ ವೇತನವನ್ನು 18,000 ರೂ.ಯಿಂದ 26,000 ರೂ.ಗೆ ಹೆಚ್ಚಿಸುತ್ತದೆ.
ಪ್ರಯೋಜನ ಪಡೆಯಲಿದ್ದಾರೆ 48 ಲಕ್ಷ ಉದ್ಯೋಗಿಗಳು :
- ಕೇಂದ್ರ ಸರ್ಕಾರದ ಮೂಲ ವೇತನವನ್ನು ಲೆಕ್ಕಾಚಾರ ಮಾಡುವ ಸೂತ್ರದಲ್ಲಿ ಫಿಟ್ಮೆಂಟ್ ಅಂಶವನ್ನು ಹೆಚ್ಚಿಸುವ ಮೂಲಕ ಸುಮಾರು 48 ಲಕ್ಷ ಉದ್ಯೋಗಿಗಳಿಗೆ ಪ್ರಯೋಜನವಾಗಲಿದೆ .
- ಅವರ ಮೂಲ ವೇತನ ಹೆಚ್ಚಾದಂತೆ ಅವರು ಪಡೆಯುವ ಭತ್ಯೆಗಳೂ ಹೆಚ್ಚಾಗುತ್ತವೆ.
- ಫಿಟ್ಮೆಂಟ್ ಅಂಶವನ್ನು ಬದಲಾಯಿಸುವಂತೆ ಕೇಂದ್ರ ನೌಕರರು ಬಹಳ ದಿನಗಳಿಂದ ಒತ್ತಾಯಿಸುತ್ತಿದ್ದಾರೆ.
- ಸರ್ಕಾರದ ಮೂಲಗಳ ಪ್ರಕಾರ, 2024 ರ ಚುನಾವಣೆಯ ಮೊದಲು ಅದನ್ನು ಘೋಷಿಸಲು ಸರ್ಕಾರ ಯೋಜಿಸುತ್ತಿದೆ.
- ಇದರಿಂದ ಸರ್ಕಾರಿ ನೌಕರರು ಚುನಾವಣೆಗೆ ಮುನ್ನ ಸವಲತ್ತುಗಳನ್ನು ಪಡೆಯಬಹುದು.
ಇದನ್ನೂ ಓದಿ :Gold Rate: ಭಾರತದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಕುಸಿತ: ಬೆಳ್ಳಿ ದರ ಏರಿಕೆ!
ಫಿಟ್ಮೆಂಟ್ ಅಂಶವು 2.57 ರಿಂದ 3.68 ರಷ್ಟು ಹೆಚ್ಚಾಗಬಹುದು :
ಇತ್ತೀಚಿನ ಮಾಧ್ಯಮ ವರದಿಗಳು 2024-25ರ ಬಜೆಟ್ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಫಿಟ್ಮೆಂಟ್ ಅಂಶದ ಕುರಿತು ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಬಹುದು ಎಂದು ಸೂಚಿಸುತ್ತದೆ. ಫಿಟ್ಮೆಂಟ್ ಅಂಶವು ಶೇಕಡಾ 2.57 ರಿಂದ 3.00 ಅಥವಾ 3.68 ಕ್ಕೆ ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾದರೆ ಮೂಲ ವೇತನ 8000 ರೂ.ಯಷ್ಟು ಹೆಚ್ಚುತ್ತದೆ. ಅಂದರೆ ಮೂಲ ವೇತನ 18000 ರೂ.ಯಿಂದ 26,000 ರೂ.ಗೆ ಏರಿಕೆಯಾಗಲಿದೆ.ಆದರೆ, ಇದನ್ನು ಸರಕಾರ ಇದುವರೆಗೆ ದೃಢಪಡಿಸಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ